ಗಾಳಿಪಟ ಚಿತ್ರದ ಚೆಲುವೆಯರಿವರು..ಇದರಲ್ಲಿ ನಿಮ್ಮ ನಿದ್ದೆಗೆಡಿಸಿದ ಕ್ಯಾರೆಕ್ಟರ್‌ ಯಾವುದು..?

Galipata Film Actresses : ಗಾಳಿಪಟ ಚಿತ್ರದಿಂದ ಎಲ್ಲರ ಮನಗೆದ್ದ ನಟಿಯರು ಇದೀಗ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಆಕ್ಟಿವ್‌ ಆಗಿದ್ದಾರೆ. ಮತ್ತೆ ಅವರೆಲ್ಲರನ್ನು ಒಟ್ಟಿಗೆ ತೆರೆ ಮೇಲೆ ನೋಡೋ ಆಸೆ ಅಭಿಮಾನಿಗಳದ್ದು. 

Written by - Savita M B | Last Updated : Jul 13, 2023, 03:32 PM IST
  • ಗಾಳಿಪಟ ಯೋಗರಾಜ್‌ ಭಟ್‌ ಅವರು ನಿರ್ದೇಶಿಸಿದ ಮೊದಲ ಚಿತ್ರ
  • ಚಿತ್ರದ ಅದ್ಭುತ ತಾರಾಗಣದಿಂದ ನಿರ್ಮಾಣ ಹಂತದಲ್ಲಿಯೇ ಪ್ರೇಕ್ಷಕರ ಮನಗೆದ್ದಿತ್ತು
  • ಇದೀಗ ಸೋಷಿಯಲ್‌ ಮಿಡಿಯಾಗಳಲ್ಲಿ ಈ ನಟಿಯರು ಧೂಳ್‌ ಎಬ್ಬಿಸುತ್ತಿದ್ದಾರೆ.
ಗಾಳಿಪಟ ಚಿತ್ರದ ಚೆಲುವೆಯರಿವರು..ಇದರಲ್ಲಿ ನಿಮ್ಮ ನಿದ್ದೆಗೆಡಿಸಿದ ಕ್ಯಾರೆಕ್ಟರ್‌ ಯಾವುದು..?  title=

Galipata : ಗಾಳಿಪಟ ಸಿನಿಮಾ ಮುಂಗಾರು ಮಳೆ ನಂತರ ನಿರ್ದೇಶಕ ಯೋಗರಾಜ್‌ ಭಟ್‌ ಅವರು ನಿರ್ದೇಶಿಸಿದ ಮೊದಲ ಚಿತ್ರ. ಈ ಚಿತ್ರದ ಅದ್ಭುತ ತಾರಾಗಣದಿಂದ ನಿರ್ಮಾಣ ಹಂತದಲ್ಲಿಯೇ ಪ್ರೇಕ್ಷಕರ ಮನಗೆದ್ದಿತ್ತು. ಗೋಲ್ಡನ್‌ ಸ್ಟಾರ್‌ ಗಣೇಶ್‌ ಹಾಗೂ ಕನ್ನಡದ ಖ್ಯಾತ ಗಾಯಕ ರಾಜೇಶ್‌ ಕೃಷ್ಣನ್‌ ಜೊತೆಗೆ ಡೇಸಿ ಬೋಪಣ್ಣ, ನೀತು ಮತ್ತು ಭಾವನಾ ರಾವ್‌ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು.

ಗಾಳಿಪಟ ಚಿತ್ರದಿಂದ ಚಿರಪರಿಚಿತರಾದ ಭಾವನಾ ರಾವ್‌, ಡೇಸಿ ಬೋಪಣ್ಣ ಹಾಗೂ ನೀತು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಾರೆ. ಹೌದು ಸಖತ್‌ ಹಾಟ್‌ ಪೋಟೋಗಳ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ. ಗಾಳಿಪಟ ಸಿನಿಮಾ ಎಷ್ಟೇ ಹಳೆಯದಾದರೂ ಅದರ ಹವಾ ಮಾತ್ರ ಕಮ್ಮಿಯಾಗಿಲ್ಲ. ಚಿತ್ರದಲ್ಲಿನ ಸಾಂಗ್‌ಗಳು ಇಂದಿಗೂ ಎಲ್ಲರ ಮನಸ್ಸಿನಲ್ಲಿ ಛಾಪು ಮೂಡಿಸಿವೆ. 

ಇದನ್ನೂ ಓದಿ-Vijay Devarkonda : ಮದುವೆ ಕನಸು ಬಿಚ್ಚಿಟ್ಟ ರೌಡಿ ಬಾಯ್‌..!

ಅಭಿಮಾನಿಗಳು ಗಾಳಿಪಟ ಚಿತ್ರವನ್ನು ಇಂದಿಗೂ ಅದೇ ಕ್ರೇಜ್‌ನಿಂದ ನೋಡುತ್ತಾರೆ. ಅದರಲ್ಲೂ ಚಿತ್ರದ ಸಾಂಗ್‌ಗಳು ಇಂದಿಗೂ ಸೋಷಿಯಲ್‌ ಮಿಡಿಯಾದಲ್ಲಿ ಮಾಸ್‌ ಆಗಿ ಮಿಂಚುತ್ತಿವೆ. ಈ ಸಿನಿಮಾ ಮತ್ತೆ ಇದರಲ್ಲಿನ ಸಾಂಗ್ಸ್‌ ಎಷ್ಟೋ ನೊಂದ ಹೃದಯಗಳಿಗೆ ಮೆಡಿಸಿನ್‌ ಆಗಿದೆ. 

ಇದೀಗ ಸೋಷಿಯಲ್‌ ಮಿಡಿಯಾಗಳಲ್ಲಿ ಈ ನಟಿಯರು ಧೂಳ್‌ ಎಬ್ಬಿಸುತ್ತಿದ್ದಾರೆ. ಪೋಟೋಗಳನ್ನು ನೋಡಿದ ನೆಟ್ಟಿಗರು "ಯೋಗರಾಜ್‌ ಭಟ್ಟರೇ ಗಾಳಿಪಟ-3 ಸಿನಿಮಾ ಮಾಡಲೇ ಬೇಕು" ಎಂದೆಲ್ಲಾ ಕಾಮೆಂಟ್‌ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೇ ಗಾಳಿಪಟ ಚೆಲುವೆಯರು ಇಂದಿಗೂ ಎಲ್ಲರ ಹೃದಯದಲ್ಲಿದ್ದಾರೆ. ಹಾಗಾದರೆ ನಿಮ್ಮ ಹೃದಯದಲ್ಲಿರೋ ಗಾಳಿಪಟ ಚೆಲುವೆ ಯಾರು..? ಉತ್ತರಿಸಿ.. 

ಇದನ್ನೂ ಓದಿ-ಟ್ರೇಲರ್ ಮೂಲಕ ಗಮನಸೆಳೆದ ಹೊಸಬರ ʻಆರʼ : ಜುಲೈ 28 ರಂದು ಸಿನಿಮಾ ರಿಲೀಸ್

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

 

Trending News