Disha Patani Purse Price : ಹಾಟ್ ನಟಿ ದಿಶಾ ಪಟಾನಿಯ ಈ ಪರ್ಸ್‌ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

ಪರ್ಸ್ ಮಾತ್ರವಲ್ಲ, ಈ ಸ್ಕ್ರೀನಿಂಗ್‌ನಲ್ಲಿ ದಿಶಾ ಧರಿಸಿದ್ದ ಡ್ರೆಸ್ ಕೂಡ ಕಡಿಮೆ ಬೆಲೆಯದಲ್ಲ. ಈ ಡ್ರೆಸ್ ಬೆಲೆ ಕೂಡ ಸುಮಾರು 1 ಲಕ್ಷ ರೂಪಾಯಿ ಎಂದು ಹೇಳಲಾಗುತ್ತಿದೆ.  

Written by - Channabasava A Kashinakunti | Last Updated : Apr 30, 2022, 09:53 PM IST
  • ಚಿಕ್ಕ ಪರ್ಸ್ ನಿಂದ ಸುದ್ದಿಯಲ್ಲಿ ದಿಶಾ
  • ಈ ಪರ್ಸ್ ಚಿಕ್ಕದಾದರೂ ತುಂಬಾ ದುಬಾರಿಯಾಗಿದೆ
  • ಡ್ರೆಸ್ ಬೆಲೆ ಕೂಡ ಸುಮಾರು 1 ಲಕ್ಷ ರೂಪಾಯಿ
Disha Patani Purse Price : ಹಾಟ್ ನಟಿ ದಿಶಾ ಪಟಾನಿಯ ಈ ಪರ್ಸ್‌ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ! title=

Disha Patani Tiny Purse Price : ಬಾಲಿವುಡ್ ಹಾಟ್ ನಟಿ ದಿಶಾ ಪಟಾನಿ ಏನು ಮಾಡಿದರೂ ಸುದ್ದಿಯಲ್ಲಿ ಇರುತ್ತಾಳೆ. ಅದು ಆಕೆಯ ಡ್ರೆಸ್ಸಿಂಗ್ ಸ್ಟೈಲ್ ಅಥವಾ ಫಿಟ್‌ನೆಸ್ ವಿಡಿಯೋ ಆಗಿರಬಹುದು. ಈಗ ಈ ಸುಂದರಿ ಮನಸ್ಸು ಮಾಡಿ ಮನೆಯಿಂದ ಹೊರಗೆ ಬಂದ ಕಾರಣ ಸಧ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸೌಂಡ್ ಮಾಡುತ್ತಿದ್ದಾಳೆ. ಈ ಬಾರಿ ದಿಶಾ ಪಟಾನಿ ಎರಡು ಕಾರಣಗಳಿಗಾಗಿ ಸುದ್ದಿಯಲ್ಲಿದ್ದಾರೆ. ಮೊದಲ ಕಾರಣ ಅವಳ ಸ್ಟೈಲಿಶ್ ಲುಕ್ ಮತ್ತು ಎರಡನೆಯದು ಮ್ಯಾಚ್‌ಬಾಕ್ಸ್‌ಸಂಸ್ಥೆ ಇರುವ ಅವಳ ಪರ್ಸ್ ಬೆಲೆಯಿಂದ. ಹೌದು, ಅದರ ಬೆಲೆ ಎಷ್ಟು? ಅದರ ವಿಶೇಷತೆ ಏನು? ಇಲ್ಲಿದೆ ನೋಡಿ.. 

ಚಿಕ್ಕ ಪರ್ಸ್ ನಿಂದ ಸುದ್ದಿಯಲ್ಲಿ ದಿಶಾ

ಗುರುವಾರ ರಾತ್ರಿ, ಟೈಗರ್ ಶ್ರಾಫ್, ತಾರಾ ಸುತಾರಿಯಾ ಮತ್ತು ನವಾಜುದ್ದೀನ್ ಸಿದ್ದಿಕಿ ಅವರ ಹೊಸ ಸಿನಿಮಾ ಹೀರೋಪಂತಿ 2 ರ ಪ್ರದರ್ಶನವನ್ನು ನಡೆಸಲಾಯಿತು, ಇದರಲ್ಲಿ ಟೈಗರ್ ಗೆಳತಿ ದಿಶಾ ಪಟಾನಿ ಬಂದಾಗ, ಎಲ್ಲರ ಕಣ್ಣುಗಳು ಅವಳ ಮೇಲಿದ್ದವು. ದಿಶಾ ಪಟಾನಿ ನೇರಳೆ ಬಣ್ಣದ ಮಿನಿ ಡ್ರೆಸ್ ಧರಿಸಿ ಈ ವಿಶೇಷ ಕಾರ್ಯಕ್ರಮಕ್ಕೆ ಆಗಮಿಸಿದರು, ಅದರಲ್ಲಿ ದಿಶಾ ತುಂಬಾ ಗ್ಲಾಮರಸ್ ಮತ್ತು ಸ್ಟೈಲಿಶ್ ಆಗಿ ಕಾಣುತ್ತಿದ್ದರು. ದಿಶಾ ಕರ್ಲಿ ಹೇರ್ ಸ್ಟೈಲ್, ಮ್ಯಾಚಿಂಗ್ ಕಿವಿಯೋಲೆ ಮತ್ತು ಹೈ ಹೀಲ್ಸ್‌ನಿಂದ ತುಂಬಾ ಹಾಟ್ ಆಗಿ ಕಾಣುತ್ತಿದ್ದಳು. ಅಷ್ಟೇ ಅಲ್ಲದೆ, ಅವಳ ಕೈಯಲ್ಲಿದ್ದ ಚಿಕ್ಕದಾದ ಪರ್ಸ್ ಎಲ್ಲರ ಗಮನ ಸೆಳೆಯಿತು.

ಇದನ್ನೂ ಓದಿ : ಬಹುಕೋಟಿ ಮೊತ್ತದ ಪಾನ್ ಮಸಾಲಾ ಜಾಹೀರಾತು ನಿರಾಕರಿಸಿದ ಯಶ್...!

ಈ ಪರ್ಸ್ ಚಿಕ್ಕದಾದರೂ ತುಂಬಾ ದುಬಾರಿಯಾಗಿದೆ

ಈ ಚಿಕ್ಕ ಪರ್ಸ್ ಈಗ ಬಹಳಷ್ಟು ಸುಂದರವಾಗಿದೆ. ಈ ಪರ್ಸ್ ಚಿಕ್ಕದಾಗಿದ್ದರೂ ಇದರ ಬೆಲೆ ಕೇಳಿದ್ರೆ ಎಂತವರು ಹುಬ್ಬು ಹಾರಿಸುತ್ತಾರೆ. ಈ ಸಣ್ಣ ಪರ್ಸ್‌ನ ಬೆಲೆ ಎಷ್ಟು ಎಂದರೆ ನೀವು ಅದರಲ್ಲಿ 2 ಎಸಿಯನ್ನು ಸುಲಭವಾಗಿ ಖರೀದಿಸಬಹುದು. ಮಾಧ್ಯಮ ವರದಿಗಳ ಪ್ರಕಾರ, ಈ ಪರ್ಸ್ ನ ಬೆಲೆ ಸುಮಾರು 46 ಸಾವಿರ ರೂ. ಎಂದು ಹೇಳಲಾಗುತ್ತದೆ. ಈ ಸಣ್ಣ ಪರ್ಸ್‌ನ ಬೆಲೆ ವೈರಲ್ ಆಗಿರುವುದರಿಂದ, ಪ್ರತಿಯೊಬ್ಬರೂ ಅದರ ವಿಶೇಷತೆಯನ್ನು ತಿಳಿದುಕೊಳ್ಳಲು ಆಸಕ್ತಿ ತೋರಿಸುತ್ತಿದ್ದಾರೆ.

ಪರ್ಸ್ ಮಾತ್ರವಲ್ಲ, ಈ ಸ್ಕ್ರೀನಿಂಗ್‌ನಲ್ಲಿ ದಿಶಾ ಧರಿಸಿದ್ದ ಡ್ರೆಸ್ ಕೂಡ ಕಡಿಮೆ ಬೆಲೆಯದಲ್ಲ. ಈ ಡ್ರೆಸ್ ಬೆಲೆ ಕೂಡ ಸುಮಾರು 1 ಲಕ್ಷ ರೂಪಾಯಿ ಎಂದು ಹೇಳಲಾಗುತ್ತಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News