ಏಳು ಚಿತ್ರಗಳಲ್ಲಿ 6 ಹಿಟ್ ನೀಡಿದ ಭೂಮಿ ಪೇಡ್ನೇಕರ್ ಹೇಳಿದ್ದೇನು ಗೊತ್ತಾ?

ಇದುವರೆಗೆ 7 ಚಿತ್ರಗಳಲ್ಲಿ ನಟಿಸಿರುವ ಖ್ಯಾತ ಬಾಲಿವುಡ್ ನಟಿ ಭೂಮಿ ಪೇಡ್ನೇಕರ್, ಚಲನಚಿತ್ರಗಳಲ್ಲಿ ಉತ್ಕೃಷ್ಟತೆ ತರಲು ತಾವು ತಮ್ಮ ಪ್ರಯತ್ನ ಮುಂದುವರೆಸುವುದಾಗಿ ಹೇಳಿದ್ದಾರೆ.

Updated: Dec 10, 2019 , 07:46 PM IST
ಏಳು ಚಿತ್ರಗಳಲ್ಲಿ 6 ಹಿಟ್ ನೀಡಿದ ಭೂಮಿ ಪೇಡ್ನೇಕರ್ ಹೇಳಿದ್ದೇನು ಗೊತ್ತಾ?

.ಮುಂಬೈ: ತನ್ನ ವಿಭಿನ್ನ ಶೈಲಿಯ ಪಾತ್ರ ಆಯ್ಕೆಯ ಮೂಲಕ ಮನೆಮಾತಾಗಿರುವ ಖ್ಯಾತ ಬಾಲಿವುಡ್ ನಟಿ ಭೂಮಿ ಪೇಡ್ನೇಕರ್ ಅವರ ಇತೀಚೆಗೆ ಬಿಡುಗಡೆಗೊಂಡ ಎರಡು ಚಿತ್ರಗಳಾದ 'ಬಾಲಾ' ಹಾಗೂ 'ಪತಿ ಪತ್ನಿ ಔರ್ ವೋ' ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ತನ್ನ ನಾಗಾಲೋಟ ಮುಂದುವರೆಸಿವೆ. ಈ ಎರಡೂ ಚಿತ್ರಗಳಲ್ಲಿ ಭೂಮಿ ಉತ್ತಮ ಅಭಿನಯವನ್ನು ಪ್ರದರ್ಶಿಸಿದ್ದಾರೆ. ಈ ಕುರಿತು ಮಾತನಾಡಿರುವ ಭೂಮಿ ತಾವು ಚಲನಚಿತ್ರಗಳಲ್ಲಿ ಉತ್ಕೃಷ್ಟತೆಯನ್ನು ತರಲು ತಮ್ಮ ಪ್ರಯತ್ನ ಮುಂದುವರೆಸಲಿದ್ದೇನೆ ಎಂದಿದ್ದಾರೆ. ಇದುವರೆಗೆ ಭೂಮಿ ಒಟ್ಟು ಏಳು ಚಿತ್ರಗಳಲ್ಲಿ ನಟಿಸಿದ್ದು, ಅವುಗಳಲ್ಲಿ ಆರು ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆಹೊಡೆದಿವೆ. 

ಬಾಕ್ಸ್ ಆಫೀಸ್ ನಲ್ಲಿ ತಮ್ಮ ಯಾತ್ರೆಯ ಕುರಿತು ಮಾತನಾಡಿರುವ ಭೂಮಿ " ನಾನು ತುಂಬಾ ಅದೃಷ್ಟಶಾಲಿಯಾಗಿದ್ದು, ನನಗೆ ಒಳ್ಳೆಯ ಕಥೆಗಳು ಅರಸಿಕೊಂಡು ಬಂದಿವೆ. ಇವುಗಳಿಗೆ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಓರ್ವ ಕಲಾವಿದೆಯಾಗಿ ನನ್ನ ಮೇಲೆ ಭರವಸೆ ಇಟ್ಟ ಎಲ್ಲ ನಿರ್ಮಾಪಕರು ಹಾಗೂ ನಿರ್ದೇಶಕರಿಗೆ ನಾನು ಋಣಿಯಾಗಿದ್ದೇನೆ" ಎಂದಿದ್ದಾರೆ. ನಾನು ಯಾವಾಗಲು ಒಳ್ಳೆಯ ಕಥೆ ಹಾಗೂ ಪಾತ್ರಗಳ ಹುಡುಕಾಟದಲ್ಲಿರುತ್ತೇನೆ ಎನ್ನುವ ಭೂಮಿ, ಚಿತ್ರ ವಿಕ್ಷೀಸಿದವರು ಬಹುಕಾಲದವರೆಗೆ ಕಥೆಯನ್ನು ಸ್ಮರಿಸಬೇಕು ಎಂದಿದ್ದಾರೆ.

ಇದೆ ವೇಳೆ " ಬಾಲಿವುಡ್ ನಲ್ಲಿ ಇದುವರೆಗಿನ ತಮ್ಮ ಪಯಣ ಉತ್ತಮವಾಗಿದ್ದು, ನಾನು ನಿಜವಾಗಿಯೂ ಅದೃಷ್ಟಶಾಲಿಯಾಗಿದ್ದೇನೆ. ಸಿನಿಮಾನಲ್ಲಿ ಉತ್ಕೃಷ್ಟತೆಯನ್ನು ಸಾಧಿಸುವುದು ನನ್ನ ಉದ್ದೇಶವಾಗಿದ್ದು, ನಾನು ನನ್ನ  ಮುಂಬರುವ ಚಿತ್ರಗಳ ಕುರಿತು ತುಂಬಾ ಉತ್ಸುಕರಾಗಿರುವುದಾಗಿ" ಹೇಳಿದ್ದಾರೆ. ನನ್ನ ಮುಂಬರುವ ಚಿತ್ರಗಳು ನನ್ನನ್ನು ಓರ್ವ ನಟಿಯಾಗಿ ಸ್ಥಾಪಿಸುವಲ್ಲಿ ಸಾಕಷ್ಟು ಸವಾಲುಗಳನ್ನು ಒಡ್ಡಿವೆ ಎನ್ನುವ ಭೂಮಿ, ಈ ಚಿತ್ರಗಳು ನನ್ನನ್ನು ನಟಿಯಾಗಿ ಇನ್ನಷ್ಟು ಗಟ್ಟಿಗೊಳಿಸುತ್ತವೆ ಎಂದು ಭೂಮಿ ಹೇಳಿದ್ದಾರೆ.