ಐದು ವರ್ಷದಿಂದ ಒಂದೇ ಒಂದು ಚಿತ್ರ ಮಾಡಿಲ್ಲ.. ಆದರೂ ಈ ಬಾಲಿವುಡ್‌ ಬೆಡಗಿಯ ಕ್ರೇಜ್‌ ಬೇರೆ ಲೆವೆಲ್!‌

Bollywood Actress: ಕಳೆದ ಏಳು ವರ್ಷಗಳಿಂದ ಒಂದೇ ಒಂದು ಚಿತ್ರ ಮಾಡದ ಒಂದು ಕಾಲದಲ್ಲಿ ಯಶಸ್ವಿ ನಾಯಕಿ, ಇನ್ನೂ ಟಾಪ್ ಸೆಲೆಬ್ರಿಟಿಯಾಗಿ ಕ್ರೇಜ್ ಉಳಿಸಿಕೊಂಡಿದ್ದಾರೆ.. ಹಾಗಾದರೆ ಯಾರು ಆ ನಟಿ ಅಂತೀರಾ.. ಈ ಸ್ಟೋರಿ ಓದಿ..   

Written by - Savita M B | Last Updated : Jan 26, 2024, 11:22 AM IST
  • ಸಾಮಾನ್ಯವಾಗಿ ಸಿನಿಮಾ ತಾರೆಯರು ಸದಾ ತೆರೆಯ ಮೇಲೆ ಕಂಡರೆ ಮಾತ್ರ ಪ್ರೇಕ್ಷಕರಿಗೆ ನೆನಪಾಗುವುದು
  • ಕಳೆದ ಏಳು ವರ್ಷಗಳಿಂದ ಒಂದೇ ಒಂದು ಚಿತ್ರ ಮಾಡಿಲ್ಲ, ಇನ್ನೂ ಟಾಪ್ ಸೆಲೆಬ್ರಿಟಿಯಾಗಿಯೇ ಉಳಿದುಕೊಂಡಿದ್ದಾರೆ..
  • ಆ ನಟಿ ಬೇರೆ ಯಾರೂ ಅಲ್ಲ.. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ
ಐದು ವರ್ಷದಿಂದ ಒಂದೇ ಒಂದು ಚಿತ್ರ ಮಾಡಿಲ್ಲ.. ಆದರೂ ಈ ಬಾಲಿವುಡ್‌ ಬೆಡಗಿಯ ಕ್ರೇಜ್‌ ಬೇರೆ ಲೆವೆಲ್!‌  title=

Bollywood Actress Anushka Sharma: ಸಾಮಾನ್ಯವಾಗಿ ಸಿನಿಮಾ ತಾರೆಯರು ಸದಾ ತೆರೆಯ ಮೇಲೆ ಕಂಡರೆ ಮಾತ್ರ ಪ್ರೇಕ್ಷಕರಿಗೆ ನೆನಪಾಗುವುದು. ಇಲ್ಲದಿದ್ದರೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಒಂದು ಕಾಲದಲ್ಲಿ ಯಶಸ್ವಿ ನಾಯಕಿ, ಕಳೆದ ಏಳು ವರ್ಷಗಳಿಂದ ಒಂದೇ ಒಂದು ಚಿತ್ರ ಮಾಡಿಲ್ಲ, ಇನ್ನೂ ಟಾಪ್ ಸೆಲೆಬ್ರಿಟಿಯಾಗಿಯೇ ಉಳಿದುಕೊಂಡಿದ್ದಾರೆ.. 

ಆ ನಟಿ ಬೇರೆ ಯಾರೂ ಅಲ್ಲ.. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ... ಅನೇಕ ಹಿಟ್‌ ಸಿನಿಮಾಗಳನ್ನು ನೀಡಿದ ಬಾಲಿವುಡ್ ನಟಿ ಅನುಷ್ಕಾ ಶರ್ಮಾ.. ತನ್ನ ವೃತ್ತಿಜೀವನವು ಉತ್ತುಂಗದಲ್ಲಿದ್ದಾಗ 2017 ರಲ್ಲಿ ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ವಿವಾಹವಾದರು. ಸದ್ಯ ದಂಪತಿಗೆ ಮಗಳು ಇದ್ದಾಳೆ.. 

ಇದನ್ನೂ ಓದಿ-ಕಮಲ್‌ ಹಾಸನ್‌ ತಂದೆ ತಾಯಿ ಯಾರು ಗೊತ್ತಾ? ಗ್ಲೋಬಲ್ ಸ್ಟಾರ್‌ ಫ್ಯಾಮಿಲಿ ಹೇಗಿದೆ ನೋಡಿ!

ಮದುವೆಯ ನಂತರ ಅನುಷ್ಕಾ ಸಿನಿಮಾಗಳತ್ತ ಹೆಚ್ಚು ಗಮನ ಹರಿಸಿರಲಿಲ್ಲ. ಕಳೆದ ಐದು ವರ್ಷಗಳಲ್ಲಿ ಅವರು ಒಂದೇ ಒಂದು ಚಿತ್ರವನ್ನೂ ಮಾಡಿಲ್ಲ. ಆದರೆ, ಆಕೆಯ ಗಳಿಕೆ ಮಾತ್ರ ಕಡಿಮೆಯಾಗಿಲ್ಲ. ಅನುಷ್ಕಾ ಬಳಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ಐಷಾರಾಮಿ ಕಾರುಗಳು ಮತ್ತು ಐಷಾರಾಮಿ ಮನೆಗಳಿವೆ.. ಅನುಷ್ಕಾ ಶರ್ಮಾ ಅವರ ನಿವ್ವಳ ಮೌಲ್ಯ ರೂ.250 ಕೋಟಿಯಿಂದ ರೂ.300 ಕೋಟಿಗಳಷ್ಟಿದೆ ಎಂದು ವರದಿಯಾಗಿದೆ.

ನಟಿ ಅನುಷ್ಕಾ ಪ್ರತಿ ಚಿತ್ರಕ್ಕೆ 10 ರಿಂದ 12 ಕೋಟಿ ರೂ.. ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳಿಂದ ಬರುವ ಆದಾಯ.. ಮತ್ತು ಒಂದು ಜಾಹೀರಾತಿಗೆ ಸುಮಾರು 3 ಕೋಟಿ ರೂ. ಗಳಿಸುತ್ತಾರೆ... ಹಾಗಾಗಿಯೇ ಸಿನಿಮಾದಲ್ಲಿ ನಟಿಸದಿದ್ದರೂ ಆಕೆಯ ಆದಾಯದಲ್ಲಿ ಸ್ವಲ್ಪವೂ ಕಡಿಮೆಯಾಗಿಲ್ಲ.

ಇದನ್ನೂ ಓದಿ-Bigg Boss: ಫಿನಾಲೆ ಪ್ರವೇಶಕ್ಕಾಗಿ 19 ಕೋಟಿ ವೋಟ್ ಪಡೆದಿದ್ದು ವಂಚನೆ.. ಖ್ಯಾತ ಬಿಗ್‌ಬಾಸ್‌ ಸ್ಪರ್ಧಿ ಮೇಲೆ ಆರೋಪ!

ಐಷಾರಾಮಿ ಕಾರುಗಳು
ಅನುಷ್ಕಾ ಮತ್ತು ವಿರಾಟ್ ಕೊಹ್ಲಿ ಇಬ್ಬರಿಗೂ ಐಷಾರಾಮಿ ಕಾರುಗಳು ಇಷ್ಟ. ಅವರ ಬಳಿ Audi R8, Audi A8 L, Audi Q8, Audi Q7, Audi RS 5, Audi S5, Range Rover Vogue, Bentley Flying Spur, Bentley Continental GT ನಂತಹ ಸ್ಪೋರ್ಟ್ಸ್ ಕಾರುಗಳಿವೆ.

ಸದ್ಯದಲ್ಲೇ ರೀ ಎಂಟ್ರಿ ಕೊಡಲಿರುವ ಅನುಷ್ಕಾ
ಅನುಷ್ಕಾ ಶರ್ಮಾ ಈಗ 'ಚಕ್ಡಾ ಎಕ್ಸ್‌ಪ್ರೆಸ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಭಾರತೀಯ ಮಹಿಳಾ ಕ್ರಿಕೆಟಿರ್ ಜೂಲನ್ ಗೋಸ್ವಾಮಿ ಅವರ ಜೀವನಾಧಾರಿತ ಚಿತ್ರ ಇದಾಗಿದ್ದು... ಈ ವರ್ಷದ ಕೊನೆಯಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News