ಬಿಗ್ ಬಾಸ್ ಸ್ಪರ್ಧಿ ಗರ್ಭಿಣಿ..! ಹೊರಬಂದ ಸ್ಪರ್ಧಿಯಿಂದ ಬಯಲಾಯ್ತು ಅಸಲಿ ಸತ್ಯ

BBK 17: ದೊಡ್ಮನೆ ರಂಪಾಟ, ಗಲಾಟೆ, ಶತೃತ್ವಕ್ಕೆ ಮಾದರಿಯಾಗುತ್ತಿದೆ. ದಿನವೂ ಟಾಸ್ಕ್‌ ಗೆಲ್ಲಲು ಶತ್ರುಗಳು ಮಿತ್ರರಾಗುತ್ತಿದ್ದಾರೆ, ಮಿತ್ರರು ಶತ್ರುಗಳಾಗುತ್ತಿದ್ದಾರೆ. ಇನ್ನು ಇತ್ತೀಚಿಗೆ ಮನೆಯಿಂದ ಹೊರ ಬಂದ ಸ್ಪರ್ಧಿಯೊಬ್ಬರು ಶಾಕಿಂಗ್‌ ವಿಚಾರವೊಂದನ್ನು ಬಯಲಿಗೆಳೆದಿದ್ದಾರೆ. ಇದರಿಂದ ಪ್ರೇಕ್ಷಕರು ಆಶ್ಚರ್ಯಗೊಂಡಿದ್ದಾರೆ.

Written by - Krishna N K | Last Updated : Nov 30, 2023, 05:31 PM IST
  • ಬಿಗ್‌ ಬಾಸ್‌ ಸ್ಪರ್ಧೆ ದಿನದಿಂದ ದಿನಕ್ಕೆ ಕುತೂಹಲ ಪಡೆದುಕೊಳ್ಳುತ್ತಿದೆ.
  • ಬಿಗ್‌ಹೌಸ್‌ನಿಂದ ಹೊರಬಂದ ಸ್ಪರ್ಧಿ ಶಾಕಿಂಗ್‌ ನ್ಯೂಸ್‌ ಕೊಟ್ಟಿದ್ದಾರೆ.
  • ದೊಡ್ಮನೆಯಲ್ಲಿ ಕೇಳಿ ಬಂದ ಗರ್ಭಿಣಿ ವಿಚಾರವಾಗಿ ಸತ್ಯ ಬಿಚ್ಚಿಟ್ಟಿದ್ದಾರೆ.
ಬಿಗ್ ಬಾಸ್ ಸ್ಪರ್ಧಿ ಗರ್ಭಿಣಿ..! ಹೊರಬಂದ ಸ್ಪರ್ಧಿಯಿಂದ ಬಯಲಾಯ್ತು ಅಸಲಿ ಸತ್ಯ title=

Bigg Boss 17 : ಬಿಗ್‌ ಬಾಸ್‌ ಸ್ಪರ್ಧೆ ದಿನದಿಂದ ದಿನಕ್ಕೆ ಕುತೂಹಲ ಪಡೆದುಕೊಳ್ಳುತ್ತಿದೆ. ದೊಡ್ಮನೆ ರಂಪಾಟ, ಗಲಾಟೆ, ಶತೃತ್ವಕ್ಕೆ ಮಾದರಿಯಾಗುತ್ತಿದೆ. ದಿನವೂ ಟಾಸ್ಕ್‌ ಗೆಲ್ಲಲು ಶತ್ರುಗಳು ಮಿತ್ರರಾಗುತ್ತಿದ್ದಾರೆ, ಮಿತ್ರರು ಶತ್ರುಗಳಾಗುತ್ತಿದ್ದಾರೆ. ಸಧ್ಯ ಬಿಗ್‌ಹೌಸ್‌ನಿಂದ ಹೊರಬಂದ ಸ್ಪರ್ಧಿ ಶಾಕಿಂಗ್‌ ನ್ಯೂಸ್‌ ಕೊಟ್ಟಿದ್ದಾರೆ.

ಆದ್ರೆ ಅದು ಕನ್ನಡ ಬಿಗ್‌ ಬಾಸ್‌ ಅಲ್ಲ ಅಂತ ಫ್‌ಸ್ಟ್‌ ನಿಮಗೆ ಹೇಳಿ ಬೀಡ್ತೀನಿ. ನಾವು ಹೇಳುತ್ತಿರುವುದು ಹಿಂದಿ ಬಿಗ್ ಬಾಸ್ ಸೀಸನ್ 17ನ ವಿಚಾರ. ಹೌದು... ಬಿಗ್‌ ಬಾಸ್‌ 17 ಸ್ಪರ್ಧೆ ಜೋರಾಗಿದೆ. ದಿನದಿಂದ ದಿನಕ್ಕೆ ಸ್ಪರ್ಧಿಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಮನೆಯಿಂದ ಹೊರಬಂದ ತಕ್ಷಣ ಸ್ಪರ್ಧಿಗಳು ಶಾಕಿಂಗ್ ವಿಚಾರಗಳನ್ನು ಬಾಯ್ಬಿಡುತ್ತಿದ್ದಾರೆ. ಇದೀಗ ಹೊಸ ವಿಚಾರವೊಂದು ಬಯಲಾಗಿದೆ.

ಇದನ್ನೂ ಓದಿ: ಆಕೆಗೋಸ್ಕರ ಪತ್ನಿಯನ್ನೇ ದೂರ ಮಾಡಿದ್ರಾ ವರ್ತೂರು ಸಂತೋಷ್?

ಕಳೆದ ವಾರ ಬಿಗ್‌ ಬಾಸ್‌ ಸ್ಪರ್ಧಿ ಅಂಕಿತಾ ಲೋಖಂಡೆ ಗರ್ಭಿಣಿಯಾಗಿದ್ದಾರೆ ಎನ್ನುವ ವಿಚಾರ ಸಖತ್‌ ಸದ್ದು ಮಾಡಿತ್ತು. ಇದೀಗ ಈ ವಿಚಾರದ ಕುರಿತು ಈ ವಾರ ದೊಡ್ಮನೆಯಿಂದ ಹೊರಬಂದ ಮಾಜಿ ಪತ್ರಕರ್ತೆ ಜಿಗ್ನಾ ವೋರಾ ಈ ಕುರಿತು ಇಟ್ರಸ್ಟಿಂಗ್‌ ವಿಚಾರಗಳನ್ನು ಬಯಲಿಗೆಳೆದಿದ್ದಾರೆ. 

ಸಂಚಿಕೆಯೊಂದರಲ್ಲಿ ಇದ್ದಕ್ಕಿದ್ದಂತೆ ಅಂಕಿತಾ ಲೋಖಂಡೆ ಆರೋಗ್ಯವ ಹದಗೆಟ್ಟಿತು. ಅಲ್ಲದೆ, ಅವರು ತಮಗೆ ವಾಕರಿಕೆ ಅನುಭವ ಆಗ್ತಿದೆ, ಏನಾದರೂ ಹುಳಿ ತಿನ್ನಬೇಕು ಅನಿಸುತ್ತಿದೆ ಅಂತ ಹೇಳಿಕೊಂಡಿದ್ದರು. ಅಷ್ಟು ಸಾಲದು ಅಂತ ಅಂಕಿತಾ ಗರ್ಭಧಾರಣೆ ಪರೀಕ್ಷೆಯನ್ನು ಸಹ ತೆಗೆದುಕೊಂಡರು. 

ಇದನ್ನೂ ಓದಿ:ಪತಿ ಕೊಟ್ಟ ಗಿಫ್ಟ್ ನೋಡಿ ಶಾಕ್ ಆದ ನಟಿ ನಯನತಾರ..! ವಿಘ್ನೇಶ್‌ ಕೊಟ್ಟಿದ್ದು ಏನ್‌ ಗೊತ್ತೆ..?

ಇದೀಗ ಜಿಗ್ನಾ ವೋರಾ ಅಂಕಿತಾ ಗರ್ಭಿಣಿಯಾಗಿದ್ದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಆಕೆ ನಿಜವಾಗಿಯೂ ಗರ್ಭಿಣಿಯಾಗಿದ್ದಳೋ ಅಥವಾ ಈ ರೀತಿ ಆಟವಾಡಿದ್ರೋ ಅಂತ ಗೊತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಅಲ್ಲದೆ, ಪರೀಕ್ಷೆ ನಂತರ ವರದಿ ನೆಗೆಟಿವ್ ಬಂತು ಅಂತ ಅಂಕಿತಾ ಹೇಳಿದ್ದಳು ಎಂದು ಜಿಗ್ನಾ ತಿಳಿಸಿದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News