Bigg Boss 15 Finale: ತೇಜಸ್ವಿ ಪ್ರಕಾಶ್ ವಿನ್ನರ್, ಟ್ರೋಫಿಯೊಂದಿಗೆ ಸಿಕ್ಕ ನಗದು ಬಹುಮಾನವೆಷ್ಟು ಗೊತ್ತಾ..?

ನಟಿ ತೇಜಸ್ವಿ ಪ್ರಕಾಶ್ ‘ಬಿಗ್ ಬಾಸ್ 15’ರ ಟ್ರೋಫಿಗೆ ಮುತ್ತಿಕ್ಕುವುದರ ಜೊತೆಗೆ 40 ಲಕ್ಷ ರೂ. ನಗದು ಬಹುಮಾನವನ್ನು ತಮ್ಮ ಜೇಬಿಗಿಳಿಸಿಕೊಂಡಿದ್ದಾರೆ.

Written by - Puttaraj K Alur | Last Updated : Jan 31, 2022, 06:39 AM IST
  • ‘ಬಿಗ್ ಬಾಸ್ ಸೀಸನ್ 15’ರ ಟ್ರೋಫಿ ಎತ್ತಿ ಹಿಡಿದ ನಟಿ ತೇಜಸ್ವಿ ಪ್ರಕಾಶ್
  • ಟ್ರೋಫಿಯ ಜೊತೆಗೆ 40 ಲಕ್ಷ ರೂ. ನಗದು ಬಹುಮಾನವನ್ನು ಗೆದ್ದ ನಟಿ
  • ‘ಬಿಗ್ ಬಾಸ್ 15’ರ ರನ್ನರ್ ಅಪ್ ಆದ ಕರಣ್ ಕುಂದ್ರಾ & ಪ್ರತೀಕ್ ಸಹಜ್ಪಾಲ್
Bigg Boss 15 Finale: ತೇಜಸ್ವಿ ಪ್ರಕಾಶ್ ವಿನ್ನರ್, ಟ್ರೋಫಿಯೊಂದಿಗೆ ಸಿಕ್ಕ ನಗದು ಬಹುಮಾನವೆಷ್ಟು ಗೊತ್ತಾ..? title=
ತೇಜಸ್ವಿ ಪ್ರಕಾಶ್ ‘ಬಿಗ್ ಬಾಸ್’ ವಿನ್ನರ್

ನವದೆಹಲಿ: 121 ದಿನಗಳ ಕಾಲ ‘ಬಿಗ್ ಬಾಸ್ 15’ ಮನೆ(Bigg Boss 15 Finale)ಯಲ್ಲಿದ್ದ ತೇಜಸ್ವಿ ಪ್ರಕಾಶ್ ಕೊನೆಗೂ ‘ಬಿಗ್ ಬಾಸ್ ಸೀಸನ್ 15’ ಟ್ರೋಫಿಯನ್ನು ಎತ್ತಿಹಿಡಿದಿದ್ದಾರೆ(Bigg Boss 15 Winner). ತೇಜಸ್ವಿಯವರ ಗೆಲುವಿನಿಂದ ಅವರ ಲಕ್ಷಾಂತರ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ. ನಟಿ ಚಾಂಪಿಯನ್ ಎಂದು ಘೋಷಿಸುತ್ತಿದ್ದಂತೆಯೇ  ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ನಿರಂತರವಾಗಿ ಅವರನ್ನು ಅಭಿನಂದಿಸುತ್ತಿದ್ದಾರೆ.

ಟ್ರೋಫಿಯೊಂದಿಗೆ 40 ಲಕ್ಷ ರೂ. ಬಹುಮಾನ

‘ಬಿಗ್ ಬಾಸ್ 15’ರ ಮಿಂಚುವ ಟ್ರೋಫಿಯ ಜೊತೆಗೆ ತೇಜಸ್ವಿ ಪ್ರಕಾಶ್(Tejasswi Prakash) ಕೂಡ ನಗದು ಬಹುಮಾನ ಪಡೆದರು. ವಿನ್ನರ್ ಆದ ನಟಿಗೆ ಬರೋಬ್ಬರಿ 40 ಲಕ್ಷ ರೂ. ಬಹುಮಾನ ಸಿಕ್ಕಿದೆ.

ಇಬ್ಬರು ಸ್ಪರ್ಧಿಗಳು ರನ್ನರ್ ಅಪ್

ತೇಜಸ್ವಿ ಪ್ರಕಾಶ್ ಅವರೊಂದಿಗೆ ಕರಣ್ ಕುಂದ್ರಾ ಮತ್ತು ಪ್ರತೀಕ್ ಸಹಜ್ಪಾಲ್(Pratik Sehajpal) ಟಾಪ್ 3 ರಲ್ಲಿದ್ದರು. ಆದರೆ ಕರಣ್ ಕುಂದ್ರಾ ಟಾಪ್ 2ರಲ್ಲಿ ಬರಲಾಗದೆ ಔಟಾಗಿದ್ದರು. ಇಂತಹ ಪರಿಸ್ಥಿತಿಯಲ್ಲಿ ಪ್ರತೀಕ್ ಸಹಜಪಾಲ್ ಮೊದಲ ರನ್ನರ್ ಅಪ್ ಮತ್ತು ಕರಣ್ ಕುಂದ್ರಾ 2ನೇ ರನ್ನರ್ ಅಪ್ ಆದರು.

ಇದನ್ನೂ ಓದಿ: Watch: ಹಾಲಿವುಡ್ ನಟ ಜಾನ್ ಟ್ರಾವೋಲ್ಟಾ ಎದುರು ಸಲ್ಮಾನ್ ಖಾನ್ ಪರಿಚಯಿಸಿಕೊಂಡಿದ್ದು ಹೇಗಿತ್ತು ಗೊತ್ತೇ?

‘ಬಿಗ್ ಬಾಸ್’ ಮನೆಯಲ್ಲಿ ಶಮಿತಾ ಜೊತೆ ಕಿರಿಕ್!

ತೇಜಸ್ವಿ ಪ್ರಕಾಶ್(Bigg Boss Trophy) ಆಟ ಮೊದಲಿನಿಂದಲೂ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿತ್ತು. ಶೋನಲ್ಲಿ ತೇಜಸ್ವಿ ಅನೇಕ ಜನರೊಂದಿಗೆ ಸ್ನೇಹಿತರಾಗಿದ್ದರು, ಆದರೆ ಒಬ್ಬ ಸ್ಪರ್ಧಿಯೊಂದಿಗೆ ದೊಡ್ಡ ಜಗಳವನ್ನೇ ಮಾಡಿಕೊಂಡಿದ್ದರು. ಈ ಸ್ಪರ್ಧಿ ಬೇರೆ ಯಾರೂ ಅಲ್ಲ ಶಮಿತಾ ಶೆಟ್ಟಿ. ಶೋನಲ್ಲಿ ತೇಜಸ್ವಿ ಮತ್ತು ಶಮಿತಾ ಒಂದೇ ಪಿಚ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಇಬ್ಬರಿಗೂ ಒಂದಲ್ಲ ಒಂದು ವಿಷಯಕ್ಕೆ ಜಗಳ ನಡೆಯುತ್ತಿತ್ತು. ಜನವರಿ 29ರ ‘ಬಿಗ್ ಬಾಸ್ 15’ ಗ್ರ್ಯಾಂಡ್ ಫಿನಾಲೆಯ ಎಪಿಸೋಡ್‌ನಲ್ಲಿ ಕೂಡ ಇಬ್ಬರೂ ಜಗಳವಾಡಿದ್ದರು.

ಕರಣ್ ಜೊತೆಗಿನ ತೇಜಸ್ವಿಯ ಲವ್ ಸ್ಟೋರಿ!  

ಈ ಶೋನಲ್ಲಿ ಕರಣ್ ಕುಂದ್ರಾ ಅವರೊಂದಿಗೆ ತೇಜಸ್ವಿ ಪ್ರಕಾಶ್(Tejasswi Prakash) ಅವರ ಪ್ರೇಮಕಥೆ ಪ್ರಾರಂಭವಾಯಿತು. ‘ಬಿಗ್ ಬಾಸ್’ ಮನೆಯಲ್ಲಿ ಇವರಿಬ್ಬರ ಸಂಬಂಧದಲ್ಲಿ ಅನೇಕ ಏರಿಳಿತಗಳಿದ್ದವು. ಇಬ್ಬರೂ ಪರಸ್ಪರ ಪ್ರೀತಿಯಲ್ಲಿ ಮುಳುಗಿದ್ದರೂ ಜಗಳವಾಡಿಕೊಳ್ಳುತ್ತಿದ್ದರು. ಶೋನಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದ ಈ ಇಬ್ಬರೂ ತುಂಬಾ ಅನೋನ್ಯತೆಯಿಂದ ಇದ್ದರು. ಪೋಷಕರು ಸಹ ಇವರ ಪ್ರೀತಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹೀಗಾಗಿ ಇನ್ನುಮುಂದೆ ಇವರಿಬ್ಬರ ನಡುವಿನ ಸಂಬಂಧವು ಎಷ್ಟು ಗಟ್ಟಿಯಾಗುತ್ತದೆ ಎಂಬುದು ಕುತೂಹಲಕಾರಿಯಾಗಿದೆ.

ಇದನ್ನೂ ಓದಿ: U19 World Cup ಸ್ಕೋರ್ ಕಾರ್ಡ್ ನಲ್ಲಿ ಕಂಡ Vicky Kaushal ಹೆಸರು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News