Darshan case updates : ದುರುಳ ಡಿ ಗ್ಯಾಂಗ್ ನ ಹಕಿಕತ್ತು ಬಗೆದಷ್ಟು ಬಯಲಾಗ್ತಾ ಇದೆ. ದಿನದಿಂದ ದಿನಕ್ಕೆ ಕಾನೂನು ಕುಣಿಕೆ ಬಿಗಿಯಾಗ್ತಿದೆ. ಒಂದಾ ಎರಡ ನೂರಕ್ಕು ಅಧಿಕ ವಸ್ತುಗಳು ವಶ.. ಇಪ್ಪತ್ತಕ್ಕು ಅಧಿಕ ಸಾಕ್ಷಿ.. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆಯನ್ನ ಖಾಕಿ ಹದ್ದಿನ ಕಣ್ಣಿಟ್ಟು ತನಿಖೆ ನಡೆಸ್ತಾ ಇರುವ ಸ್ಟೋರಿ ಇಲ್ಲಿದೆ.
ಹೌದು, ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ತನಿಖಾಧಿಕಾರಿಗಳ ತಂಡ ಪ್ರತಿ ಹಂತದಲ್ಲು ಜಾಣ ನಡೆ ಇಡುತ್ತಿದೆ. ಪ್ರಕರಣದ ತನಿಖೆಗೆ ಅಡ್ಡಲಾಗಿ ಹತ್ತಾರು ಒತ್ತಡದ ನಡುವೆಯು ಖಾಕಿ ಖಡಕ್ ಅಗಿಯೇ ಕೆಲಸ ಮಾಡುತ್ತಿದೆ. ಇದುವರೆಗೆ 17 ಜನ ಆರೋಪಿಗಳನ್ನ ಬಂಧನ ಮಾಡಿರುವ ಪೊಲೀಸರು ಕಿಡ್ನಾಪ್ ಮಾಡಿ ಬಾಡಿ ಡಿಸ್ಪೋಸಲ್ ಮಾಡಿ ತಲೆಮರೆಸಿಕೊಂಡಿದ್ದ ತನಕ ಮಹಜರ್ ನಡೆಸಿದ್ದಾರೆ. ಮಹಜರ್ ವೇಳೆ ಆರೋಪಿಗಳ ಬಟ್ಟೆ, ಶೂ, ಕೂದಲು, ಮೊಬೈಲ್, ಸಿಸಿ ಕ್ಯಾಮರಾ ದೃಶ್ಯ, ಬೈಕ್ ಕಾರು, ಡಿವಿಆರ್, ನಗದು, ಚಿನ್ನಾಭರಣ, ಬೆಲ್ಟ್, ಮೆಗ್ಗರ್ ಡಿವೈಸ್, ಹಲ್ಲೆಗೆ ಬಳಸಿದ ಆಯುದಗಳು ಹೀಗೆ 118 ವಸ್ತುಗಳನ್ನ ವಶ ಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಒಂಟಿತನದಿಂದ ನಿದ್ದೆ ಬರುತ್ತಿಲ್ಲ... ನಾನು ರಾತ್ರಿ ಫೋನ್ನಲ್ಲಿ....! ಶಾಕಿಂಗ್ ವಿಚಾರ ಬಿಚ್ಚಿಟ್ಟ ಶೃತಿ
ಕೇ‘ಡಿ’ ಗ್ಯಾಂಗ್.. ಈವರೆಗೂ ಎಲ್ಲೆಲ್ಲಿ ಮಹಜರು?
1. ದರ್ಶನ್, ಪವಿತ್ರಾ ಸೇರಿ ಡಿ ಗ್ಯಾಂಗ್ ಕರೆತಂದು ಶೆಡ್ನಲ್ಲಿ ಮಹಜರು
2. ಗಿರಿನಗರದ ಪ್ರದೋಶ್ ನಿವಾಸದಲ್ಲಿ ಸ್ಥಳ ಮಹಜರು
3. ಶವ ಬೀಸಾಡಿದ್ದ ಸತ್ವ ಅನುಗ್ರಹ ಅಪಾರ್ಟ್ಮೆಂಟ್ ಬಳಿ ಮಹಜರು
4. ಸ್ವಾಮಿ ಕೊಲೆಯಾದ ಪಟ್ಟಣಗೆರೆ ಜಯಣ್ಣ ಶೆಡ್ನಲ್ಲೂ ಪಂಚನಾಮೆ
5. ಆರ್.ಆರ್.ನಗರದ ಐಡಿಯಲ್ ಹೋಮ್ಸ್ ಇ ಕ್ರಾಸ್ನಲ್ಲಿ ಮಹಜರು
6. ಚಿತ್ರದುರ್ಗದಿಂದ ಕಿಡ್ನ್ಯಾಪ್ಗೆ ಬಳಸಿದ್ದ ಕಾರು ಪರಿಶೀಲನೆ (ಕಾರಿನೊಳಗೆ ರಕ್ತ, ಕೂದಲು ಪತ್ತೆ)
7. ಸುಮ್ಮನಹಳ್ಳಿಯ ರಾಜಕಾಲುವೆಯಲ್ಲಿ ಮೊಬೈಲ್ಗಾಗಿ ಮಹಜರು
8. ಐಡಿಯಲ್ ಹೋಮ್ಸ್ನಲ್ಲಿ ಬಟ್ಟೆ ಬದಲಿಸಿದ್ದ ಆರೋಪಿಗಳು
9. ಟ್ರೋಬೋ ಹೋಟೆಲ್ನ ರೂಮ್ ನಂ. 203ರಲ್ಲಿ ಮಹಜರು
10. ಆರ್.ಆರ್.ನಗರದ ದರ್ಶನ್ ನಿವಾಸದಲ್ಲೂ ಪಂಚನಾಮೆ (ದರ್ಶನ್ ಬಟ್ಟೆ, ಶೂ ವಶಕ್ಕೆ)
11. ಪವಿತ್ರಾ ಗೌಡ ಕರೆದೊಯ್ದು RR ನಗರದ ನಿವಾಸದಲ್ಲಿ ಪಂಚನಾಮೆ
12. ಆರೋಪಿ ದೀಪಕ್ ಕರೆದೊಯ್ದು ಮನೆಯಲ್ಲಿ ಮಹಜರು
13. ಆರೋಪಿ ವಿನಯ್ ಕರೆದೊಯ್ದು ಸ್ಟೋನಿ ಬ್ರೂಕ್ನಲ್ಲಿ ಮಹಜರು
14. ದರ್ಶನ್ ಪತ್ನಿ ವಿಜಯಲಕ್ಷ್ಮಿ ನಿವಾಸ (ನೀಲಿ ಕಲರ್ ಶೂ ವಶಕ್ಕೆ)
15. ಮೈಸೂರಿನ ಱಡಿಸನ್ ಬ್ಲೂ ಹೋಟೆಲ್ನಲ್ಲಿ ಮಹಜರು
16. ಸ್ಟೋನಿ ಬ್ರೂಕ್ ರೆಸ್ಟೋಬಾರ್ಗೆ ದರ್ಶನ್ ಕರೆತಂದು ಮಹಜರ್
ಇನ್ನು ಮಹಜರ್ ಮಾಡಿದ್ದ ಪೊಲೀಸರು ದರ್ಶನ್ ಪತ್ನಿಗು ವಿಚಾರಣೆಗೆ ಹಾಜರ್ ಆಗುವಂತೆ ಸೂಚಿಸಿದ್ರು. ಸೂಚನೆ ಹಿನ್ನೆಲೆ ಇಂದು ಎ ಪಿ ನಗರ ಠಾಣೆಗೆ ಪತ್ನಿ ವಿಜಯಲಕ್ಷ್ಮಿ ಕೂಡ ಹಾಜರ್ ಅಗಿ ಹೇಳಿಕೆ ನೀಡಿದ್ದಾರೆ. ದರ್ಶನ ರೇಣುಕಾಸ್ವಾಮಿ ಹತ್ಯೆ ದಿನ ಧರಿಸಿದ ಬಟ್ಟೆ ಶೂಗಳನ್ನ ರಾಜು ಎಂಬಾತ ತಂದು ಮನೆಗೆ ಕೊಟ್ಟು ಹೋಗಿದ್ದ. ಅವುಗಳನ್ನ ವಿಜಯಲಕ್ಷ್ಮಿ ಮಹಜರ್ ವೇಳೆ ಪೊಲೀಸರಿಗೆ ಒಪ್ಪಿಸಿದ್ದರು. ಈ ಬಗ್ಗೆ ಹೇಳಿಕೆ ಪಡೆಯುವ ಜೊತೆಗೆ ರೇಣುಕಾಸ್ವಾಮಿ ಹತ್ಯೆಯ ಬಗ್ಗೆ ದರ್ಶನ್ ಹಾಗು ಪವಿತ್ರಗೌಡಳ ಬಗ್ಗೆ ಒಂದಿಷ್ಟು ವಿಚಾರಣೆ ನಡೆಸಿದ್ದಾರೆ. ಈ ಹೇಳಿಕೆ ನೀಡುವ ಮೂಲಕ ಪತಿಯ ವಿರುದ್ದ ಪತ್ನಿಯೇ ಸಾಕ್ಷಿ ನುಡಿದಂತಾಗಿದೆ.
ಹೌದು, ಈಗಾಗಲೇ ಆರೋಪಿಗಳು ಸೇರಿದಂತೆ ಒಟ್ಟು 27 ಸಾಕ್ಷಿಗಳ ಹೇಳಿಕೆ ಪಡೆಯಲಾಗಿದೆ ಎನ್ನಲಾಗುತ್ತಿದೆ. ಆದ್ರೆ ಅದಕ್ಕಿಂತ ಹೆಚ್ಚಾಗಿ ಸಾಂದರ್ಭಿಕ ಸಾಕ್ಷಿಗಳಿಗೆ ಖಾಕಿ ಪಡೆ ಹೆಚ್ಚಿನ ಒತ್ತು ನೀಡಿದೆ. ಸಾಕ್ಷಿಗಳು ಯಾವುದೇ ಕ್ಷಣದಲ್ಲಿ ಹಿಂದೇಟು ಹಾಕಿದ್ರು, ಡಿಜಿಟಲ್, ಟೆಕ್ನಿಕಲ್, ಸಾಂದರ್ಭಿಕ ಸಾಕ್ಷಿಗಳು ಗಟ್ಟಿಯಾಗಿ ನಿಲ್ಲುವಂತೆ ನೋಡಿಕೊಳ್ಳುತ್ತಿದ್ದಾರೆ. ಈ ಮೂಲಕ ಮೃತ ರೇಣುಕಾಸ್ವಾಮಿಯ ಕ್ರೂರ ಹತ್ಯೆಗೆ ಶಿಕ್ಷೆ ಕೊಡಿಸುವ ಪಣತೊಟ್ಟಿದ್ದಾರೆ.
ಇದನ್ನೂ ಓದಿ: ಮೆಗಾಸ್ಟಾರ್ ಚಿರಂಜೀವಿ ಮಾಜಿ ಅಳಿಯ ದಿಢೀರ್ ನಿಧನ..! ಕಾರಣ ಇದೇನಾ..?
ಇನ್ನು ಪ್ರಕರಣದ ಆರೋಪಿಗಳಿಗೆ ಇಂದು ವಿಕ್ಟೋರಿಯ ಆಸ್ಪತ್ರೆಯಲ್ಲಿ ಡಿ ಎನ್ ಎ ಟೆಸ್ಟ್ ಮಾಡಿಸಲಾಯಿತು. ಹಂತಕರ ಬಳಿ ಪತ್ತೆಯಾದ ಕೂದಲು, ರಕ್ತದ ಮಾದರಿ, ಬಟ್ಟೆಯಲ್ಲಿ ಪತ್ತೆಯಾದ ರಕ್ತದ ಮಾದರಿ ಪತ್ತೆ ಮಾಡುವ ಹಿನ್ನೆಲೆ ಡಿ ಎನ್ ಎ ಗೆ ಒಳ ಪಡಿಸಲಾಗಿದೆ. ಇದು ಕೂಡ ಆರೋಪಿಗಳ ವಿರುದ್ದ ಪ್ರಮುಖ ಸಾಕ್ಷಿಗಳಾಗಲಿವೆ. ಒಟ್ಟಾರೆ ಪೊಲೀಸರು ಪ್ರತಿ ಹಂತದಲ್ಲು ಹದ್ದಿನ ಕಣ್ಣಿಟ್ಟು ಕೆಲಸ ಮಾಡುತ್ತಿದ್ದಾರೆ. ಹಿಂದೆಂದು ನೋಡದ ರೀತಿಯಲ್ಲಿ ಕ್ರೂರವಾಗಿ ಹತ್ಯೆಯಾದ ರೇಣುಕಾಸ್ವಾಮಿ ಸಾವಿಗೆ ನ್ಯಾಯ ಕೊಡಿಸುವ ಶಪತ ಮಾಡಿದ್ದಾರೆ. ಹಣ, ಹಾಗೂ ನಶೆಯ ಅಮಲಿನಲ್ಲಿ ಅಹಂಕಾರಲ್ಲಿದ್ದ ದುರಳ ಗ್ಯಾಂಗ್ ಗೆ ಕಾನೂನಿನ ರುಚಿ ತೋರಿಸುವ ಕೆಲಸ ಮಾಡುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.