ಬಿಗ್‌ ಬಾಸ್‌ ಪ್ರೇಮ ಕತೆ: ಸಂಗೀತಾ - ಕಾರ್ತಿಕ್ ಮಧ್ಯೆ ಅನುರಾಗ ಅರಳೋ ಸಮಯ! ಸ್ನೇಹನಾ ಪ್ರೀತಿನಾ?

Sangeetha Karthik : ಸಂಗೀತಾ ಶೃಂಗೇರಿ ಹಾಗೂ ಕಾರ್ತಿಕ್ ಇಬ್ಬರೂ ದಿನ ಕಳೆದಂತೆ ಹತ್ತಿವಾಗುತ್ತಿದ್ದಾರೆ. ಇವರ ನಡುವೆ ಪ್ರೀತಿ ಮೂಡುವ ಎಲ್ಲ ಲಕ್ಷಣಗಳು ಕಾಣುತ್ತಿವೆ ಎಂದು ಜನರು ಮಾತನಾಡುತ್ತಿದ್ದಾರೆ.

Written by - Chetana Devarmani | Last Updated : Oct 17, 2023, 11:44 AM IST
  • ಬಿಗ್‌ ಬಾಸ್‌ ಕನ್ನಡ ಸೀಸನ್‌ 10
  • ಬಿಗ್ ಬಾಸ್ ಮನೆ ಒಳಗೆ ಪ್ರೇಮಾಂಕುರ
  • ಸಂಗೀತಾ ಸ್ನೇಹ ಗೆದ್ದ ಕಾರ್ತಿಕ್
ಬಿಗ್‌ ಬಾಸ್‌ ಪ್ರೇಮ ಕತೆ: ಸಂಗೀತಾ - ಕಾರ್ತಿಕ್ ಮಧ್ಯೆ ಅನುರಾಗ ಅರಳೋ ಸಮಯ! ಸ್ನೇಹನಾ ಪ್ರೀತಿನಾ? title=
Sangeetha Karthik

Bigg Boss Love story : ಬಿಗ್ ಬಾಸ್ ಮನೆ ಒಳಗೆ ಪ್ರೇಮಾಂಕುರವಾಗುವುದು ಸಾಮಾನ್ಯ. ಈ ಬಾರಿಯೂ ಒಂದಲ್ಲ ಎರಡು ಜೋಡಿಗಳ ಮಧ್ಯೆ ಪ್ರೇಮ ಹುಟ್ಟುವ ಲಕ್ಷಣ ಕಾಣುತ್ತಿದೆ. ಸಂಗೀತಾ ಶೃಂಗೇರಿ ಹಾಗೂ ಕಾರ್ತಿಕ್ ಇಬ್ಬರೂ ದಿನ ಕಳೆದಂತೆ ಹತ್ತಿವಾಗುತ್ತಿದ್ದಾರೆ. 

ದಿನದಿಂದ ದಿನಕ್ಕೆ ಇಬ್ಬರ ಮಧ್ಯೆ ಆತ್ಮೀಯತೆ ಹೆಚ್ಚಾಗುತ್ತಿದೆ. ಇಬ್ಬರೂ ಬೆಸ್ಟ್‌ ಫ್ರೆಂಡ್ಸ್‌ ಎಂದೇ ಸ್ಪಷ್ಟಪಡಿಸಿದ್ದಾರೆ. ಆದರೂ ಇವರ ನಡುವೆ ಪ್ರೀತಿ ಮೂಡುವ ಎಲ್ಲ ಲಕ್ಷಣಗಳು ಕಾಣುತ್ತಿವೆ ಎಂದು ಜನರು ಮಾತನಾಡುತ್ತಿದ್ದಾರೆ.

 

 

ಇದನ್ನೂ ಓದಿ: BBK 10 : ನೀನು ಗಂಡ್ಸೇ ಅಲ್ಲ, ಥೂ.. ತುಕಾಲಿ ಸಂತು ವಿರುದ್ಧ ಈಶಾನಿ ಕಿರುಚಾಡಿದ್ದೇಕೆ? 

ಈ ಜೋಡಿ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗುತ್ತಿದೆ. ನಿನ್ನೆ ನಾಮಿನೇಷನ್‌ನಿಂದ ಬಚಾವ್‌ ಮಾಡುವ ಟಾಸ್ಕ್‌ನಲ್ಲಿ ಕಾರ್ತಿಕ್‌ ಅವರುಸಣಗೀತಾ ಪರ ಆಟ ಆಡಿದ್ದಾರೆ. ಈ ಟಾಸ್ಕ್‌ನಲ್ಲಿ ಕೊನೆಯವರೆಗೂ ಸಂಗೀತಾಗೋಸ್ಕರ ಹೋರಾಡಿದರು. ವಿನಯ್‌ ಕೊನೆಯಲ್ಲಿ ಟಾಸ್ಕ್‌ ಗೆದ್ದು ಮೈಕೆಲ್‌ ಅವರನ್ನು ನಾಮಿನೇಷನ್‌ನಿಂದ ಬಚಾವ್‌ ಮಾಡಿದರು. 

ಟಾಸ್ಕ್‌ ಸೋತರೂ ಸಂಗೀತಾ ಅವರ ಹೃದಯ ಗೆಲ್ಲುವಲ್ಲಿ ಕಾರ್ತಿಕ್‌ ಯಶಸ್ವಿಯಾಗಿದ್ದಾರೆ. ಟಾಸ್ಕ್‌ ವೇಳೆ ಕಾರ್ತಿಕ್​ ಬೆನ್ನಿಗೆ ಗಾಯವಾಗಿದೆ. ಈ ಗಾಯಕ್ಕೆ ಸಂಗೀತಾ ಶೃಂಗೇರಿ ಎಣ್ಣೆ ಹಚ್ಚಿದ್ದಾರೆ. ಸಂಗೀತಾ ಅವರು ಕಾರ್ತಿಕ್‌ ಅವರನ್ನು ಕೇರ್‌ ಮಾಡುವ ರೀತಿ ಎಲ್ಲರಿಗೂ ಇಷ್ಟವಾಗಿದೆ. ಸ್ನೇಹಿತರಾಗಿರುವ ಇವರಿಬ್ಬರ ನಡುವಿನ ಆತ್ಮೀಯತೆ ಜನರ ಮನಕ್ಕೂ ಇಷ್ಟವಾಗ್ತಿದೆ. ಬಿಗ್‌ಬಾಸ್‌ 10 ಕಲರ್ಸ್ ವಾಹಿನಿಯಲ್ಲಿ ಪ್ರತಿ ದಿನ ರಾತ್ರಿ 9:30ಕ್ಕೆ ಹಾಗೂ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ.

ಇದನ್ನೂ ಓದಿ: ‌Bigg Boss 10 : ಕಣ್ಣು ಬಿಡೋ ಮುಂಚೆನೆ ಬಿಗ್‌ ಟ್ವಿಸ್ಟ್‌.. ಈ ವಾರ ಮತ್ತೊಬ್ಬ ಸ್ಪರ್ಧಿ ಮನೆಯಿಂದ ಔಟ್! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News