ಮದುವೆಯಾಗದೆ ಗರ್ಭಿಣಿಯಾದರ ಕನ್ನಡದ ಖ್ಯಾತ ನಟಿ , ಇದು ನಿಜವೇ ?

Written by - Zee Kannada News Desk | Last Updated : Nov 21, 2022, 07:51 PM IST
  • ಈ ಪೋಸ್ಟ್‌ನಲ್ಲಿ, ನಟಿ ನಿತ್ಯಾ ಮೆನನ್ " ನೋರಾ ಪಾತ್ರವನ್ನು ಇಷ್ಟಪಟ್ಟೆ ಮತ್ತು ಆನಂದಿಸಿದೆ " ಎಂದು ಬರೆದಿದ್ದಾರೆ.
  • ಅವರು ನಿಜವಾಗಿಯೂ ಗರ್ಭಿಣಿಯಾಗಿಲ್ಲ ಇದು ಕೇವಲ ಚಲನಚಿತ್ರದ ಪಾತ್ರದ ನಟನೆ ಎಂಬುದನ್ನು ಈ ಮೂಲಕ ತಿಳಿಸಿದ್ದಾರೆ.
  • ಇದರೊಂದಿಗೆ ಅವರ ಅಭಿಮಾನಿಗಳು ಕೂಡ ಪೋಸ್ಟ್‌ಗೆ ಕಾಮೆಂಟ್ ಮಾಡುತ್ತಿದ್ದಾರೆ
ಮದುವೆಯಾಗದೆ ಗರ್ಭಿಣಿಯಾದರ ಕನ್ನಡದ ಖ್ಯಾತ ನಟಿ , ಇದು ನಿಜವೇ ? title=

ಕಳೆದ ಕೆಲವು ದಿನಗಳಿಂದ ಚಿತ್ರರಂಗದಲ್ಲಿ ಮದುವೆಯಾಗಿ ತಂದೆ ತಾಯಿಯಾಗುವ ಸುದ್ದಿ ನಿರಂತರವಾಗಿ ಬರುತ್ತಿದೆ. ಇತ್ತೀಚೆಗಷ್ಟೇ ಆಲಿಯಾ ಭಟ್ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಇದೀಗ ದಕ್ಷಿಣ ಭಾರತದ ಅದರಲ್ಲೂ ಕನ್ನಡದ ಈ ಖ್ಯಾತ ನಟಿಯ ಇತ್ತಿಚೀನ ಪೋಸ್ಟ್ ಇಂತಹದೇ ರೀತಿಯಲ್ಲಿ ಸಖತ್ ಸುದ್ದಿಯಾಗುತ್ತಿದೆ.

ಅಷ್ಟಕ್ಕೂ ಆ ನಟಿ ಯಾರು ? ಈ ಸುದ್ದಿಯಾದರೂ ಏನು ಎಂಬುದನ್ನು ನೋಡೋಣ.

ಸೌತ್ ಫಿಲ್ಮ್ ಇಂಡಸ್ಟ್ರಿಯ ಖ್ಯಾತ ನಟಿ ನಿತ್ಯಾ ಮೆನನ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಕೆಲವು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದಾರೆ ಎಂಬ ಸುದ್ದಿ ಬರುತ್ತಿದೆ. ವಾಸ್ತವವಾಗಿ, ನಟಿ ತನ್ನ ಇನ್ಸ್ಟಾಗ್ರಾಮ್ನಲ್ಲಿ ತನ್ನ ಫೋಟೋವನ್ನು ಹಂಚಿಕೊಂಡಿದ್ದಾರೆ, ಅದರಲ್ಲೂ ಅವರು 'ಬೇಬಿ ಬಂಪ್' ನಲ್ಲಿ ಕಾಣಿಸಿಕೊಂಡಿದ್ದಾರೆ. ಫೋಟೋಗಳನ್ನು ನೋಡಿದ ಅವರ ಅಭಿಮಾನಿಗಳು ಶಾಕ್ ಆಗಿದ್ದಾರೆ.

ಇದನ್ನೂ ಓದಿ: ನಾಡ ದೇವಿಯ ಚಿತ್ರವನ್ನು ಅಂತಿಮ ಗೊಳಿಸಿದ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ

ನಟಿ ನಿತ್ಯಾ ಮೆನನ್ ಗರ್ಭಿಣಿ ?

ಯಾಕೆಂದರೆ ನಟಿ ಇನ್ನೂ ಮದುವೆಯಾಗಿಲ್ಲ. ಮದುವೆ ಆಗದೆ ಈ ನಟಿ ಮಗುವಾಗೋದು ಹೇಗೆ ಎಂಬ ಪ್ರಶ್ನೆಗಳು ಅಭಿಮಾನಿಗಳ ಮನದಲ್ಲಿ ಮೂಡುತ್ತಿವೆ. ನಟಿ ತನ್ನ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಗರ್ಭಧಾರಣೆಯ ಸತ್ಯವನ್ನು ಹೇಳಿದ್ದಾರೆ.

ನಿಜವಾಗಿ, ಅಂಜಲಿ ಮೆನನ್ ನಿರ್ದೇಶನದ 'ವಂಡರ್ ವುಮನ್' ಚಿತ್ರದಲ್ಲಿ ನಿತ್ಯಾ ಶೀಘ್ರದಲ್ಲೇ ಕಾಣಿಸಿಕೊಳ್ಳಲಿದ್ದಾರೆ. ಆ ಚಿತ್ರದಲ್ಲಿ ನಿತ್ಯಾ ಅವರ ಪಾತ್ರದ ಚಿತ್ರಗಳನ್ನು ನಟಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಇದರೊಂದಿಗೆ, ನಿತ್ಯಾ ತಮ್ಮ ಪೋಸ್ಟ್‌ನಲ್ಲಿ ಚಿತ್ರ ಮತ್ತು ಅವರ ಪಾತ್ರದ ಬಗ್ಗೆ ಟಿಪ್ಪಣಿ ಬರೆದಿದ್ದಾರೆ, ಅದರಲ್ಲಿ ನಟಿ 'ನೋರಾ! ಪ್ರೆಗ್ನೆನ್ಸಿ ಇಷ್ಟು ಮುದ್ದಾಗಿ ಕಂಡಿರಲಿಲ್ಲ...'

ಇದನ್ನೂ ಓದಿ: ಚುಮು ಚುಮು ಚಳಿ ನಡುವೆ ರಾಜ್ಯದ ಜನತೆಗೆ ಮತ್ತೆ ವರುಣನ ಕಾಟ- ಈ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ

ಈ ಪೋಸ್ಟ್‌ನಲ್ಲಿ, ನಟಿ ನಿತ್ಯಾ ಮೆನನ್ " ನೋರಾ ಪಾತ್ರವನ್ನು ಇಷ್ಟಪಟ್ಟೆ ಮತ್ತು ಆನಂದಿಸಿದೆ " ಎಂದು ಬರೆದಿದ್ದಾರೆ. ಅವರು ನಿಜವಾಗಿಯೂ ಗರ್ಭಿಣಿಯಾಗಿಲ್ಲ ಇದು ಕೇವಲ ಚಲನಚಿತ್ರದ ಪಾತ್ರದ ನಟನೆ ಎಂಬುದನ್ನು ಈ ಮೂಲಕ ತಿಳಿಸಿದ್ದಾರೆ.

ಇದರೊಂದಿಗೆ ಅವರ ಅಭಿಮಾನಿಗಳು ಕೂಡ ಪೋಸ್ಟ್‌ಗೆ ಕಾಮೆಂಟ್ ಮಾಡುತ್ತಿದ್ದಾರೆ ಮತ್ತು ಅವರ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆಯಾಗಿದ್ದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News