Sobhita Dhulipala: ವೃತ್ತಿಜೀವನದ ಆರಂಭಿಕ ಹಂತಗಳಲ್ಲಿ ಸಾಕಷ್ಟು ನಿರಾಕರಣೆಗಳನ್ನು ಎದುರಿಸಿದ ಅನೇಕ ನಟ-ನಟಿಯರು ಈಗ ದೊಡ್ಡ ಸ್ಟಾರ್ ಪಟ್ಟದಲ್ಲಿದ್ದಾರೆ... ಅದರಲ್ಲಿ ಶೋಭಿತಾ ಧೂಳಿಪಾಲ ಸಹ ಒಬ್ಬರು.. ಈ ನಟಿ ಸದ್ಯ ಹಾಲಿವುಡ್‌ಗೆ ಪದಾರ್ಪಣೆ ಮಾಡಿದ್ದಾರೆ..
ಬಾಲಿವುಡ್‌ನಲ್ಲಿ ಬೆಳೆಯುವುದು ಅಷ್ಟು ಸುಲಭವಲ್ಲ.. ಚಿತ್ರರಂಗದ ಹೊರಗಿನಿಂದ ಬರುವ ಕಲಾವಿದರಿಗೆ ಸಾಮಾನ್ಯವಾಗಿ ಯಾವುದೇ ಸೆಲೆಬ್ರಿಟಿಗಳು ಮಾರ್ಗದರ್ಶನ ನೀಡುವುದಿಲ್ಲ. ಸ್ವಜನಪಕ್ಷಪಾತದ ಬಗ್ಗೆ ಹೆಚ್ಚುತ್ತಿರುವ ಚರ್ಚೆಯ ನಡುವೆಯೂ ತಮ್ಮ ಶ್ರೇಷ್ಠತೆಯ ಆಧಾರದ ಮೇಲೆ ಬಾಲಿವುಡ್‌ನಲ್ಲಿ ತಮ್ಮ ಸ್ಥಾನವನ್ನು ಪಡೆದ ಅನೇಕ ತಾರೆಯರಿದ್ದಾರೆ. ಅವರ ಪಟ್ಟಿಯಲ್ಲಿ ಶೋಭಿತಾ ಧೂಳಿಪಾಲ ಕೂಡ ಇದ್ದಾರೆ..
ಇದನ್ನೂ ಓದಿ-Shruti Haasan : ಚಂದಿರನ ಹೊಳಪಲ್ಲಿ 'ಮೂನು' ಚಿತ್ರದ ಬೆಡಗಿಯ ಫೋಟೋಸ್ ಇಲ್ಲಿವೆ ನೋಡಿ
ಶೋಭಿತಾ 2010 ರ ಆರಂಭದಲ್ಲಿ ಮಾಡೆಲ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.. ನಂತರ 2013 ರ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿ, ಫೈನಲಿಸ್ಟ್ ಕೂಡ ಆದರು. ಆದರೂ ಸಾವಿರಕ್ಕೂ ಹೆಚ್ಚು ಆಡಿಷನ್‌ಗಳಲ್ಲಿ ರಿಜೆಕ್ಟ್ ಆದ ನಟಿ ಶೋಭಿತಾ ದೂಳಿಪಾಲ..
ಇದನ್ನೂ ಓದಿ-ಬೆಳ್ಳಿ ಪರದೆಗೆ ಕಾಲಿಟ್ಟು 38 ವರ್ಷಗಳ ಸಂಭ್ರಮದಲ್ಲಿ ಸುಧಾರಾಣಿ : ಸೆಲೆಬ್ರೆಷನ್ ವಿಡಿಯೋ ವೈರಲ್
ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ ಶೋಭಿತಾ "ನನಗೆ ಸಿನಿಮಾ ಜಗತ್ತಿನೊಂದಿಗೆ ಸಂಬಂಧವಿರಲಿಲ್ಲ.. ನಾನು ಆಡಿಷನ್ ಮೂಲಕವೇ ಸಿನಿರಂಗಕ್ಕೆ ಕಾಲಿಡಬೇಕಿತ್ತು.. ಸ್ವಲ್ಪ ಸಮಯದವರೆಗೆ ಮಾಡೆಲಿಂಗ್ ಮಾಡಿದ್ದ ನಾನು 1,000 ಆಡಿಷನ್‌ಗಳನ್ನು ನೀಡಿದ್ದೆ ಆದರೆ ನನ್ನ ಸ್ಕಿನ್ ಟೋನ್‌ನಿಂದಾಗಿ ರಿಜೆಕ್ಟ್ ಆಗಿದ್ದೆ" ಎಂದಿದ್ದಾರೆ..
ಇಷ್ಟೆಲ್ಲಾ ಕಷ್ಟಗಳನ್ನು ಎದುರಿಸಿದ ನಟಿ ಈಗ ಬಾಲಿವುಡ್‌ನಲ್ಲಿ ಗುರುತಿಸಿಕೊಂಡು ಹಾಲಿವುಡ್‌ಗೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ದೇವ್ ಪಟೇಲ್ ಅವರ ಚೊಚ್ಚಲ ನಿರ್ದೇಶನದ ಮಂಕಿ ಮ್ಯಾನ್, ಭಾರತವನ್ನು ಆಧರಿಸಿದ ಥ್ರಿಲ್ಲರ್ ಚಲನಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.