ನಟಿಯ ಕಾಲು ನೆಕ್ಕಿದ RGV : ಭಾರತೀಯ ಸಿನಿರಂಗದ ಅದ್ಭುತ ನಿರ್ದೇಶಕ ಹಿಗ್ಯಾಕೆ ಮಾಡಿದ್ರು..!

ಒಂದು ಕಾಲದಲ್ಲಿ ಭಾರತೀಯ ಸಿನಿರಂಗದ ಹೆಸರಾಂತ ಸ್ಟಾರ್‌ ನಿರ್ದೇಶಕರ ಪಟ್ಟಿಯಲ್ಲಿದ್ದ ರಾಮ್‌ ಗೋಪಾಲ್‌ ವರ್ಮ್‌ ಅವರು ಅದೇಷ್ಟೋ ನವ ನಿರ್ದೇಶಕರಿಗೆ ಸ್ಪೂರ್ತಿಯಾಗಿದ್ದರು. ಇಂದಿಗೂ ಅದೇಷ್ಟೋ ಸ್ಟಾರ್‌ ನಿರ್ದೇಶಕರು ತಮ್ಮ ಗುರುಗಳು ಎಂದು ಆರ್‌ಜಿವಿ ಹೆಸರು ಹೇಳಿಕೊಳ್ಳುತ್ತಾರೆ. ಇನ್ನು ವಿವಾದಗಳಿಗೆ ಹೆಸರುವಾಸಿಯಾಗಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇದೀಗ ನಟಿ ಅಶು ರೆಡ್ಡಿ ಕಾಲು ನೆಕ್ಕಿದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

Written by - Krishna N K | Last Updated : Dec 8, 2022, 03:20 PM IST
  • ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಟಿ ಅಶು ರೆಡ್ಡಿ ಕಾಲು ನೆಕ್ಕಿದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌
  • ಆರ್‌ಜಿವಿ ಅಭಿಮಾನಿಗಳು ಸೂಪರ್‌ ಅಂತ ಬೆಂಬಲ ನೀಡಿದ್ರೆ ನೆಟ್ಟಿಗರು ಗರಂ
  • ಭಾರತೀಯ ಸಿನಿ ರಂಗದ ಅದ್ಭುತ ನಿರ್ದೇಶಕ ಹಿಗ್ಯಾಕೆ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಸಿನಿ ರಸಿಕರು
ನಟಿಯ ಕಾಲು ನೆಕ್ಕಿದ RGV : ಭಾರತೀಯ ಸಿನಿರಂಗದ ಅದ್ಭುತ ನಿರ್ದೇಶಕ ಹಿಗ್ಯಾಕೆ ಮಾಡಿದ್ರು..! title=

Ram gopal varma licked leg : ಒಂದು ಕಾಲದಲ್ಲಿ ಭಾರತೀಯ ಸಿನಿರಂಗದ ಹೆಸರಾಂತ ಸ್ಟಾರ್‌ ನಿರ್ದೇಶಕರ ಪಟ್ಟಿಯಲ್ಲಿದ್ದ ರಾಮ್‌ ಗೋಪಾಲ್‌ ವರ್ಮ್‌ ಅವರು ಅದೇಷ್ಟೋ ನವ ನಿರ್ದೇಶಕರಿಗೆ ಸ್ಪೂರ್ತಿಯಾಗಿದ್ದರು. ಇಂದಿಗೂ ಅದೇಷ್ಟೋ ಸ್ಟಾರ್‌ ನಿರ್ದೇಶಕರು ತಮ್ಮ ಗುರುಗಳು ಎಂದು ಆರ್‌ಜಿವಿ ಹೆಸರು ಹೇಳಿಕೊಳ್ಳುತ್ತಾರೆ. ಇನ್ನು ವಿವಾದಗಳಿಗೆ ಹೆಸರುವಾಸಿಯಾಗಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇದೀಗ ನಟಿ ಅಶು ರೆಡ್ಡಿ ಕಾಲು ನೆಕ್ಕಿದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಭಾರತೀಯ ಸಿನಿರಂಗದಲ್ಲಿ ಸರ್ಕಾರ, ರಕ್ತಚರಿತ್ರೆ, ಅಟ್ಯಾಕ್ಸ್‌ ಅಪ್‌ 26-11 ಸೇರಿದಂತೆ ಟಾಲಿವುಡ್‌ನಲ್ಲಿಯೂ ಸಹ ಅದ್ಭುತ ಸಿನಿಮಾಗಳನ್ನು ಆರ್‌ಜಿವಿ ನಿರ್ದೇಶಿಸಿದ್ದಾರೆ. ಇದೀಗ ವಿವಾದಗಳಿಂದಲೇ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಡೈರೆಕ್ಟರ್‌, ಸಾರ್ವಜನಿಕ ಸ್ಥಳದಲ್ಲಿನ ಅವರ ಕೆಲವು ನಡೆಗಳು, ಭಾಷಣಗಳು ಸೇರಿದಂತೆ ಹಲವಾರು ವಿವಾದಗಳಿಗೆ ಕಾರಣವಾಗಿದ್ದಾರೆ. ಅಲ್ಲದೆ, ವಿವಾಧಾತ್ಮಕ ಸಿನಿಮಾಗಳನ್ನೂ ಸಹ ನಿರ್ಮಿಸಿರುವ ವರ್ಮಾ ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. 

ಇದನ್ನೂ ಓದಿ: ಮರೆಯದೆ ಕ್ಷಮಿಸು ನೆನಪಾದರೆ..ಎನ್ನುತ್ತಲೇ ಚಂದನವನಕ್ಕೆ ಎಂಟ್ರಿ ಕೊಡುತ್ತಿದೆ ಈ ಜೋಡಿ..!

ಇದೀಗ ರಾಮ್ ಗೋಪಾಲ್ ವರ್ಮಾ ಅವರ ಹೊಸ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ವಿಡಿಯೋದಲ್ಲಿ ನಟಿ ಅಶು ರೆಡ್ಡಿಯವರ ಕಾಲು ಹಿಡಿದಿದ್ದು ಅಲ್ಲದೆ, ನೆಕ್ಕಿರುವ ದೃಶ್ಯ ಸೆರೆಯಾಗಿದೆ. ಇನ್ನು ಆರ್‌ಜಿವಿ ಅಭಿಮಾನಿಗಳು ಸೂಪರ್‌ ಅಂತ ಬೆಂಬಲ ನೀಡಿದ್ರೆ ನೆಟ್ಟಿಗರು ರಾಮ್‌ ಗೋಪಾಲ ವರ್ಮ ನಡೆ ಮೀತಿ ಮೀರುತ್ತಿದೆ ಅಂತ ಕೆಂಡಕಾರಿದ್ದಾರೆ. ಇನ್ನೂ ಕೆಲವರು ಭಾರತೀಯ ಸಿನಿ ರಂಗದ ಅದ್ಭುತ ನಿರ್ದೇಶಕ ಹಿಗ್ಯಾಕೆ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಆರ್‌ಜಿವಿ ಹಲವಾರು ಯುವತಿಯರನ್ನು ತಬ್ಬಿ ಮುದ್ದಾಡಿದ್ದ ವಿಡಿಯೋ ಮತ್ತು ಫೋಟೋಗಳು ವೈರಲ್‌ ಆಗಿದ್ದವು.

ಇದನ್ನೂ ಓದಿ: ಬಿಲ್ ಗೇಟ್ಸ್ ಮೂಲಕ ಗಮನ ಸೆಳೆದ ನಿರ್ದೇಶಕರಿಂದ ರೋಲೆಕ್ಸ್ ಗೆ ಆಕ್ಷನ್ ಕಟ್

ನಿನ್ನೆ ರಾತ್ರಿ 8.53ಕ್ಕೆ ರಾಮ್ ಗೋಪಾಲ್ ವರ್ಮಾ ತಮ್ಮ ಟ್ವಿಟರ್ ಪೇಜ್‌ನಲ್ಲಿ ಈ ಫೋಟೋ ಹಾಕಿದ್ದರು. ಫೋಟೋದಲ್ಲಿ, ಅಸು ರೆಡ್ಡಿ ಸೋಫಾದಲ್ಲಿ ಕುಳಿತಿದ್ದು, ರಾಮ್ ಗೋಪಾಲ್ ವರ್ಮಾ ಅವರ ಪಾದದ ಬಳಿ ಕುಳಿತಿದ್ದಾರೆ. ಆ ಪೋಸ್ಟ್‌ಗೆ ʼಡೇಂಜರಸ್ ವಿತ್ ಡಬಲ್ ಡೇಂಜರಸ್ ಆಸು ರೆಡ್ಡಿʼ ಎಂದು ಅಡಿ ಬರಹ ಬರೆದುಕೊಂಡಿದ್ದರು. ತದನಂತರ ನಿನ್ನೆ ರಾತ್ರಿ 9.30 ಕ್ಕೆ ವಿಡಿಯೋ ಬಿಡುಗಡೆ ಮಾಡಿದ್ದಾರೆ. ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಮತ್ತು ಆಸು ರೆಡ್ಡಿ ನಟಿಸಿರುವ ಡೇಂಜರಸ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News