Bullet Prakash Health: ಸ್ಯಾಂಡಲ್ವುಡ್ ನ ಯಾವುದೇ ಸಿನಿಮಾ ಆದ್ರೂ ಕಾಮಿಡಿ ಪಾತ್ರಕ್ಕೆ ಸ್ಟಾರ್ ಆಗಿದ್ದವರು ಎಂದರೆ ಬುಲೆಟ್ ಪ್ರಕಾಶ್. ಸಿನಿಮಾಗಳಲ್ಲಿ ಬುಲೆಟ್ ಪ್ರಕಾಶ್ ಇದ್ದಾರೆ ಅಂದ್ರೆ ಸಾಕು ಹೊಟ್ಟೆ ಹುಣ್ಣಾಗುವಷ್ಟು ನಗಬಹುದು ಅಂತ ಥೀಯೇಟರ್ ಗೆ ಜನ ಓಡೋಡಿ ಹೋಗ್ತಾ ಇದ್ದರು.
ಇದನ್ನೂ ಓದಿ: ಬಂಗಾರದಿಂದ ಬಣ್ಣಾನ ತಂದ ..ಸಾರಂಗದಿಂದ ನಯನಾನ ತಂದ ಕೇಜ್ರಿಸ್ಟಾರ್ : ಈಗ ಯಾಕೆ ಈ ಸಾಂಗ್ ಅಂತೀರಾ...
ಬುಲೆಟ್ ಪ್ರಕಾಶ್ 325 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಅವರು ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕನ್ನು ಬಳಸುತ್ತಿದ್ದರಿಂದ, ಅವರು "ಬುಲೆಟ್" ಎಂಬ ಅಡ್ಡಹೆಸರನ್ನು ಗಳಿಸಿದರು. 2015 ರಲ್ಲಿ ಪ್ರಕಾಶ್ ಭಾರತೀಯ ಜನತಾ ಪಕ್ಷಕ್ಕೆ ಸೇರಿದರು.
ಕನ್ನಡ ಚಿತ್ರರಂಗದ ಸ್ಟಾರ್ ನಟರಾದ ಪುನೀತ್ ರಾಜ್ ಕುಮಾರ್, ದರ್ಶನ್, ಕಿಚ್ಚ ಸುದೀಪ್, ಸಾಧು ಕೋಕಿಲ ಹೀಗೆ ಹಲವಾರು ನಟರ ಜೊತೆ ಸುಮಾರು 325 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಸೈ ಅನಿಸಿಕೊಂಡಿದ್ದಾರೆ ಪ್ರಕಾಶ್ ಅಲಿಯಾಸ್ ಬುಲೆಟ್ ಪ್ರಕಾಶ್.
ಮಂಜುಳಾ ಎಂಬುವರನ್ನು ವಿವಾಹವಾಗಿರುವ ಪ್ರಕಾಶ್ 2015 ರಲ್ಲಿ ಭಾರತ ಜನತಾ ಪಕ್ಷ ಸೇರಿದ್ದರು. ತೂಕ ಇಳಿಸಿಕೊಳ್ಳುಲು ಆಪರೇಷನ್ ಗೆ ಒಳಗಾಗಿದ್ದ ಪ್ರಕಾಶ್ ಮುಂದೆ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸತೊಡಗಿದರು. ಬಹು ಅಂಗಾಂಗ ವೈಫಲ್ಯದಿಂದ ಬೆಂಗಳೂರಿನಲ್ಲಿ 2020 ಎಪ್ರಿಲ್ 6 ರಂದು ವಿಧಿವಶರಾದರು.
ಆಪರೇಷನ್ ಮಾಡಿಸಿ ಆರೋಗ್ಯ ಕೈ ಕೊಟ್ಟಿದ್ದು ನಿಜ. ಆದರೆ ಬುಲೆಟ್ ಪ್ರಕಾಶ್ ಜೀವನ ಶೈಲಿ ಕೂಡ ಅವರ ಸಾವಿಗೆ ಮುಖ್ಯ ಕಾರಣ ಅಂತ ಹೇಳಬಹುದು. ಯಾಕಂದ್ರೆ ಲಿಮಿಟ್ ಇಲ್ಲದ ರೀತಿಯಲ್ಲಿ ಮಟನ್ ತಿಂದಿದ್ದು ಕೂಡ ಅವರ ದೇಹದ ತೂಕ ಹೆಚ್ಚಾಗಲು ಕಾರಣ ಆಯ್ತು ಅಂತ ಹೇಳಬಹುದು. ಅವರೇ ಸಾಕಷ್ಟು ಕಾರ್ಯಕ್ರಮಗಳಲ್ಲಿ ನಾನು ಹೆಚ್ಚಾಗಿ ಮಟನ್ ಚರ್ಬಿ ತಿನ್ನುತ್ತೀನಿ ತಲೆನೇ ಕೆಡಿಸಿಕೊಳ್ಳಲ್ಲ ಅಂತ ಹೇಳಿಕೊಂಡಿದ್ದಾರೆ. ಅದೂ ಕೂಡ ನಿತ್ಯವೂ ಇದೇ ಆಹಾರ ಶೈಲಿಯನ್ನ ಮುಂದುವರೆಸಿದ್ದು ಖಂಡಿತ ಇವರ ಆರೋಗ್ಯ ಕೈಕೊಡಲು ಕಾರಣ ಆಯ್ತು ಅಂತ ಹೇಳಬಹುದು.
ಇದನ್ನೂ ಓದಿ: ಹಾಲ ಕಡಲ ಶ್ವೇತಾಂಬರಿಯಂತೆ ಕಂಗೊಳಿಸುತ್ತಿರುವ ಸಿರಿಮನೆ ಬೆಡಗಿ, ಪೋಟೋಸ್ ನೋಡಿ
ಜೀವಂತ ಇದ್ದಿದ್ರೆ ಇನ್ನೂ ಹಲವು ಸ್ಟಾರ್ ಗಳ ಜೊತೆ ಅವರ ಸಿನಿಮಾಗಳನ್ನ ನೋಡೋ ಭಾಗ್ಯ ಇತ್ತು. ಆದರೆ ವಿಧಿಯಾಟವೇ ಬೇರೇ ನೋಡಿ. ಮೊನ್ನೆ ಮೊನ್ನೆಯಷ್ಟೇ ಬುಲೆಟ್ ಪ್ರಕಾಶ್ ಅವರ ಪ್ರೀತಿಯ ಮಗಳ ವಿವಾಹ ಕಾರ್ಯಕ್ರಮ ನಡೆದಿದೆ. ಮಗ ಬುಲೆಟ್ ರಕ್ಷಕ್ ಎಲ್ಲಾ ಜವಾಬ್ದಾರಿ ಹೊತ್ತು ಅಕ್ಕನ ಮದುವೆ ಕೆಲಸವನ್ನ ಮಾಡಿ ಮುಗಿಸಿದ್ದಾನೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ