ಬ್ಯಾಡ್‌ ಮ್ಯಾನರ್ಸ್‌ಗೆ ರೇಟಿಂಗ್: ಅಭಿ ಟೀ-ಶರ್ಟ್‌ ಮೇಲೆ 5 ಸ್ಟಾರ್‌ ನೀಡಿದ ಚಾಲೆಂಜಿಂಗ್‌ ಸ್ಟಾರ್!

Bad Manners Rating By Darshan: ಬ್ಯಾಡ್ ಮ್ಯಾನರ್ಸ್ ಸಿನಿಮಾದ ಸ್ಪೆಷಲ್ ಶೋನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರ ವೀಕ್ಷಸಿದ ಬಳಿಕ ರೇಟಿಂಗ್ ಕೂಡ ಕೊಟ್ಟು ಗಮನ ಸೆಳೆದಿದ್ದು, ಒಂದಷ್ಟು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.   

Written by - Zee Kannada News Desk | Last Updated : Nov 21, 2023, 12:29 PM IST
  • ಜೂನಿಯರ್ ರೆಬಲ್ ಸ್ಟಾರ್ ಮೊದಲ ಸಿನಿಮಾದಲ್ಲಿ ಯಂಗ್ ರೆಬಲ್ ಸ್ಟಾರ್ ಆಗಿದ್ದರು.ಆದರೆ ಬ್ಯಾಡ್‌ ಮ್ಯಾನರ್ಸ್ ಚಿತ್ರದಲ್ಲಿ ಜೂನಿಯರ್ ರೆಬಲ್ ಸ್ಟಾರ್ ಕಂಪ್ಲೀಟ್ ರೆಬಲ್ ಸ್ಟಾರ್ ಆಗಿದ್ದಾರೆ.
  • ಸೂಪರ್ ಸ್ಟಾರ್ ಸಿನಿಮಾದ ರಿವ್ಯೂ ಮಾಡಿ, ಅಭಿಷೇಕ್ ತೊಟ್ಟ ಅಂಗಿಯ ಮೇಲೆ ಐದಕ್ಕೆ ಐದು ಸ್ಟಾರ್ ಕೊಟ್ಟು ಗುಡ್ ಲಕ್ ಹೇಳಿದ್ದಾರೆ.
  • ದುನಿಯಾ ಸೂರಿ ಚಿತ್ರ ಅಂದಾಗ ಅಲ್ಲಿ ವಿಶೇಷ ಗ್ಯಾರಂಟಿ ಅನ್ನುವ ನಂಬಿಕೆ ಇದ್ದರೆ, ಇನ್ನೊಂದು ವಿಚಾರ ಅಂದ್ರೆ, ಅಭಿಷೇಕ್ ಅಂಬರೀಶ್ ನಟನೆಯ ಎರಡನೇ ಸಿನಿಮಾ ಇದಾಗಿದೆ.
ಬ್ಯಾಡ್‌ ಮ್ಯಾನರ್ಸ್‌ಗೆ ರೇಟಿಂಗ್: ಅಭಿ ಟೀ-ಶರ್ಟ್‌ ಮೇಲೆ 5 ಸ್ಟಾರ್‌ ನೀಡಿದ ಚಾಲೆಂಜಿಂಗ್‌ ಸ್ಟಾರ್! title=

Challenging Star Darshan Rating for Bad Manners: ಜೂನಿಯರ್ ರೆಬಲ್ ಸ್ಟಾರ್ ಮೊದಲ ಸಿನಿಮಾದಲ್ಲಿ ಯಂಗ್ ರೆಬಲ್ ಸ್ಟಾರ್ ಆಗಿದ್ದರು.ಆದರೆ ಬ್ಯಾಡ್‌ ಮ್ಯಾನರ್ಸ್ ಚಿತ್ರದಲ್ಲಿ ಜೂನಿಯರ್ ರೆಬಲ್ ಸ್ಟಾರ್ ಕಂಪ್ಲೀಟ್ ರೆಬಲ್ ಸ್ಟಾರ್ ಆಗಿದ್ದಾರೆ. ಬ್ಯಾಡ್‌ ಮ್ಯಾನರ್ಸ್ ಸಿನಿಮಾದಲ್ಲಿ ನಟ ಅಭಿಷೇಕ್ ಅಂಬರೀಶ್ ಪಾತ್ರವನ್ನ ತುಂಬಾ ಚೆನ್ನಾಗಿ ಮಾಡಿದ್ದು, ಇವರ ಈ ಚಿತ್ರದಲ್ಲಿ ಅಂಬರೀಶ್ ಕಾಣಿಸುತ್ತಾರೆ. ಹೀಗೆ ಈ ಸಿನಿಮಾದ ಹೀರೋನ ಪಕ್ಕ ನಿಂತು ಆ ಸೂಪರ್ ಸ್ಟಾರ್ ಸಿನಿಮಾದ ರಿವ್ಯೂ  ಮಾಡಿ, ಅಭಿಷೇಕ್ ತೊಟ್ಟ ಅಂಗಿಯ ಮೇಲೆ ಐದಕ್ಕೆ ಐದು ಸ್ಟಾರ್ ಕೊಟ್ಟು ಗುಡ್ ಲಕ್ ಹೇಳಿದ್ದಾರೆ. ಈ ಒಂದು ರಿವ್ಯೂ ಸಿನಿಮಾ ಬರೋ ಮುಂಚೇನೆ ವೈರಲ್‌ ಆಗಿದೆ.

ಹೌದು.. ಬ್ಯಾಡ್ ಮ್ಯಾನರ್ಸ್ ಸಿನಿಮಾದ ಸ್ಪೆಷಲ್ ಶೋ ಮೊನ್ನೆ ನಡೆದಿದ್ದು, ಈ ವೇಳೆ ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ದುನಿಯಾ ಸೂರಿ, ಅಭಿ ಪತ್ನಿ ಅವಿವಾ ಬಿದ್ದಪ್ಪ ಸೇರಿದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಚಿತ್ರವನ್ನ ವೀಕ್ಷಿಸಿದ್ದಾರೆ. ಸಿನಿಮಾ ವೀಕ್ಷಸಿದ ಬಳಿಕ ದರ್ಶನ್ ರೇಟಿಂಗ್ ಕೂಡ ಕೊಟ್ಟು ಗಮನ ಸೆಳೆದಿದ್ದಾರೆ.ಮೊನ್ನೆಯಿಂದಲೇ ಈ ಒಂದಷ್ಟು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಇದೀಗ ಸಿನಿಮಾ ತಂಡವೇ ದರ್ಶನ್ ಕೊಟ್ಟ ರಿವ್ಯೂ ಮ್ಯಾಟರ್ ಅನ್ನ ರಿವೀಲ್ ಮಾಡಿವೆ. ಅಧಿಕೃತವಾಗಿಯೇ ಈ ಒಂದು ವಿಷಯವನ್ನ ಕೂಡ ಹೇಳಿಕೊಂಡಿದೆ.

ಇದನ್ನು ಓದಿ: ರಾಂಗ್‌ ಟೈಮ್‌ನಲ್ಲಿ 'ಸಪ್ತಸಾಗರದಾಚೆ ಎಲ್ಲೋ' ಸೈಡ್- B ರಿಲೀಸ್: ‌ಥಿಯೇಟರ್‌ಗಳಿಗೆ ಪ್ರೇಕ್ಷಕರ ಬರ!

ಇದರೊಟ್ಟಿಗೆ ಸಿನಿಮಾ ನೋಡಿ ಬಂದ ನಟ ದರ್ಶನ್ ಇನ್ನೂ ಒಂದು ಕೆಲಸ ಮಾಡಿದ್ದು, ಯಂಗ್ ರೆಬಲ್ ಮೊದಲ ಸಿನಿಮಾದಲ್ಲಿ ಯಂಗ್ ಆಗಿಯೇ ಇದ್ದರು. ಆದರೆ ಎರಡನೇ ಸಿನಿಮಾದಲ್ಲಿ ಕಂಪ್ಲೀಟ್ ರೆಬಲ್ ಸ್ಟಾರ್ ಆಗಿದ್ದಾರೆ ಎಂದು ದರ್ಶನ್ ತಮ್ಮರಿವ್ಯೂ ಕೊಟ್ಟಿದ್ದಾರೆ. ಇದಕ್ಕೆ ಪೂರಕ ಅನ್ನುವ ಹಾಗೆ ಅಭಿಷೇಕ್ ಬಿಳಿ ಅಂಗಿ ಮೇಲೆ ಕೆಂಪು ಶಾಯಿಂದ ದರ್ಶನ್  ಇದಕ್ಕೆ ಫೈ ಸ್ಟಾರ್ಸ್ ರೇಟಿಂಗ್ ಕೊಟ್ಟು ಸೂಪರ್ ಸಿನಿಮಾ ಅಂತಲೇ  ಬರೆದಿದ್ದಾರೆ. ಅಲ್ಲಿಗೆ ಸಾಕಷ್ಟು ಸಿನಿಮಾ ಮಾಡಿರೋ ದರ್ಶನ್ ಅನುಭವದ ಸಾರ ಇಲ್ಲಿ ಹೊರ ಹೊಮ್ಮಿದೆ ಅಂತಲೂ ಹೇಳಬಹುದೇನೋ.

ದುನಿಯಾ ಸೂರಿ ನಿರ್ದೇಶನದ ಬ್ಯಾಡ್‌ ಮ್ಯಾನರ್ಸ್ ಸಿನಿಮಾ ಬಗ್ಗೆ ಒಂದು ನಿರೀಕ್ಷೆಯಿದ್ದು,  ಅದಕ್ಕೆ ಕಾರಣ ಎರಡು ಅನ್ನೋದು ಅಷ್ಟೇ ವಿಶೇಷ ಅಂತಲೇ ಹೇಳಬಹುದು. ದುನಿಯಾ ಸೂರಿ ಚಿತ್ರ ಅಂದಾಗ ಅಲ್ಲಿ ವಿಶೇಷ ಗ್ಯಾರಂಟಿ ಅನ್ನುವ ನಂಬಿಕೆ ಇದ್ದರೆ, ಇನ್ನೊಂದು ವಿಚಾರ ಅಂದ್ರೆ, ಅಭಿಷೇಕ್ ಅಂಬರೀಶ್ ನಟನೆಯ ಎರಡನೇ ಸಿನಿಮಾ ಇದಾಗಿದೆ. ಇವರೆಡೂ ಇಲ್ಲಿ ಸದ್ಯ ಪ್ರಮುಖ ಅನಿಸುತ್ತಿದ್ದು, ಚಿತ್ರದಲ್ಲಿ ರಚಿತಾ ರಾಮ್ ಕೂಡ ಸ್ಪೆಷಲ್ ಆಗಿಯೇ ಕಾಣಿಸುತ್ತಿದ್ದಾರೆ. ಚರಣ್ ರಾಜ್ ಸಂಗೀತ ಮೋಡಿ ಮಾಡುತ್ತಿದ್ದು, ಹಿರಿಯ ನಟ ಎಂ.ಎಂ.ಉಮೇಶ್ ಚಿತ್ರದಲ್ಲಿದ್ದಾರೆ. ನವೆಂಬರ್-24 ರಂದು ಸಿನಿಮಾ ಎಲ್ಲೆಡೆ ರಿಲೀಸ್ ಆಗುತ್ತಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News