ಲಿಖಿತ್ ಶೆಟ್ಟಿ ಅಭಿನಯದ "ಫುಲ್ ಮೀಲ್ಸ್" ಚಿತ್ರೀಕರಣ ಮುಕ್ತಾಯ

Full Meals Movie: ಲಿಖಿತ್ ಶೆಟ್ಟಿ ನಾಯನಾಗಿ ನಟಿಸಿರುವ "ಫುಲ್ ಮೀಲ್ಸ್" ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. 

Written by - YASHODHA POOJARI | Last Updated : Jan 21, 2024, 11:25 PM IST
  • ಲಿಖಿತ್ ಶೆಟ್ಟಿ ನಾಯನಾಗಿ ನಟಿಸಿರುವ "ಫುಲ್ ಮೀಲ್ಸ್" ಚಿತ್ರ
  • ಬೆಂಗಳೂರಿನ ಅರಮನೆ ಆವರಣದಲ್ಲಿ ಅದ್ದೂರಿಯಾಗಿ ಚಿತ್ರೀಕರಣ
  • ಫುಲ್ ಮೀಲ್ಸ್" ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ
ಲಿಖಿತ್ ಶೆಟ್ಟಿ ಅಭಿನಯದ "ಫುಲ್ ಮೀಲ್ಸ್" ಚಿತ್ರೀಕರಣ ಮುಕ್ತಾಯ  title=

Full Meals Movie: ಲಿಖಿತ್ ಶೆಟ್ಟಿ ನಾಯನಾಗಿ ನಟಿಸಿರುವ "ಫುಲ್ ಮೀಲ್ಸ್" ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.  ಬೆಂಗಳೂರಿನ ಅರಮನೆ ಆವರಣದಲ್ಲಿ ಅದ್ದೂರಿಯಾಗಿ ಚಿತ್ರೀಕರಣ ಆರಂಭಿಸಿದ್ದ ಚಿತ್ರತಂಡ, ಕನಕಪುರ ರಸ್ತೆಯ ರೆಸಾರ್ಟ್ ಒಂದರ, ರಮಣೀಯ ಸ್ಥಳದಲ್ಲಿ ಚಿತ್ರೀಕರಣ ಮುಗಿಸಿ, ಕುಂಬಳಕಾಯಿ ಒಡೆದು ಚಿತ್ರೀಕರಣ ಮುಗಿಸಿದೆ.  ಚಿತ್ರದ ಉಳಿದ ಪೋಸ್ಟ್ ಪ್ರೊಡಕ್ಷನ್ ಕೆಲಸವನ್ನು ಆದಷ್ಟು ಬೇಗ ಮುಗಿಸಿ, ಶೀಘ್ರದಲ್ಲೇ ತೆರೆಗೆ ತರುವ ಉತ್ಸಾಹದಲ್ಲಿ ಚಿತ್ರತಂಡವಿದೆ. 

ಈ ಹಿಂದೆ ‘ಸಂಕಷ್ಟ ಕರ ಗಣಪತಿ’ ‘ಫ್ಯಾಮಿಲಿ ಪ್ಯಾಕ್’ ಸಿನೆಮಾಗಳ ಮೂಲಕ ಕನ್ನಡ ಪ್ರೇಕ್ಷಕರಿಗೆ ಹತ್ತಿರವಾಗಿದ್ದ ನಾಯಕ ಲಿಖಿತ್ ಶೆಟ್ಟಿ, "ಫುಲ್ ಮೀಲ್ಸ್" ಸಿನೆಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಹಂತ ಮೇಲೇರುವ ವಿಶ್ವಾಸವನ್ನು ಹೊಂದಿದ್ದಾರೆ.  

ಆಲ್ಬಮ್ ಸಾಂಗ್ಸ್  ಮತ್ತು ಕಿರುಚಿತ್ರದ ಮೂಲಕ ಗುರಿತಿಸಿಕೊಂಡಿದ್ದ ಎನ್ ವಿನಾಯಕ ಈ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ್ದು, ಅಂದುಕೊಂಡ ರೀತಿಯಲ್ಲೇ ಚಿತ್ರೀಕರಣ ಮುಗಿದಿದ್ದು ಸಿನೆಮಾ ಜನರಿಗೆ ಇಷ್ಟವಾಗುವ ಭರವರಸೆಯನ್ನು ಹೊಂದಿದ್ದಾರೆ. ಖುಷಿ ರವಿ ಮತ್ತು ತೇಜಸ್ವಿನಿ ಶರ್ಮ ಲಿಖಿತ್ ಶೆಟ್ಟಿಗೆ ನಾಯಕಿಯರಾಗಿ ಜೊತೆಯಾಗಿದ್ದಾರೆ. ಉಳಿದಂತೆ ತಾರಾಗಣದಲ್ಲಿ ರಂಗಾಯಣ ರಘು, ವಿಜಯ್ ಚಂಡೂರ್, ರವಿ ಶಂಕರ್ ಗೌಡ, ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ಚಂದ್ರಕಲಾ ಮೋಹನ್, ಸೂರಜ್ ಲೋಕ್ರೆ, ಹೂನ್ನವಳ್ಳಿ ಕೃಷ್ಣ, ರಮೇಶ್ ಪಂಡಿತ್, ನಾಗೇಂದ್ರ ಅರಸ್, ಮೂಗು ಸುರೇಶ್ ಸೇರಿದಂತೆ ದೊಡ್ಡ ತಾರಾ ಬಳಗವೇ ಇದೆ.  ಹರೀಶ್ ಗೌಡ ಸಂಭಾಷಣೆ ಬರೆದಿದ್ದು, ಮನೋಹರ್ ಜೋಷಿ ಛಾಯಾಗ್ರಹಣ,  ಗುರು ಕಿರಣ್ ಸಂಗೀತ, ದೀಪು ಎಸ್ ಕುಮಾರ್ ಸಂಕಲನ ಚಿತ್ರಕ್ಕಿದೆ.  

ಇದನ್ನೂ ಓದಿ: ಸರಿಗಮಪ ತನುಶ್ರೀ ಕಂಠಸಿರಿಯಲ್ಲಿ ʼಸನಾತನ ಅಯೋಧ್ಯಾ ಕಾ ರಾಮ್ʼ..! ತಪ್ಪದೇ ಕೇಳಿ 

ವೆಡ್ಡಿಂಗ್ ಫೋಟೋಗ್ರಾಫರ್ ಸುತ್ತ ಸುತ್ತುವ ಕಥಾ ಹಂದರವನ್ನು ಹೊಂದಿರುವ ಸಿನೆಮಾ, ಮನೋರಂಜನೆಯ ಜೊತೆಗೆ ಸಾಕಷ್ಟು ಹೊಸ ವಿಷಯಗಳನ್ನು ಒಳಗೊಂಡಿದ್ದು, ಪ್ರೇಕ್ಷಕರು ಸಿನೆಮಾವನ್ನು ಇಷ್ಟಪಡುತ್ತಾರೆಂಬ ವಿಶ್ವಾಸ ಚಿತ್ರತಂಡಕ್ಕಿದೆ. 

‘ಸಂಕಷ್ಟ ಕರ ಗಣಪತಿ’ ಮತ್ತು “ಫ್ಯಾಮಿಲಿ ಪ್ಯಾಕ್’ ಎರಡೂಚಿತ್ರಗಳಲ್ಲಿ ಯಶಸ್ಸನ್ನು ಕಂಡಿದ್ದ ನಾಯಕ ಲಿಖಿತ್ ಶೆಟ್ಟಿ, ‘ಫುಲ್ ಮೀಲ್ಸ್’ ನಲ್ಲೂ ತಮ್ಮ ಯಶಸ್ಸಿನ ಪಯಣವನ್ನು ಮುಂದುವರೆಸುವ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ: ಪಿಎಂ ಮೋದಿಗೆ ʼಆಂಜನಾಸುತʼ ಫೋಟೋ ಗಿಫ್ಟ್‌ ನೀಡಿದ ನಟ ಅರ್ಜುನ್ ಸರ್ಜಾ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News