ಸೆಟ್ಟೇರಿದ ಹಲೋ ಸರ್ ಸಿನಿಮಾ: ಕಾನೂನು ಸುವ್ಯವಸ್ಥೆ ಹಾಳು ಮಾಡೋರ ವಿರುದ್ದ ತೊಡೆ ತಟ್ಟಿ‌ನಿಲ್ಲುವ ನಾಯಕ !

Hello Sir Kannada Movie: ಈ ಹಿಂದೆ ಮುಕ್ತಿ, ಆರ್ಟಿಕಲ್ 370 ಚಿತ್ರ ನಿರ್ದೇಶಿಸಿದ  ಕೆ.ಶಂಕರ್ ಇದೀಗ ಮತ್ತೊಂದು ಚಿತ್ರ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. 

Written by - YASHODHA POOJARI | Edited by - Chetana Devarmani | Last Updated : Sep 11, 2024, 12:45 PM IST
  • ಹಲೋ ಸರ್ ಚಿತ್ರದ ಮುಹೂರ್ತ ಸಮಾರಂಭ
  • ಸೆಟ್ಟೇರಿದ ಹಲೋ ಸರ್ ಸಿನಿಮಾ
  • ಮನ್ವಿತ್, ಸಮನ್ವಿತಾ ನಟನೆಯ ಸಿನಿಮಾ
ಸೆಟ್ಟೇರಿದ ಹಲೋ ಸರ್ ಸಿನಿಮಾ: ಕಾನೂನು ಸುವ್ಯವಸ್ಥೆ ಹಾಳು ಮಾಡೋರ ವಿರುದ್ದ ತೊಡೆ ತಟ್ಟಿ‌ನಿಲ್ಲುವ ನಾಯಕ ! title=

ಬೆಂಗಳೂರು: ಈ ಹಿಂದೆ ಮುಕ್ತಿ, ಆರ್ಟಿಕಲ್ 370 ಚಿತ್ರ ನಿರ್ದೇಶಿಸಿದ  ಕೆ.ಶಂಕರ್ ಇದೀಗ ಮತ್ತೊಂದು ಚಿತ್ರ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಆ ಚಿತ್ರದ ಹೆಸರು " ಹಲೋ ಸರ್ "‌. ಸೋಮವಾರ ಬೆಳಿಗ್ಗೆ ಗಾಳಿ ಆಂಜನೇಯಸ್ವಾಮಿ ದೇವಸ್ಥಾನದ ಹತ್ತಿರ ಬರುವ ಶ್ರೀ ಬೀರೇಶ್ವರಸ್ವಾಮಿ ದೇವಸ್ಥಾನದಲ್ಲಿ ಈ ಚಿತ್ರದ ಮುಹೂರ್ತ ಸಮಾರಂಭ ನೆರವೇರಿತು. 

ಮೊದಲ ದೃಶ್ಯಕ್ಕೆ ಭಾ.ಮ. ಗಿರೀಶ್ ಕ್ಯಾಮೆರಾ ಸ್ವಿಚಾನ್ ಮಾಡಿದರೆ, ನಿರ್ಮಾಪಕ ರಮೇಶ್ ಕ್ಲಾಪ್ ಮಾಡಿದರು. ನಾಯಕ, ನಾಯಕಿ ದೇವರನ್ನು ಪ್ರಾರ್ಥಿಸುವ ಪ್ರಥಮ ದೃಶ್ಯವನ್ನು ನಿರ್ದೇಶಕ ಶಂಕರ್ ಚಿತ್ರಿಸಿಕೊಂಡರು.

ಇದನ್ನೂ ಓದಿ: ಶಾರುಖ್‌ ಖಾನ್​ ಹಿಂದೆ ಬಿದ್ದ ಸ್ಟಾರ್ ನಟಿಗೆ ಖಡಕ್‌ ವಾರ್ನಿಂಗ್ ಕೊಟ್ಟಿದ್ರು ಗೌರಿ ಖಾನ್‌! ದೇಶವನ್ನೇ ಬಿಟ್ಟು ಹೋದ ಆ ಬೆಡಗಿ ಯಾರು ಗೊತ್ತೇ.!

ತಮ್ಮ ಹಣ, ಅಂತಸ್ತಿನ ಪ್ರಭಾವ ಬಳಸಿಕೊಂಡು ಕಾನೂನು ಉಲ್ಲಂಘಿಸಿ, ಸಮಾಜದ ವ್ಯವಸ್ಥೆಯನ್ನು ಬುಡಮೇಲು  ಮಾಡುತ್ತಿರುವವರ ವಿರುದ್ದ ಹೋರಾಡುವ ಯುವಕನ ಕಥೆಯಿದು.  ಇಂದಿನಿಂದಲೇ ಚಿತ್ರೀಕರಣ ಆರಂಭಿಸಿ 45 ದಿನಗಳ ಕಾಲ ಮಂಗಳೂರು, ಜೋಗಫಾಲ್ಸ್, ತಲಕಾಡು, ಮಹದೇವಪುರದ ಸುತ್ತಮುತ್ತ 45 ದಿನಗಳ‌ ಕಾಲ ಈ ಚಿತ್ರದ ಚಿತ್ರೀಕರಣ ನಡೆಸುವ ಯೋಜನೆ ಚಿತ್ರತಂಡಕ್ಕಿದೆ.

ಶ್ರೀ ಅಂಕುರ ಕ್ರಿಯೆಷನ್ ಬ್ಯಾನರ್ ಅಡಿ ಎಲ್. ಮಂಜುನಾಥ್ ಮತ್ತು ಗೆಳೆಯರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕೆ ಶಂಕರ್ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಎಂ.ಎನ್.ಕೃಪಾಕರ್ ಅವರ ಸಂಗೀತ, ಚಂದ್ರು ಸೊಂಡೇಕೊಪ್ಪ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಮನ್ವಿತ್, ಸಮನ್ವಿತಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದು ಉಳಿದ ಕಲಾವಿದರ ಆಯ್ಕೆ ನಡೆಯುತ್ತಿದೆ.

ಇದನ್ನೂ ಓದಿ: ನನ್ನ ನಂತರ ನನ್ನೆಲ್ಲಾ ಆಸ್ತಿ ಇವರಿಗೇ! 2,900 ಕೋಟಿಗೂ ಅಧಿಕ ಮೌಲ್ಯದ ಆಸ್ತಿಯ ಉತ್ತರಾಧಿಕಾರಿ  ಘೋಷಿಸಿದ ಸಲ್ಮಾನ್ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News