ಚಿತ್ರದಲ್ಲಿರುವ ಈ ಖ್ಯಾತ ಬಾಲಿವುಡ್ ನಟಿ ಯಾರು ಗುರುತಿಸಬಲ್ಲಿರಾ..? ಸರಿಯಾಗಿ ನೋಡಿ..

ಈ ಕುರಿತು ತನ್ನ ಅಭಿಮಾನಿಗಳ ಬಳಿಗೆ ವಿಶೇಷವಾಗಿ ತಲುಪಲು ಯತ್ನಿಸಿರುವ ಈ ಖ್ಯಾತ ಬಾಲಿವುಡ್ ನಟಿ ನಾಗರಿಕರಿಗೆ ರಿಲ್ಯಾಕ್ಸ್ ಆಗಿರಲು ಮನವಿ ಮಾಡಿದ್ದಾಳೆ.

Last Updated : Apr 8, 2020, 12:27 PM IST
ಚಿತ್ರದಲ್ಲಿರುವ ಈ ಖ್ಯಾತ ಬಾಲಿವುಡ್ ನಟಿ ಯಾರು ಗುರುತಿಸಬಲ್ಲಿರಾ..? ಸರಿಯಾಗಿ ನೋಡಿ.. title=

ನವದೆಹಲಿ: Covid19 ವಿರುದ್ಧ ಹೋರಾಟದಲ್ಲಿ ಇಡೀ ದೇಶಾದ್ಯಂತ ಸದ್ಯ ಲಾಕ್ ಡೌನ್ ಘೋಷಿಸಲಾಗಿದೆ. ಇಂತಹ ಸಂದರ್ಭದಲ್ಲಿ ಬಾಲಿವುಡ್ ನಟ-ನಟಿಯರು ಕೂಡ ತಮ್ಮ ಮನೆಗಳಲ್ಲಿ ಬಂಧಿಯಾಗಿದ್ದು, ತಮ್ಮ ಕುಟುಂಬ ಸದಸ್ಯರ ಜೊತೆಗೆ ಕಾಲ ಕಳೆಯುತ್ತಿದ್ದಾರೆ. ಆದರೆ, ಇಂಥಹ ಕಷ್ಟ ಕಾಲದಲ್ಲಿಯೂ ಕೂಡ ತನ್ನ ಅಭಿಮಾನಿಗಳನ್ನು ತಲುಪಲು ಖ್ಯಾತ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಯತ್ನಿಸಿದ್ದಾರೆ. ಅಷ್ಟೇ ಅಲ್ಲ ತನ್ಮೂಲಕ ಅಭಿಮಾನಿಗಳಿಗೆ ರಿಲ್ಯಾಕ್ಸ್ ಆಗಿರಲು ಮನವಿ ಮಾಡಿದ್ದಾರೆ. ಈ ಬಾರಿ ದೀಪಿಕಾ ತನ್ನ ಬಾಲ್ಯದ ಭಾವಚಿತ್ರವನ್ನು ಹಂಚಿಕೊಂಡಿದ್ದು, ಅವಳು ಹಂಚಿಕೊಂಡಿರುವ ಈ ಭಾವಚಿತ್ರಕ್ಕೆ ಅಭಿಮಾನಿಗಳು ಸಕತ್ ಕಾಮೆಂಟ್ ಮಾಡುತ್ತಿದ್ದಾರೆ.

ದೀಪಿಕಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬಾಲ್ಯದ ಭಾವಚಿತ್ರವೊಂದನ್ನು ಶೇರ್ ಮಾಡಿದ್ದಾಳೆ. ಈ ಭಾವಚಿತ್ರದಲ್ಲಿ ದೀಪಿಕಾಳ ಬಾಲ್ಯದ ಸ್ನೇಹಿತರಾಗಿರುವ ಆದಿತ್ಯ ನಾರಾಯಣ್ ಹಾಗೂ ದಿವ್ಯಾ ನಾರಾಯಣ್ ಕಾಣಿಸಿಕೊಂಡಿದ್ದಾರೆ. ಮಶ್ರೂಂ ಹೆಯರ್ ಕಟ್ ಮೂಲಕ ಈ ಭಾವಚಿತ್ರದಲ್ಲಿ ದೀಪಿಕಾ ಭಾರಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾಳೆ. ಈ ಭಾವಚಿತ್ರದಲ್ಲಿ ಮಕ್ಕಳು ಭಾರಿ ಎಂಜಾಯ್ ಮಾಡುತ್ತಿರುವುದು ಕಂಡುಬರುತ್ತಿದೆ. ಅಷ್ಟೇ ಅಲ್ಲ ದೀಪಿಕಾ ಕೂಡ ಫುಲ್ ಮಸ್ತಿ ಮೂಡ್ ನಲ್ಲಿರುವುದನ್ನು ನೀವು ಗಮನಿಸಬಹುದು. ದೀಪಿಕಾ ಹಂಚಿಕೊಂಡಿರುವ ಈ ಭಾವಚಿತ್ರ ಇದೀಗ ಇಂಟರ್ನೆಟ್ ಮೇಲೆ ಭಾರಿ ವೈರಲ್ ಆಗುತ್ತಿದೆ.

 
 
 
 

 
 
 
 
 
 
 
 
 

Basic... @divya_narayan4 @aditya__narayan

A post shared by Deepika Padukone (@deepikapadukone) on

ಇದಕ್ಕೂ ಮೊದಲು ದೀಪಿಕಾ ತಮ್ಮ ಪತಿ ರಣವೀರ್ ಸಿಂಗ್ ಅವರ ಭಾವಚಿತ್ರವನ್ನು ತನ್ನ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಭಾವಚಿತ್ರದಲ್ಲಿ ರಣವೀರ್ ಗಾಢ ನಿದ್ರೆಗೆ ಜಾರಿದ್ದರು. ಅವರ ಈ ಭಾವಚಿತ್ರ ಸಕತ್ ವೈರಲ್ ಆಗಿದ್ದು, ಲಾಕ್ ಡೌನ್ ಪರಿಸ್ಥಿತಿಯಲ್ಲಿ ದೀಪಿಕಾ ಮನೆಗೆಲಸ, ಕಿಚನ್ ನಲ್ಲಿ ಅಡುಗೆ ಹಾಗೂ ತಮ್ಮ ವಾರ್ಡ್ರೋಬ್ ನಲ್ಲಿ ಬಟ್ಟೆಗಳನ್ನು ಸರಿಪಡಿಸುತ್ತಾ ಕಾಲಹರಣ ಮಾಡುತ್ತಿದ್ದಾರೆ. ದೀಪಿಕಾಳ ವರ್ಕ್ ಫ್ರಂಟ್ ಕುರಿತು ಮಾತನಾಡುವುದಾದರೆ, ಶೀಘ್ರದಲ್ಲಿಯೇ ದೀಪಿಕಾ ಕಬೀರ್ ಖಾನ್ ಅವರ ಕ್ರಿಕೆಟ್ ಆಧರಿಸಿದ ಕಹತೇ "83"ನಲ್ಲಿ ತಮ್ಮ ಪತಿ ರಣವೀರ್ ಸಿಂಗ್ ಜೊತೆಗೆ ಸ್ಕ್ರೀನ್ ಹಂಚಿಕೊಳ್ಳಲಿದ್ದಾರೆ. ಈ ಚಿತ್ರದ ಬಳಿಕ ಶಗುನ್ ಬತ್ರಾ ಅವರ ಮುಂದಿನ ಚಿತ್ರದಲ್ಲಿಯೂ ದೀಪಿಕಾ ಕಾಣಿಸಿಕೊಳ್ಳಲಿದ್ದು, ಇದರಲ್ಲಿ ಅನನ್ಯ ಪಾಂಡೆ ಕೂಡ ಮುಖ್ಯ ಭೂಮಿಕೆಯಲ್ಲಿದ್ದಾಳೆ.

Trending News