ಪ್ರೇಮ್ ಜೊತೆ ಸೇರಿ ‘ಕೇಡಿ’ಯಾದ ಧ್ರುವ ಸರ್ಜಾ! ಆಕ್ಷನ್ ಪ್ರಿನ್ಸ್ ಕಥೆ ಏನು?

ಧ್ರುವ ಸರ್ಜಾ ಅಂದ್ರೆ ಹರಳು ಉರಿದಂತೆ ಪಟಪಟೆ ಹೇಳುವ ಖಡಕ್ ಮಾಸ್ ಡೈಲಾಗ್ ಗಳು ನೆನಪಾಗುತ್ತವೆ. ಅದ್ದೂರಿ ಚಿತ್ರದಿಂದ ಪೊಗರು ಚಿತ್ರದವರೆಗೂ ಡೈಲಾಗ್ ಮೂಲಕವೇ ಅಬ್ಬರಿಸಿರೋ ಧ್ರುವಗೆ ಭರ್ಜರಿ ಮಾಸ್ ಫ್ಯಾನ್ಸ್ ಫಾಲೋವರ್ಸ್ ಇದ್ದಾರೆ.

Written by - YASHODHA POOJARI | Edited by - Bhavishya Shetty | Last Updated : Aug 16, 2022, 05:03 PM IST
    • ಧ್ರುವ ಸರ್ಜಾ ಅಂದ್ರೆ ಹರಳು ಉರಿದಂತೆ ಪಟಪಟೆ ಹೇಳುವ ಖಡಕ್ ಮಾಸ್ ಡೈಲಾಗ್ ಗಳು ನೆನಪಾಗುತ್ತವೆ
    • ಧ್ರುವ ಆರನೇ ಚಿತ್ರದಲ್ಲಿ ಪ್ರೇಮ್ ಕಲ್ಪನೆಯಲ್ಲಿ ಹಿಂದೆಂದೂ ಕಾಣಿಸದ ರೀತಿ ಕಾಣಿಸೋದು ಪಕ್ಕಾ ಆಗಿದೆ
    • ಡೈಲಾಗ್ ಮೂಲಕವೇ ಅಬ್ಬರಿಸಿರೋ ಧ್ರುವಗೆ ಭರ್ಜರಿ ಮಾಸ್ ಫ್ಯಾನ್ಸ್ ಫಾಲೋವರ್ಸ್ ಇದ್ದಾರೆ
ಪ್ರೇಮ್ ಜೊತೆ ಸೇರಿ ‘ಕೇಡಿ’ಯಾದ ಧ್ರುವ ಸರ್ಜಾ! ಆಕ್ಷನ್ ಪ್ರಿನ್ಸ್ ಕಥೆ ಏನು?  title=
Action Prince Dhruva Sarja

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪೊಗರು ಸಿನಿಮಾದ ಬಳಿಕ ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದಾರೆ. ಯಾರೂ ಊಹೆ ಮಾಡದ ರೀತಿ ಜೋಗಿ ಪ್ರೇಮ್ ಜೊತೆ ಸಿನಿ ಜರ್ನಿಗೆ ಈಗ ಸಜ್ಜಾ ಗ್ತಿದ್ದಾರೆ. ವಿಶೇಷ ಅಂದ್ರೆ ಧ್ರುವ ಆರನೇ ಚಿತ್ರದಲ್ಲಿ ಪ್ರೇಮ್ ಕಲ್ಪನೆಯಲ್ಲಿ ಹಿಂದೆಂದೂ ಕಾಣಿಸದ ರೀತಿ ಕಾಣಿಸೋದು ಪಕ್ಕಾ ಆಗಿದೆ. ಆದರೆ ಪ್ರೇಮ್ ಕನಸಿನ ಈ ಚಿತ್ರಕ್ಕೆ ಯಾವ ಟೈಟಲ್ ಫಿಕ್ಸ್ ಮಾಡಬಹುದು ಎಂಬ ಕುತೂಹಲದ ಪ್ರಶ್ನೆ ಅಖಂಡ ಕರ್ನಾಟಕದ ಧ್ರುವ ಅಭಿಮಾನಿಗಳ ಕಾಡುತ್ತಿದೆ. ಇದಕ್ಕೆ ಇದೀಗ ಉತ್ತರ ಲಭಿಸಿದೆ.

ಧ್ರುವ ಸರ್ಜಾ ಅಂದ್ರೆ ಹರಳು ಉರಿದಂತೆ ಪಟಪಟೆ ಹೇಳುವ ಖಡಕ್ ಮಾಸ್ ಡೈಲಾಗ್ ಗಳು ನೆನಪಾಗುತ್ತವೆ. ಅದ್ದೂರಿ ಚಿತ್ರದಿಂದ ಪೊಗರು ಚಿತ್ರದವರೆಗೂ ಡೈಲಾಗ್ ಮೂಲಕವೇ ಅಬ್ಬರಿಸಿರೋ ಧ್ರುವಗೆ ಭರ್ಜರಿ ಮಾಸ್ ಫ್ಯಾನ್ಸ್ ಫಾಲೋವರ್ಸ್ ಇದ್ದಾರೆ. 

ಇದನ್ನೂ ಓದಿ: ಸದ್ದು ಮಾಡ್ತಿದೆ ‘ಸಲಾರ್’: ಪೋಸ್ಟರ್ ಕಂಡು ನಿಬ್ಬೆರಗಾದ ಪ್ರಭಾಸ್ ಅಭಿಮಾನಿಗಳು

ಆದರೆ ಅದ್ಯಾಕೋ ಈಗ ಧ್ರುವ ತೆರೆ ಮೇಲೆ ಡೈಲಾಗ್ ಮೂಲಕ ಅಬ್ಬರಿಸೋದು ಬಿಟ್ಟು, ಮಾತಿಗೆ ಬ್ರೇಕ್ ಹಾಕಿ ನಟನೆ ಹಾಗೂ ಗತ್ತಿನ ಮೂಲಕ ತನ್ನ ತಾಕತ್ ತೋರೊಕೆ ಹೊರಟಿದ್ದಾರೆ. ಅದಕ್ಕೆ ಪೂರಕವಾಗಿ ಮಾರ್ಟಿನ್ ಚಿತ್ರದಲ್ಲಿ ಈ ಹಿಂದಿನ ಸಿನಿಮಾಗಳ ತರ ಉದ್ದುದ್ದ ಡೈಲಾಗ್ ಇರಲ್ಲ ಅಂತ ಧ್ರುವ ಅವರೇ ಕ್ಲಾರಿಟಿ ಕೊಟ್ಟಿದ್ದಾರೆ. ಆದ್ರೆ ಈಗ ಮ್ಯಾಟರ್ ಇದಲ್ಲ. ಮಾರ್ಟಿನ್ ನ ಕೊನೆ‌ ಹಂತಕ್ಕೆ ತಂದು ಸದ್ದಿಲ್ಲದೆ ತನ್ನ ಆರನೇ ಚಿತ್ರಕ್ಕೆ ಧ್ರುವ ಸಜ್ಜಾಗ್ತಿದ್ದಾರೆ‌.

ಜೋಗಿ ಪ್ರೇಮ್ ಮತ್ತು ಧ್ರುವ ಕಾಂಬಿನೇಷನ್ ನಲ್ಲಿ ಈ ಸಿನಿಮಾ ಮಾಡೋದಾಗಿ ಕೆವಿಎನ್ ಪ್ರೊಡಕ್ಷನ್ಸ್ ಅನೌನ್ಸ್ ಮಾಡಿದಾಗಿನಿಂದ‌ ಸಿನಿರಸಿಕರ ಅಂಗಳದಲ್ಲಿ ದೀಪಾವಳಿ ಸಂಭ್ರಮ ಕಾಣಿಸಿದೆ. 80ರ ದಶಕದ ಕತೆಯಲ್ಲಿ ರೆಟ್ರೋ ಸ್ಟೈಲ್ ನಲ್ಲಿ ಧ್ರುವನನ್ನು ತೆರೆ ಮೇಲೆ ತೋರಿಸೋಕೆ ಭರ್ಜರಿ ಪ್ಲಾನ್ ಮಾಡಿರುವ ಪ್ರೇಮ್, ಈ ಚಿತ್ರಕ್ಕೆ "ಕಾಳಿ" ಎಂಬ ಟೈಟಲ್ ಫಿಕ್ಸ್ ಮಾಡಿಕೊಂಡು ತೆರೆಮರೆಯಲ್ಲೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಟೈಟಲ್ ಲಾಂಚ್ ಮಾಡೋದಿಕೆ ರೆಡಿ ಆಗಿದ್ದರು.ಇನ್ನೇನು ಕಾಳಿ ಟೈಟಲ್ ಅನ್ನು ಪ್ರೇಮ್ ಬಳಗ ರಿವೀಲ್ ಮಾಡಬೇಕು ಅಷ್ಟರಲ್ಲಿ ಹೆಬ್ಬುಲಿ ಕೃಷ್ಣ, ಅಭಿಷೇಕ್ ಅಂಬರೀಶ್ ಜೊತೆ ‘ಕಾಳಿ’ ಟೈಟಲ್ ನಲ್ಲಿ ಸಿನಿಮಾ ಅನೌನ್ಸ್ ಮಾಡಿ ಶಾಕ್ ಕೊಟ್ಟಿದ್ದಾರೆ.

ಯಾವಾಗ ಪ್ರೇಮ್ ಜೋಳಿಗೆಯಿಂದ "ಕಾಳಿ" ಟೈಟಲ್ ಜಾರಿಹೋಯ್ತೋ ಆ ಗಳಿಗೆಯಿಂದಲೇ ಈ ಚಿತ್ರಕ್ಕೆ ಪವರ್ ಪುಲ್ ಟೈಟಲ್ ಇಡಬೇಕು ಎಂದು ಸಖತ್ ವರ್ಕ್ ಔಟ್ ಮಾಡಿ ಕೊನೆಗೂ ಭರ್ಜರಿ ಟೈಟಲ್ ಅನ್ನು ಪ್ರೇಮ್ ಫೈನಲ್ ಮಾಡಿದ್ದಾರಂತೆ. ಹಾಗಾದ್ರೆ ಯಾವ ಟೈಟಲ್ ಅನ್ನು ಪ್ರೇಮ್ ಫೈನಲ್ ಮಾಡಿದ್ದಾರೆ ಅಂತ ಯಾರಾದ್ರು ಪ್ರಶ್ನೆ ಮಾಡಿದ್ರೆ, ಆ ಪ್ರಶ್ನೆಗೆ ಖಡಕ್ ಉತ್ತರ ‘ಕೇಡಿ’.

ಕಾಳಿ ಟೈಟಲ್ ಕೈ ಜಾರಿ ಹೋದ ನಂತರ ತಲೆ ಕೆಡಿಸಿಕೊಂಡು ಚಿತ್ರದ ಕತೆ ಹಾಗೂ ಧ್ರುವ ಮ್ಯಾನರಿಸಂಗೆ ಹೊಂದುವ " ಕೇಡಿ" ಟೈಟಲ್ ಅನ್ನು ಪ್ರೇಮ್ ಫೈನಲ್ ಮಾಡಿಕೊಂಡಿದ್ದಾರಂತೆ. ಅಲ್ಲದೆ ಈ ಟೈಟಲ್ ಅನ್ನು ಅದ್ದೂರಿಯಾಗಿ ಲಾಂಚ್ ಮಾಡೋ ಸಲುವಾಗಿ ಪ್ರೇಮ್ ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಅದ್ದೂರಿಯಾಗಿ  ಗ್ರಾಫಿಕ್ ಮಾಡಿಸಿದ್ದಾರೆ. ಅದಷ್ಟು ಬೇಗ " ಕೇಡಿ" ಟೈಟಲ್ ನ ಮೋಷನ್ ಪೋಸ್ಟರ್ ಲಾಂಚ್ ಮಾಡೊಕೆ ಪ್ರೇಮ್ ತೆರೆ ಮರೆಯಲ್ಲೇ ತಯಾರಿ ಮಾಡಿ ಕೊಳ್ಳುತ್ತಿದ್ದಾರೆ ಅನ್ನೊ ಪಕ್ಕಾ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: Bigg Boss OTT: ತಾರಕಕ್ಕೇರಿತು ‘ರೊಟ್ಟಿ’ ಕಿತ್ತಾಟ: ರೂಪೇಶ್-ಅರ್ಜುನ್ ಜಟಾಪಟಿಗೆ ದೊಡ್ಮನೆ ಕಂಗಾಲು!

ಈಗಾಗಲೇ ಅದ್ದೂರಿಯಾಗಿ ಮುಹೂರ್ತ ಮಾಡಿ, 20 ಎಕರೆ ಜಾಗದಲ್ಲಿ ಸೆಟ್ ಹಾಕಿಸೊರೋ ಪ್ರೇಮ್  80ರ ದಶಕದಲ್ಲಿ ಬೆಂಗಳೂರಿನಲ್ಲಿ ದರ್ಬಾರ್ ಮಾಡಿದ್ದ ಡಾನ್ ಪಾತ್ರದಲ್ಲಿ ಪೊಗರು ಪೋರನ ತೋರಿಸೋಕೆ ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ. ಸದ್ಯ ಧ್ರುವ ಮಾರ್ಟಿನ್ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ಕ್ಲೈಮಾಕ್ಸ್‌ ಮುಗಿಸಿ, ಎರಡು ಹಾಡುಗಳ ಶೂಟಿಂಗ್ ಕಂಪ್ಲೀಟ್ ಮಾಡಿ, ರೆಟ್ರೋ ಸ್ಟೈಲ್ ನಲ್ಲಿ ದೇಹವನ್ನು ಕೊಂಚ ಇಳಿಸಿ ಪ್ರೇಮ್ ಅಡ್ಡಕ್ಕೆ ಕಾಲಿಡಲಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News