‌Bigg Boss: ನಿರೀಕ್ಷೆಗಿಂತ ಬೇಗ ಬರಲಿದೆ ಬಿಗ್‌ಬಾಸ್‌ ಮತ್ತೊಂದು ಸೀಸನ್.. ಯಾವಾಗ ಗೊತ್ತಾ!!

Bigg Boss News: ಬಿಗ್ ಬಾಸ್ ಪ್ರಿಯರಿಗೆ ಸಿಹಿ ಸುದ್ದಿಯೊಂದು ಕಾದಿದೆ... ಸೀಸನ್ 8ಕ್ಕೆ ತಯಾರಕರು ವ್ಯವಸ್ಥೆ ಮಾಡಲು ಪ್ರಾರಂಭಿಸಿದ್ದು.. ಇದೀಗ ಯಾವಾಗಗಿನಿಂದ ಆರಂಭವಾಗಲಿದೆ ಎನ್ನುವುದರ ಮಾಹಿತಿ ಲಭಿಸಿದೆ..  

Written by - Savita M B | Last Updated : Apr 12, 2024, 07:32 AM IST
  • ಬಿಗ್ ಬಾಸ್ ಶೋನ ಜನಪ್ರಿಯತೆ ಅಷ್ಟಿಷ್ಟಲ್ಲ
  • ಹಿಂದಿಯಲ್ಲಿ ಗ್ರ್ಯಾಂಡ್ ಸಕ್ಸಸ್ ಆದ ಕಾರಣ ಇತರ ಭಾಷೆಗಳಿಗೂ ಹಬ್ಬಿದೆ.
‌Bigg Boss: ನಿರೀಕ್ಷೆಗಿಂತ ಬೇಗ ಬರಲಿದೆ ಬಿಗ್‌ಬಾಸ್‌ ಮತ್ತೊಂದು ಸೀಸನ್.. ಯಾವಾಗ ಗೊತ್ತಾ!! title=

Bigg Boss Telugu Season 8: ಬಿಗ್ ಬಾಸ್ ಶೋನ ಜನಪ್ರಿಯತೆ ಅಷ್ಟಿಷ್ಟಲ್ಲ... ಕೆಲ ವರ್ಷಗಳ ಹಿಂದೆ ಬಿಗ್ ಬ್ರದರ್ ಆಗಿ ಬ್ರಿಟನ್ ನಲ್ಲಿ ಪ್ರಸಾರವಾದ ರಿಯಾಲಿಟಿ ಶೋ ಭಾರತದಲ್ಲಿ ಬಿಗ್ ಬಾಸ್ ಆಗಿ ಪ್ರೇಕ್ಷಕರ ಮುಂದೆ ಬಂದಿತ್ತು. ಹಿಂದಿಯಲ್ಲಿ ಗ್ರ್ಯಾಂಡ್ ಸಕ್ಸಸ್ ಆದ ಕಾರಣ ಇತರ ಭಾಷೆಗಳಿಗೂ ಹಬ್ಬಿದೆ. 

ಬಿಗ್ ಬಾಸ್ ಶೋ 2017 ರಲ್ಲಿ ತೆಲುಗಿನಲ್ಲಿ ಪ್ರಾರಂಭವಾಯಿತು ಮತ್ತು ಎನ್ಟಿಆರ್ ಮೊದಲ ಹೋಸ್ಟ್ ಆಗಿದ್ದರು. ಸೀಸನ್ 2ಕ್ಕೆ ನಾಯಕ ನಾನಿ ಕಾಲಿಟ್ಟಿದ್ದರು... ನಾನಿ ಸೀಸನ್ 3 ರಿಂದ ಹೊರಬಿದ್ದ ನಂತರ ಅಕ್ಕಿನೇನಿ ನಾಗಾರ್ಜುನ ಎಂಟ್ರಿ ಕೊಟ್ಟಿದ್ದಾರೆ. ಅವರು ಪ್ರತಿ ಸೀಸನ್‌ಗೆ ಹೋಸ್ಟ್ ಆಗಿ ಮುಂದುವರಿಯುತ್ತಿದ್ದಾರೆ.. 

ಇದನ್ನೂ ಓದಿ-Disha Patani : ಲೈಟ್ ಪಿಂಕ್ ಒನ್ ಪೀಸ್ ನಲ್ಲಿ ಮಲಂಗ್ ಬೆಡಗಿ : ಫೋಟೋಸ್ ಇಲ್ಲಿವೆ

ಕಳೆದ ವರ್ಷ ಪ್ರಸಾರವಾದ ಬಿಗ್ ಬಾಸ್ ತೆಲುಗು 7 ಅದ್ಭುತ ಯಶಸ್ಸನ್ನು ಪಡೆಯಿತು. ಭಾರೀ ಟಿಆರ್‌ಪಿಯನ್ನು ದೊರಕಿಸಿಕೊಂಡಿತು.. ಸೀಸನ್ 6 ಸಂಪೂರ್ಣ ಫ್ಲಾಪ್ ಆಗಿದ್ದರಿಂದ, ತಯಾರಕರು ಸೀಸನ್ 7 ಅನ್ನು ಹೊಸದಾಗಿ ಮಾಡಿದ್ದರು. ಆಟಗಳು, ಎಲಿಮಿನೇಷನ್‌ಗಳು ಮತ್ತು ವೈಲ್ಡ್ ಕಾರ್ಡ್ ರೂಲ್ಸ್‌ಗಳನ್ನು ವಿಭಿನ್ನವಾಗಿ ಯೋಜಿಸಲಾಗಿತ್ತು..

ಮತ್ತೊಂದು ವಿಶೇಷವೆಂದರೆ ಬಿಗ್ ಬಾಸ್ ಸೀಸನ್ 7 ವಿನ್ನರ್ ಒಬ್ಬ ಕಾಮನ್ ಮ್ಯಾನ್. ರೈತ ಟ್ಯಾಗ್‌ನೊಂದಿಗೆ ಮನೆ ಪ್ರವೇಶಿಸಿದ ಪಲ್ಲವಿ ಪ್ರಶಾಂತ್ ಟಾಪ್ ಸೆಲೆಬ್ರಿಟಿಗಳನ್ನು ಸೋಲಿಸಿ ಟೈಟಲ್ ವಿನ್ನರ್ ಆದರು. ಸೀಸನ್ 7 ರ ಯಶಸ್ಸಿನ ಹಿನ್ನೆಲೆಯಲ್ಲಿ, ಶೀಘ್ರದಲ್ಲೇ ಸೀಸನ್ 8 ಅನ್ನು ಪ್ರೇಕ್ಷಕರಿಗೆ ಲಭ್ಯವಾಗುವಂತೆ ಮಾಡಲು ತಯಾರಕರು ಯೋಚಿಸುತ್ತಿದ್ದಾರೆ.

ಇದನ್ನೂ ಓದಿ-ಸ್ಯಾಂಡಲ್ವುಡ್’ಗೆ ಗ್ರ್ಯಾಂಡ್ ಎಂಟ್ರಿಕೊಟ್ಟ ದುನಿಯಾ ವಿಜಯ್ ಪುತ್ರಿ ಮೋನಿಕಾ! ಯಾವ ಸಿನಿಮಾ ಗೊತ್ತಾ?

ಬಿಗ್ ಬಾಸ್ ಸೀಸನ್ 8ಕ್ಕೆ ತಯಾರಿ ಶುರುವಾಗಿದೆ ಎಂಬುದು ಲೇಟೆಸ್ಟ್ ಟಾಕ್... ಎಂದರೇ ಜೂನ್ ವೇಳೆಗೆ ಶೋ ಆರಂಭಿಸಲು ಮುಂದಾಗಿದ್ದಾರೆ... ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆಯೂ ಆರಂಭವಾಗಿದ್ದು.. ಕೆಲವರು ಸೆಲೆಬ್ರಿಟಿಗಳನ್ನು ಸಂಪರ್ಕಿಸುತ್ತಿದ್ದಾರೆ ಎನ್ನಲಾಗಿದೆ.. ಸೀಸನ್ 7 ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಗಿ, ಡಿಸೆಂಬರ್‌ನಲ್ಲಿ ಕೊನೆಗೊಂಡಿತು. ಆದರೆ ಸೀಸನ್ 8 ನಿರೀಕ್ಷೆಗಿಂತ ಮೊದಲೇ ತೆರೆಗೆ ಬರಲಿದೆ.

ನಾಗಾರ್ಜುನ ಮತ್ತೊಮ್ಮೆ ಆತಿಥೇಯರ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರೆ ಎಂದು ವರದಿಯಾಗಿದೆ. ಇದು ಬಿಗ್ ಬಾಸ್ ಪ್ರಿಯರಿಗೆ ಖುಷಿ ಕೊಡುವ ವಿಷಯ. ಒಟ್ಟಿನಲ್ಲಿ ಬಿಗ್‌ಬಾಸ್ ಸೀಸನ್ 8 ರೊಂದಿಗೆ ಮತ್ತೊಂದು ಸಂಚಲನಕ್ಕೆ ಸಜ್ಜಾಗಿದೆ. ‌

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News