Toxic: ರಾಕಿಭಾಯ್ ʻಟಾಕ್ಸಿಕ್‌ʼನಲ್ಲಿ ಕರೀನಾ ಕಪೂರ್‌ ಹೀರೋಯಿನ್‌ ಅಲ್ಲ: ಹಾಗಾದ್ರೇ ಈ ನಟಿಯ ಪಾತ್ರವೇನು??

Toxic Update: ಚಂದನವನದ ನಟ ರಾಕಿಂಗ್‌ ಸ್ಟಾರ್‌ ಯಶ್‌ ನಟಿಸಲಿರುವ ಟಾಕ್ಸಿಕ್‌ ಸಿನಿಮಾದಲ್ಲಿ ಬಾಲಿವುಡ್‌ ನಟಿ ಕರೀನಾ ಕಪೂರ್‌ ಖಾನ್‌  ನಾಯಕಿಯಾಗಿ ಬಣ್ಣ ಹಚ್ಚುತ್ತಿಲ್ಲ. ಅಂದಹಾಗೆ ಈ ನಟಿ ಮಾಡಲಿರುವ ಪಾತ್ರ ಯಾವುದು? ಇದರ ಕುರಿತು ಮಾಹಿತಿ ಇಲ್ಲಿದೆ.

Written by - Zee Kannada News Desk | Last Updated : Mar 28, 2024, 11:25 AM IST
  • ಟಾಕ್ಸಿಕ್‌ ಚಿತ್ರ ಅನೌನ್ಸ್‌ ಆದಾಗಿನಿಂದಲೂ ಇದರಲ್ಲಿ ಬಾಲಿವುಡ್‌ ತಾರೆಯರ ಹೆಸರು ಹೆಚು ಕೇಳಿ ಬರುತ್ತಿದೆ.
  • ಟಾಕ್ಸಿಕ್‌ ಚಿತ್ರದ ಮೋಷನ್‌ ಪೋಸ್ಟರ್‌ ಹಾಗೂ ಟೀಸರ್‌ ರಿಲೀಸ್‌ ಆದಾಗಿನಿಂದ ಬಾಲಿವುಡ್‌ ಬೆಡಗಿ ಕರೀನಾ ಕಪೂರ್‌ ಇದರಲ್ಲಿ ಬಣ್ಣ ಹಚ್ಚಲಿದ್ದಾರೆಂಬ ವಿಷಯ ರಿವೀಲ್‌ ಆಗಿತ್ತು.
  • ನಟಿ ಕರೀನಾ ಕಪೂರ್‌ ಟಾಕ್ಸಿಕ್ ಚಿತ್ರದಲ್ಲಿ ತಮ್ಮ ವಯಸ್ಸಿಗೆ ಸೂಟ್‌ ಆಗುವಂತಹ ಕ್ಯಾರೆಕ್ಟರ್‌ ಮಾಡಲಿದ್ದಾರೆ.
Toxic: ರಾಕಿಭಾಯ್ ʻಟಾಕ್ಸಿಕ್‌ʼನಲ್ಲಿ ಕರೀನಾ ಕಪೂರ್‌ ಹೀರೋಯಿನ್‌ ಅಲ್ಲ: ಹಾಗಾದ್ರೇ ಈ ನಟಿಯ ಪಾತ್ರವೇನು?? title=

Kareena Kapoor Role In Toxic: ಸ್ಯಾಂಡಲ್‌ವುಡ್‌ ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಬಹುನಿರೀಕ್ಷಿತ ಪ್ಯಾನ್‌ ವರ್ಲ್ಡ್‌ ಟಾಕ್ಸಿಕ್‌ ಸಿನಿಮಾದಲ್ಲಿ ಬಿ-ಟೌನ್‌ ಬೆಡಗಿ ಕರೀನಾ ಕಪೂರ್‌ ಖಾನ್‌ ಹೀರೋಯಿನ್‌ ಅಲ್ಲವೆಂಬ ಮಾಹಿತಿ ಹೊರಬಂದಿದೆ. ಟಾಕ್ಸಿಕ್‌ ಚಿತ್ರ ಅನೌನ್ಸ್‌ ಆದಾಗಿನಿಂದಲೂ ಇದರಲ್ಲಿ ಬಾಲಿವುಡ್‌ ತಾರೆಯರ ಹೆಸರು ಹೆಚು ಕೇಳಿ ಬರುತ್ತಿದೆ. ಅದರಲ್ಲಂತೂ ಮೊದಲು ನಟಿ ಕರೀನಾ ಕಪೂರ್‌ ಹೆಸರು ಮೊದಲು ಹೇಳಿ ಬಂದಿತ್ತು.

ಹೌದು.. ಟಾಕ್ಸಿಕ್‌ ಚಿತ್ರದ ಮೋಷನ್‌ ಪೋಸ್ಟರ್‌ ಹಾಗೂ ಟೀಸರ್‌ ರಿಲೀಸ್‌ ಆದಾಗಿನಿಂದ ಬಾಲಿವುಡ್‌ ಬೆಡಗಿ ಕರೀನಾ ಕಪೂರ್‌ ಈ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆಂಬ ವಿಷಯ ರಿವೀಲ್‌ ಆಗಿತ್ತು. ಇದರ ಬಗ್ಗೆ ಸ್ವತಃ ಕರೀನಾ ಕಪೂರ್‌ ನೇರವಾಗಿ ಉತ್ತರ ನೀಡದಿದ್ದರೂ, ತಾವು ಸೌತ್‌ ಸಿನಿಮಾದಲ್ಲಿ ನಟಿಸಲಿರುವ ಬಗ್ಗೆ ಹೇಳಿಕೊಂಡಿದ್ದರು. ಅವಾಗಿನಿಂದಲೂ ಈ ನಿಟಿಯ ಸುತ್ತ ಟಾಕ್ಸಿಸ್ ಚಿತ್ರದ ಸುದ್ದಿ ಹರಿದಾಡುತ್ತಲೇ ಇದೆ.

ಇದನ್ನೂ ಓದಿ: South Actress: ನಟಿ ಜಯಪ್ರದಾ ಪತಿ ಯಾರು ಗೊತ್ತಾ? ಅಷ್ಟು ಸುಂದರವಾಗಿದ್ದರೂ 3 ಮಕ್ಕಳ ತಂದೆಯನ್ನು ಮದುವೆಯಾಗಿದ್ದು ಇದೇ ಕಾರಣಕ್ಕೆ!!

ಇತ್ತೀಚೆಗೆ ಟಾಕ್ಸಿಕ್‌ ಸಿನಿಮಾದಲ್ಲಿ ನಟಿ ಕರೂನಾ ಕಪೂರ್‌ ಮಾತ್ರವೇನು ಎನ್ನುವ ಕುತೂಹಲದ ಸುದ್ದಿಗಳು ಹರಿದಾಡುತ್ತಿತ್ತು, ಅದೇ ವೇಳೆ ಈ ನಟಿ ಚಿತ್ರದ ನಾಯಕಿ ಅಲ್ಲ ಎಂದು ತಿಳಿದು ಬಂದಿದೆ. ಟಾಕ್ಸಿಕ್‌ ಸಿನಿಮಾದಲ್ಲಿ ಈ ನಟಿಯ ಪಾತ್ರ ಬೇರೆಯೇ ಇದೆ ಎಂಬ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ನಟಿ ಕರೀನಾ ಕಪೂರ್‌  ಈ ಚಿತ್ರದಲ್ಲಿ ತಮ್ಮ ವಯಸ್ಸಿಗೆ ಸೂಟ್‌ ಆಗುವಂತಹ ಕ್ಯಾರೆಕ್ಟರ್‌ ಮಾಡಲಿದ್ದಾರೆ.

ನಟಿ ಕರೀನಾ ಕಪೂರ್ ಖಾನ್‌ ಟಾಕ್ಸಿಕ್‌ ಸಿನಿಮಾದಲ್ಲಿ ನಟ ಯಶ್‌ ಸಹೋದರಿಯ ಪಾತ್ರವನ್ನು ಮಾಡಲಿದ್ದಾರೆಂಬ ಮಾತು ಹೆಚ್ಚು ಕೇಳಿ ಬರುತ್ತಿದೆ. ಆದರೆ ಇದರ ಬಗ್ಗೆ ಕರೀನಾ ಕಪೂರ್ ಆಗಲಿ ಅಥವಾ ಡೈರೆಕ್ಟರ್ ಗೀತು ಮೋಹನದಾಸ್ ಆಗಲಿ ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ ಚಂದನವನಕ್ಕೆ ಹೆಜ್ಜೆ ಹಾಕುತ್ತಿರುವ ಕರೀನಾ ಕಪೂರ್ ತೂಫಾನ್‌ ಯಶ್‌ ಸಹೋದರಿ ಆಗುತ್ತಿದ್ದಾರೆ ಎಂಬ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News