Bagheera : ಶ್ರೀಮುರಳಿ ಫ್ಯಾನ್ಸ್‌ಗೆ ಸಿಕ್ತು ಸರ್‌ಪ್ರೈಸ್‌! ಸಿನಿಪ್ರಿಯರ ಕುತೂಹಲ ಕೆರಳಿಸಿದ ಬಘೀರ ಪೋಸ್ಟರ್‌

Bagheera poster : ಸ್ಯಾಂಡಲ್ ವುಡ್ ರೋರಿಂಗ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ನಟ ಶ್ರೀಮುರಳಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳು, ಸ್ನೇಹಿತರು, ಕುಟುಂಬದವರು ಶ್ರೀಮುರಳಿ ಅವರಿಗೆ ಶುಭ ಹಾರೈಸಿದ್ದಾರೆ. ಈ ನಡುವೆ ಶ್ರೀಮುರಳಿ ಅವರ ಫ್ಯಾನ್ಸ್‌ಗೆ ಬಘೀರ ಚಿತ್ರತಂಡದಿಂದ ಸರ್‌ಪ್ರೈಸ್‌ ಒಂದು ದೊರೆತಿದೆ. 

Written by - Chetana Devarmani | Last Updated : Dec 17, 2022, 12:01 PM IST
  • ಸ್ಯಾಂಡಲ್ ವುಡ್ ರೋರಿಂಗ್ ಸ್ಟಾರ್ ಶ್ರೀಮುರಳಿ
  • ಶ್ರೀಮುರಳಿ ಫ್ಯಾನ್ಸ್‌ಗೆ ಸಿಕ್ತು ಸರ್‌ಪ್ರೈಸ್‌
  • ಸಿನಿಪ್ರಿಯರ ಕುತೂಹಲ ಕೆರಳಿಸಿದ ಬಘೀರ ಪೋಸ್ಟರ್‌
Bagheera : ಶ್ರೀಮುರಳಿ ಫ್ಯಾನ್ಸ್‌ಗೆ ಸಿಕ್ತು ಸರ್‌ಪ್ರೈಸ್‌! ಸಿನಿಪ್ರಿಯರ ಕುತೂಹಲ ಕೆರಳಿಸಿದ ಬಘೀರ ಪೋಸ್ಟರ್‌  title=
ಬಘೀರ ಪೋಸ್ಟರ್‌ 

Bagheera poster : ಸ್ಯಾಂಡಲ್ ವುಡ್ ರೋರಿಂಗ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ನಟ ಶ್ರೀಮುರಳಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳು, ಸ್ನೇಹಿತರು, ಕುಟುಂಬದವರು ಶ್ರೀಮುರಳಿ ಅವರಿಗೆ ಶುಭ ಹಾರೈಸಿದ್ದಾರೆ. ಈ ನಡುವೆ ಶ್ರೀಮುರಳಿ ಅವರ ಫ್ಯಾನ್ಸ್‌ಗೆ ಬಘೀರ ಚಿತ್ರತಂಡದಿಂದ ಸರ್‌ಪ್ರೈಸ್‌ ಒಂದು ದೊರೆತಿದೆ. ಬಘೀರ ಸಿನಿಮಾ ಸೆಟ್ಟೇರಿ ವರ್ಷ ಕಳೆದಿದೆ. ನಿರ್ದೇಶಕ ಪ್ರಶಾಂತ್ ನೀಲ್ ಬಘೀರ ಸಿನಿಮಾಗೆ ಚಿತ್ರಕಥೆ ಬರೆದಿದ್ದಾರೆ. ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್‌ ಅಡಿ ಈ ಚಿತ್ರ ನಿರ್ಮಾಣವಾಗಿದೆ. ಇಂದು ಶ್ರೀಮುರಳಿ ಅವರ ಬರ್ತ್‌ ಡೇ ಹಿನ್ನೆಲೆ ಚಿತ್ರತಂಡ ಬಘೀರ ಸಿನಿಮಾದ ಹೊಸ ಪೋಸ್ಟರ್‌ ಒಂದನ್ನು ರಿಲೀಸ್‌ ಮಾಡಿದೆ. 

ಇದನ್ನೂ ಓದಿ: ʼಮಹಿಳೆಯರು ದುರ್ಗೆಯ ಸ್ವರೂಪʼ : ದೀಪಿಕಾ, ರಶ್ಮಿಕಾ, ಪರ ರಮ್ಯಾ ಬ್ಯಾಟ್‌..!

ಈ ಹಿಂದೆ ರಿಲೀಸ್‌ ಆದ ಬಘೀರ ಸಿನಿಮಾದ ಪೋಸ್ಟರ್ ಸಾಕಷ್ಟು ಸದ್ದು ಮಾಡಿತ್ತು. ಅದರಲ್ಲಿ ಶ್ರೀಮುರಳಿ ಅವತಾರ ಕಂಡು ಫ್ಯಾನ್ಸ್‌ ಫಿದಾ ಆಗಿದ್ದರು. ಸಿನಿಮಾ ಅನೌನ್ಸ್ ಮಾಡುವ ಸಮಯದಲ್ಲಿ ರಿಲೀಸ್‌ ಆಗಿದ್ದ ಬಘೀರನ ಲುಕ್‌ ಕಂಡು ಎಲ್ಲರೂ ದಿಗ್ಭ್ರಾಂತರಾಗಿದ್ದರು. ಲುಕ್ ನೋಡಿದ್ರೆ ಶ್ರೀಮುರಳಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎದು ಅನಿಸುತ್ತಿತ್ತು. ಇದೀಗ ಇಂದು ಮತ್ತೊಂದು ಪೋಸ್ಟರ್‌ ರಿಲೀಸ್‌ ಆಗಿದ್ದು, ಇದರಲ್ಲಿ ಶ್ರೀಮುರಳಿ ಲುಕ್‌ ಸಖತ್‌ ಇಂಟರೆಸ್ಟಿಂಗ್‌ ಆಗಿ ಕಾಣುತ್ತಿದೆ. ಮುಖಕ್ಕೆ ಶೀಲ್ಡ್‌ ಹಾಕಿರುವ ಶ್ರೀಮುರಳಿ ಕಾಣಿಸಿಕೊಂಡಿದ್ದಾರೆ. 

 

 

ಉಗ್ರಂ ಚಿತ್ರದ ಮೂಲಕ ಧೂಳ್ ಎಬ್ಬಿಸಿದ್ದ ಪ್ರಶಾಂತ್ ನೀಲ್ ಮತ್ತು ಶ್ರೀಮುರಳಿ ಕಾಂಬಿನೇಷನ್‌ನಲ್ಲಿ ಬಘೀರ ಮೂಲಕ ಮತ್ತೆ ಸದ್ದು ಮಾಡಲು ಬರುತ್ತಿದ್ದಾರೆ. ಬಘೀರ ಸಿನಿಮಾಗೆ ಡಾ.ಸೂರಿ ಆಕ್ಷನ್ ಕಟ್ ಹೇಳುತ್ತಿದ್ದು, ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. 

ಇದನ್ನೂ ಓದಿ: ಪುನೀತ್ ಬಯೋಗ್ರಫಿ ‘ನೀನೇ ರಾಜಕುಮಾರ್’ 4ನೇ ಆವೃತ್ತಿ ಬಿಡುಗಡೆ ಮಾಡಿದ ಅಶ್ವಿನಿ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News