ದಾಸನ ಅಟ್ಟಹಾಸಕ್ಕೆ ಸಿಕ್ತು ಸಾಕ್ಷಿ..! ಶೆಡ್‌ನಲ್ಲಿ ಆರೋಪಿಗಳ ಜೊತೆ ದರ್ಶನ್‌ ಪೋಸ್‌.. ಮತ್ತೇ ಜೈಲು ಫಿಕ್ಸ್‌.?

Renukaswamy murder case : ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ತನಿಖೆ ಪೂರ್ಣಗೊಳಿಸಿರೋ ಪೊಲೀಸ್ರು ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಸಿಸಿಹೆಚ್ 57ನೇ ನ್ಯಾಯಾಲಯಕ್ಕೆ 1300 ಪುಟಗಳ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಕೊಲೆ ಕೇಸ್‌ನಲ್ಲಿ ಮತ್ತೆ 20ಕ್ಕೂ ಹೆಚ್ಚು ಸಾಕ್ಷಿಗಳನ್ನು ಪೊಲೀಸರು ಉಲ್ಲೇಖ ಮಾಡಿದ್ದಾರೆ.. ಹಾಗಿದ್ರೆ ವರದಿಯಲ್ಲಿ ಏನಿದೆ..? ಬನ್ನಿ ನೋಡೋಣ..

Written by - Krishna N K | Last Updated : Nov 23, 2024, 06:57 PM IST
    • ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಅಡಿಷನಲ್ ಚಾರ್ಜ್ ಶೀಟ್
    • ಕೋರ್ಟ್ ಗೆ ಸಲ್ಲಿಕೆಯಾಯ್ತು 1300 ಪುಟಗಳ ಹೆಚ್ಚುವರಿ ದೋಷಾರೋಪಣೆ ಪಟ್ಟಿ
    • He is being prepared for surgery ಎಂಬುದು ಉಲ್ಲೇಖವಿದ್ಯಂತೆ.
ದಾಸನ ಅಟ್ಟಹಾಸಕ್ಕೆ ಸಿಕ್ತು ಸಾಕ್ಷಿ..! ಶೆಡ್‌ನಲ್ಲಿ ಆರೋಪಿಗಳ ಜೊತೆ ದರ್ಶನ್‌ ಪೋಸ್‌..  ಮತ್ತೇ ಜೈಲು ಫಿಕ್ಸ್‌.? title=

Darshan case update : ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಕೇಸ್‌ನ‌ ಆರೋಪಿ ದರ್ಶನ್‌‌ಗೆ ಪೊಲೀಸರು ಮತ್ತಷ್ಟು ಶಾಕ್ ಕೊಟ್ಟಿದ್ದಾರೆ. ಆಸ್ಪತ್ರೆಯಲ್ಲಿರುವ ದರ್ಶನ್ ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಪ್ರಕರಣ ಸಂಬಂಧ ಹೆಚ್ಚುವರಿ ಚಾರ್ಜ್ ಶೀಟ್‌ಗೆ ಸಲ್ಲಿಕೆಯಾಗಿದ್ದು, ದಾಸನಿಗೆ ಮಧ್ಯಂತರ ಜಾಮೀನಿಗೂ ಕಂಟಕ ತರೋ ಸಾಧ್ಯತೆಯಿದೆ. ಆಸ್ಪತ್ರೆಯಲ್ಲಿರೋ ಆರೋಪಿ ದರ್ಶನ್‌ಗೆ ಮತ್ತೆ ಢವ ಢವ ಶುರುವಾಗಿದೆ.

ಹೌದು, ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ತನಿಖೆ ಪೂರ್ಣಗೊಳಿಸಿರೋ ಪೊಲೀಸ್ರು ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಸಿಸಿಹೆಚ್ 57ನೇ ನ್ಯಾಯಾಲಯಕ್ಕೆ 1300 ಪುಟಗಳ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.  ಕೊಲೆ ಕೇಸ್ ನಲ್ಲಿ ಮತ್ತೆ 20 ಕ್ಕೂ ಸಾಕ್ಷಿಗಳ ಉಲ್ಲೇಖ ಮಾಡಿರೋ ಪೊಲೀಸ್ರು, ಪ್ರಬಲ ಸಾಕ್ಷ್ಯಗಳ ಹೇಳಿಕೆ ದಾಖಲಿಸಿದ್ದಾರಂತೆ. ಇದ್ರಲ್ಲಿ ಮತ್ತೆ ದರ್ಶನ್ ಪವಿತ್ರಾಗೌಡ ಮೊಬೈಲ್ ರಿಟ್ರೀವ್ ವರದಿಗಳ ಬಗ್ಗೆ ಉಲ್ಲೇಖವಿದೆ. ಜೊತೆಗೆ ಸಾಕಷ್ಟು ಎಫ್ ಎಸ್ ಎಲ್ ವರದಿಗಳು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ‌. ಇನ್ನು ಕೊಲೆ ನಡೆದ ಜಾಗದಲ್ಲಿ ದರ್ಶನ್ ಫೋಟೋ ರಹಸ್ಯ ಬೆಳಕಿಗೆ ಬಂದಿದೆ. ಸಾಕ್ಷಿ ಪುನೀತ್ ಮೊಬೈಲ್ ನಲ್ಲಿ ಡಿಲೀಟ್ ಆಗಿದ್ದ ಫೋಟೊಗಳು ಪತ್ತೆಯಾಗಿದೆ ಎಂದು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ:ಬಿಗ್‌ಬಾಸ್‌ ಡಬಲ್‌ ಎಲಿಮಿನೆಷನ್‌..! ಇಂದು ಮನೆಯಿಂದ ಹೊರ ಹೊಗಲಿದ್ದಾರೆ 2 ಇಬ್ಬರು ಸ್ಪರ್ಧಿಗಳು..

ಇನ್ನು ದರ್ಶನ್ ಗೆ ಮೆಡಿಕಲ್ ವರದಿ ಕಂಟಕವಾಗುತ್ತಾ ಎಂಬ ಪ್ರಶ್ನೆ‌ ಮೂಡಿದೆ. ಈ ಬಗ್ಗೆ ಆರೋಪಿ ದರ್ಶನ್ ಗೆ ಮೆಡಿಕಲ್ ರಿಪೋರ್ಟ್ ಟೆನ್ಶನ್ ಶುರುವಾಗಿದ್ಯಂತೆ.. ಕೋರ್ಟ್ ಅಂಗಳ ಸೇರಿರುವ ವರದಿಯ ಬಗ್ಗೆ ಎಸ್ ಪಿ ಪಿ ವಾದದ ಬಗ್ಗೆ ತಲೆಬಿಸಿಯಾಗಿದೆ. ಇದನ್ನ ಕೋರ್ಟ್ ಯಾವ ರೀತಿ ಪರಿಗಣಿಸುತ್ತೆ. ಮಧ್ಯಂತರ ಜಾಮೀನು‌ ಸೇಫಾ...? ಇಲ್ಲ ಕಂಟಕವಾ..? ಎಂಬುವ ಲೆಕ್ಕಾಚಾರದಲ್ಲಿ ಕುಟುಂಬಸ್ಥರು ಇದ್ದಾರೆ. ಅಲ್ದೆ ಆಸ್ಪತ್ರೆಯಲ್ಲಿ ಇರೋ ದರ್ಶನ್‌ಗೆ ಇನ್ನೂ ಶಸ್ತ್ರಚಿಕಿತ್ಸೆ ದಿನಾಂಕ ನಿಗದಿ ಆಗಿಲ್ಲ. ಶಸ್ತ್ರಚಿಕಿತ್ಸೆಗೆ ನಾವು ತಯಾರಿಯನ್ನು ನಡೆಸುತ್ತಾ ಇದ್ದೇವೆಂದು ಉಲ್ಲೇಖವಾಗಿದೆ. 

ಆರು ವಾರಗಳ ನಂತರ ‌ಮತ್ತೆ ಏನು ಮಾಡಬೇಕೆಂದು ಕುಟುಂಬಸ್ಥರು ಈಗಾಗಲೇ ‌ಪ್ಲಾನ್ ಮಾಡಿದ್ದು ಏನಾಗುತ್ತೋ ಅನ್ನೊ ಯೋಚನೆಯಲ್ಲಿ ದರ್ಶನ್ ಕಾಲ‌ ಕಳೆಯುತ್ತಿದ್ದಾರೆ. ಸದ್ಯ ಇದೇ ತಿಂಗಳ 26 ಕ್ಕೆ ಹೈಕೋರ್ಟ್ ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಿಗದಿಯಾಗಿದೆ. ರೆಗ್ಯೂಲರ್ ಬೇಲ್ ಸಿಗುತ್ತಾ.? ಇಲ್ಲ ಆರುವಾರಗಳ ಬಳಿಕ ಬಳ್ಳಾರಿ ‌ಜೈಲಿಗೆ ಹೋಗ್ತಾರ ಕಾದು ನೋಡಬೇಕು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News