BBK 9: ಇವರೇ ನೋಡಿ ಬಿಗ್‌ ಬಾಸ್‌ ಕನ್ನಡ ಫೈನಲಿಸ್ಟ್

Bigg Boss Kannada Season 9 : ಬಿಗ್ ಬಾಸ್ ಕನ್ನಡ ಸೀಸನ್ 9 ಈ ವಾರ ಮುಕ್ತಾಯಗೊಳ್ಳಲಿದೆ. ಸ್ಪರ್ಧಿಗಳು ಫಿನಾಲೆಯತ್ತ ಸಾಗುತ್ತಿದ್ದಾರೆ. ಪ್ರೇಕ್ಷಕರನ್ನು ಮೆಚ್ಚಿಸಲು ಮತ್ತು ಬಿಗ್ ಬಾಸ್ ಕನ್ನಡ 9 ಟ್ರೋಫಿಯನ್ನು ಪಡೆಯಲು ಹವಣಿಸುತ್ತಿದ್ದಾರೆ. ರೂಪೇಶ್ ಶೆಟ್ಟಿ ಮತ್ತು ರಾಕೇಶ್ ಅಡಿಗ ಅವರು ವಿಜೇತ ಮತ್ತು ರನ್ನರ್ ಅಪ್ ಆಗುತ್ತಾರೆ ಎಂದು ವ್ಯಾಪಕವಾಗಿ ನಿರೀಕ್ಷಿಸಲಾಗಿದೆ. 

Written by - Chetana Devarmani | Last Updated : Dec 26, 2022, 04:03 PM IST
  • ಇವರೇ ನೋಡಿ ಬಿಗ್‌ ಬಾಸ್‌ ಕನ್ನಡ ಫೈನಲಿಸ್ಟ್
  • ಫೈನಲಿಸ್ಟ್ ಹೆಸರು ಘೋಷಿಸಿದ ಕಿಚ್ಚ ಸುದೀಪ್
  • ಬಿಗ್ ಬಾಸ್ ಕನ್ನಡ ಸೀಸನ್ 9 ಗ್ರ್ಯಾಂಡ್‌ ಫಿನಾಲೆ
BBK 9: ಇವರೇ ನೋಡಿ ಬಿಗ್‌ ಬಾಸ್‌ ಕನ್ನಡ ಫೈನಲಿಸ್ಟ್   title=
ಬಿಗ್‌ ಬಾಸ್‌ ಕನ್ನಡ

Bigg Boss Kannada finalists : ಬಿಗ್ ಬಾಸ್ ಕನ್ನಡ ಸೀಸನ್ 9 ಈ ವಾರ ಮುಕ್ತಾಯಗೊಳ್ಳಲಿದೆ. ಸ್ಪರ್ಧಿಗಳು ಫಿನಾಲೆಯತ್ತ ಸಾಗುತ್ತಿದ್ದಾರೆ. ಪ್ರೇಕ್ಷಕರನ್ನು ಮೆಚ್ಚಿಸಲು ಮತ್ತು ಬಿಗ್ ಬಾಸ್ ಕನ್ನಡ 9 ಟ್ರೋಫಿಯನ್ನು ಪಡೆಯಲು ಹವಣಿಸುತ್ತಿದ್ದಾರೆ. ರೂಪೇಶ್ ಶೆಟ್ಟಿ ಮತ್ತು ರಾಕೇಶ್ ಅಡಿಗ ಅವರು ವಿಜೇತ ಮತ್ತು ರನ್ನರ್ ಅಪ್ ಆಗುತ್ತಾರೆ ಎಂದು ವ್ಯಾಪಕವಾಗಿ ನಿರೀಕ್ಷಿಸಲಾಗಿದೆ. ಇಬ್ಬರೂ ಸಮಾನ ಮತದಾನದ ಶೇಕಡಾವಾರು ಹೊಂದಿದ್ದು, ಅವರನ್ನೇ ಟಾಪ್‌ನಲ್ಲಿಡಲು ಪ್ರೇಕ್ಷಕರು ಇಷ್ಟಪಡುತ್ತಾರೆ. ಅಂದಹಾಗೆ, ಬಿಗ್ ಬಾಸ್ ಕನ್ನಡ 9 ಮನೆಯಲ್ಲಿರುವ ಸ್ಪರ್ಧಿಗಳೆಂದರೆ ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ದಿವ್ಯಾ ಉರುಡುಗ, ರೂಪೇಶ್ ರಾಜಣ್ಣ, ಆರ್ಯವರ್ಧನ್ ಮತ್ತು ದೀಪಿಕಾ ದಾಸ್. ಈ ಆರು ಜನ ಕಂಟೆಸ್ಟಂಟ್‌ಗಳು ಈಗ ಬಿಗ್‌ ಬಾಸ್‌ ಫಿನಾಲೆಯ ವಾರದಲ್ಲಿದ್ದಾರೆ. ಇವರಲ್ಲಿ ಒಬ್ಬರು ಈ ವಾರ ಮಧ್ಯದಲ್ಲಿ ಮನೆಯಿಂದ ಹೊರಬರುತ್ತಾರೆ. ಉಳಿದ ಐವರು ಸ್ಪರ್ಧಿಗಳು ಟಾಪ್‌ 5 ಸ್ಪರ್ಧಿಗಳಾಗಲಿದ್ದಾರೆ. 

ಇದನ್ನೂ ಓದಿ: ನಟ ದರ್ಶನ ಮೇಲೆ ಚಪ್ಪಲಿ ಎಸೆತ ಪ್ರಕರಣ : ಮೂವರ ಜನರ ಬಂಧನ

ಸಾಮಾಜಿಕ ಮಾಧ್ಯಮದ ಮತದಾನದ ಫಲಿತಾಂಶಗಳ ಪ್ರಕಾರ ಮೊದಲ ಮೂರು ಸ್ಪರ್ಧಿಗಳು ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ ಮತ್ತು ದಿವ್ಯಾ ಉರುಡುಗ. ಈ ಮೂವರು ಸ್ಪರ್ಧಿಗಳು ಅತ್ಯಧಿಕ ಮತದಾನದ ಶೇಕಡಾವಾರು ಪ್ರಮಾಣವನ್ನು ಹೊಂದಿದ್ದಾರೆ ಮತ್ತು ಬಿಗ್ ಬಾಸ್ ಕನ್ನಡ 9 ರ ಫೈನಲ್‌ಗೆ ಮೊದಲ ಮೂರು ಸ್ಥಾನಗಳಲ್ಲಿ ನಿಂತಿದ್ದಾರೆ. ರೂಪೇಶ್ ಶೆಟ್ಟಿ ಮತ್ತು ರಾಕೇಶ್ ಅಡಿಗ ಕ್ರಮವಾಗಿ ವಿನ್ನರ್ ಮತ್ತು ರನ್ನರ್ ಅಪ್ ಆಗಲಿದ್ದಾರೆ ಮತ್ತು ದಿವ್ಯಾ ಉರುಡುಗ ಎರಡನೇ ರನ್ನರ್ ಅಪ್ ಆಗಿ ಕೊನೆಗೊಳ್ಳಲಿದ್ದಾರೆ ಎಂದು ಪ್ರೇಕ್ಷಕರ ಒಂದು ವರ್ಗ ಹೇಳಿದೆ. 

ಇನ್ನೂ ಓಟಿಟಿಯಿಂದ ಬಿಗ್ ಬಾಸ್ ಸೀಸನ್ 9 ಕ್ಕೆ ಎಂಟ್ರಿ ಕೊಟ್ಟ ರೂಪೇಶ್ ಶೆಟ್ಟಿ ಹಾಗೂ ರಾಕೇಶ್ ಅಡಿಗ ಫೈನಲ್‍ ಪ್ರವೇಶಿಸಿದ್ದಾರೆ. ಇಬ್ಬರು ಫೈನಲಿಸ್ಟ್ ಹೆಸರನ್ನು ಸುದೀಪ್ ಘೋಷಣೆ ಮಾಡಿದ್ದಾರೆ. ರೂಪೇಶ್ ಶೆಟ್ಟಿ ಗ್ರ್ಯಾಂಡ್ ಫಿನಾಲೆಗೆ ಕಾಲಿಡುವ ಮೊದಲ ಸ್ಪರ್ಧಿಯಾಗಿದ್ದು, ರಾಕೇಶ್ ಅಡಿಗ ಎರಡನೇ ಸ್ಪರ್ಧಿಯಾಗಿದ್ದಾರೆ. 

ಇದನ್ನೂ ಓದಿ: 'ಕ್ರಾಂತಿ' ಟ್ರೈಲರ್ ರಿಲೀಸ್ ಎಂದು? ಎಲ್ಲಿ? ಯಾವಾಗ? ನಟ ದರ್ಶನ್ ಕೊಟ್ರು ಸುಳಿವು

ಈ ವಾರ ಅಮೂಲ್ಯ ಗೌಡ ಮತ್ತು ಅರುಣ್ ಸಾಗರ್  ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್‌ ಆಗಿದ್ದಾರೆ. ರೂಪೇಶ್ ರಾಜಣ್ಣ, ಆರ್ಯವರ್ಧನ್ ಗುರೂಜಿ, ದಿವ್ಯಾ ಉರುಡಗ, ದೀಪಿಕಾ ದಾಸ್ ಮನೆಯಲ್ಲಿದ್ದಾರೆ. ಇವರಲ್ಲಿ ಇನ್ನೂ 3 ಜನ ಫಿನಾಲೆಗೆ ಎಂಟ್ರಿ ಪಡೆಯಲಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News