'ಫಾರೆಸ್ಟ್' ಸಿನಿಮಾದ ಮೊದಲ ಹಾಡು ರಿಲೀಸ್… ಓಡೋ ಓಡೋ ಅಂತಾ ಓಡಿದ ಚಿಕ್ಕಣ್ಣ, ರಂಗಾಯಣ ರಘು

'ಡಬಲ್ ಇಂಜಿನ್', 'ಬಾಂಬೆ ಮಿಠಾಯಿ', 'ಬ್ರಹ್ಮಚಾರಿ' ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಚಂದ್ರಮೋಹನ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಶೀರ್ಷಿಕೆ ಹೇಳುವಂತೆ ಇದೊಂದು ಫಾರೆಸ್ಟ್ ಅಡ್ವೆಂಚರಸ್ ಕಾಮಿಡಿ ಸಿನಿಮಾ

Written by - YASHODHA POOJARI | Last Updated : Jul 3, 2024, 06:16 PM IST
    • ಶೇಕಡಾ 80 ರಷ್ಟು ಸಿನಿಮಾ ಕಾಡಿನಲ್ಲಿಯೇ ಸಾಗುತ್ತದೆ.
    • ಅದಕ್ಕೇನೆ ಚಿತ್ರಕ್ಕೆ ‘ಫಾರೆಸ್ಟ್’ ಅಂತಲೇ ಹೆಸರಿಡಲಾಗಿದೆ.
    • ಶೀರ್ಷಿಕೆ ಹೇಳುವಂತೆ ಇದೊಂದು ಫಾರೆಸ್ಟ್ ಅಡ್ವೆಂಚರಸ್ ಕಾಮಿಡಿ ಸಿನಿಮಾ
'ಫಾರೆಸ್ಟ್' ಸಿನಿಮಾದ ಮೊದಲ ಹಾಡು ರಿಲೀಸ್… ಓಡೋ ಓಡೋ ಅಂತಾ ಓಡಿದ ಚಿಕ್ಕಣ್ಣ, ರಂಗಾಯಣ ರಘು title=
Sandalwood

Sandalwood News: ಸ್ಯಾಂಡಲ್ವುಡ್ ಉಪಾಧ್ಯಕ್ಷ ಚಿಕ್ಕಣ್ಣ ಸ್ನೇಹಿತರ ಜೊತೆಗೂಡಿನ ಕಾಡಿನ ಕತೆ ಹೇಳೋಕೆ ರೆಡಿ ಆಗಿದ್ದಾರೆ. ಶೇಕಡಾ 80 ರಷ್ಟು ಸಿನಿಮಾ ಕಾಡಿನಲ್ಲಿಯೇ ಸಾಗುತ್ತದೆ. ಅದಕ್ಕೇನೆ ಚಿತ್ರಕ್ಕೆ ‘ಫಾರೆಸ್ಟ್’ ಅಂತಲೇ ಹೆಸರಿಡಲಾಗಿದೆ.

ಇದನ್ನೂ ಓದಿ: ಯಾರು ಎಷ್ಟೇ ವೇಗದಲ್ಲಿ ಬೌಲಿಂಗ್ ಮಾಡಿದ್ರೂ ನನಗೆ ನಿಧಾನವಾಗೇ ಕಾಣುತ್ತೆ! ವಿರಾಟ್ ಕೊಹ್ಲಿ

ಸಿನಿಮಾದ ಮೊದಲ ಹಾಡು ಅನಾವರಣಗೊಂಡಿದ್ದು, ಓಡೋ ಓಡೋ ಅಂತಾ ಶುರುವಾಗುವ ಹಾಡಿಗೆ ಪುನೀತ್ ಆರ್ಯ ಕ್ಯಾಚಿ ಮ್ಯಾಚಿ ಪದ ಪೊಣಿಸಿದ್ದಾರೆ. ಖ್ಯಾತ ಗಾಯಕ ಕೈಲಾಶ್ ಖೇರ್ ಹಾಗೂ ಹರ್ಷ ಉಪ್ಪಾರ್ ಧ್ವನಿಯಾಗಿದ್ದಾರೆ. ಧರ್ಮ ವಿಶ್ ಹಾಡಿಗೆ ಸಂಗೀತ ಒದಗಿಸಿದ್ದಾರೆ. ಓಡೋ ಓಡೋ ಹಾಡಿನಲ್ಲಿ ಚಿಕ್ಕಣ್ಣ ರಂಗಾಯಣ ರಘು, First Rank ರಾಜು, ಅನೀಶ್ ತೇಜೇಶ್ವರ್ ಹಾಗೂ ಅರ್ಚನಾ ಕೊಟ್ಟಿಗೆ ಕಾಣಿಸಿಕೊಂಡಿದ್ದಾರೆ.

'ಡಬಲ್ ಇಂಜಿನ್', 'ಬಾಂಬೆ ಮಿಠಾಯಿ', 'ಬ್ರಹ್ಮಚಾರಿ' ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಚಂದ್ರಮೋಹನ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಶೀರ್ಷಿಕೆ ಹೇಳುವಂತೆ ಇದೊಂದು ಫಾರೆಸ್ಟ್ ಅಡ್ವೆಂಚರಸ್ ಕಾಮಿಡಿ ಸಿನಿಮಾವಾಗಿದ್ದು, ಹಿರಿಯ ನಟ ಅವಿನಾಶ್, ಪ್ರಕಾಶ್ ತುಮಿನಾಡ್, ಶರಣ್ಯ ಶೆಟ್ಟಿ, ಅರ್ಚನಾ ಕೊಟ್ಟಿಗೆ, ದೀಪಕ್ ರೈ ಪಾಣಾಜೆ, ಸೂರಜ್ ಪಾಪ್ಸ್ ಸುನಿಲ್ ಕುಮಾರ್ ತಾರಾಬಳಗದಲ್ಲಿದ್ದಾರೆ.

ಇದನ್ನೂ ಓದಿ: ಈ ಪ್ರಾಣಿಯ ಹಾಲು ಕುಡಿದ ತಕ್ಷಣ ಕಡಿಮೆಯಾಗುತ್ತೆ ಡೆಂಘೀ ಜ್ವರ!

'ಫಾರೆಸ್ಟ್' ಸಿನಿಮಾಕ್ಕೆ ಎನ್ಎಂಕೆ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಕಾಂತರಾಜು ಎಂಬುವವರು ಹಣ ಹಾಕುತ್ತಿದ್ದಾರೆ. ಚಿತ್ರಕ್ಕೆ ವಿ ರವಿಕುಮಾರ್ ಛಾಯಾಗ್ರಹಣ ಮಾಡುತ್ತಿದ್ದು, ಸಂಕಲನದ ಹೊಣೆಯನ್ನು ಅರ್ಜುನ್ ಕಿಟ್ಟು ಹೊತ್ತುಕೊಂಡಿದ್ದಾರೆ. ಧರ್ಮವೀರ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಶೂಟಿಂಗ್ ಮುಗಿಸಿರುವ ಚಿತ್ರತಂಡ, ಮಡಿಕೇರಿ, ಮಂಗಳೂರು, ಚಿಕ್ಕಮಗಳೂರು, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಫಾರೆಸ್ಟ್ ಚಿತ್ರತಂಡ ಆಗಸ್ಟ್ ತಿಂಗಳಲ್ಲಿ ಸಿನಿಮಾವನ್ನು ತೆರೆಗೆ ತರಲು ಯೋಜನೆ ಹಾಕಿಕೊಂಡಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News