Haripriya: ಅಡ್ವೋಕೇಟ್‌ ಅಹನರಾದ ಸ್ಯಾಂಡಲ್‌ವುಡ್‌ ಬ್ಯೂಟಿ ಕ್ವೀನ್: ಕಿರುತೆರೆಯಲ್ಲಿ ಹರಿಪ್ರಿಯಾ!‌

Haripriya As Advocate: ಚಂದನವನದ ನಟಿ ಹರಿಪ್ರಿಯಾ ಬೆಳ್ಳಿತೆರೆಯಿಂದ ಕಿರುತೆರೆಗೆ ಹೆಜ್ಜೆಹಾಕಿದ್ದಾರೆ. ಈ ನಟಿ ಹೊಸ ಧಾರವಾಹಿಯಲ್ಲಿ ಅಡ್ವೋಕೇಟ್‌ ಅಹನರಾಗಿ ಕಾಣಿಸಕೊಳ್ಳಲಿದ್ದಾರೆ.  ಇದರ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ.  

Written by - Zee Kannada News Desk | Last Updated : Apr 7, 2024, 10:49 AM IST
  • ಹರಿಪ್ರಿಯಾ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೇ ತಮಿಳು, ತೆಲುಗು, ಮಲಯಾಳಂ, ತುಳು ಸಿನಿಮಾಗಳಲ್ಲಿ ನಟಿಸಿದ್ದಾರೆ.
  • ನಟಿ ಹರಿಪ್ರಿಯಾ ಇದಕ್ಕೂ ಮುಂಚೆ ಕೆಲವು ಧಾರವಾಹಿಗಳಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.
  • ಜನಪ್ರಿಯ ನಟಿ ಹರಿಪ್ರಿಯಾ ಭರತನಾಟ್ಯದ ಫೋಟೋಗಳನ್ನು ಗಮನಿಸಿದ ನಿರ್ದೇಶಕ ರಿಚರ್ಡ್, ಈಕೆಗೆ 2008ರಲ್ಲಿ ತುಳು ಚಿತ್ರದಲ್ಲಿ ಅಭಿನಯಿಸಲು ಅವಕಾಶ ನೀಡಿದರು.
Haripriya: ಅಡ್ವೋಕೇಟ್‌ ಅಹನರಾದ ಸ್ಯಾಂಡಲ್‌ವುಡ್‌ ಬ್ಯೂಟಿ ಕ್ವೀನ್: ಕಿರುತೆರೆಯಲ್ಲಿ ಹರಿಪ್ರಿಯಾ!‌  title=

Haripriya Entry To Televison Serial: ಸ್ಯಾಂಡಲ್‌ವುಡ್‌ ಬ್ಯೂಟಿ ಕ್ವೀನ್ ಹರಿಪ್ರಿಯಾ  ತಮ್ಮ ಮದುವೆಯಾದ ಒಂದು ವರ್ಷದ ನಂತರ ಬೆಳ್ಳಿತೆರೆಯಿಂದ ಕಿರುತೆರೆಗೆ ಪದಾರ್ಪಣೆ ಮಾಡಿದ್ದಾರೆ. ನಟಿ ಹರಿಪ್ರಿಯಾ ತನ್ನ ಸಿಂಪಲ್ ಲುಕ್​, ಅದ್ಬುತ ಅಭಿನಯದಿಂದ ಫ್ಯಾನ್ಸ್‌ ಮನಗೆದ್ದಿದ್ದಾರೆ. ಈ ನಟಿ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೇ ತಮಿಳು, ತೆಲುಗು, ಮಲಯಾಳಂ, ತುಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ನಟಿಗೆ ಮದುವೆಯಾದ ಬಳಿಕ ಚಿತ್ರಗಳ ಆಫರ್‌ ಕೊಂಚ ಕಡಿಮೆಯಾಗಿದ್ದು, ಇದೀಗ ಕಿರುತೆರೆಗೆ ಕಾಲಿಟ್ಟಿದ್ದಾರೆ ಎನ್ನಲಾಗ್ತಿದೆ.

ನಟಿ ಹರಿಪ್ರಿಯಾ ಇದಕ್ಕೂ ಮುಂಚೆ ಕೆಲವು ಧಾರವಾಹಿಗಳಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇದೀಗ ನಟಿ ಹರಿಪ್ರಿಯಾ ಕಿರುತೆರೆಯಲ್ಲಿ  ಅಡ್ವೋಕೇಟ್‌  ಅಹನಾ ಪಾತರವನ್ನು ನಿರ್ವಹಿಸಲಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮುಂಬರುವ ಹೊಸ ಸೀರಿಯಲ್‌ ಪ್ರೋಮೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ಈ ನಟಿ ಅಡ್ವೋಕೇಟ್‌ ಕಾಣಿಸಿಕೊಂಡಿದ್ದಾರೆ. ನಟಿ ಹರಿಪ್ರಿಯಾ ಪ್ರೋಮೋದಲ್ಲಿ ಕಪ್ಪು ಕೋಟ್‌ ಹಾಕಿಕೊಂಡು ಕೈಯಲ್ಲಿ ಫೈಲ್‌ಗಳನ್ನು ಹಿಡಿದು ಬರುತ್ತಾರೆ. ಈ ನಟಿ ಅಹನ ಅಗ್ನಿಹೋತ್ರ ಎಂಬ ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: ಸಲ್ಮಾನ್ ಖಾನ್ ಮದುವೆ ಆಗಬೇಕಿದ್ದ ಈ ಸ್ಟಾರ್ ನಟಿ ಧರ್ಮ ಬದಲಿಸಿ, ಎರಡು ಮಕ್ಕಳಿದ್ದ ಖ್ಯಾತ ಕ್ರಿಕೆಟಿಗನ ಪತ್ನಿಯಾದರು.. ಆದರೆ!!

ಹರಿಪ್ರಿಯಾ ಸೀರಿಯಲ್‌ನಲ್ಲಿ ನ್ಯಾಯದ ಪರ ಹೋರಾಡೋಕೆ ಅಡ್ವೊಕೇಟ್ ಅಹನಾ ಅಗ್ನಿಹೋತ್ರ ಆಗಿ ಬರ್ತಿದ್ದು, ಶೀಘ್ರದಲ್ಲಿ ಈ ಧಾರವಾಹಿ ಶುರುವಾಗಲಿದೆ ಎಂಬ ಸುಳಿವು ಸ್ಟಾರ್‌ ಸುವರ್ಣ ವಾಹಿನಿ ನೀಡಿದೆ. ಸದ್ಯಕ್ಕೆ ನಟಿ ಹರಿಪ್ರಿಯಾ ಸೈನ್‌ ಮಾಡಿದ ಸಿನಿಮಾಗಳ ಶೂಟಿಂಗ್‌ ಕಂಪ್ಲೀಟ್‌ ಆಗಿದ್ದು, ಆದರೆ ಇನ್ನೂ ಕೆಲವು ಚಿತ್ರೀಕರಣ ನಡೆಯುತ್ತಾ ಇದೆ. 2008 ರಲ್ಲಿ ಮನಸುಗಳ ಮಾತು ಮಧುರ ಎಂಬ ಕನ್ನಡ ಸಿನಿಮಾದಲ್ಲಿ ನಾಯಕಿ ನಟಿಯಾಗಿ ಅಭಿನಯಿಸುವ ಮೂಲಕ ಹಿರಿತೆರೆಗೆ ಎಂಟ್ರೀ ನೀಡಿದ ನಟಿ, ಇದೀಗ 15 ವರ್ಷಗಳ ಬಳಿಕ ಕಿರುತೆರೆಗೆ ಬಂದಿದ್ದಾರೆ.

ಜನಪ್ರಿಯ ನಟಿ ಹರಿಪ್ರಿಯಾ  ಭರತನಾಟ್ಯದ ಫೋಟೋಗಳನ್ನು ಗಮನಿಸಿದ ನಿರ್ದೇಶಕ ರಿಚರ್ಡ್, ಈಕೆಗೆ  2008ರಲ್ಲಿ ತುಳು ಚಿತ್ರದಲ್ಲಿ ಅಭಿನಯಿಸಲು ಅವಕಾಶ ನೀಡಿದರು. ತುಳುವಿನ ಬದಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಬಂದ ಈ ಸುಂದರಿ, ಬಳಿಕ ಚಂದನವನದಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿ, ಟಾಪ್ ನಟಿಯಾದರು. ಈ ನಟಿ ಕಳೆದ ವರ್ಷ ಡ ನಟ ವಸಿಷ್ಠ ಸಿಂಹ ಜೊತೆಗೆ ವಿವಾಹವಾದರು. ತದನಂತರ ಈ ನಟಿ ಅಷಟಾಗಿ ಯಾಔ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದ ನಟಿ, ಸದ್ಯ ಕಿರುತೆರೆಯ ಸೀರಿಯಲ್‌ ಪ್ರೋಮೋದಲ್ಲಿ ಕಾಣಿಸಿಕೊಳ್ಳುವುದರ ಮೂಲಕ ಫ್ಯಾನ್ಸ್‌ಗೆ ಸರ್ಪೈಸ್‌ ಕೊಟ್ಟಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

 

Trending News