ಮಹೇಶ್-ರಾಜಮೌಳಿ ಚಿತ್ರದಲ್ಲಿ ಇಂಡೋನೇಷ್ಯಾ ಬೆಡಗಿ ನಾಯಕಿ...! ಮುಗಿಲು ಮುಟ್ಟುತ್ತೆ ಸಿನಿಮಾ ಬಜೆಟ್

SSMB29 : ಖ್ಯಾತ ನಿರ್ದೇಶಕ ರಾಜಮೌಳಿ ಅವರ ಸಿನಿಮಾಗಳು ಭಾರತೀಯರಿಗೆ ಅಷ್ಟೇ ಅಲ್ಲ, ವಿದೇಶಿ ಪ್ರೇಕ್ಷಕರಿಗೂ ಬಲು ಇಷ್ಟ. ಅಲ್ಲದೆ, ರಾಜಮೌಳಿ ಮಹೇಶ್ ಬಾಬು ಜೊತೆ ಸಿನಿಮಾ ಮಾಡುತ್ತಿದ್ದಾರೆ ಎಂದು ತಿಳಿದಾಗ ಸಿನಿ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿದ್ದು, ಜಗತ್ತಿನಾದ್ಯಂತ ಈ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಇದೀಗ ಈ ಸಿನಿಮಾದಿಂದ ಬಿಗ್‌ ಅಪ್‌ಡೇಟ್‌ ಹೊರಬಿದ್ದಿದೆ.

Written by - Krishna N K | Last Updated : Jan 7, 2024, 01:13 PM IST
  • ಮಹೇಶ್ ಬಾಬು ರಾಜಮೌಳಿ ಜೊತೆಗಿನ ಮುಂದಿನ ಪ್ರಾಜೆಕ್ಟ್‌ನಲ್ಲಿ ಬ್ಯುಸಿಯಾಗಲಿದ್ದಾರೆ.
  • ಈ ಚಿತ್ರ ರಾಜಮೌಳಿ ಮೇಲಿರುವ ಕ್ರೇಜ್ ಅನ್ನು ಜಗತ್ತಿನಾದ್ಯಂತ ಊಹಿಸಲಾಗದ ಮಟ್ಟಕ್ಕೆ ಕೊಂಡೊಯ್ದಿದೆ.
  • ಈ ಚಿತ್ರಕ್ಕೆ ಇಂಡೋನೇಷ್ಯಾದ ನಟಿ ಚೆಲ್ಸಿಯಾ ಇಸ್ಲಾನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸುದ್ದಿಯಾಗಿದೆ.
ಮಹೇಶ್-ರಾಜಮೌಳಿ ಚಿತ್ರದಲ್ಲಿ ಇಂಡೋನೇಷ್ಯಾ ಬೆಡಗಿ ನಾಯಕಿ...! ಮುಗಿಲು ಮುಟ್ಟುತ್ತೆ ಸಿನಿಮಾ ಬಜೆಟ್ title=

Mahesh - Rajamouli movie : ಮಹೇಶ್ ಬಾಬು ಪ್ರಸ್ತುತ ತ್ರಿವಿಕ್ರಮ್ ಶ್ರೀನಿವಾಸ್ ಅವರ ʼಗುಂಟೂರು ಕಾರʼ ಬಿಡುಗಡೆಗೆ ತಯಾರಿ ನಡೆಸುತ್ತಿದ್ದಾರೆ. ಸಂಕ್ರಾಂತಿಯ ಉಡುಗೊರೆಯಾಗಿ ಜನವರಿ 12 ರಂದು ಈ ಚಿತ್ರ ಬಿಡುಗಡೆಯಾಗಲಿದೆ. ಸಿನಿಮಾದಲ್ಲಿ ಶ್ರೀಲೀಲಾ ಮತ್ತು ಮೀನಾಕ್ಷಿ ಚೌಧರಿ ನಾಯಕಿಯರಾಗಿ ನಟಿಸುತ್ತಿದ್ದು, ರಮ್ಯಾ ಕೃಷ್ಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ಈ ಸಿನಿಮಾ ಮುಗಿದ ನಂತರ ಮಹೇಶ್ ಬಾಬು ರಾಜಮೌಳಿ ಜೊತೆಗಿನ ಮುಂದಿನ ಪ್ರಾಜೆಕ್ಟ್‌ನಲ್ಲಿ ಬ್ಯುಸಿಯಾಗಲಿದ್ದಾರೆ. ರಾಜಮೌಳಿ ಅವರ ಆರ್‌ಆರ್‌ಆರ್ ಚಿತ್ರ ಬಿಡುಗಡೆಯಾಗಿ ಸುಮಾರು ಎರಡು ವರ್ಷಗಳಾಗಿವೆ. ಆಸ್ಕರ್ ಪ್ರಶಸ್ತಿಯನ್ನೂ ಪಡೆದಿರುವ ಈ ಚಿತ್ರ ರಾಜಮೌಳಿ ಮೇಲಿರುವ ಕ್ರೇಜ್ ಅನ್ನು ಜಗತ್ತಿನಾದ್ಯಂತ ಊಹಿಸಲಾಗದ ಮಟ್ಟಕ್ಕೆ ಕೊಂಡೊಯ್ದಿದೆ. 

ಇದನ್ನೂ ಓದಿ:ರಾಜಧಾನಿಯಲ್ಲಿ ʼಹನುಮಾನ್‌ʼ..! ಸಂಕ್ರಾತಿಗೆ ಚಿತ್ರಮಂದಿರಲ್ಲಿ ಶ್ರೀರಾಮ ಬಂಟನ ದರ್ಶನ

ಇನ್ನು ಮೊದಲ ಬಾರಿಗೆ ಮಹೇಶ್‌ ಬಾಬು ಮತ್ತು ರಾಜಮೌಳಿ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದ ಸ್ಕ್ರಿಪ್ಟ್ ಬಹುತೇಕ ಮುಗಿದಿದೆ. ಏಪ್ರಿಲ್ ನಿಂದ ಶೂಟಿಂಗ್ ಶುರುವಾಗಲಿದೆ ಎಂದು ವರದಿಯಾಗಿದೆ. ಆದರೆ ಈ ಚಿತ್ರದಲ್ಲಿ ನಾಯಕಿ ಯಾರು ಎಂಬ ಚರ್ಚೆ ಹಲವು ದಿನಗಳಿಂದ ನಡೆಯುತ್ತಿದೆ. 

ಕಳೆದ ಕೆಲವು ದಿನಗಳ ಹಿಂದೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೆಸರು ಕೇಳಿ ಬಂದಿತ್ತು. ಈಗ ಈ ಚಿತ್ರಕ್ಕೆ ಇಂಡೋನೇಷ್ಯಾದ ನಟಿ ಚೆಲ್ಸಿಯಾ ಇಸ್ಲಾನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸುದ್ದಿಯಾಗಿದೆ. ಇಂಡೋನೇಷಿಯಾದ ಈ ನಟಿ ಕೆಲವು ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಆಕೆಯ ಸ್ಕ್ರೀನ್ ಟೆಸ್ಟ್ ಕೂಡ ನಡೆದಿದ್ದು, ಈ ಚಿತ್ರಕ್ಕೆ ವಿದೇಶಿ ಬೆಡಗಿಯ ಆಗಮನ ಬಹುತೇಕ ಖಚಿತವಾಗಿದೆಯಂತೆ. 

ಇದನ್ನೂ ಓದಿ: ಒಟಿಟಿಗೆ ದಿಢೀರ್ ಎಂಟ್ರಿ ಕೊಟ್ಟ ಸಲ್ಮಾನ್‌ ಖಾನ್‌ ಟೈಗರ್ 3 ಸಿನಿಮಾ..! ಎಲ್ಲಿ.. ಯಾವಾಗ..

ಆದರೆ ಚೆಲ್ಸಿಯಾ ನಾಯಕಿಯ ಪಾತ್ರಕ್ಕೆ ಆಯ್ಕೆಯಾಗಿದ್ದಾರಾ ಅಥವಾ ಬೇರೆ ಪ್ರಮುಖ ಪಾತ್ರಕ್ಕೆ ಆಯ್ಕೆಯಾಗಿದ್ದಾರಾ ಎಂಬ ಮಾಹಿತಿ ಸ್ಪಷ್ಟವಾಗಬೇಕಿದೆ. ಸದ್ಯದ ಮಾಹಿತಿ ಪ್ರಕಾರ, ಈ ಚಿತ್ರ ಇಂಡಿಯಾನಾ ಜೋನ್ಸ್ ಶೈಲಿಯ ಕಥೆಯಾಗಿರುವುದರಿಂದ ಮೂರು ದೇಶಗಳಲ್ಲಿ ಪ್ರಮುಖ ದೃಶ್ಯಗಳ ಚಿತ್ರೀಕರಣ ನಡೆಯಲಿದೆಯಂತೆ. 

ಸಿನಿಮಾದ ಅರ್ಧದಷ್ಟು ಭಾಗ ಒಂದೇ ಸೆಟ್‌ನಲ್ಲಿ ಸಾಗಲಿದೆ. ಅದಕ್ಕಾಗಿ ವಿಶಾಲವಾದ ಸೆಟ್ ನಿರ್ಮಾಣ ಕಾರ್ಯದಲ್ಲಿ ಚಿತ್ರತಂಡ ತೊಡಗಿದೆ. ಆರ್‌ಆರ್‌ಆರ್‌ಗಿಂತ ಈ ಚಿತ್ರದ ಬಜೆಟ್‌ ಜಾಸ್ತಿಯಾಗಲಿದೆ ಎಂಬ ಮಾತು ಕೇಳಿಬರುತ್ತಿದೆ. ಸುಮಾರು 1000 ಕೋಟಿ ರೂ. ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News