ಹುಚ್ಚ ಹಿರೋಹಿನ್‌ ಹೊಸ ಲುಕ್.. ಅಭಿಮಾನಿಗಳಿಗೆ ಶಾಕ್..! ರೇಖಾ ಈಗಾಗಲು ಕಾರಣ ಏನ್‌ ಗೊತ್ತಾ..?

Huccha Film Heroine Rekha: ಹೇಗಿದ್ದ ರೇಖಾ ಹೇಗಾದ್ರೂ! ಗುರುತೇ ಸಿಗದಷ್ಟು ಬದಲಾದ ನಟಿ ರೇಖಾ 

Written by - YASHODHA POOJARI | Edited by - Yashaswini V | Last Updated : Sep 27, 2023, 01:27 PM IST
  • ಹುಚ್ಚ' ಚಿತ್ರದಲ್ಲಿ ಅಭಿಷ್ಟಾ ಆಗಿ ಚಿತ್ರರಂಗದಲ್ಲಿ ಗಟ್ಟಿ ನೆಲೆ ಕಂಡುಕೊಂಡ ರೇಖಾ ಬಳಿಕ ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲೂ ನಟಿಸಿ ಗೆದ್ದರು.
  • 'ಹುಚ್ಚ' ಸಿನಿಮಾ ನಟಿ ರೇಖಾ ಅಂತ್ಲೇ ಕನ್ನಡ ಸಿನಿರಸಿಕರ ಮನಸ್ಸಿನಲ್ಲಿ ಜಾಗ ಗಿಟ್ಟಿಸಿದ ಚೆಲುವೆ ಮುಂದೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು
  • ಒಂದ್ ಕಾಲದ ಟಾಪ್ ಮಾಡೆಲ್, ಸ್ಟಾರ್ ನಾಯಕಿ ಈಗ ಹೇಗಾಗಿದ್ದಾರೆ ನೋಡಿ..
ಹುಚ್ಚ ಹಿರೋಹಿನ್‌  ಹೊಸ ಲುಕ್.. ಅಭಿಮಾನಿಗಳಿಗೆ ಶಾಕ್..!  ರೇಖಾ ಈಗಾಗಲು ಕಾರಣ ಏನ್‌ ಗೊತ್ತಾ..? title=

Huccha Film Heroine Rekha: 22 ವರ್ಷಗಳ ಹಿಂದೆ ಅಂದ್ರೆ 2000ನೇ ಇಸವಿಯಲ್ಲಿ  ಚಂದನವಕ್ಕೆ ಕಾಲಿಟ್ಟಿದ್ದ  ರೇಖಾ ಯಾರಿಗೆ ಗೊತ್ತಿಲ್ಲ ಹೇಳಿ.. 'ಚಿತ್ರ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕ ಎಂಟ್ರಿ ಕೊಟ್ಟಿದ್ದ ರೇಖಾ ಜಿಂಕೆಮರಿ ಬರ್ತಾಯ್ತೆ ನೋಡ್ಲ ಮಗಾ ಹಾಡಿಗೆ ಹೆಜ್ಜೆ ಹಾಕಿ ಅದೇಷ್ಟೋ ಪಡ್ಡೆಗಳ ಹೃದಯ ಜಿಂಕೆತರ ಜಿಗಿಯುವಂತೆ ಮಾಡಿದ್ರು. ಇವರನ್ನು ಜನ ಹೆಚ್ಚಾಗಿ ಗುರುತಿಸುವುದೇ ಜಿಂಕೆಮರಿ ರೇಖಾ ಅಂತಾ... 

ಜಿಂಕೆಮರಿಯಂತೆ ಜಿಗಿಜಿಗಿ ಅಂತ ನಲಿದು ಸಿನಿ ಪ್ರೇಕ್ಷಕರ ಹೃದಯ ಕದ್ದಿದ್ದ ನಟಿ ರೇಖಾ ಬ್ಯಾಕ್ ಟು ಬ್ಯಾಕ್ ಹಿಟ್​ ಸಿನಿಮಾಗಳನ್ನು ನೀಡಿದ್ದರು. ಒಳ್ಳೊಳ್ಳೆ ಅವಕಾಶಗಳು ಲಭಿಸಿದ್ದವು, ಎಲ್ಲವೂ ಚೆನ್ನಾಗಿತ್ತು.. ಆದರೆ ಅದ್ಯಾಕೋ  ಗೊತ್ತಿಲ್ಲ ಸಡನ್ ಆಗಿ ರೇಖಾ  ಇಂಡಸ್ಟ್ರಿಯಿಂದ ಕಣ್ಮರೆಯಾದರು. ಅಲ್ಲದೆ ಸುಮಾರು ವರ್ಷದ ನಂತರ ಮತ್ತೆ ಕಾಣಿಸಿಕೊಂಡಿರುವ ಜಿಂಕೆ ಮರಿ ರೇಖಾ ಈಗ  ಅವರ ಅಭಿಮಾನಿಗಳಿಗೆ ಆಘಾತ ಕೊಟ್ಟಿದ್ದಾರೆ. ಯಾಕಂದ್ರೆ ಅಂದು ನಾವೂ ನೀವು  ನೋಡಿದ ಜಿಂಕೆಮರಿ ಇವರೇನಾ ಅಂತ ಅಚ್ಚರಿಯಿಂದ ನೋಡುವಷ್ಟು ಬದಲಾಗಿದ್ದಾರೆ ಅನ್ನೋದಕ್ಕಿಂತ ಸೊರಗಿದ್ದಾರೆ ನಟಿ ರೇಖಾ. 

ಬಾಹ್ಯ ಸೌಂದರ್ಯ ಯಾರಿಗೂ ಯಾವತ್ತಿಗೂ ಶಾಶ್ವತವಲ್ಲ ಅನ್ನೋದು ಕಟು ಸತ್ಯ..  ಆಸ್ತಿ ಅಂತಸ್ತು , ಸೌಂದರ್ಯ ಯಾರಿಂದ  ಯಾವಾಗ ಬೇಕಾದ್ರು ಮಾಸಬಹುದು.. ಇದನ್ನೆಲ್ಲ  ಗಮನಿಸಿಯೇ ನಮ್ಮ‌ ಹಿರಿಕರು ಬಣ್ಣ ಮಾಸುತ್ತೆ.. ಹಣ ಕರಗುತ್ತೆ.. ಇರುವಷ್ಟು ದಿನ ನಗುನಗ್ತಾ ಇರಬೇಕು ಸಾಧ್ಯವಾದಷ್ಟು ಪ್ರೀತಿನ ಹಂಚಬೇಕು ಅಂತ ಹೇಳಿದ್ಧಾರೆ.. ಅಷ್ಟಕ್ಕೂ ಈಗ ಈ ವೇದವಾಕ್ಯಗಳು ಯಾಕಪ್ಪ ಅಂತ ಕೇಳಿದ್ರೆ ಅದಕ್ಕೆ ಉತ್ತರ ಕೂಡ ಇದೆ. ಈಗ ದಿಢೀರನೆ ಕಾರ್ಯಕ್ರಮವೊಂದರಲ್ಲಿ ನಟಿ ರೇಖಾ ವೇದವ್ಯಾಸ್ ಪ್ರತ್ಯಕ್ಷರಾಗಿದ್ದು, ಹುಚ್ಚ ಸಿನಿಮಾ ನಾಯಕಿ ರೇಖಾ ಇವರೇನಾ ಅನ್ನುವಷ್ಟರ ಮಟ್ಟಿಗೆ ಬದಲಾಗಿದ್ದಾರೆ. 

ಜಿಂಕೆ ಮರಿ ರೇಖಾ: 
ವಾಸ್ತವವಾಗಿ, ಸುಮ್ಮನೆ ನಟಿ ರೇಖಾ ಅಂದ್ರೆ ಸಡನ್​ ಆಗಿ ಬಹಳಷ್ಟು ಜನಕ್ಕೆ ಗೊತ್ತಾಗಲ್ಲ. ಆದರೆ ಜಿಂಕೆ ಮರಿ ರೇಖಾ ಅಂದಾಕ್ಷಣ ಸಿನಿ ಪ್ರೇಮಿಗಳ ಕಣ್ಣರಳುತ್ತೆ. ಯಾಕಂದ್ರೆ ರೇಖಾ ತಮ್ಮ ನಟನೆ ಹಾಗೂ ಮೋಹಕ ಸೌಂದರ್ಯದಿಂದ ಹಡುಗರಿಗೆ ಹುಚ್ಚು ಹಿಡಿಸಿದ್ರು.. ಮೊದಲ ಚಿತ್ರದಲ್ಲಿ ಬೋಲ್ಡ್ ಆಗಿ ನಟಿಸುವ ಮೂಲಕ ಹದಿಹರೆಯದ ಹೃದಯಗಳ ಗಿಂಡಿದ್ದ ರೇಖಾ ದಶಕಕ್ಕೂ ಹೆಚ್ಚು ಕಾಲಕನ್ನಡ ಚಿತ್ರರಂಗದಲ್ಲಿ ಮಿರಮಿರ ಮಿಂಚಿದ್ರು. ಅಲ್ಲದೆ ಕಿಚ್ಚ ಸುದೀಪ್ ನಟನೆಯ 'ಹುಚ್ಚ' ಸಿನಿಮಾದ ಆ ಹೋಮ್ಲಿ ಗರ್ಲ್​, ಮುಗ್ದ ಹುಡುಗಿ ಅಭಿಷ್ಠಾ ಪಾತ್ರದ ಮೂಲಕ ಕನ್ನಡಿಗರ ಮನೆಮನ ಗೆದ್ದಿದ್ದ ರೇಖಾ ಮಗಳಿದ್ರೆ ಇವರ ಹಾಗೇ ಇರಬೇಕು. ಲವರ್ ಅಂದ್ರೆ ಈತರ ಇರಲಿ ಅನ್ನೋ ಮಟ್ಟಕ್ಕೆ ಹುಡುಗಳ ಹೃದಯದ ಕೊಳದಲ್ಲಿ ಈಜಾಡಿದ್ರು. ಅಲ್ಲದೆ ದೊಡ್ಡ ಮಟ್ಟದ ಗೆಲುವು  ಕಂಡ ಮುಂಬೈ ಮೂಲದ ರೇಖಾಗೆ  ಕನ್ನಡಿಗರು ಕನ್ನಡತಿಯ ಸ್ಥಾನ ಮಾನದ ಜೊತೆಗೆ ಕನ್ನಡಿಗರು ಪ್ರೀತಿಯ ಅಭಿಮಾನದ ಅಭಿಷೇಕ ಮಾಡಿದ್ರು. 

ಇದನ್ನೂ ಓದಿ- ರಾಷ್ಟ್ರ ಪ್ರಶಸ್ತಿ ವಿಜೇತ ಅನಿರುದ್ಧ ಜತ್ಕರ್ ಅವರಿಗೆ ಅಭಿಮಾನಿ ಬಳಗದಿಂದ ಸನ್ಮಾನ

ರೇಖಾ ವೇದವ್ಯಾಸ!
ಮುಂಬೈನಲ್ಲಿ ಹುಟ್ಟಿ ಬೆಳೆದು ಮಾಡಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿದ್ದ ರೇಖಾ ವೇದವ್ಯಾಸ 2001ರಲ್ಲಿ ತೆರೆಕಂಡ 'ಚಿತ್ರ' ಸಿನಿಮಾ ಮೂಲಕ ತಮ್ಮ ಸಿನಿಪಯಣ ಆರಂಭಿಸಿದರು. ಈ ಸಿನಿಮಾ ಅಷ್ಟು ದೊಡ್ಡ ಹಿಟ್​ ಆಗಿಲ್ಲ ಅಂದ್ರು ಪರ್ಸನಲ್ ಆಗಿ ರೇಖಾ ಪರ್ಫಾಮೆನ್ಸ್​, ಡ್ಯಾನ್ಸ್, ಅಂದ ಚೆಂದ ಮೋಡಿ ಮಾಡಿತ್ತು. ಇದಾದ ಬಳಿಕ ಸುದೀಪ್ ನಟನೆಯ 'ಹುಚ್ಚ' ಚಿತ್ರಕ್ಕೆ ನಾಯಕಿಯಾದ ರೇಖಾಗೆ ಅದೃಷ್ಟ ಕೈ ಹಿಡಿತು. ರೇಖಾ ಚಿತ್ತಾರ ತೆಲುಗು, ತಮಿಳಿಗೂ ಹರಡಿತ್ತು. ಕನ್ನಡದ ಜೊತೆ ಜೊತೆಗೆ ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡ್ರು. ಆರು ವರ್ಷದಲ್ಲಿ 25ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸ್ಟಾರ್ ಹೀರೋಯಿನ್ ಆದ್ರು.

ಹುಚ್ಚ' ಚಿತ್ರದಲ್ಲಿ ಅಭಿಷ್ಟಾ ಆಗಿ ಚಿತ್ರರಂಗದಲ್ಲಿ ಗಟ್ಟಿ ನೆಲೆ ಕಂಡುಕೊಂಡ ರೇಖಾ ಬಳಿಕ ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲೂ ನಟಿಸಿ ಗೆದ್ದರು. 'ಹುಚ್ಚ' ಸಿನಿಮಾ ನಟಿ ರೇಖಾ ಅಂತ್ಲೇ ಕನ್ನಡ ಸಿನಿರಸಿಕರ ಮನಸ್ಸಿನಲ್ಲಿ ಜಾಗ ಗಿಟ್ಟಿಸಿದ ಚೆಲುವೆ ಮುಂದೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಚಿತ್ರ', 'ತುಂಟಾಟ', 'ಮೋನಲಿಸಾ', 'ಚೆಲ್ಲಾಟ' ಹೀಗೆ ಹಲವು ಸಿನಿಮಾಗಳಲ್ಲಿ ರೇಖಾ ನಟಿಸಿ ಮೋಡಿ ಮಾಡಿದರು. ಕೆಲ ದಿನಗಳ ಕಾಲ ತೆಲುಗು, ತಮಿಳು ಸಿನಿಮಾಗಳಲ್ಲಿಯೂ ನಟಿಸುವ ಮೂಲಕ ಕಾಲ್ ಶೀಟ್ ಸಿಗದಷ್ಟು ಬ್ಯುಸಿಯಾಗಿದ್ರು ರೇಖಾ ವೇದವ್ಯಾಸ್..

ರೇಖಾ ಆರೇಳು ವರ್ಷ ಗಳು ತುಂಬಾ ಸಕ್ಸಸ್​ ಗಳನ್ನು ನೋಡಿದ್ದಾರೆ. ಬಹುಭಾಷೆ ನಟಿಯಾಗಿ ಸಾಕಷ್ಟು ನೇಮೂ ಫೇಮೂ ಗಳಿಸಿದ್ದಾರೆ. ಬಹುತೇಕ ಸ್ಟಾರ್​ ಆ್ಯಕ್ಟರ್​ಗಳ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ..  ಗಣೇಶ್ ನಟನೆಯ ಹುಡುಗಾಟ, ಚೆಲ್ಲಾಟ, ಅನಿರುದ್ಧ್ ನಟನೆಯ ತುಂಟಾಟ, ಪರಿಚಯ, ದರ್ಶನ್ ನಟನೆಯ ಬಾಸ್​ ಸಿನಿಮಾಗಳು ರೇಖಾ ಪಾಲಿಗೆ ವಿಶೇಷ ಎಂತಲೇ ಹೇಳಬಹುದು. 
 
ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದ ರೇಖಾ 2014ರಲ್ಲಿ ಕೊನೆಯದಾಗಿ 'ತುಳಸಿ' ಎಂಬ ಕನ್ನಡ ಚಿತ್ರದಲ್ಲಿ  ಕಾಣಿಸಿಕೊಂಡಿದ್ದರು. ಆ ಬಳಿಕ ಆಕೆ ಯಾವುದೇ ಸಿನಿಮಾದಲ್ಲಿ ನಟಿಸಲಿಲ್ಲ. ಕೆಲ ವರ್ಷಗಳ ಹಿಂದೆ ತೂಕ ಹೆಚ್ಚಿಸಿಕೊಂಡು ದಪ್ಪ ಆಗಿದ್ದ ರೇಖಾ ಮತ್ತೆ ತೂಕ ಇಳಿಸಿ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಆಕೆ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. 

ಇದನ್ನೂ ಓದಿ- ಅಂದು ಆಂಕರ್‌.. ಇಂದು ಪ್ರಸಿದ್ಧ ನಟಿ :‌ ಕೋಟಿ ಕೋಟಿ ಸಂಪಾದಿಸುವ ಇವರು ಯಾರು ಬಲ್ಲಿರಾ?

ಒಂದು ಕಾಲದಲ್ಲಿ ಬೆಳ್ಳಿ ತೆರೆಯಲ್ಲಿ ಮಿರ ಮಿರ ಮಿಂಚಿ ಮರೆಯಾಗಿರುವ ನಟಿ ರೇಖಾ ದಿಢೀರನೆ ತೆಲುಗು ಕಿರುತೆರೆ ಕಾರ್ಯಕ್ರಮದಲ್ಲಿ  ಪ್ರತ್ಯಕ್ಷ ಆಗಿದ್ದಾರೆ. ಆದರೆ ಆಕೆಯನ್ನು ನೋಡಿದ ಕೆಲವರು ಶಾಕ್ ಆಗಿದ್ದಾರೆ. ಅಲ್ಲದೆ  ರೇಖಾರನ್ನು ನೋಡಿದ ಅಭಿಮಾನಿಗಳಂತೂ ನಿಜವಾಗಿ ಇವರೇನಾ  'ಹುಚ್ಚ' ಚಿತ್ರದಲ್ಲಿ ನಟಿಸಿದ್ದ ಮುದ್ದು ಮುಖದ ಸುಂದರಿ ರೇಖಾ ಅಂತ ತಮಗೆ ತಾವೇ ಪ್ರಶ್ನೆ ಹಾಕಿಕೊಂಡಿದ್ದಾರೆ.. ಯಾಕಂದ್ರೆ ಜಿಂಕೆ ಮರಿಯಂತೆ ಮಿನುಗುತ್ತಿದ್ದ ನಟಿ ರೇಖಾ  ಇದೀಗ ಬಾಡಿ ಹೋಗಿರುವ ಕಮಲದಂತೆ ಸೊರಗಿ ಹೋಗಿದ್ದಾರೆ. 

ಹೌದು, ಕಳೆದ ಕೆಲವು ವರ್ಷಗಳಿಂದ‌ ಬೆಳ್ಳಿ ತೆರೆಯಿಂದ ಕಣ್ಮರೆಯಾಗಿದ್ದ ರೇಖಾ ಅವರ ಬಗ್ಗೆ ಇಷ್ಟು ದೊಡ್ಡ ಪೀಠಿಕೆ ಕೊಟ್ಟಿದ್ದು ಇದೇ ಕಾರಣಕ್ಕೆ...  ಪಳಪಳ ಹೊಳೆಯುವ ಬಟ್ಟಲು ಕಣ್ ಗಳ ಚೆಲುವೆ ಈಗ  ನಮ್ಮ ಕಣ್ಣುಗಳೇ ನಂಬದ ರೀತಿ  ಬದಲಾಗಿದ್ದಾರೆ.. ಇನ್ನು ಇಷ್ಟೆಲ್ಲಾ ಹೇಳಿದ ಮೇಲೆ ರೇಖಾ  ಈಗ ಹೇಗಿದ್ದಾರೆ. ಈಗ ರೇಖಾ ಎಲ್ಲಿದ್ದಾರೆ? ಏನ್ ಮಾಡ್ತಿದ್ದಾರೆ? ಅವರಿಗೇನಾಗಿದೆ? ಅಂತ ನೋಡಿದ್ರೆ ನಿಜಕ್ಕೂ ನೀವೇಲ್ಲರು  ಶಾಕ್ ಅಗೋದಂತು ಗ್ಯಾರಂಟಿ..

ನಟಿ ರೇಖಾ 2014ರ ನಂತರ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡಿಲ್ಲ. ಅವಕಾಶಗಳು ಸಿಕ್ಕಿಲ್ವೋ ಅಥವಾ ಸಿನಿಮಾ ಮೇಲಿನ ಆಸಕ್ತಿ ಕಮ್ಮಿ ಆಯ್ತೋ ಗೊತ್ತಿಲ್ಲ. ಆದರೆ ಇದ್ದಕ್ಕಿಂದ್ದಂತೆ ಬಿಗ್ ಸ್ಕ್ರೀನ್​ನಿಂದ ಮಾಯವಾಗಿದ್ದ ರೇಖಾ ಸಿನಿಪ್ರೇಮಿಗಳಿಗೆ ಅಪರೂಪದ ತಾರೆಯಾಗಿ ಉಳಿದುಕೊಂಡು ಬಿಟ್ರು.. ಆದ್ರೀಗ ಹಲವು ವರ್ಷಗಳ ಬಳಿಕ ಕ್ಯಾಮೆರಾ ಮುಂದೆ ಬಂದ ರೇಖಾ ನಿರೀಕ್ಷೆಗೂ ಮೀರಿದ ಶಾಕ್ ಕೊಟ್ಟಿದ್ದಾರೆ. ಒಂದ್ ಟೈಮ್​ಲ್ಲಿ ನಾವು ನೋಡಿದ ರೇಖಾ ಇವರೇನಾ ಅನ್ನೋ ಮಟ್ಟಕ್ಕೆ ಅಚ್ಚರಿ ಮೂಡಿಸಿದ್ದಾರೆ.

ಒಂದ್ ಕಾಲದ ಟಾಪ್ ಮಾಡೆಲ್, ಸ್ಟಾರ್ ನಾಯಕಿ  ಈಗ ಹೇಗಾಗಿದ್ದಾರೆ ನೋಡಿ.. ಮುಖದಲ್ಲಿ ಕಾಂತಿ ಕಾಣೆಯಾಗಿದೆ, ಸೌಂದರ್ಯ ಮಾಸಿದೆ, ದೈಹಿಕವಾಗಿ ಬಹಳಷ್ಟು ಸೊರಗಿದ್ದಾರೆ. ರೇಖಾ ಮುಖದಲ್ಲಿದ್ದ ಚಾರ್ಮ್ ಈಗಿಲ್ಲ.. ರೇಖಾ ಅವರ ಈಗಿನ ಪರಿಸ್ಥಿತಿ ನೋಡ್ತಿದ್ರೆ ಖಂಡಿತವಾಗಿ ಅವರ ಆರೋಗ್ಯದಲ್ಲಿ ಏನೋ ಸಮಸ್ಯೆಯಾಗಿದೆ ಅಂತ ಅನಿಸದೇ ಇರಲ್ಲ. ಹೌದು, ರೇಖಾ ಅವರ ಈಗಿನ ಸ್ಥಿತಿಯನ್ನು ಕಂಡರೆ ಎಂತಹವರಿಗೇ ಆದರೂ ಸಂಕಟ ಆಗುತ್ತೆ.  ಹೇಗಿದ್ದ ರೇಖಾ ಹೇಗಾಗಿದ್ದಾರೆ ಅಂತ ಬೇಸರ ಕಾಡ್ತಿದೆ.. ಅಷ್ಟಕ್ಕೂ ರೇಖಾಗೆ ಏನಾಗಿದೆ? ಏನಾದರೂ ಅನಾರೋಗ್ಯನಾ? ಅದಕ್ಕಾಗಿ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದಾರಾ? ದೀಢೀರ್ ಅಂತ ಯಾಕಿಷ್ಟು ಸಣ್ಣಗಾಗಿದ್ದಾರೆ ಅನ್ನೋ ಹತ್ತು ಹಲವು ಪ್ರಶ್ನೆಗಳು ನಮ್ಮ ಮುಂದಿದೆ. ಆದರೆ ಅದಕ್ಕೆ ಉತ್ತರ ಅವರ ಬಳಿಯೂ ಇದ್ದಂತಿಲ್ಲ..

ಇದನ್ನೂ ಓದಿ- ‘ರಕ್ತಾಕ್ಷ’ ಸಿನಿಮಾದ ಬೆಂಕಿ ಹಾಡಿಗೆ ನೀವು ಸೊಂಟ ಕುಣಿಸೋದು ಪಕ್ಕಾ ಕಣ್ರೀ...!

ಬಹಳ ವರ್ಷಗಳ ನಂತ್ರ ಸಡನ್ ಆಗಿ ತೆಲುಗು ಕಿರುತೆರೆ ಕಾರ್ಯಕ್ರಮಕ್ಕೆ ಅತಿಥಿಯಾಗಿ ರೇಖಾ ಎಂಟ್ರಿ ಕೊಟ್ಟದ್ದಾರೆ. ಕಾರ್ಯಕ್ರಮದಲ್ಲಿ ರೇಖಾ ಅವರನ್ನು  ನೋಡಿ ಇಡೀ ಶೋನಲ್ಲಿದ್ದವರು ಒಂದು ಕ್ಷಣ ಆಶ್ಚರ್ಯಚಿಕಿತರಾಗಿದ್ದಾರೆ. ಅದರಲ್ಲೂ ಕಾರ್ಯಕ್ರಮದ ತೀರ್ಪುಗಾರ್ತಿ ಇಂದ್ರಜ ಅವರಂತೂ ರೇಖಾರನ್ನ ನೋಡಿ ತಡೆಯಲಾಗದೇ ಏನಾಯ್ತು? ಅಂತಾನು ಕೇಳಿದ್ದಾರೆ. ಆದರೆ ರೇಖಾ ಕೊಟ್ಟ ಉತ್ತರ "ಸಡನ್ ಆಗಿ ಈ ರೀತಿ ಆಗಿಬಿಡ್ತು" ಅನ್ನೋದಷ್ಟೇ..

ಕಳೆದ ಎರಡ್ಮೂರು ವರ್ಷದ ಹಿಂದೆ ರೇಖಾ ತುಂಬಾ ಆರೋಗ್ಯವಾಗಿ, ದೈಹಿಕವಾಗಿಯೂ ತುಂಬಾ ಚೆನ್ನಾಗಿದ್ದರು. ಅಷ್ಟೇ ಅಲ್ಲ ನೋಡೊಕು ಮುದ್ದಾಗಿದ್ರು. ಅಲ್ಲದೆ ಹಲವು ಸಂದರ್ಶನಗಳಲ್ಲಿ ಭಾಗವಹಿಸಿದ್ದರು. ಕೆಲವು ಶೋನಲ್ಲಿ ಪರ್ಫಾಮೆನ್ಸ್​ ಸಹ ಕೊಟ್ಟಿದ್ದಾರೆ.. ಅಷ್ಟೇ ಯಾಕೆ ಇನ್ಸ್ಟಾಗ್ರಾಂನಲ್ಲೂ ಅವ್ರ ಇತ್ತೀಚಿನ ಫೋಟೋ ವಿಡಿಯೋಗಳು ವೈರಲ್ ಆಗಿದ್ದವು. ಆದ್ರೆ ಇದ್ದಕ್ಕಿದ್ದಂತೆ ರೇಖಾಗೆ ಏನಾಯ್ತು? ಯಾಕ್ ಹಿಂಗಾದ್ರೂ ಅನ್ನೋದು ಈಗ  ಅವರನ್ನು ಪ್ರೀತಿಸ್ತಿದ್ದವರ ಯಕ್ಷ ಪ್ರಶ್ನೆಯಾಗಿದೆ..

ಹಾಗೆ ನೋಡಿದರೆ, ರೇಖಾ ಅವರಿಗೆ ಇಂಡಸ್ಟ್ರಿಯಲ್ಲೇ ಅವಕಾಶಗಳು ಜಾಸ್ತಿನೇ ಇದ್ದವು. ಆದರೆ ಅದನ್ನ ಅವರೇ ತಮ್ಮ ಕೈಯಾರೆ ಹಾಳು ಮಾಡಿಕೊಂಡರು ಅನ್ನೋದು ಕೆಲವರು ವಾದ. ರೇಖಾ ಅವರ ಆಟಿಟ್ಯೂಡ್​, ಅಹಂ ಅವರಿಗೆ ವಿಲನ್ ಆಯ್ತು ಅಂತ ಹೇಳಲಾಗ್ತಿದೆ. ಹಾಗಾಗಿಯೇ ಕೆಲವು ನಿರ್ಮಾಪಕರೂ ರೇಖಾ ಜೊತೆ ಸಿನಿಮಾ ಮಾಡೋಕೆ ಮುಂದಾಗಲಿಲ್ಲವಂತೆ. ಈ ಕಾರಣಕ್ಕಾಗಿಯೇ ರೇಖಾ ಹೆಚ್ಚು ಸಿನಿಮಾ ಮಾಡೋಕೆ ಸಾಧ್ಯವಾಗಿಲ್ಲ ಎಂದೇ ಹೇಳಲಾಗ್ತಿದೆ.. 

ಇನ್ನು ಇತ್ತೀಚಿನ ವರ್ಷಗಳಲ್ಲಿ ರೇಖಾ ನೀಡಿದ್ದ ಸಂದರ್ಶನಗಳಲ್ಲಿ ಸಿನಿಮಾರಂಗಕ್ಕೆ ಕಂಬ್ಯಾಕ್ ಆಗುವ ಬಗ್ಗೆ ಮಾತಾಡಿದ್ದರು. ನಾನು ಮತ್ತೆ ಸಿನಿಮಾಗಳಲ್ಲಿ ನಟಿಸ್ತೇನೆ, ಮತ್ತೆ ಬಣ್ಣ ಹಚ್ಚುತ್ತೇನೆ ಅಂತ ಕಾನ್ಪಿಡೆಂಟ್ ಆಗಿ  ಹೇಳಿಕೊಂಡಿದ್ದರು. ಕೆಲವು ಸಿನಿಮಾಗಳ ಮಾತುಕತೆಯೂ ಸಾಗಿದೆ, ಶೀಘ್ರದಲ್ಲೇ ಘೋಷಣೆ ಮಾಡ್ತೇನೆ ಅಂತನೂ ಸುಳಿವು ಕೊಟ್ಟಿದ್ದರು. ಆದರೆ, ರೇಖಾ ಅವರ ಕಂಬ್ಯಾಕ್​ಗಾಗಿ ಕಾಯ್ತಿದ್ದ ಮಂದಿಗೆ ಈಗ ಅರಗಿಸಿಕೊಳ್ಳಲಾಗದ ಅಚ್ಚರಿ ಎದುರಾಗಿದೆ. 

ಇದನ್ನೂ ಓದಿ- ಡ್ರೈವರ್ ಇಲ್ಲದ ಕಾರಿನಲ್ಲಿ ಡಾಲಿ ಧನಂಜಯ್ ಪ್ರಯಾಣ

ಸಿನಿಮಾ‌ ಅವಕಾಶಗಳಿಲ್ಲದೆ ಕೈಚೆಲ್ಲಿ ಕೂತಿದ್ದ ರೇಖಾ ಅವಕಾಶಕ್ಕಾಗಿ ಡಯಟ್ ಮೊರೆ ಹೋಗಿ ಈ ರೀತಿಯಾದ್ರ... ಇಲ್ಲ ಅವಕಾಶಗಳು ಇಲ್ಲದೆ ಮಾನಸಿಕವಾಗಿ ಕುಗ್ಗಿ ಈ ರೀತಿಯಾದ್ರ.? ಇಲ್ಲ ಜಿಂಕೆಮರಿಗೆ ಏನಾದ್ರು ಆರೋಗ್ಯ ಕೈ ಕೊಟ್ಟು ಈ ರೀತಿ ನೋಡಲಾಗದಷ್ಟು ಬದಲಾದ್ರ ಎಂಬ ಅನುಮಾನುಗಳು ಈಗ ಮೂಡಿವೆ. ಅಲ್ಲದೆ ರೇಖಾ ಅವರನ್ನು ಸಣಕಲು ಅವತಾರದಲ್ಲಿ ನೋಡಿದ ಮೇಲೆ ಅವರನ್ನು ಸಂಪರ್ಕಿಸುವ ಪ್ರಯತ್ನ ನಮ್ಮ ಬಳಗ ಮಾಡಿದೆ.. ಅದ್ರೆ ಯಾರ ಸಂಪರ್ಕಕ್ಕೆ ಸಿಗದೆ.. ದೂರವಾಣಿಗೂ ಸಿಗದೆ ಇರುವ ರೇಖಾ ಅವರಿಗೆ ಏನಾಗಿದೆ ಎಂಬುದು 90 ರದಶದ ಸುನೀಲ್ ಕುಮಾರ್ ದೇಸಾಯಿ ಅವರ ಸಿನಿಮಾಗಳಷ್ಠೇ ಸಸ್ಪೆನ್ಸ್ ಆಗಿದೆ...

ಎನಿ ವೇ.. ಸದ್ಯಕ್ಕೆ ರೇಖಾ ಭಾಗವಹಿಸಿದ್ದ ಟಿವಿ ಕಾರ್ಯಕ್ರಮದ ಪ್ರೋಮೋ ಮಾತ್ರ ರಿವೀಲ್ ಆಗಿದೆ.. ಭಾನುವಾರ ಕಾರ್ಯಕ್ರಮ ಸಂಪೂರ್ಣ  ಪ್ರಸಾರವಾಗಲಿದ್ದು, ಅದೇ ವೇದಿಕೆಯಲ್ಲಿ ರೇಖಾ ಅವರೇ ಅವರ  ಆರೋಗ್ಯಕ್ಕೆ ಏನಾಗಿದೆ.. ಏನಾದರು ಅನಾರೋಗ್ಯಕ್ಕೆ ತುತ್ತಾಗಿದ್ರಾ? ಇಲ್ಲ ಡಯಟ್ ಮಾಡುವ ಮೂಲಕ ಅವರೇ  ಗುರುತು ಸಿಗದಷ್ಟು ಸಣ್ಣ ಆಗಿದ್ದಾರೆಯೇ ಅನ್ನೋದ್ರ ಬಗ್ಗೆ ಸ್ಪಷ್ಟನೆ ನೀಡುತ್ತಾರಾ ಎಂಬುದನ್ನೂ ಕಾದುನೋಡಬೇಕಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News