Kantara Hindi OTT release: ಡಿಸೆಂಬರ್ 9ಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ ‘ಕಾಂತಾರ’ ಬಿಡುಗಡೆ

Kantara On Netflix: ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರ ಬ್ಲಾಕ್‌ಬಸ್ಟರ್ ‘ಕಾಂತಾರ’ ಸಿನಿಮಾ ಹಿಂದಿ ಭಾಷೆಯಲ್ಲಿ ಡಿಸೆಂಬರ್ 9ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಈಗಾಗಲೇ ‘ಕಾಂತಾರ’ ಬಿಡುಗಡೆಯಾಗಿದೆ.

Written by - Puttaraj K Alur | Last Updated : Dec 7, 2022, 07:42 PM IST
  • ಡಿಸೆಂಬರ್ 9ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ ‘ಕಾಂತಾರ’ ಸಿನಿಮಾ
  • ಈಗಾಗಲೇ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ 4 ಭಾಷೆಗಳಲ್ಲಿ ‘ಕಾಂತಾರ’ ಬಿಡುಗಡೆ
  • ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಲಿರುವ ರಿಶಬ್ ಶೆಟ್ಟಿಯವರ ಬ್ಲಾಕ್‍ಬಸ್ಟರ್ ಸಿನಿಮಾ
Kantara Hindi OTT release: ಡಿಸೆಂಬರ್ 9ಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ ‘ಕಾಂತಾರ’ ಬಿಡುಗಡೆ title=
ನೆಟ್‌ಫ್ಲಿಕ್ಸ್‌ನಲ್ಲಿ ‘ಕಾಂತಾರ’ ಬಿಡುಗಡೆ

ಬೆಂಗಳೂರು: ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರ ಬ್ಲಾಕ್‌ಬಸ್ಟರ್ ಸಿನಿಮಾ ‘ಕಾಂತಾರ’ ಸೂಪರ್ ಡೂಪರ್ ಹಿಟ್ ಆಗಿದ್ದು, ಬಾಕ್ಸ್ ಆಫೀಸ್ ಧೂಳಿಪಟ ಮಾಡಿದೆ. ಬಿಡುಗಡೆಯಾದ ಎಲ್ಲಾ ಭಾಷೆಗಳಲ್ಲಿಯೂ ಈ ಸಿನಿಮಾ ಸಿನಿಪ್ರೇಮಿಗಳಿಗೆ ಮನಸ್ಸು ಗೆದ್ದಿದೆ. ತುಳುನಾಡಿನ ದೈವಾರಾಧನೆಯ ಕಥಾಹೊಂದಿರುವ ಈ ಸಿನಿಮಾ ದೊಡ್ಡಮಟ್ಟದಲ್ಲಿ ಯಶಸ್ವಿಯಾಗಿದ್ದು, ಭಾರತೀಯ ಚಿತ್ರರಂಗದ ದಿಗ್ಗಜರಿಂದ ಅಪಾರ ಮೆಚ್ಚುಗೆ ಗಳಿಸಿದೆ.

ಇದನ್ನೂ ಓದಿ: ಸ್ಯಾಂಡಲ್ ವುಡ್ ನಲ್ಲಿ ಭರವಸೆ ಹುಟ್ಟಿಸಿದ ಪರಿಮಳ ಡಿಸೋಜಾ ಸಿನಿಮಾ

ಥಿಯೇಟರ್‍ಗಳಲ್ಲಿ ಯಶಸ್ವಿ ಪ್ರದರ್ಶನ ಕಂಡ ಬಳಿಕ ‘ಕಾಂತಾರ’ ಸಿನಿಮಾ ನವೆಂಬರ್ 24ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿತ್ತು. ಒಟಿಟಿ ವೇದಿಕೆಯಲ್ಲಿಯೂ ಅತ್ಯುತ್ತಮ ಪ್ರತಿಕ್ರಿಯೆ ಪಡೆದುಕೊಂಡ ಈ ಸಿನಿಮಾ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಿತ್ತು. ಅಂದಿನಿಂದ ಅಭಿಮಾನಿಗಳು ‘ಕಾಂತಾರ’ ಸಿನಿಮಾದ ಹಿಂದಿ ಡಬ್ಬಿಂಗ್ ಆವೃತ್ತಿಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಕೊನೆಗೂ ಈ ಕಾಯುವಿಕೆ ಮುಕ್ತಾಯವಾಗಿದೆ. ಏಕೆಂದರೆ ಇದೀಗ ‘ಕಾಂತಾರ’ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುತ್ತಿದೆ.

ಇದನ್ನೂ ಓದಿ: Alia Bhatt: "ನಾನು ರಣಬೀರ್ ಹಾಸಿಗೆಯ ಮೇಲೆ..." ಬೆಡ್‌ರೂಮ್‌ ರಹಸ್ಯ ಬಿಚ್ಚಿಟ್ಟ ಆಲಿಯಾ!

ಹೌದು, ಕನ್ನಡದ ಬ್ಲಾಕ್‍ಬಸ್ಟರ್‍ ಸಿನಿಮಾ ‘ಕಾಂತಾರ’ ಸಿನಿಮಾ ಡಿಸೆಂಬರ್ 9ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುತ್ತಿದೆ. ಸ್ವತಃ ನೆಟ್‌ಫ್ಲಿಕ್ಸ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಈ ವಿಷಯವನ್ನು ಖಚಿತಪಡಿಸಿದೆ. ‘ಕಾಂತಾರ’ ಹಿಂದಿಯಲ್ಲಿ ಯಾವಾಗ ಬರುತ್ತದೆ? ಎಂಬ ಪ್ರಶ್ನೆಗೆ ರಿಷಬ್ ಶೆಟ್ಟಿ ಅವರ ಬಳಿ ಉತ್ತರವಿದೆ. ನಾವು ಈ ಬಗ್ಗೆ ಹೆಚ್ಚು ಉತ್ಸುಕರಾಗಲು ಸಾಧ್ಯವಿಲ್ಲ #ಕಾಂತಾರ ಡಿಸೆಂಬರ್ 9ರಂದು ನೆಟ್‌ಫ್ಲಿಕ್ಸ್‌ನಲ್ಲಿ ಹಿಂದಿಯಲ್ಲಿ ಬಿಡುಗಡೆಯಾಗಲಿದೆ ಎಂದು #KantaraOnNetflix ಹ್ಯಾಶ್‍ಟ್ಯಾಗ್ ಬಳಸಿ ನೆಟ್‌ಫ್ಲಿಕ್ಸ್‌ ಟ್ವೀಟ್ ಮಾಡಿದೆ. ಸೆಪ್ಟೆಂಬರ್ 30ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದ್ದ ‘ಕಾಂತಾರ’ ಸಿನಿಮಾ 400 ಕೋಟಿಗೂ ಹೆಚ್ಚು ಹಣ ಗಳಿಸಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News