ಲಕ್ಸ್ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದ ಕನ್ನಡದ ಈ ಬಿಷಪ್ ಕಾಟನ್ ಬೆಡಗಿ ...!

Written by - Manjunath N | Last Updated : Mar 9, 2022, 03:58 PM IST
  • 1961 ರಲ್ಲಿ ಬಿಡುಗಡೆಯಾದ ಶ್ರೀಶೈಲ್ ಮಹಾತ್ಮೆ ಸಿನಿಮಾದಲ್ಲಿ ಜಯಲಲಿತಾ ಅವರು ಬಾಲನಟಿಯಾಗಿ ಕಾಣಿಸಿಕೊಂಡರು.
  • ತದನಂತರ ನಂತರ 1964 ರಲ್ಲಿ ಅಮರಶಿಲ್ಪಿ ಜಕಣಾಚಾರಿ, ಚಿನ್ನದ ಗೊಂಬೆ, ಮನೆ ಅಳಿಯ, ಮಾವನ ಮಗಳು ಸಿನಿಮಾಗಳಲ್ಲಿ ಕಾಣಿಸಿಕೊಂಡರು.
  • 1965 ರಲ್ಲಿ ನನ್ನ ಕರ್ತವ್ಯ, ಬದುಕುವ ದಾರಿ, ಸಿನಿಮಾಗಳಲ್ಲಿಯೂ ಕೂಡ ಅವರು ನಟಿಸಿದರು.
ಲಕ್ಸ್ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದ ಕನ್ನಡದ ಈ ಬಿಷಪ್ ಕಾಟನ್ ಬೆಡಗಿ ...! title=

ಜಯರಾಮ್ ಜಯಲಲಿತಾ ಎಂದರೆ ಬಹುಶಃ ತಕ್ಷಣಕ್ಕೆ ನಿಮಗೆ ಗೊತ್ತಾಗದೆ ಇರಬಹುದು, ಆದರೆ ಜಯಲಲಿತಾ ಎಂದರೆ ಸಾಕು ನಿಮಗೆ ಸಿನಿ ಜಗತ್ತಿನ ಹಾಗೂ ರಾಜಕಾರಣಿ ಜಯಲಲಿತಾರ ಸಂಪೂರ್ಣ ಚಿತ್ರಣ ನಿಮ್ಮ ಕಣ್ಣೆದುರಿಗೆ ಬಂದು ಹೋಗುತ್ತದೆ.

ಹೌದು, ಈಗ ನಾವು  ನಿಮಗೆ ಹೇಳ ಹೊರಟಿರುವುದು ಅದೇ ಜಯಲಲಿತಾ (Jayalalitha) ರ ಬಗ್ಗೆ, ದಕ್ಷಿಣ ಭಾರತದ ಸಿನಿ ಹಾಗೂ ರಾಜಕೀಯ ಜಗತ್ತಿನಲ್ಲಿ ಅನಭಿಷಿಕ್ತ ರಾಣಿಯಾಗಿ ಮೆರೆದು ಇತಿಹಾಸದಲ್ಲಿ ದಾಖಲಾದ ಜಯಲಲಿತಾಳ ಬಗ್ಗೆ, ಇಂತಹ ಜಯಲಲಿತಾ ಫೆಬ್ರುವರಿ 24,1948 ರಲ್ಲಿ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ತಮಿಳು ಅಯ್ಯಂಗಾರ ಬ್ರಾಹ್ಮಣ ಕುಟುಂಬದಲ್ಲಿ ಜಯರಾಮ್ ಮತ್ತು ವೇದವಲ್ಲಿ ದಂಪತಿಗಳಿಗೆ ಜನಿಸಿದರು.

ಇದನ್ನೂ ಓದಿ: ಪರೋಕ್ಷವಾಗಿ ಜಯಲಲಿತಾರನ್ನು ಸರ್ವಾಧಿಕಾರಿ ಎಂದ ಕಮಲ್ ಹಾಸನ್ ಮೇಲೆ ದೂರು

ಇದಾದ ನಂತರ ಚಿತ್ರ ರಂಗಕ್ಕೆ ಪ್ರವೇಶಿಸಿದ ಅವರು, 1961 ರಲ್ಲಿ ಬಿಡುಗಡೆಯಾದ ಶ್ರೀಶೈಲ್ ಮಹಾತ್ಮೆ ಸಿನಿಮಾದಲ್ಲಿ ಜಯಲಲಿತಾ ಅವರು ಬಾಲನಟಿಯಾಗಿ ಕಾಣಿಸಿಕೊಂಡರು, ತದನಂತರ ನಂತರ 1964 ರಲ್ಲಿ ಅಮರಶಿಲ್ಪಿ ಜಕಣಾಚಾರಿ, ಚಿನ್ನದ ಗೊಂಬೆ, ಮನೆ ಅಳಿಯ, ಮಾವನ ಮಗಳು ಸಿನಿಮಾಗಳಲ್ಲಿ ಕಾಣಿಸಿಕೊಂಡರು.1965 ರಲ್ಲಿ ನನ್ನ ಕರ್ತವ್ಯ, ಬದುಕುವ ದಾರಿ, ಸಿನಿಮಾಗಳಲ್ಲಿಯೂ ಕೂಡ ಅವರು ನಟಿಸಿದರು.

ಇದನ್ನೂ ಓದಿ: ಜಯಲಲಿತಾ ಜೀವನಾಧಾರಿತ ಚಿತ್ರ ‘ದಿ ಐರನ್​ ಲೇಡಿ’ ಫಸ್ಟ್ ಲುಕ್ ಬಿಡುಗಡೆ

ಹೀಗೆ ಯಶಸ್ವಿ ಆರಂಭಿಕ ಸಿನಿ ಪಯಣ ಕಂಡಂತಹ ಜಯಲಲಿತಾ ಅವರು ಮಾಡೆಲ್ ಕೂಡ ಆಗಿದ್ದರು,ಎನ್ನುವ ಸಂಗತಿ ಬಹುತೇಕ ಜನಕ್ಕೆ ಗೊತ್ತಿಲ್ಲ, ಹೌದು ತಮ್ಮ ಸಿನಿ ಪಯಣವು ಉತ್ತುಂಗದಲ್ಲಿದ್ದಾಗಲೇ ಅವರು ಲಕ್ಸ್ ಸೋಪ್ ವೊಂದರ ಜಾಹಿರಾತುವಿನಲ್ಲಿ ಕಾಣಿಸಿಕೊಂಡಿದ್ದರು.ಈಗ 1972-75 ರಲ್ಲಿನ ಜಾಹಿರಾತಿನಲ್ಲಿ ಕಾಣಿಸಿಕೊಂಡಿರುವ ಕನ್ನಡ ಪೋಸ್ಟರ್ ವೊಂದು ವೈರಲ್ ಆಗಿದೆ. ಈ ಪೋಸ್ಟರ್ ನಲ್ಲಿ "ಆಹ್! ಲಕ್ಸ್ ಗೆ ಅದ್ಬುತವಾದ ಹೊಸ ಪರಿಮಳವಿದೆ.ಜಯಲಲಿತಾ ಹೇಳುತ್ತಾಳೆ."ಉಲ್ಲಾಸಕರವಾದ ಹೊಸ ಪರಿಮಳವನ್ನು ಹೊಂದಿರುವ ಸೌಮ್ಯ ಲಕ್ಸ್ ನಿಮಗೂ ಬಹಳ ಇಷ್ಟವಾಗುವುದು.ಏಕೆಂದರೆ ಲಕ್ಸ್ ಅತ್ಯಂತ ಶುದ್ಧ ಹಾಗೂ ಸೌಮ್ಯವಾಗಿದೆ ಅದು ನಿಮ್ಮ ಮೈಕಾಂತಿಯನ್ನು ಕೋಮಲ ಹಾಗೂ ಸುಂದರವಾಗಿರಿಸುತ್ತದೆ-ಜಯಲಲಿತಾ ಮೈಕಾಂತಿಯ ಹಾಗೆ" ಎಂದು ಜಾಹಿರಾತಿನಲ್ಲಿ ಉಲ್ಲೇಖಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News