1 ಕೆಜಿ ಮೈಸೂರು ಪಾಕ್, ಚಿಪ್ಸ್ ತರದೆ ಬರುವಂತಿಲ್ಲ...! ರಣವೀರ್ ಸಿಂಗ್ ಗೆ ದೀಪಿಕಾ ಆಜ್ಞೆ...!

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ತಮ್ಮ ಸಾಮಾಜಿಕ ಮಾಧ್ಯಮ ಸಕ್ರೀಯರಾಗಿದ್ದು, ಆಗಾಗ ಅವರು ಪರಸ್ಪರ ಕಾಲೆಳೆಯುವುದು ಮಾತ್ರ ಅಭಿಮಾನಿಗಳ ರಂಜನೆಗೆ ಕಾರಣವಾಗುತ್ತದೆ. 

Updated: Jan 26, 2020 , 03:45 PM IST
1 ಕೆಜಿ ಮೈಸೂರು ಪಾಕ್, ಚಿಪ್ಸ್ ತರದೆ ಬರುವಂತಿಲ್ಲ...! ರಣವೀರ್ ಸಿಂಗ್ ಗೆ ದೀಪಿಕಾ ಆಜ್ಞೆ...!

ನವದೆಹಲಿ: ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ತಮ್ಮ ಸಾಮಾಜಿಕ ಮಾಧ್ಯಮ ಸಕ್ರೀಯರಾಗಿದ್ದು, ಆಗಾಗ ಅವರು ಪರಸ್ಪರ ಕಾಲೆಳೆಯುವುದು ಮಾತ್ರ ಅಭಿಮಾನಿಗಳ ರಂಜನೆಗೆ ಕಾರಣವಾಗುತ್ತದೆ. 

ಈಗ ರಣವೀರ್ ಸಿಂಗ್ ಕಪಿಲ್ ದೇವ್ ಜೀವನ ಆಧರಿಸಿದ 83ಯಲ್ಲಿ  ನಟಿಸಿದ್ದಾರೆ. ತಮ್ಮ ಚಿತ್ರದ ಪ್ರಚಾರಕ್ಕಾಗಿ ಅವರು ಈಗ ಚೆನ್ನೈಗೆ ಹಾರಿದ್ದಾರೆ. ತಮ್ಮ ಪೋಟೋಗಳನ್ನು ಇನ್ಸ್ಟಾಗ್ರಾಂದಲ್ಲಿ ಶೇರ್ ಮಾಡಿಕೊಂಡಿರುವ ರಣವೀರ್ ಗೆ ದೀಪಿಕಾ ವಾಪಸ್ ಬರುವಾಗ ಮೈಸೂರು ಪಾಕ್ ಮತ್ತು ಆಲೂಗಡ್ಡೆ ಚಿಪ್ಸ್ ಮರೆಯದೆ ತರಬೇಕು ಎಂದು ಆಜ್ಞೆ ಮಾಡಿದ್ದಾರೆ.

'ಶ್ರೀ ಕೃಷ್ಣನಿಂದ 1 ಕೆಜಿ ಮೈಸೂರು ಪಾಕ್ ಮತ್ತು ಹಾಟ್ ಚಿಪ್ಸ್ನಿಂದ 2 1/2 ಕೆಜಿ ಪ್ಯಾಕೆಟ್ ಮಸಾಲೆಯುಕ್ತ ಆಲೂಗಡ್ಡೆ ಚಿಪ್ಸ್ ಇಲ್ಲದೆ 'ಬರುವ ಹಾಗಿಲ್ಲ' ಎಂದು ಪತಿಗೆ ಕಟ್ಟಪ್ಪನೆ ಮಾಡಿದ್ದಾರೆ. ಇದಕ್ಕೆ ಈ ಚಿತ್ರದ ನಿರ್ದೇಶಕರಾಗಿರುವ ಕಬೀರ್ ಖಾನ್ ಪತ್ನಿ ಮಿನಿ ಮಾಥುರ್ ಕೂಡ 'ಇದೆ ಆರ್ಡರ್ ನ್ನು ತಾವು ಕೂಡ ಪುನರಾವರ್ತಿಸಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.

'83 ಕಪಿಲ್ ದೇವ್ ನಾಯಕತ್ವದಲ್ಲಿ 1983 ರಲ್ಲಿ ಭಾರತದ ವಿಶ್ವಕಪ್ ಗೆಲುವಿನ ಕಥೆಯಾಗಿದೆ. ರಣವೀರ್ ಸಿಂಗ್ ಅವರು '83  ಚಿತ್ರಕ್ಕೆ ಸಂಬಂಧಿಸಿದಂತೆ  ಹಲವಾರು ಹೊಸ ಪೋಸ್ಟರ್‌ಗಳನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ತಾಹಿರ್ ರಾಜ್ ಭಾಸಿನ್ ಸುನಿಲ್ ಗವಾಸ್ಕರ್, ಜೀವಾ ಕೃಷ್ಣಮಾಚಾರಿ ಶ್ರೀಕಾಂತ್, ಸಕೀಬ್ ಸಲೀಮ್ ಮೊಹಿಂದರ್ ಅಮರನಾಥ್, ಜತಿನ್ ಸರ್ನಾ ಯಶ್ಪಾಲ್ ಶರ್ಮಾ, ಚಿರಾಗ್ ಪಾಟೀಲ್ ಸಂದೀಪ್ ಪಾಟೀಲ್ ರಾಗಿ, ಕೀರ್ತಿ ಆಜಾದ್ ಪಾತ್ರದಲ್ಲಿ ಡಿಂಕರ್ ಶರ್ಮಾ, ರೋಜರ್ ಬಿನ್ನಿ ಪಾತ್ರದಲ್ಲಿ ನಿಶಾಂತ್ ದಾಹಿಯಾ, ಮದನ್ ಲಾಲ್ ಪಾತ್ರದಲ್ಲಿ ಹಾರ್ಡಿ ಸಂಧು, ಸೈಯದ್ ಕಿರ್ಮಾನಿ ಪಾತ್ರದಲ್ಲಿ ಸಾಹಿಲ್ ಖಟ್ಟರ್, ಬಲ್ವಿಂದರ್ ಸಿಂಗ್ ಸಂಧು ಪಾತ್ರದಲ್ಲಿ ಅಮ್ಮಿ ವಿರ್ಕ್, ದಿಲೀಪ್ ವೆಂಗ್‌ಸಾರ್ಕರ್ ಪಾತ್ರದಲ್ಲಿ ಅಡಿನಾಥ್ ಕೊಥಾರೆ ಮತ್ತು ರವಿ ಶಾಸ್ತ್ರಿ ರವಲ್ ಶಾಸ್ತ್ರಿ ಪಾತ್ರದಲ್ಲಿದ್ದಾರೆ ನಟಿಸಿದ್ದಾರೆ.