ಬಂಡಿ ಮಾಕಾಳಮ್ಮನ ಸನ್ನಿಧಿಯಲ್ಲಿ "ಭೀಮ"ನಿಗೆ ಚಾಲನೆ

ಕಂಡ ಕೆಲವು ಘಟನೆಗಳನ್ನು ಆಧರಿಸಿ ಕಥೆ ಸಿದ್ಧಪಡಿಸಿಕೊಂಡಿದ್ದೀನಿ. ಚಿತ್ರಕ್ಕೆ ಶೀರ್ಷಿಕೆ ಏನಿಡಬೇಕೆಂದು ಬಹಳ ದಿನ ಚರ್ಚೆ ನಡೆದ ನಂತರ "ಭೀಮ" ಎಂಬ ಶೀರ್ಷಿಕೆ ಆಯ್ಕೆ ಮಾಡಿಕೊಂಡಿದ್ದೀವಿ.

Written by - YASHODHA POOJARI | Last Updated : Apr 19, 2022, 12:38 PM IST
  • "ಭೀಮ" ಚಿತ್ರದ ಮುಹೂರ್ತ ಸಮಾರಂಭ
  • ಬಂಡಿ ಮಾಕಾಳಮ್ಮ ದೇವಸ್ಥಾನದಲ್ಲಿ "ಭೀಮ" ಸಿನಿಮಾಗೆ ಚಾಲನೆ
  • ದುನಿಯಾ ವಿಜಯ್ ಅಭಿನಯದ ಚಲನಚಿತ್ರ
ಬಂಡಿ ಮಾಕಾಳಮ್ಮನ ಸನ್ನಿಧಿಯಲ್ಲಿ "ಭೀಮ"ನಿಗೆ ಚಾಲನೆ  title=
Bhima Movie

ತಮ್ಮ ಅಭಿನಯದ ಮೂಲಕ ಮನೆಮಾತಾಗಿದ್ದ ದುನಿಯಾ ವಿಜಯ್, "ಸಲಗ" ಮೂಲಕ ನಿರ್ದೇಶಕರಾಗಿಯೂ ಯಶಸ್ವಿಯಾದರು. ಇದೀಗ ವಿಜಯ್ ಅವರ ಎರಡನೇ ನಿರ್ದೇಶನದ "ಭೀಮ" ಚಿತ್ರದ ಮುಹೂರ್ತ ಸಮಾರಂಭ ಬಂಡಿ ಮಾಕಾಳಮ್ಮ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಡೆಯಿತು. 

ಇದನ್ನು ಓದಿ: ಆಲಿಯಾ-ರಣಬೀರ್‌ ಮದುವೆಗೆ ಮಾಜಿ ಪ್ರೇಯಸಿ ದೀಪಿಕಾ ಕೊಟ್ಟ ಗಿಫ್ಟ್‌ ಏನು ಗೊತ್ತಾ?

ನಟರಾದ ಶ್ರೀನಗರ ಕಿಟ್ಟಿ, ಡಾಲಿ ಧನಂಜಯ, ನಿರ್ಮಾಪಕರಾದ ಕೆ.ಪಿ.ಶ್ರೀಕಾಂತ್, ನಾಗಿ ಮುಂತಾದ ಗಣ್ಯರು ಈ ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು."ಸಲಗ" ನಂತರ "ಭೀಮ" ಚಿತ್ರವನ್ನು ನಿರ್ದೇಶಿಸುತ್ತಿದ್ದೇನೆ. ಯುವ ಹಾಗೂ ಉತ್ಸಾಹಿ ನಿರ್ಮಾಪಕರಾದ ಜಗದೀಶ್ ಹಾಗೂ ಕೃಷ್ಣ ಸಾರ್ಥಕ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ ಎಂದು ದುನಿಯಾ ವಿಜಯ್ ಹೇಳಿದ್ರು.

ಕಂಡ ಕೆಲವು ಘಟನೆಗಳನ್ನು ಆಧರಿಸಿ ಕಥೆ ಸಿದ್ಧಪಡಿಸಿಕೊಂಡಿದ್ದೀನಿ. ಚಿತ್ರಕ್ಕೆ ಶೀರ್ಷಿಕೆ ಏನಿಡಬೇಕೆಂದು ಬಹಳ ದಿನ ಚರ್ಚೆ ನಡೆದ ನಂತರ "ಭೀಮ" ಎಂಬ ಶೀರ್ಷಿಕೆ ಆಯ್ಕೆ ಮಾಡಿಕೊಂಡಿದ್ದೀವಿ. ಶೀರ್ಷಿಕೆ ಕೊಡಿಸಿದ ಜಗದೀಶ್ ಅವರಿಗೆ ಧನ್ಯವಾದ. ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ ನೀಡಲಿದ್ದಾರೆ. ನಿರ್ದೇಶನದ ಜೊತೆಗೆ ನಾನು ನಾಯಕನಾಗೂ ಕಾಣಿಸಿಕೊಳ್ಳುತ್ತಿದ್ದೀನಿ ಎಂದರು. 

ಇನ್ನು "ಜಯಮ್ಮನ ಮಗ" ಚಿತ್ರದಲ್ಲಿ ನನ್ನ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಕಲ್ಯಾಣಿ ಅವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.  ಬ್ಲ್ಯಾಕ್ ಡ್ರ್ಯಾಗನ್ ಮಂಜು ಅವರು ಸೇರಿದಂತೆ ಸಾಕಷ್ಟು ಹೊಸ ಪ್ರತಿಭೆಗಳು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಾಯಕಿಯ ಆಯ್ಕೆ ನಡೆಯುತ್ತಿದೆ. ಚಿತ್ರೀಕರಣ ಆರಂಭಿಸುತ್ತಿದ್ದೇನೆ. ನನ್ನ "ಸಲಗ" ಚಿತ್ರದ ಮುಹೂರ್ತ ಸಮಾರಂಭ ಸಹ ಈ ದೇವಸ್ಥಾನದಲ್ಲಿ ನಡೆದಿತ್ತು. ಎರಡನೇ ಚಿತ್ರದ ಮುಹೂರ್ತ ಇಲ್ಲೇ ನಡೆಯಬೇಕೆಂಬ ಆಸೆಯಿತ್ತು. ಇಂತಹ ದೇವಸ್ಥಾನ ಪರಿಚಯಿಸಿದ ಕೆ.ಪಿ.ಶ್ರೀಕಾಂತ್ ಅವರಿಗೆ ಧನ್ಯವಾದ. ಶ್ರೀನಗರ ಕಿಟ್ಟಿ, ಧನಂಜಯ ಸೇರಿದಂತೆ ಚಿತ್ರರಂಗದ ಅನೇಕ ಗೆಳೆಯರು ಆಗಮಿಸಿರುವುದು ಖುಷಿ ತಂದಿದೆ ಎಂದರು ನಾಯಕ ಹಾಗೂ ನಿರ್ದೇಶಕ ವಿಜಯ್ ಕುಮಾರ್ (ದುನಿಯಾ ವಿಜಯ್).

ಇದನ್ನು ಓದಿ: The Kashmir Files:ಅತೀ ಶೀಘ್ರದಲ್ಲೇ OTT ಅಲ್ಲಿ ದಿ ಕಾಶ್ಮೀರ ಫೈಲ್ಸ್‌ ರಿಲೀಸ್‌!

"ಜಯಮ್ಮನ ಮಗ" ಚಿತ್ರದಲ್ಲಿ ನನಗೆ ತಾಯಿಯ ಪಾತ್ರ ನೀಡಿದ್ದರು. ಈ ಚಿತ್ರದಲ್ಲೂ ನಾನು ಅವರ ತಾಯಿ. ಆ ಚಿತ್ರದಲ್ಲಿ ಸೌಮ್ಯ ಸ್ವಭಾವದ ತಾಯಿಯಾಗಿ ಕಾಣಿಸಿಕೊಂಡಿದ್ದೆ. ಇದರಲ್ಲಿ ಸ್ವಲ್ಪ ರೌದ್ರ ಸ್ಭಭಾವದವಳು ಎಂದು ಹಿರಿಯ ನಟಿ ಕಲ್ಯಾಣಿ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. 

ಸಿನಿಮಾ ಆರಂಭವಾದ ಬಗ್ಗೆ ನಿರ್ಮಾಪಕ ಕೃಷ್ಣ ಸಾರ್ಥಕ್ ಮಾತನಾಡಿದರು. "ಭೀಮ" ಶೀರ್ಷಿಕೆ ನೀಡಿದ್ದ ನಟಿ ಮಾಲಾಶ್ರೀ ಅವರಿಗೆ ನಿರ್ಮಾಪಕ ಜಗದೀಶ್ ಧನ್ಯವಾದ ತಿಳಿಸಿದರು. ಸಂಭಾಷಣೆ ಬಗ್ಗೆ ಮಾಸ್ತಿ, ಸಂಗೀತದ ಕುರಿತು ಚರಣ್ ರಾಜ್ ಮಾತನಾಡಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News