ಬೆಂಗಳೂರು: 1977ರ ಫೆಬ್ರವರಿ 16… ಇದು ನಮ್ಮ ಕರುನಾಡಿನ ಕಿಂಗ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟಿದ ದಿನ. ಇವರ ಹುಟ್ಟುಹಬ್ಬವನ್ನು ಅಭಿಮಾನಿಗಳು ದಸರಾ ಹಬ್ಬದಂತೆ, ಜಾತ್ರೆಯಂತೆ ಸೆಲೆಬ್ರೇಶನ್ ಮಾಡುತ್ತಾರೆ. ‘ಡಿ ಬಾಸ್’ ಖ್ಯಾತಿಯ ದರ್ಶನ್ ಅವರಿಗೆ ತಮ್ಮ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಗಿಫ್ಟ್ ತರುವುದು, ಕೇಕ್ ತರುವುದು ಮತ್ತು ಹೂವಿನ ಹಾರಗಳನ್ನು ಹಾಕೋದು ಇಷ್ಟ ಆಗಲ್ಲ.
ಇದೆಲ್ಲಾ ಸುಮ್ನೆ ವೇಸ್ಟ್ ಆಗೋ ಬದಲು ಒಂದೊಳ್ಳೆ ವಿಚಾರಕ್ಕೆ ಅಭಿಮಾನಿಗಳು ಖರ್ಚು ಮಾಡಲಿ ಅನ್ನೋ ಆಶಯ ‘ಡಿ ಬಾಸ್’ಗಿದೆ. ಹೀಗಾಗಿಯೇ ಈ ಹಿಂದೆಯೇ ಹೇಳಿದಂತೆ ತಮ್ಮ ಹುಟ್ಟುಹಬ್ಬಕ್ಕೆ ಯಾರು ಸಹ ಇಂತಹ ವಸ್ತುಗಳಿಗೆ ಹಣ ಬಳಕೆ ಮಾಡುವುದು ಬೇಡ ಅನ್ನೋ ಮನವಿಯನ್ನು ‘ಜೀ ಕನ್ನಡ ನ್ಯೂಸ್’ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ರಿಲೀಸ್ಗೂ ಮೊದಲೇ ಸ್ಯಾಂಡಲ್ವುಡ್ನಲ್ಲಿ ಇಶಾನ್ ಕಮಾಲ್, ಸ್ಟಾರ್ ನಿರ್ದೇಶಕರಿಂದ ಆಫರ್ ಮೇಲೆ ಆಫರ್
ಗಿಫ್ಟ್, ಕೇಕ್ ಮತ್ತು ಹೂವಿನ ಹಾರಗಳ ಬದಲು ಬಡಜನರಿಗೆ ಬಳಕೆಯಾಗುವ ವಸ್ತುಗಳು ಅಂದ್ರೆ ಅಕ್ಕಿ, ಮನೆ ಬಳಕೆಯ ಸಾಮಗ್ರಿಗಳನ್ನು ತಂದುಕೊಟ್ರೆ ಅವುಗಳನ್ನು ಬೇಕಾದವರಿಗೆ ಹಂಚೋ ಕೆಲಸವನ್ನು ತಮ್ಮ ಪ್ರತಿ ಹುಟ್ಟುಹಬ್ಬದ ದಿನವೂ ‘ದಾಸ’ ದರ್ಶನ್ ಮಾಡುತ್ತಾರೆ. ಕಳೆದ 2 ವರ್ಷಗಳಿಂದ ಕೊರೊನಾ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ವಿಧಿವಶರಾದ ಕಾರಣ ತಾವು ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲವೆಂದು ಅಭಿಮಾನಿಗಳಿಗೆ ಡಿ ಬಾಸ್ ಮನವಿ ಮಾಡಿಕೊಂಡಿದ್ದರು.
ಈ ಬಾರಿ ‘ಕ್ರಾಂತಿ’ ಸಿನಿಮಾ ರಿಲೀಸ್ ಕೂಡ ಆಗಿರುತ್ತದೆ. ಬಳಿಕ ‘ಯಜಮಾನ’ನ ಹುಟ್ಟುಹಬ್ಬ ಬರುತ್ತಿರುವುದಿರಂದ ಫ್ಯಾನ್ಸ್ಗೆ ಈಗಾಗಲೇ ಒಂದು ಮನವಿ ಮಾಡಿದ್ದಾರೆ. ಅದೇನಪ್ಪ ಅಂದ್ರೆ ಹಳ್ಳಿಗಳಲ್ಲಿ ಇರುವ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಬೇಕಾದ ಅಗತ್ಯ ವಸ್ತುಗಳನ್ನು ಪೂರೈಸುವಂತೆ ಹೇಳಿದ್ದಾರೆ. ತಾವೂ ಸಹ ಆ ಶಾಲೆಗಳಿಗೆ ಭೇಟಿ ನೀಡುವುದಾಗಿ ‘ಜೀ ಕನ್ನಡ ನ್ಯೂಸ್’ ಜೊತೆಗಿನ ಸಂದರ್ಶನದಲ್ಲಿ ದರ್ಶನ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ‘ಡಿ ಬಾಸ್’ & ‘ಕಿಚ್ಚ’ ಮತ್ತೆ ಒಂದಾಗ್ತಾರೆ, ಒಂದಾಗ್ಲೇಬೇಕು! ಒಟ್ಟಿಗೆ ಸಿನಿಮಾ ಮಾಡ್ತಾರಾ?
ಈಗಾಗಲೇ ದರ್ಶನ್ ಫ್ಯಾನ್ಸ್ ಈ ಕೆಲಸವನ್ನು ಮಾಡುತ್ತಿದ್ದು, ಹಲವಾರು ಸರ್ಕಾರಿ ಶಾಲೆಗಳಲ್ಲಿ ತಟ್ಟೆ ಮತ್ತು ಗ್ಲಾಸ್ಗಳ ಕೊರತೆ ಇರುವುದನ್ನು ಕಂಡುಕೊಂಡಿದ್ದಾರೆ. ಇದು ದರ್ಶನ್ ಅವರಿಗೆ ತುಂಬಾ ನೋವು ಕೊಟ್ಟ ವಿಚಾರವಾಗಿದೆ. ಹೀಗಾಗಿ ಅಭಿಮಾನಿಗಳು ಡಿ ಬಾಸ್ ಬಯಕೆಯಂತೆ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಬೇಕಾದ ವಸ್ತುಗಳನ್ನು ಪೂರೈಸಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರಂತೆ. ಅದೇನೇ ಇರಲಿ ದರ್ಶನ್ ಅವರಿಗೆ ಇರೋ ಸಾಮಾಜಿಕ ಕಾಳಜಿಯ ಬಗ್ಗೆ ನಮ್ಮ ಕಡೆಯಿಂದಲೂ ಬಿಗ್ ಸಲ್ಯೂಟ್ ಹೇಳಲೇಬೇಕು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.