ರೇಸಾರ್ಟ್‌ ʼಬರ್ತ್‌ಡೇ ಪಾರ್ಟಿʼ..! ಮಾಜಿ ʼಬಿಗ್ ಬಾಸ್ ಸ್ಪರ್ಧಿʼ ವಿರುದ್ಧ ಪ್ರಕರಣ ದಾಖಲು 

Bigg Boss contestant : ಬಿಗ್ ಬಾಸ್ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾಗಿದೆ. ಈ ಕಾರ್ಯಕ್ರಮದ ಮೂಲಕ ಮುನ್ನಲೆಗೆ ಬಂದಿದ್ದ, ಸೋಷಿಯಲ್‌ ಮೀಡಿಯಾದ ಸ್ಟಾರ್‌ ಒಬ್ಬ ಪೊಲೀಸ್‌ ಪರ್ಮಿಷನ್‌ ಇಲ್ಲದೆ ರೆಸಾರ್ಟ್‌ನಲ್ಲಿ ಗ್ರ್ಯಾಂಡ್‌ ಆಗಿ ಬರ್ತ್‌ಡೇ ಸೆಲೆಬ್ರೆಷನ್‌ ಮಾಡಿಕೊಂಡಿದ್ದಾರೆ.. ಇದೀಗ ಬಿಗ್‌ಬಾಸ್‌ ಸ್ಪರ್ಧಿ ವಿರುದ್ಧ ದೂರು ದಾಖಲಾಗಿದೆ.. 

Written by - Krishna N K | Last Updated : Jul 31, 2024, 05:08 PM IST
    • ಬಿಗ್ ಬಾಸ್ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದು
    • ರೆಸಾರ್ಟ್‌ನಲ್ಲಿ ಗ್ರ್ಯಾಂಡ್‌ ಆಗಿ ಬರ್ತ್‌ಡೇ ಸೆಲೆಬ್ರೆಷನ್‌
    • ಬಿಗ್‌ಬಾಸ್‌ ಸ್ಪರ್ಧಿ ವಿರುದ್ಧ ದೂರು ದಾಖಲಾಗಿದೆ..
ರೇಸಾರ್ಟ್‌ ʼಬರ್ತ್‌ಡೇ ಪಾರ್ಟಿʼ..! ಮಾಜಿ ʼಬಿಗ್ ಬಾಸ್ ಸ್ಪರ್ಧಿʼ ವಿರುದ್ಧ ಪ್ರಕರಣ ದಾಖಲು  title=
Bigg Boss season 8 telugu

Bigg Boss Mehaboob :  ಮೆಹಬೂಬ್ ದಿಲ್ ಸೆ ಹಲವು ಮ್ಯೂಸಿಕ್ ವೀಡಿಯೋ, ಡ್ಯಾನ್ಸ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಿದ್ದರು. ಬಿಗ್ ಬಾಸ್ ಶೋ ಪ್ರವೇಶಿಸಿದ ನಂತರ ಅವರ ಜನಪ್ರಿಯತೆ ಹೆಚ್ಚಾಯಿತು. ಈ ಶೋನಲ್ಲಿ ಗೆಲ್ಲಲಿಲ್ಲವಾದರೂ, ತಮ್ಮ ಆಟದ ಮತ್ತು ಮಾತಿನ ಶೈಲಿಯಿಂದ ಕಿರುತೆರೆ ಪ್ರೇಕ್ಷಕರನ್ನು ರಂಜಿಸಿದರು. 

ಮನೆಯಿಂದ ಹೊರಬಂದ ನಂತರ ನಟನೆಗೂ ಕಾಲಿಟ್ಟರು. ಹಲವು ಟಿವಿ ಶೋ, ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದರು. ಇದೇ ವೇಳೆ ಸೋಮವಾರ (ಜುಲೈ) ಮೆಹಬೂಬ್ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಅನಾಥಾಶ್ರಮದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಅನಾಥ ಮಕ್ಕಳಿಗೆ ಒಳ್ಳೆಯ ಊಟ ಕೊಡಿಸುವ ಮೂಲಕ ಉದಾರತೆ ಮೆರೆದರು.

ಇದನ್ನೂ ಓದಿ:ʼಆ ನಟನೊಂದಿಗೆ ನಾನು...ʼ ದಿಢೀರ್‌ ಶಾಕಿಂಗ್‌ ನಿರ್ಧಾರ ತೆಗೆದುಕೊಂಡ ನಟಿ ಶ್ರೀಲೀಲಾ!? ಅಭಿಮಾನಿಗಳಲ್ಲಿ ಗೊಂದಲ!!

ಇಲ್ಲಿಯವರೆಗೆ ಎಲ್ಲಾ ಚೆನ್ನಾಗಿತ್ತು ಆದರೆ ಮೆಹಬೂಬ್ ತನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ತನ್ನ ಸ್ನೇಹಿತರಿಗಾಗಿ ಗ್ರ್ಯಾಂಡ್ ಪಾರ್ಟಿಯನ್ನು ಆಯೋಜನೆ ಮಾಡಿದ್ದರು.. ಈಗ ಇದೇ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಹೈದರಾಬಾದ್‌ನ ಉಪನಗರದಲ್ಲಿರುವ ಕಾಂಟಿನೆಂಟಲ್ ರೆಸಾರ್ಟ್‌ನಲ್ಲಿ ನಡೆದ ಮೆಹಬೂಬ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಆಯೋಜನೆ ಮಾಡಲಾಗಿತ್ತು..

ಈ ಪಾರ್ಟಿಯಲ್ಲಿ ಅನೇಕ ಸೆಲೆಬ್ರಿಟಿಗಳು ಮತ್ತು ಕಿರುತೆರೆ ನಟರು ಭಾಗವಹಿಸಿದ್ದರು. ಆದರೆ, ಯಾವುದೇ ಪರವಾನಿಗೆ ಇಲ್ಲದೆ ಪಾರ್ಟಿ ಆಯೋಜಿಸಿದ್ದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.. ಇದರೊಂದಿಗೆ ಪೊಲೀಸರು ಮೆಹಬೂಬ್ ಹಾಗೂ ರೆಸಾರ್ಟ್ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ:ಹೀರೋ ನನ್ನ ಕೈಯಲ್ಲಿ ಆಗಲ್ಲ ಅಂದಿದಕ್ಕೆ ಆ ಕೆಲಸವನ್ನು ಮಾಡಿ ತೋರಿಸಿದ ಡೈರೆಕ್ಟರ್‌..! ನಟಿ ಶ್ರೀದೇವಿಯನ್ನ...

ಅನುಮತಿ ಇಲ್ಲದೆ ಮದ್ಯ ತಂದು ಸೇವಿಸುವುದು ಅಪರಾಧ ಎಂದು ಅಬಕಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 11 ಲೀಟರ್ ಮದ್ಯ ಹಾಗೂ 7 ಲೀಟರ್ ಬಿಯರ್ ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಪೊಲೀಸರು ತಿಳಿಸಿದ್ದಾರೆ. ಆದರೆ ಈ ಪಾರ್ಟಿಯಲ್ಲಿ ಕೆಲವರು ಮಾತ್ರ ಮದ್ಯ ಸೇವಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News