ವಿಶ್ವದ ಟಾಪ್‌ 10 ʼಸುವರ್ಣ ಸುಂದರಿʼಯರಲ್ಲಿ ಕನ್ನಡತಿ ದೀಪಿಕಾಗೆ ಸ್ಥಾನ

ಡಾ. ಜೂಲಿಯನ್ ಡಿ ಸಿಲ್ವಾ ಅವರು ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ, ದೀಪಿಕಾ ಪಡುಕೋಣೆ ವಿಶ್ವದ ಟಾಪ್ 10 ಅತ್ಯಂತ ಸುಂದರ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯರಾಗಿದ್ದಾರೆ. ' ಸುವರ್ಣ ಸುಂದರಿ' (Golden Ratio of Beauty') ವೈಜ್ಞಾನಿಕ ವಿಧಾನದ ಪ್ರಕಾರ, ಜೋಡಿ ಕಮರ್ ಅವರನ್ನು ಅತ್ಯಂತ ಸುಂದರ ಮಹಿಳೆ ಎಂದು ಘೋಷಿಸಲಾಗಿದೆ, ನಂತರ ಝೆಂಡಯಾ ಮತ್ತು ಬೆಲ್ಲಾ ಹಡಿದ್ ಹಾಗೂ ಅದೇ ಸಾರಿನಲ್ಲಿ ದೀಪಿಕಾ ಕೂಡ ಒಬ್ಬರು.

Written by - Krishna N K | Last Updated : Oct 18, 2022, 02:56 PM IST
  • ಡಾ. ಜೂಲಿಯನ್ ಡಿ ಸಿಲ್ವಾ ಇತ್ತೀಚೆಗೆ ನಡೆಸಿದ ಸಮೀಕ್ಷೆ ಫಲಿತಾಂಶ ಪ್ರಕಟ
  • ವಿಶ್ವದ ಟಾಪ್‌ 10 ʼಸುವರ್ಣ ಸುಂದರಿʼಯರಲ್ಲಿ ಕನ್ನಡತಿ ದೀಪಿಕಾಗೆ ಸ್ಥಾನ
  • ಜೋಡಿ ಕೊಮರ್ ಟಾಪ್‌ 10 ಸುಂದರಿಯರಲ್ಲಿ ಮೊದಲು
ವಿಶ್ವದ ಟಾಪ್‌ 10 ʼಸುವರ್ಣ ಸುಂದರಿʼಯರಲ್ಲಿ ಕನ್ನಡತಿ ದೀಪಿಕಾಗೆ ಸ್ಥಾನ title=

ಬೆಂಗಳೂರು : ಡಾ. ಜೂಲಿಯನ್ ಡಿ ಸಿಲ್ವಾ ಅವರು ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ, ದೀಪಿಕಾ ಪಡುಕೋಣೆ ವಿಶ್ವದ ಟಾಪ್ 10 ಅತ್ಯಂತ ಸುಂದರ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯರಾಗಿದ್ದಾರೆ. ' ಸುವರ್ಣ ಸುಂದರಿ' (Golden Ratio of Beauty') ವೈಜ್ಞಾನಿಕ ವಿಧಾನದ ಪ್ರಕಾರ, ಜೋಡಿ ಕಮರ್ ಅವರನ್ನು ಅತ್ಯಂತ ಸುಂದರ ಮಹಿಳೆ ಎಂದು ಘೋಷಿಸಲಾಗಿದೆ, ನಂತರ ಝೆಂಡಯಾ ಮತ್ತು ಬೆಲ್ಲಾ ಹಡಿದ್ ಹಾಗೂ ಅದೇ ಸಾರಿನಲ್ಲಿ ದೀಪಿಕಾ ಕೂಡ ಒಬ್ಬರು.

ಗೋಲ್ಡನ್ ರೆಷಿಯೋ ಆಫ್‌ ಬ್ಯೂಟಿ ಕುರಿತು ಡಾ. ಜೂಲಿಯನ್ ಡಿ ಸಿಲ್ವಾ ಮಾತನಾಡಿದ್ದಾರೆ. ಮುಖದ ಎಲ್ಲಾ ಅಂಶಗಳು, ದೈಹಿಕ ಪರಿಪೂರ್ಣತೆ ಅಳೆದಾಗ ಜೋಡಿ ಕಮರ್ ಸ್ಪಷ್ಟ ವಿಜೇತರಾಗಿದ್ದರು. ಅವಳ ಮೂಗು ಮತ್ತು ತುಟಿಗಳಿಗೆ 98.7 ಶೇಕಡಾ ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. ಇನ್ನು ದೀಪಿಕಾ ಪಡುಕೋಣೆ 91.22 ಅಂಕ ಪಡೆದಿದ್ದಾರೆ. ಜೋಡಿ ಕಮರ್, ಝೆಂಡಾಯಾ, ಬೆಲ್ಲಾ ಹಡಿದ್ ಮತ್ತು ದೀಪಿಕಾ ಪಡುಕೋಣೆ ಅವರಲ್ಲದೆ, ಅತ್ಯಂತ ಸುಂದರ ಮಹಿಳೆಯರ ಟಾಪ್ 10 ಪಟ್ಟಿಯಲ್ಲಿ ಬೆಯೋನ್ಸ್, ಅರಿಯಾನಾ ಗ್ರಾಂಡೆ, ಜೋರ್ಡಾನ್ ಡನ್, ಟೇಲರ್ ಸ್ವಿಫ್ಟ್, ಕಿಮ್ ಕಾರ್ದರ್ಶಿಯಾನ್ ಮತ್ತು ಹೋಯಿಯಾನ್ ಜಂಗ್ ಸೇರಿದ್ದಾರೆ.

ಇದನ್ನೂ ಓದಿ: ಅಪ್ಪು ಕನಸಿನ ʼಗಂಧದಗುಡಿʼಗೆ ಅಶ್ವಿನಿ ಪುನೀತ್‌ ಧ್ವನಿ..!

ಇದೀಗ ದೀಪಿಕಾ ಬಾಲಿವುಡ್‌ನಲ್ಲಿ ಮೂರು ಪ್ರಮುಖ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ಯಾನ್ ಇಂಡಿಯಾ ಫಿಲ್ಮ್ ʼಪ್ರಾಜೆಕ್ಟ್ ಕೆʼ ಯಲ್ಲಿ ನಟಿ ಪ್ರಭಾಸ್ ಮತ್ತು ಅಮಿತಾಬ್ ಬಚ್ಚನ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ, ಶಾರುಖ್ ಖಾನ್ ಅಭಿನಯದ ʼಪಠಾಣ್ʼ ನಲ್ಲಿ ಅಭಿನಯಿಸಿದ್ದಾರೆ. ʼಪಠಾಣ್‌ʼನಲ್ಲಿ ಜಾನ್ ಅಬ್ರಹಾಂ ಕೂಡ ನಟಿಸಿದ್ದು, ಇವರಿಬ್ಬರಿಗೆ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ, ಮೊದಲ ಬಾರಿಗೆ ಹೃತಿಕ್ ರೋಷನ್ ಜೊತೆಗೆ ʼಫೈಟರ್ʼ ನಟಿಸಲಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News