BBK 10 : ನೀನು ಗಂಡ್ಸೇ ಅಲ್ಲ, ಥೂ.. ತುಕಾಲಿ ಸಂತು ವಿರುದ್ಧ ಈಶಾನಿ ಕಿರುಚಾಡಿದ್ದೇಕೆ?

Eshani Fights with Tukali Santosh : ವಾರದ ಮೊದಲ ದಿನವೇ ಎದ್ದು ಕಣ್ಣು ಬಿಡುವಷ್ಟರಲ್ಲಿ ನಾಮಿನೇಷನ್‌ ಪ್ರಕ್ರಿಯೆ ನಡೆಯಿತು. ಇಲ್ಲಿಂದ ಹೊತ್ತಿಕೊಂಡ ಕಿಚ್ಚು ದಿನದ ಕೊನೆಯವರೆಗೂ ಮುಂದುವರೆಯಿತು. 

Written by - Chetana Devarmani | Last Updated : Oct 17, 2023, 09:08 AM IST
  • ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರ ಎರಡನೇ ವಾರ
  • ಮೊದಲ ದಿನವೇ ರಣರಂಗವಾದ ಮನೆ
  • ತುಕಾಲಿ ಸಂತು ವಿರುದ್ಧ ಈಶಾನಿ ರೋಷಾವೇಷ
BBK 10 : ನೀನು ಗಂಡ್ಸೇ ಅಲ್ಲ, ಥೂ.. ತುಕಾಲಿ ಸಂತು ವಿರುದ್ಧ ಈಶಾನಿ ಕಿರುಚಾಡಿದ್ದೇಕೆ?  title=
Eshani Fights with Tukali Santosh

Bigg Boss Kannada Season 10 : ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರ ಎರಡನೇ ವಾರ ಶುರುವಾಗಿದೆ. ವಾರದ ಮೊದಲ ದಿನವೇ ಎದ್ದು ಕಣ್ಣು ಬಿಡುವಷ್ಟರಲ್ಲಿ ನಾಮಿನೇಷನ್‌ ಪ್ರಕ್ರಿಯೆ ನಡೆಯಿತು. ಇಲ್ಲಿಂದ ಹೊತ್ತಿಕೊಂಡ ಕಿಚ್ಚು ದಿನದ ಕೊನೆಯವರೆಗೂ ಮುಂದುವರೆಯಿತು. ವೀಕೆಂಡ್ ಎಪಿಸೋಡ್‌ನ ಸುದೀಪ್ ಸೇರಿದಂತೆ ಹಲವರು ತುಕಾಲಿ ಸಂತೋಷ್‌ ಅವರ ವರ್ತನೆ ಬಗ್ಗೆ ಪ್ರಶ್ನೆ ಮಾಡಿದರು. ವೈಯಕ್ತಿಕವಾಗಿ ಹರ್ಟ್ ಆಗುವ ಕಾಮಿಡಿ ಕ್ಲಾಸ್‌ ತೆಗೆದುಕೊಂಡರು. ಇದು ಮನೆಯಲ್ಲಿರುವ ಕೆಲವರ ಮೇಲೆ ಪ್ರಭಾವ ಬೀರಿದೆ. 

ಎರಡನೇ ವಾರದ ಮೊದಲ ದಿನ ಅಂದರೆ ನಿನ್ನೆ ನಾಮಿನೇಟ್ ಆದವರನ್ನು ಉಳಿಸಲು ಟಾಸ್ಕ್ ಒಂದನ್ನು ನೀಡಲಾಗಿತ್ತು. ಆಗ ತುಕಾಲಿ ಸಂತು ಪರವಾಗಿ ಟಾಸ್ಕ್ ಮಾಡಲು ರಕ್ಷಕ್ ಬುಲೆಟ್‌ ಮುಂದೆ ಬಂದರು. ಎಳೆಯುವ ರಬ್ಬರ್ ಮಾದರಿಯ ವಸ್ತುವನ್ನು ಕಟ್ಟಿಕೊಂಡು ಅದರ ಹಿಂಬಲವನ್ನು ಮೀರಿ ಮುಂದೆ ಹೋಗಿ ಕಂಬವೊಂದನ್ನು ಹಿಡಿದು ನಿಲ್ಲಬೇಕಿತ್ತು. ಈಶಾನಿ, ಸಂತು ಪವಾಗಿ ಟಾಸ್ಕ್ ಆಡುತ್ತಿದ್ದ ರಕ್ಷಕ್‌ ಅವರ ಮೇಲೆಯೇ ನೀರು ಹಾಕುತ್ತಿದ್ದರು. 

ಇದನ್ನೂ ಓದಿ: 'ಬರುವಾಗ್ಲೇ ಟಿಕೆಟ್ ತಂದಿರ್ತೀವಿ, ವೇಟಿಂಗ್ ಲೀಸ್ಟಲ್ಲಿರ್ತೀವಿ.. ಕನ್ಫರ್ಮ್ ಆಗಿದ್ದೇ ಹೊರಡ್ತೀವಿ' : ಸ್ನೇಕ್‌ ಶ್ಯಾಮ್‌ 

ಈಶಾನಿ ಏನೇ ಟ್ರಿಗರ್‌ ಮಾಡಿದರು ರಕ್ಷಕ್‌ ಮಾತ್ರ ಕೈ ಬಿಡಲಿಲ್ಲ. ಆಗ ಈಶಾನಿ ಹೊಸ ಟ್ರಿಕ್‌ ಆರಂಭಿಸಿದರು. ತುಕಾಲಿ ಅವರ ವಿರುದ್ದವಾಗಿ ಚಾಡಿ ಹೇಳಲು ಆರಂಭಿಸಿದರು. ಅವನು ಸೂಕ್ತ ವ್ಯಕ್ತಿಯಲ್ಲ, ನಿನ್ನ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದ್ದಾನೆ. ನಿನ್ನೆ ಬೆನ್ನ ಹಿಂದೆ ಮಾತನಾಡಿದ್ದಾನೆ ಎಂದೆಲ್ಲ ಈಶಾನಿ ಹೇಳುತ್ತಿದ್ದರು. ಅಲ್ಲದೇ ಇಂಥವರ ಪರ ನೀನು ನಿಂತಿದ್ದೀಯಲ್ಲ ನಾಚಿಕೆ ಆಗಲ್ವಾ ಅಂದ್ರು. 

ಈ ಸಮಯದಲ್ಲಿ ರಕ್ಷಕ್‌ ಅವರ ತಂದೆಯ ಮಾತೂ ಸಹ ಬಂತು. ಆಗ ತುಕಾಲಿ ಸಂತು ಅವರು ಈಶಾನಿ ಮೇಲೆ ಕೊಂಚ ಸಿಟ್ಟಾದರು. ಇದರಿಂದ ಕೆರಳಿದ ಈಶಾನಿ ರೋಷಾವೇಷ ಹೊರಹಾಕಿದರು. ಈಶಾನಿ, ಹಠಾತ್ತನೆ ತುಕಾಲಿ ಸಂತು ವಿರುದ್ಧ ರೌದ್ರಾವತಾರ ತಾಳಿದರು. ಇದ್ದಕ್ಕಿದ್ದಂತೆ ಕಿರುಚಾಡಲು ಶುರು ಮಾಡಿದರು. ಮನೆಯವರಿಗೆಲ್ಲ ಅರೆಕ್ಷಣ ಶಾಕ್‌ ಆಯ್ತು. ಮನೆಯ ಕೆಲ ಸದಸ್ಯರು ಮಧ್ಯ ಬಂದು ಶಾಂತವಾಗಿಸಲು ಪ್ರಯತ್ನಿಸಿದರು. 

 

 

ಸಂತುಗೆ ಈಶಾನಿ ಕೆಟ್ಟದಾಗಿ ಬೈಯ್ಯಲು ಪ್ರಾರಂಭಿಸಿದರು. ಅವನು ಗಂಡಸೇ ಅಲ್ಲ, ಥೂ ಅಸಹ್ಯ, ಏ ಹೋಗೋ ಎಂದು ಏರು ಧ್ವನಿಯಲ್ಲಿ ಕಿರುಚಾಡಲು ಪ್ರಾರಂಭಿಸಿದರು. ಈಶಾನಿಯವರನ್ನು ಕೆಲ ಸದಸ್ಯರು ಪಕ್ಕಕ್ಕೆ ಕರೆದುಕೊಂಡು ಹೋಗಿ, ಮಾತನ್ನು ಹಿಡಿದಲ್ಲಿಟ್ಟುಕೊಳ್ಳಲು ಹೇಳಿದರು. 

ಇದನ್ನೂ ಓದಿ: ‌Bigg Boss 10 : ಕಣ್ಣು ಬಿಡೋ ಮುಂಚೆನೆ ಬಿಗ್‌ ಟ್ವಿಸ್ಟ್‌.. ಈ ವಾರ ಮತ್ತೊಬ್ಬ ಸ್ಪರ್ಧಿ ಮನೆಯಿಂದ ಔಟ್! 

ಮತ್ತೆ ರಕ್ಷಕ್ ಬಳಿ ಬಂದ ಈಶಾನಿ, ನೀರನ್ನು ಚೆಲ್ಲುತ್ತಾ ಅಳುತ್ತಾ, ನೀನು ನನ್ನ ತಮ್ಮನ ಹಾಗೆ ಅವನಂಥ ವ್ಯಕ್ತಿ ಪರ ನೀನು ನಿಲ್ಲಬೇಡ, ಇದಕ್ಕಿಂತ ಹೆಚ್ಚು ನಾನು ಏನೂ ಹೇಳಲಾರೆ ಎಂದರು. ಆದರೂ ರಕ್ಷಕ್ ತಮ್ಮ ಕೈ ಬಿಡಲಿಲ್ಲ. 

ಕೆಲ ಸಮಯದ ಬಳಿ ಸುಸ್ತಾಗಿ ರಕ್ಷಕ್ ತಮ್ಮ ಕೈ ಬಿಟ್ಟರು. ರಕ್ಷಕ್ ಬುಲೆಟ್‌ ಆಟಕ್ಕೆ ಎಲ್ಲರೂ ಫಿದಾ ಆದರು. ಈ ಮೂಲಕ ತುಕಾಲಿ ಸಂತು ನಾಮಿನೇಷನ್‌ನಿಂದ ಬಚಾವ್‌ ಆಗಲಿಲ್ಲ. ಟಾಸ್ಕ್ ಮುಗಿದ ಬಳಿಕ ತುಕಾಲಿ ಸಂತು, ಗೌರೀಶ್ ಅಕ್ಕಿ, ನಮ್ರತಾ ಸೇರಿ ಕೆಲವರು ಈಶಾನಿ ಬಳಿ ಕುಳಿತು ಮಾತನಾಡಿ ಕಾಂಪ್ರೊಮೈಸ್ ಆದರು. ಈಶಾನಿ ಸಹ ಎಲ್ಲವನ್ನೂ ಮರೆತು ಮುಂದಕ್ಕೆ ಹೋಗೋಣ ಎಂದು ಕೈ ಕುಲುಕಿದರು. ಬಿಗ್‌ಬಾಸ್‌ 10 ಕಲರ್ಸ್ ವಾಹಿನಿಯಲ್ಲಿ ಪ್ರತಿ ದಿನ ರಾತ್ರಿ 9:30ಕ್ಕೆ ಹಾಗೂ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News