​​ ಕಾಂಟ್ಯಾಕ್ಟ್ ಲೆನ್ಸ್ ಬಳಕೆಯಿಂದ ಕಣ್ಣನ್ನೇ ಕಳೆದುಕೊಂಡ್ರಾ ಈ ಪ್ರಖ್ಯಾತ ನಟಿ? ಏನಾಯ್ತು ನೋಡಿ ಹೀರೋಯಿನ್ ಕಥೆ...

Jasmin Bhasin Cornea Damaged: ಇದಾದ ನಂತರ ತಕ್ಷಣ ವೈದ್ಯರ ಬಳಿ ಹೋಗಿ ತಪಾಸಣೆ ಮಾಡಿದ ಬಳಿಕ ಕಾರ್ನಿಯಾ ಡ್ಯಾಮೇಜ್‌ ಆಗಿದೆ ಎಂಬುದು ತಿಳಿದು ಬಂದಿತ್ತು.  ಇದಾದ ಬಳಿಕ ಮುಂಬೈಗೆ ಬಂದು ಚಿಕಿತ್ಸೆ ಆರಂಭಿಸಿದ್ದರು. ಸದ್ಯ ವೈದ್ಯರು  ಕಣ್ಣಿಗೆ ಬ್ಯಾಂಡೇಜ್ ಹಾಕಿದ್ದು, ಇದೀಗ ಸಂಕಷ್ಟ ಎದುರಿಸುತ್ತಿದ್ದಾರೆ ನಟಿ.

Written by - Bhavishya Shetty | Last Updated : Jul 21, 2024, 07:22 PM IST
    • ಕಣ್ಣಿಗೆ ಕಾಂಟ್ಯಾಕ್ಟ್‌ ಲೆನ್ಸ್‌ ಧರಿಸಿದ್ದ ನಟಿ ಜಾಸ್ಮಿನ್ ಭಾಸಿನ್
    • ಕಾಂಟ್ಯಾಕ್ಟ್​​ ಲೆನ್ಸ್​ʼನಿಂದ ಕಾರ್ನಿಯಾಗೆ ಡ್ಯಾಮೇಜ್
    • ತಮ್ಮ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ಖ್ಯಾತ ನಟಿ
​​ ಕಾಂಟ್ಯಾಕ್ಟ್ ಲೆನ್ಸ್ ಬಳಕೆಯಿಂದ ಕಣ್ಣನ್ನೇ ಕಳೆದುಕೊಂಡ್ರಾ ಈ ಪ್ರಖ್ಯಾತ ನಟಿ? ಏನಾಯ್ತು ನೋಡಿ ಹೀರೋಯಿನ್ ಕಥೆ...  title=
File Photo

Jasmin Bhasin Cornea Damaged: ಜುಲೈ 17 ರಂದು ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ನಟಿ ಜಾಸ್ಮಿನ್ ಭಾಸಿನ್ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಕಣ್ಣಿಗೆ ಕಾಂಟ್ಯಾಕ್ಟ್‌ ಲೆನ್ಸ್‌ ಧರಿಸಿದ್ದರು. ಆದರೆ ಅದಾಗಲೇ ಕಣ್ಣಿನಲ್ಲಿ ಉರಿಯುವ ಅನುಭವ ಉಂಟಾಗಿದ್ದು, ನೋವಿನಿಂದ ಕಣ್ಣು ಮಿಟುಕಿಸಲು ಸಾಧ್ಯವಾಗಲಿಲ್ಲ. ಈ ಕಾರಣದಿಂದ ಕನ್ನಡಕ ಧರಿಸಿಯೇ ಇಡೀ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ:  ದರ್ಶನ್ ಮುಂದೆ ಬಿಲ್ಡಪ್..! ಮನೆಗೆ ಹೋಗು ಅಂದ್ರೂ ಬಾಸ್‌.. ಅಂತ ಹೋದವ ಕಂಬಿ ಹಿಂದೆ

ಇದಾದ ನಂತರ ತಕ್ಷಣ ವೈದ್ಯರ ಬಳಿ ಹೋಗಿ ತಪಾಸಣೆ ಮಾಡಿದ ಬಳಿಕ ಕಾರ್ನಿಯಾ ಡ್ಯಾಮೇಜ್‌ ಆಗಿದೆ ಎಂಬುದು ತಿಳಿದು ಬಂದಿತ್ತು.  ಇದಾದ ಬಳಿಕ ಮುಂಬೈಗೆ ಬಂದು ಚಿಕಿತ್ಸೆ ಆರಂಭಿಸಿದ್ದರು. ಸದ್ಯ ವೈದ್ಯರು  ಕಣ್ಣಿಗೆ ಬ್ಯಾಂಡೇಜ್ ಹಾಕಿದ್ದು, ಇದೀಗ ಸಂಕಷ್ಟ ಎದುರಿಸುತ್ತಿದ್ದಾರೆ ನಟಿ.

ನಿದ್ದೆಯೂ ಬಾರದೆ, ವಿಶ್ರಾಂತಿಯೂ ಸಿಗದೆ ನೋವು ಅನುಭವಿಸುತ್ತಿರುವ ನಟಿ, ತಮ್ಮ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ್ದಾರೆ. 

ಇತ್ತೀಚಿನ ಫೋಟೋವನ್ನು ಇನ್ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡಿರುವ ನಟಿ, "ಈಗ ನಾನು ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದೇನೆ. ನಿಮ್ಮೆಲ್ಲರ ಆಶೀರ್ವಾದಗಳಿಗೆ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಬ್ಯಾಟ್‌ ಖರೀದಿಸಲು ದುಡ್ಡಿಲ್ಲದೆ ಹಾಲು ಮಾರಿದ್ದಈ ಕ್ರಿಕೆಟಿಗ ಇಂದು 200 ಕೋಟಿ ಆಸ್ತಿ ಒಡೆಯ! ಟೀಂ ಇಂಡಿಯಾ ಟಿ20 ವಿಶ್ವಕಪ್‌ ಗೆದ್ದಿದ್ದೇ ಈತನಿಂದ...

ಈ ಹಿಂದೆ, ಜಾಸ್ಮಿನ್ ಭಾಸಿನ್ 'ಲಾಫ್ಟರ್ ಚೆಫ್' ಶೋನಲ್ಲಿ ಅಲಿ ಗೋನಿ ಜೊತೆ ಕಾಣಿಸಿಕೊಂಡಿದ್ದರು. ಇವರಿಬ್ಬರ ಜೊತೆಗೆ ಅರ್ಜುನ್ ಬಿಜಲಾನಿ, ರಾಹುಲ್ ವೈದ್ಯ, ಕರಣ್ ಕುಂದ್ರಾ, ಅಂಕಿತಾ ಲೋಖಂಡೆ, ವಿಕ್ಕಿ ಜೈನ್, ಕಾಶ್ಮೀರಾ ಶಾ, ಕೃಷ್ಣ ಅಭಿಷೇಕ್, ಸುದೇಶ್ ಲಾಹಿರಿ, ನಿಯಾ ಶರ್ಮಾ ಮತ್ತು ಜನ್ನತ್ ಜುಬೇರ್ ಕೂಡ ಈ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. 

 
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News