Amitabh Bachchan Birthday : ರಾಂಚಿಯ ಕವಿ ಅನ್ವರ್ ಅಲಿ ಅಕ್ಟೋಬರ್ 11 ರಂದು 80 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಈ ಅನ್ವರ್ ಅಲಿ ಯಾರು? ಎಂದು ನಿಮ್ಮಲ್ಲಿ ಪ್ರಶ್ನೆ ಮೂಡಬಹುದು. ಇದು ಬೇರೆ ಯಾರೂ ಅಲ್ಲ. ಹಿಂದಿ ಚಲನಚಿತ್ರಗಳ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್. ಐದು ದಶಕಗಳ ಹಿಂದೆ ಈ ಹೆಸರಿನ ಪಾತ್ರವಾಗಿ ಚಲನಚಿತ್ರಕ್ಕೆ ಪದಾರ್ಪಣೆ ಮಾಡಿದರು.
ಇದನ್ನೂ ಓದಿ : ʼಆದಿಪುರುಷʼ ಪ್ರಭಾಸ್ ಸೇರಿ ಚಿತ್ರತಂಡಕ್ಕೆ ಲೀಗಲ್ ನೋಟಿಸ್..!
ಪತ್ರಕರ್ತ, ಚಿತ್ರಕಥೆಗಾರ ಮತ್ತು ಚಲನಚಿತ್ರ ನಿರ್ಮಾಪಕ ಖ್ವಾಜಾ ಅಹ್ಮದ್ ಅಬ್ಬಾಸ್ ಅವರಿಂದ 1969 ರಲ್ಲಿ ಬಿಡುಗಡೆಯಾದ ಸಾತ್ ಹಿಂದೂಸ್ತಾನಿಯಲ್ಲಿ, ನಟ ರಾಂಚಿಯ ಹಿಂದ್‌ಪಿರಿಯಲ್ಲಿ ವಾಸಿಸುವ ಕವಿಯ ಪಾತ್ರವನ್ನು ನಿರ್ವಹಿಸಿದ್ದರು. ಆದಾಗ್ಯೂ, ಪಾತ್ರವು ಸಂಪೂರ್ಣವಾಗಿ ಕಾಲ್ಪನಿಕವಾಗಿದೆ. ಅಂದರೆ ಈ ಹೆಸರಿನ ಯಾವುದೇ ಕವಿ ರಾಂಚಿಯಲ್ಲಿ ವಾಸಿಸಿರಲಿಲ್ಲ.
ಚಿತ್ರದ ಕಥೆಯು ಗೋವಾವನ್ನು ಪೋರ್ಚುಗೀಸ್ ಆಕ್ರಮಣದಿಂದ ಮುಕ್ತಗೊಳಿಸುವ ಹೋರಾಟದ ಸುತ್ತ ಸುತ್ತುತ್ತದೆ. ಈ ಕಾರ್ಯಾಚರಣೆಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಏಳು ಜನರು ಗೋವಾಗೆ ತೆರಳುತ್ತಾರೆ. ಅವರಲ್ಲಿ ಒಬ್ಬರು ಅನ್ವರ್ ಅಲಿ. ಚಿತ್ರದಲ್ಲಿನ ಅವರ ಒಂದು ಸಂಭಾಷಣೆಯಲ್ಲಿ, ಅಮಿತಾಬ್ ತಮ್ಮನ್ನು ತಾವು ಹೀಗೆ ಪರಿಚಯಿಸಿಕೊಳ್ಳುತ್ತಾರೆ, “ಮೇ ಹೂನ್ ಅನ್ವರ್ ಅಲಿ. ಬಿಹಾರ ಕೆ ರಾಂಚಿ ಕಾ ರೆಹನೆ ವಾಲಾ ಹೂಂ ಔರ್ ಶಾಯರಿ ಕರ್ತಾ ಹೂಂ” (ನಾನು ಅನ್ವರ್ ಅಲಿ. ನಾನು ಬಿಹಾರದ ರಾಂಚಿಯಲ್ಲಿ ವಾಸಿಸುತ್ತಿದ್ದೇನೆ ಮತ್ತು ನಾನು ಕವಿ.)
ಇದನ್ನೂ ಓದಿ : ನ್ಯೂನ್ಯತೆಯನ್ನೇ ಸಾಧನೆ ಮೆಟ್ಟಿಲಾಗಿಸಿದ ʼಅಬ್ದು ರೋಜಿಕ್ ಕಥೆʼ ಸ್ಪೂರ್ತಿ..!
ಬಚ್ಚನ್ ಈ ಪಾತ್ರಕ್ಕಾಗಿ ‘Best Newcomer’ ಪ್ರಶಸ್ತಿಯನ್ನು ಪಡೆದರು. ಅಬ್ಬಾಸ್ ಅವರು ಅಮಿತಾಬ್ ಬಚ್ಚನ್ ಅವರಿಗೆ ಈ ಸಿನಿಮಾಗಾಗಿ 5,000 ರೂ. ಸಂಭಾವನೆ ನೀಡಿದ್ದರು. ಸಂದರ್ಶನವೊಂದರಲ್ಲಿ, ಆ ಸಮಯದಲ್ಲಿ ಸಂಭಾವನೆ ಹೆಚ್ಚು ಇಲ್ಲದಿದ್ದರೂ ಸಹ, ಹೊಸಬರಿಗೆ ಇದು ತುಂಬಾ ಕಡಿಮೆ ಅಲ್ಲ ಎಂದು ಬಿಗ್ ಬಿ ಹೇಳಿದ್ದರು. ಸಾತ್ ಹಿಂದೂಸ್ತಾನಿ ದೆಹಲಿಯ ಶೀಲಾ ಚಿತ್ರಮಂದಿರದಲ್ಲಿ ಈ ಸಿನಿಮಾ ಮೊದಲು ಬಿಡುಗಡೆಯಾಯಿತು ಮತ್ತು ಬಚ್ಚನ್ ತನ್ನ ಪೋಷಕರೊಂದಿಗೆ ಮೊದಲ ಪ್ರದರ್ಶನವನ್ನು ವೀಕ್ಷಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ