Balakrishna wig : ಬಾಲಯ್ಯ ಹಾಕುವ ʼವಿಗ್‌ʼ ಮುಟ್ಟಿದ್ರೆ..! ಖ್ಯಾತ ನಿರ್ದೇಶಕನ ಶಾಕಿಂಗ್‌ ಹೇಳಿಕೆ

KS Ravikumar on Balakrishna wig : ಟಾಲಿವುಡ್‌ ಖ್ಯಾತ ನಟ ನಂದಮೂರಿ ಬಾಲಕೃಷ್ಣ ಅವರು ಧರಿಸುವ ವಿಗ್‌ ಕುರಿತು ತಮಿಳು ಖ್ಯಾತ ನಿರ್ದೇಶಕ ಕೆ.ಎಸ್‌. ರವಿಕುಮಾರ್‌ ನೀಡಿರುವ ಹೇಳಿಕೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ... ಎನ್‌ಬಿಕೆ ಅಭಿಮಾನಿಗಳು ನಿರ್ದೇಶಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Written by - Krishna N K | Last Updated : Mar 7, 2024, 05:57 PM IST
  • ಕಾಲಿವುಡ್‌ ಸ್ಟಾರ್‌ ನಿರ್ದೇಶಕ ಬಾಲಯ್ಯ ಅವರ ವಿಗ್‌ ಬಗ್ಗೆ ನೀಡಿದ ಹೇಳಿಕೆ ವೈರಲ್‌.
  • ಬಾಲಕೃಷ್ಣ ಅವರ ಅಭಿಮಾನಿಗಳ ಕೆಂಗಣ್ಣಿಗೂ ಸಹ ಗುರಿಯಾಗುತ್ತಿದೆ.
  • ಖ್ಯಾತ ತಮಿಳು ನಿರ್ದೇಶಕ ಕೆ. ಎಸ್. ರವಿಕುಮಾರ್ ಹೇಳಿಕೆ.
Balakrishna wig : ಬಾಲಯ್ಯ ಹಾಕುವ ʼವಿಗ್‌ʼ ಮುಟ್ಟಿದ್ರೆ..! ಖ್ಯಾತ ನಿರ್ದೇಶಕನ ಶಾಕಿಂಗ್‌ ಹೇಳಿಕೆ title=
Nandamuri Balakrishna wig

Balakrishna wig : ತೆಲುಗು ಖ್ಯಾತ ನಟ ನಂದಮೂರಿ ಬಾಲಕೃಷ್ಣ ಅವರ ಬಗ್ಗೆ ಹೆಚ್ಚಾಗಿ ಟ್ರೋಲ್‌ ಮಾಡಲಾಗುತ್ತದೆ. ಅವರ ಕೋಪ, ನಟನೆ, ಡಾನ್ಸ್‌ ಬಗ್ಗೆ ಆಗಾಗ ಕೆಲವು ಸ್ಟಾರ್‌ ನಟರು ಮಾತನಾಡುತ್ತಿರುತ್ತಾರೆ. ಇದೀಗ ಕಾಲಿವುಡ್‌ ಸ್ಟಾರ್‌ ನಿರ್ದೇಶಕ ಬಾಲಯ್ಯ ಅವರ ವಿಗ್‌ ಬಗ್ಗೆ ನೀಡಿದ ಹೇಳಿಕೆ ವೈರಲ್‌ ಆಗಿದೆ..

ಹೌದು.. ನಿರ್ದೇಶಕ ಕೆ. ಎಸ್. ರವಿಕುಮಾರ್ ಅವರು, ತಮಿಳು ಚಿತ್ರವೊಂದರ ಕಾರ್ಯಕ್ರಮವೊಂದರಲ್ಲಿ ಬಾಲಯ್ಯ ಅವರ ಕುರಿತು ನೀಡಿರುವ ಹೇಳಿಕೆ ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ವೈರಲ್‌ ಆಗುತ್ತಿದೆ. ಅಲ್ಲದೆ, ಬಾಲಕೃಷ್ಣ ಅವರ ಅಭಿಮಾನಿಗಳ ಕೆಂಗಣ್ಣಿಗೂ ಸಹ ಗುರಿಯಾಗುತ್ತಿದೆ. 

ಇದನ್ನೂ ಓದಿ: ಖ್ಯಾತ ನಟ ಅಜಿತ್‌ ಕುಮಾರ್‌ ಆಸ್ಪತ್ರೆಗೆ ದಾಖಲು..! ಹೆಚ್ಚಾಯ್ತು ಆತಂಕ..

ಸೆಟ್ನಲ್ಲಿ ಯಾರಾದರೂ ನಕ್ಕರೆ, ಬಾಲಯ್ಯ ಕೋಪಗೊಳ್ಳುತ್ತಾರೆ. ನಗುವವರು ತಮ್ಮ ಪ್ರತಿಸ್ಪರ್ಧಿ ಗುಂಪಿಗೆ ಸೇರಿದವರು ಅಂತ ಬಾಲಕೃಷ್ಣ ಭಾವಿಸುತ್ತಾರೆ. ಒಮ್ಮೆ, ಸೆಟ್ನಲ್ಲಿ, ಸಹಾಯಕ ನಿರ್ದೇಶಕ ಸರವಣನ್ ಅಭಿಮಾನಿಯೊಬ್ಬರನ್ನು ಬಾಲಕೃಷ್ಣ ಅವರ ಪಕ್ಕಕ್ಕೆ ಸರಿಸಿದರು ಆಗ ಗಾಳಿಯಿಂದ ಅವರ ವಿಗ್ ಸಡಿಲವಾಯಿತು. ಆಗ ಅವರಿಗೆ ಕೋಪ ಬಂತು. ಪರಿಸ್ಥಿತಿ ನಿಯಂತ್ರಣದಲ್ಲಿತ್ತು, ಅದರಿಂದಾಗಿ ಏನೂ ಆಗಲಿಲ್ಲ. ಇಲ್ಲದಿದ್ದರೆ ಬಾಲಯ್ಯ ಸಹಾಯಕ ನಿರ್ದೇಶಕನ ಕಪಾಳಕ್ಕೆ ಬಾರಿಸುತ್ತಿದ್ದರು ಎಂದು ಕೆ.ಎಸ್ ತಮಾಷೆ ಮಾಡಿದರು. 

ರವಿಕುಮಾರ್‌ ಅವರ ಈ ಮಾತನ್ನು ಕೇಳಿ ವೇದಿಕೆಯಲ್ಲಿದ್ದ ಜನರು ಮತ್ತು ಪ್ರೇಕ್ಷಕರು ಬಿದ್ದು ಬಿದ್ದು ನಕ್ಕರು. ನಾಯಕಿ ಹನ್ಸಿಕಾ ಕೂಡ ಹಾಜರಿದ್ದು ನಗೆಯಲ್ಲಿ ತೇಲಾಡಿದರು. ಸ್ವಲ್ಪ ಸಮಯದ ನಂತರ, ಬಾಲಯ್ಯನ ವಿಗ್ ಬಗ್ಗೆ ಮಾತನಾಡಲು ಶುರುಮಾಡಿದ ನಿರ್ದೇಶಕ ಕೆ.ಎಸ್‌ ಹಲವು ವಿಚಾರಗಳನ್ನು ಹೇಳಿದರು. 

ಇದನ್ನೂ ಓದಿ:: ಈ ಬಾರಿ RCB ಟೀಂನಲ್ಲಿ ಆಡ್ತಾರಾ ಡಾರ್ಲಿಂಗ್‌ ಕೃಷ್ಣ..!? ಹೊಸ ಸುದ್ದಿ ಇಲ್ಲಿದೆ

ಇದು ಸಾಮಾನ್ಯ ವಿಚಾರವಾದರೂ ಸಹ, ಸಧ್ಯ ಆಂಧ್ರಪ್ರದೇಶದಲ್ಲಿ ಚುನಾವಣಾ ಸಮಯವಾಗಿರುವುದರಿಂದ, ಈ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗಳನ್ನು ಹುಟ್ಟುಹಾಕಿದೆ. ಇದಕ್ಕೆ ನೇರವಾಗಿ ಪ್ರತಿಕ್ರಿಯಿಸದ ಬಾಲಕೃಷ್ಣ ಅಭಿಮಾನಿಗಳು ಕೆ.ಎಸ್.ರವಿಕುಮಾರ್ ಅವರಿಗೆ ಅವಕಾಶಗಳು ಇಲ್ಲದಿದ್ದಾಗ ಬಾಲಕೃಷ್ಣ ಎರಡು ಚಿತ್ರಗಳಿಗೆ ಅವಕಾಶ ನೀಡಿದರು ಎಂದು ಹೇಳುವ ಮೂಲಕ ಆಕ್ರೋಶ ಹೊರಹಾಕುತ್ತಿದ್ದಾರೆ. 

ಕೆ.ಎಸ್.ರವಿಕುಮಾರ್ ತಮ್ಮ ಭಾಷಣದಲ್ಲಿ ಬಾಲಯ್ಯ ಅವರನ್ನು ಶ್ಲಾಘಿಸಿದರು, ಬಾಲಯ್ಯ ಒಳ್ಳೆಯ ಹೃದಯವಂತ ಅಂತ ಹೊಗಳಿದ್ದಾರೆ. ಅಲ್ಲದೆ, ಅವರು ಪ್ರಾಮಾಣಿಕ ವ್ಯಕ್ತಿ, ನಿರ್ದೇಶಕರ ನಟ ಎಂದು ಹೆಸರುವಾಸಿಯಾಗಿದ್ದಾರೆ ಎಂದು ಹೇಳಿದ್ದಾರೆ. ಆದರೆ ಈ ಎಲ್ಲಾ ಪ್ರಶಂಸೆಗಳ ನಡುವೆ, ಬಾಲಯ್ಯ ಅವರ ವಿಗ್ ಮ್ಯಾಟರ್‌ ಅಷ್ಟೇ ದೊಡ್ಡದಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News