ಏ.22ಕ್ಕೆ ದರ್ಶನ್ ಅಭಿನಯದ 'ಕುರುಕ್ಷೇತ್ರ' ಆಡಿಯೋ ರಿಲೀಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಅತಿ ದೊಡ್ಡ ಬಜೆಟ್ ಚಿತ್ರ 'ಕುರುಕ್ಷೇತ್ರ'ದ ಆಡಿಯೋ ಬಿಡುಗಡೆ ಕಾರ್ಯಕ್ರಮ ಇದೇ ಏಪ್ರಿಲ್ 22ಕ್ಕೆ ನಡೆಯಲಿದೆ.

Updated: Apr 12, 2018 , 05:34 PM IST
ಏ.22ಕ್ಕೆ ದರ್ಶನ್ ಅಭಿನಯದ 'ಕುರುಕ್ಷೇತ್ರ' ಆಡಿಯೋ ರಿಲೀಸ್

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಅತಿ ದೊಡ್ಡ ಬಜೆಟ್ ಚಿತ್ರ 'ಕುರುಕ್ಷೇತ್ರ'ದ ಆಡಿಯೋ ಬಿಡುಗಡೆ ಕಾರ್ಯಕ್ರಮ ಇದೇ ಏಪ್ರಿಲ್ 22ಕ್ಕೆ ನಡೆಯಲಿದೆ ಎಂದು ಸಿನಿ ಮೂಲಗಳು ತಿಳಿಸಿವೆ. 

ಕ್ರೇಜಿ ಸ್ಟಾರ್ ರವಿಚಂದ್ರನ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ನಿಖಿಲ್ ಕುಮಾರಸ್ವಾಮಿ, ಅರ್ಜುನ್ ಸರ್ಜಾ, ರೆಬಲ್ ಸ್ಟಾರ್ ಅಂಬರೀಶ್, ಮೇಘನಾರಾಜ್ ಸೇರಿದಂತೆ ಬಹು ತಾರಾಗಣದಲ್ಲಿ ನಿರ್ಮಾಣವಾಗಿರುವ ‘ಕುರುಕ್ಷೇತ್ರ’ ಚಿತ್ರ ದರ್ಶನ್ ಅಭಿನಯದ 50ನೇ ಚಿತ್ರವಾಗಿದ್ದು, ಹೈದರಾಬಾದ್'ನಲ್ಲಿರುವ ರಾಮೋಜಿ ಫಿಲಂ ಸಿಟಿಯಲ್ಲಿ ಅದ್ದೂರಿ ಸೆಟ್ ಅಹಾಕಿ ಚಿತ್ರೀಕರಿಸಿರುವ ಈ ಚಿತ್ರದಲ್ಲಿರುವ ಗ್ರಾಫಿಕ್ಸ್​ ‘ಕುರುಕ್ಷೇತ್ರ’ ಸಿನಿಮಾವನ್ನು ಬೇರೆಯದೇ ರೀತಿಯಲ್ಲಿ ನೋಡುವಂತೆ ಮಾಡಿದೆ.

ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರದ ಡಬ್ಬಿಂಗ್ ಕೆಲಸವೂ ಬಹುತೇಕ ಮುಗಿದಿದೆ ಎನ್ನಲಾಗಿದೆ. ನಾಗಣ್ಣ ನಿರ್ದೇಶಿಸಿ, ಮುನಿರತ್ನ ಅವರು ನಿರ್ಮಿಸಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಕುರುಕ್ಷೇತ್ರ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, 10ಕ್ಕೂ ಹೆಚ್ಚು ಪದ್ಯಗಳಿವೆ. ಈ ಚಿತ್ರದ ಆಡಿಯೋವನ್ನು ಲಹರಿ ಸಂಸ್ಥೆ ಈಗಾಗಲೇ ಖರಿಸಿಸಿದ್ದು, ಇದೇ ಏಪ್ರಿಲ್ 22ರಂದು ಬಿಡುಗಡೆ ಮಾಡುವ ಯೋಜನೆಯಲ್ಲಿದೆ. ಆದರೆ, ಆಡಿಯೋ ಬಿಡುಗಡೆ ಸ್ಥಳ ಹಾಗೂ ವೇಳೆಯ ಬಗ್ಗೆ ಯಾವುದೇ ಮಾಹಿತಿಯನ್ನು ಚಿತ್ರತಂಡ ಬಹಿರಂಗಪಡಿಸಿಲ್ಲ.