Yai Re party song : ಹನಿಸಿಂಗ್‌ ಸಾಂಗ್‌ ರಿಲೀಸ್‌.. ಇಯರ್‌ ಎಂಡ್‌ಗೆ ಜೋರ್ ಲಗಾಕೆ ನಾಚೋ ರೇ..!

Honey Singh yai re song : ಡಿಸೆಂಬರ್‌ ತಿಂಗಳು ಮುಗಿಯುತ್ತಾ ಬಂತು, ವರ್ಷಾಂತ್ಯಕ್ಕೆ ಕೇವಲ 13 ದಿನಗಳು ಮಾತ್ರ ಬಾಕಿ ಇವೆ. ಇಯರ್‌ ಎಂಡ್‌ಗೆ ಸಾಂಗ್‌ ಹಾಕ್ಕೊಂಡು ಮಸ್ತ್‌ ಮಜಾ ಮಾಡ್ಬೇಕು ಅಂತಿದ್ದ ಯುವಪಡೆಗೆ ಹನಿಸಿಂಗ್‌ ಹಾಡೊಂದು ರೆಡಿಯಾಗಿದೆ. ಅಲ್ಲದೆ, ಇದು 90 ಕಿಡ್ಸ್‌ ಮತ್ತು 2022 ಯುವಕರಿಗೆ ಫೆವರಿಟ್‌ ಆಗೋದ್ರದಲ್ಲಿ ಯಾವುದೇ ಡೌಟ್‌ ಇಲ್ಲ. 

Written by - Krishna N K | Last Updated : Dec 18, 2022, 02:06 PM IST
  • ವರ್ಷಾಂತ್ಯಕ್ಕೆ ಕೇವಲ 13 ದಿನಗಳು ಮಾತ್ರ ಬಾಕಿ ಇವೆ.
  • ಯುವಪಡೆಗೆ ಹನಿಸಿಂಗ್‌ ಹಾಡೊಂದು ರೆಡಿಯಾಗಿದೆ.
  • ಯಾಯಿ ರೇ ಯಾಯಿ ರೇ ಜೋರ್ ಲಗಾಕೆ ನಾಚೋ ರೇ..! ಅಂತ ಹನಿ ಸಿಂಗ್‌ ಫ್ಯಾನ್ಸ್‌ ಮುಂದೆ ಬಂದಿದ್ದಾರೆ.
Yai Re party song : ಹನಿಸಿಂಗ್‌ ಸಾಂಗ್‌ ರಿಲೀಸ್‌.. ಇಯರ್‌ ಎಂಡ್‌ಗೆ ಜೋರ್ ಲಗಾಕೆ ನಾಚೋ ರೇ..! title=

Yo Yo Honey Singh : ಡಿಸೆಂಬರ್‌ ತಿಂಗಳು ಮುಗಿಯುತ್ತಾ ಬಂತು, ವರ್ಷಾಂತ್ಯಕ್ಕೆ ಕೇವಲ 13 ದಿನಗಳು ಮಾತ್ರ ಬಾಕಿ ಇವೆ. ಇಯರ್‌ ಎಂಡ್‌ಗೆ ಸಾಂಗ್‌ ಹಾಕ್ಕೊಂಡು ಮಸ್ತ್‌ ಮಜಾ ಮಾಡ್ಬೇಕು ಅಂತಿದ್ದ ಯುವಪಡೆಗೆ ಹನಿಸಿಂಗ್‌ ಹಾಡೊಂದು ರೆಡಿಯಾಗಿದೆ. ಅಲ್ಲದೆ, ಇದು 90 ಕಿಡ್ಸ್‌ ಮತ್ತು 2022 ಯುವಕರಿಗೆ ಫೆವರಿಟ್‌ ಆಗೋದ್ರದಲ್ಲಿ ಯಾವುದೇ ಡೌಟ್‌ ಇಲ್ಲ. 

ಯಸ್‌... ರ‍್ಯಾಪರ್ ಹನಿಸಿಂಗ್ ಗಲ್ಲಿ ಗಲ್ಲಿಯಲ್ಲಿ ಡಿಜೆ ಸೌಂಡ್‌ ಹಾಕ್ಕೊಂಡು ಕುಣಿಯುವ ಪಡ್ಡೆ ಹೈಕ್ಳಿಗೆ, ಪಾರ್ಟಿಯಲ್ಲಿ ಸೂಟು ಬೂಟು ತೊಟ್ಟು ಕೈಯಲ್ಲಿ ಗ್ಲಾಸ್‌ ಹಿಡಿದು ನಿಲ್ಲುವ ಬಿಗ್‌ ಮಂದಿಗೆ ಇಷ್ಟವಾಗುವಂತ ಸಾಂಗ್‌ನ್ನು ನ್ಯೂ ಇಯರ್‌ ಗಿಫ್ಟ್‌ ಆಗಿ ನೀಡಿದ್ದಾರೆ. ಈ ಹಾಡು 90ರ ದಶಕದ ಐಕಾನಿಕ್ ಹಿಟ್ ಟ್ರ್ಯಾಕ್‌ನ ರೀಮಿಕ್ಸ್‌. ಟ್ರೇಡಿಂಗ್‌ ಟ್ರಾನ್ಸ್‌ ಟಚ್‌ ಜೊತೆ ಸಖತ್‌ ಲಿರೀಕ್ಸ್‌ ಮಿಕ್ಸ್‌ ಮಾಡ್ಕೊಂಡು ʼಯಾಯಿ ರೇ ಯಾಯಿ ರೇ ಜೋರ್ ಲಗಾಕೆ ನಾಚೋ ರೇ..! ಅಂತ ಹನಿ ಸಿಂಗ್‌ ಬರ್ಜರಿಯಾಗಿ ಫ್ಯಾನ್ಸ್‌ ಮುಂದೆ ಬಂದಿದ್ದಾರೆ. 

ಇದನ್ನೂ ಓದಿ: ನಾಳೆಯಿಂದ ಬೆಳಗಾವಿ ವಿಧಾನಮಂಡಲ ಅಧಿವೇಶನ ಪ್ರಾರಂಭ : ST, SC, ಮೀಸಲಾತಿ ಮಸೂದೆ ಮಂಡನೆ

ವಿಶೇಷ ಅಂದ್ರೆ, ಈ ಐಕಾನಿಕ್ ಪಾರ್ಟಿ ರೀಮಿಕ್ಸ್‌ ಸಾಂಗ್‌ನಲ್ಲಿ ಹನಿಸಿಂಗ್‌ ಸಲ್ಮಾನ್ ಖಾನ್‌ನ ರೂಮರ್ಸ್‌ ಗರ್ಲ್‌ ಫ್ರೇಂಡ್‌ ಯುಲಿಯಾ ವಂತೂರ್ ಜತೆ ಸಖತ್‌ ಆಗಿ ಸ್ಟೇಪ್‌ ಹಾಕಿದ್ದಾರೆ. ಯುಲಿಯಾ ಹಾಟ್‌ ನೋಟವೇ ಈ ಸಾಂಗ್‌ನ ಸೆಂಟರ್‌ ಅಟ್ರ್ಯಾಕ್ಷನ್‌. ಶನಿವಾರ ಹನಿಸಿಂಗ್‌ ಹಾಡನ್ನು ರಿಲೀಸ್‌ ಮಾಡುವುದಾಗಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಫೋಸ್ಟರ್‌ ಒಂದನ್ನು ಹಂಚಿಕೊಳ್ಳುವ ಮೂಲಕ ತಿಳಿಸಿದ್ರು, ಈಗ ಮಾತಿನಂತೆ ಯಾಯಿ ರೇ ಯಾಯಿ ರೇ ಜೋರ್ ಲಗಾಕೆ ನಾಚೋ ರೇ..! ಸಾಂಗ್‌ನ್ನು ಫ್ಯಾನ್ಸ್‌ ಮುಂದಿಟ್ಟಿದ್ದಾರೆ.

ಈ ಮ್ಯೂಸಿಕ್ ವೀಡಿಯೋವನ್ನು ಮಿಹಿರ್ ಗುಲಾಟಿ ನಿರ್ದೇಶಿಸಿದ್ದಾರೆ. ಮೂಲತಃ ಈ ಹಾಡು ರಂಗೀಲಾ ಸಿನಿಮಾದ ಹಿಟ್‌ ಸಾಂಗ್‌. ಊರ್ಮಿಳಾ ಮಾತೋಂಡ್ಕರ್ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಅಂದಿನ ಕಾಲದ ಯುವಪಡೆ ಈ ಹಾಡನ್ನು ನೋಡಿ ಉರ್ಮಿಳಾ ಪಕ್ಕಾ ಅಭಿಮಾನಿಗಳಾಗಿದ್ದರು. ಖ್ಯಾತ ಸಂಗೀತ ನಿರ್ದೇಶಕ ಎ.ಆರ್‌. ರೆಹಮಾನ್‌ ಈ ಹಾಡಿಗೆ ಮ್ಯೂಸಿಕ್‌ ನೀಡಿದ್ದರು. ಇದೀಗ ಹನಿ ಸಿಂಗ್‌ ಮಾರ್ಡನ್‌ ಟಚ್‌ ನೀಡಿದ್ದಾರೆ.

 

 

Trending News