Bairagi: ಶಿವಣ್ಣ ಅಭಿನಯದ 123ನೇ ಚಿತ್ರ 'ಬೈರಾಗಿ' ರಿಲೀಸ್‌ ಡೇಟ್‌ ಫಿಕ್ಸ್‌

Bairagi: ಹಾಡು ಮತ್ತು ಲುಕ್ ಮೂಲಕ ಭಾರೀ ಸದ್ದು ಮಾಡುತ್ತಿರುವ ಡಾಲಿ ಧನಂಜಯ್ ಮತ್ತು ಶಿವಣ್ಣ ಅಭಿನಯದ ಬೈರಾಗಿ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. 

Written by - Chetana Devarmani | Last Updated : Jun 6, 2022, 05:37 PM IST
  • ಶಿವಣ್ಣ ಅಭಿನಯದ 123ನೇ ಚಿತ್ರ 'ಬೈರಾಗಿ'
  • ಡಾಲಿ ಧನಂಜಯ್ ಮತ್ತು ಶಿವಣ್ಣ ಅಭಿನಯದ ಸಿನಿಮಾ
  • ಬೈರಾಗಿ ಸಿನಿಮಾಗೆ ರಿಲೀಸ್‌ ಡೇಟ್‌ ಫಿಕ್ಸ್‌
Bairagi: ಶಿವಣ್ಣ ಅಭಿನಯದ 123ನೇ ಚಿತ್ರ 'ಬೈರಾಗಿ' ರಿಲೀಸ್‌ ಡೇಟ್‌ ಫಿಕ್ಸ್‌  title=
ಬೈರಾಗಿ

Bairagi Release Date: ಹಾಡು ಮತ್ತು ಲುಕ್ ಮೂಲಕ ಭಾರೀ ಸದ್ದು ಮಾಡುತ್ತಿರುವ ಡಾಲಿ ಧನಂಜಯ್ ಮತ್ತು ಶಿವಣ್ಣ ಅಭಿನಯದ ಬೈರಾಗಿ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಇದರ ಬೆನ್ನಲ್ಲೇ ಚಿತ್ರತಂಡ ಅಭಿಮಾನಿಗಳಿಗೆ ಸಂತಸದ ಸುದ್ದಿಯನ್ನು ನೀಡಿದೆ. 

ಇದನ್ನೂ ಓದಿ: IIFA 2022: ಅತ್ಯುತ್ತಮ ನಟಿ ಕೃತಿ, ನಟ ವಿಕ್ಕಿ ಕೌಶಲ್.. ಯಾರಿಗೆ ಯಾವ ಪ್ರಶಸ್ತಿ, ಇಲ್ಲಿದೆ ಕಂಪ್ಲೀಟ್‌ ಲಿಸ್ಟ್

'ಟಗರು' ಸಿನಿಮಾದ ಬಳಿಕ ಸೆಂಚೂರಿ ಸ್ಟಾರ್‌ ಶಿವರಾಜ್‌ಕುಮಾರ್‌ ಮತ್ತು ನಟ ಡಾಲಿ ಧನಂಜಯ ಇಬ್ಬರೂ 'ಬೈರಾಗಿ' ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದಾರೆ. ಈ ಸಿನಿಮಾವು ರಿಲೀಸ್‌ಗೆ ರೆಡಿ ಆಗಿದ್ದು, ಬಿಡುಗಡೆ ದಿನಾಂಕವನ್ನು ಘೋಷಿಸಿದೆ.

ಬೈರಾಗಿ ಸಿನಿಮಾಗೆ ವಿಜಯ್ ಮಿಲ್ಟನ್‌ ನಿರ್ದೇಶನವಿದ್ದು, ಅವರೇ ಕಥೆ, ಚಿತ್ರಕಥೆ ಬರೆದು ಛಾಯಾಗ್ರಹಣವನ್ನೂ ಮಾಡಿದ್ದಾರೆ. ಗುರು ಕಶ್ಯಪ್ ಅವರ ಸಂಭಾಷಣೆ ಈ ಸಿನಿಮಾಗಿದ್ದೂ, ರಾಜ್ಯಾದ್ಯಂತ ಜಗದೀಶ್ ಗೌಡ ವಿತರಣೆ ಮಾಡಲಿದ್ದಾರೆ. ಬೈರಾಗಿ ಸಿನಿಮಾಗೆ ಅನೂಪ್ ಸಿಳೀನ್ ಸಂಗೀತ ನೀಡಿದ್ದು, ಕೃಷ್ಣ ಸಾರ್ಥಕ್ ನಿರ್ಮಾಣ ಮಾಡಿದ್ದಾರೆ. 

ಶಿವಣ್ಣನಿಗೆ ಎರಡು ವಾರ ಮೊದಲೇ ಹುಟ್ಟುಹಬ್ಬದ ಗಿಫ್ಟ್​ ನೀಡಲು ಚಿತ್ರತಂಡ ನಿರ್ಧರಿಸಿದೆ. ಜುಲೈ 12ರಂದು ಶಿವರಾಜ್‌ಕುಮಾರ್‌ 60 ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಈ ದಿನ ಚಿತ್ರ ಬಿಡುಗಡೆಯಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದಕ್ಕೂ ಮೊದಲೇ ಚಿತ್ರ ಬಿಡುಗಡೆ ಮಾಡುತ್ತಿರುವುದು ವಿಶೇಷ. ಈ ಸಿನಿಮಾದಲ್ಲಿ ಶಿವರಾಜ್‌ಕುಮಾರ್‌, ಧನಂಜಯ್‌ ಜೊತೆ ಹಿರಿಯ ನಟ ಶಶಿಕುಮಾರ್, ಅಂಜಲಿ, ಯಶ ಶಿವಕುಮಾರ್ ಸೇರಿದಂತೆ ಅನೇಕ ಟಾಲೆಂಟಡ್‌ ತಾರಾ ಬಳಗವಿದೆ.  

ಇದನ್ನೂ ಓದಿ: Shah Rukh Khan: ಬಾಲಿವುಡ್‌ ನಟ ಶಾರುಖ್ ಖಾನ್‌ಗೆ ಕೋವಿಡ್ ಪಾಸಿಟಿವ್‌

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ 123ನೇ ಸಿನಿಮಾ ಬೈರಾಗಿ ಜುಲೈ 1 ರಂದು ಬೆಳ್ಳಿ ತೆರೆಗೆ ಬರಲಿದೆ. ಈ ಮೂಲಕ ಶಿವಣ್ಣ ಅಭಿಮಾನಿಗಳ ಕುತೂಹಲಕ್ಕೆ ಚಿತ್ರತಂಎ ತೆರೆ ಎಳೆದಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News