Nadav Lapid statement on The Kashmir Files: The Kashmir Files ಸಿನಿಮಾ ಮತ್ತೆ ಸುದ್ದಿಯಾಗಿದೆ. 53 ನೇ IFFI (International Film Festival of India) ಗೋವಾದ ಸಮಾರೋಪ ಸಮಾರಂಭದಲ್ಲಿ ತೀರ್ಪುಗಾರರ ಮುಖ್ಯಸ್ಥ ನಾದವ್ ಲ್ಯಾಪಿಡ್ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು “ಪ್ರಚಾರದ ಗೀಳು, ಅಸಭ್ಯ ಚಿತ್ರ” ಎಂದು ಕರೆದಿದ್ದಾರೆ. ಈ ಹೇಳಿಕೆ ಸದ್ಯ ದೇಶದಲ್ಲಿ ಕಿಚ್ಚು ಹಚ್ಚಿದ್ದು, ಟ್ವಿಟರ್ ನಲ್ಲಿ ಭಾರೀ ಕೋಲಾಹಲ ಎದ್ದಿದೆ.
ಇದನ್ನೂ ಓದಿ: ಕರುನಾಡಿನ ಕಿಚ್ಚ ಈಗ ಸಮಂತಾ ಜೊತೆ ಡ್ಯೂಯಟ್ ಹಾಡಲು ಫುಲ್ ರೆಡಿ!
ಇಸ್ರೇಲಿ ಚಲನಚಿತ್ರ ನಿರ್ಮಾಪಕ ಮತ್ತು ಐಎಫ್‌ಎಫ್‌ಐ ಜ್ಯೂರಿ ಮುಖ್ಯಸ್ಥ ನಾಡವ್ ಲ್ಯಾಪಿಡ್ ‘ದಿ ಕಾಶ್ಮೀರ್ ಫೈಲ್ಸ್’ ಅನ್ನು 'ಅಸಭ್ಯ' ಚಿತ್ರ ಎಂದು ಹೇಳುತ್ತಿದ್ದಂತೆ ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಷ್ಟೇ ಅಲ್ಲದೆ, ವಿಚಿತ್ರವಾದ ಕಾಮೆಂಟ್‌ಗಳು, ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
“अंतरराष्ट्रीय कंपीटिशन के लिए 15 फ़िल्में थीं।14 फ़िल्म कला के लिहाज़ से उत्कृष्ट थीं।लेकिन 15वीं फ़िल्म,जो कि #TheKashmirFiles थी-उसे देख कर “पूरी ज्यूरी” विचलित और स्तब्ध थी और “हम सबने” माना कि वो एक PROPAGANDA VULGAR फ़िल्म थी,जिसे IFFI में नहीं होना चाहिए था”
-Nadav Lapid pic.twitter.com/J1Dqjw9xH4— Vinod Kapri (@vinodkapri) November 29, 2022
ಈ ವಿವಾದ ಭುಗಿಲೆದ್ದಂತೆ IFFI ತೀರ್ಪುಗಾರರ ಸದಸ್ಯ ಸುದೀಪ್ತೋ ಸೇನ್ ಮಾತನಾಡಿ, “ದಿ ಕಾಶ್ಮೀರ್ ಫೈಲ್ಸ್ ಕುರಿತು ನಾಡವ್ ಲ್ಯಾಪಿಡ್ ಹೇಳಿರುವ ಮಾತುಗಳು ಅವರ ವೈಯಕ್ತಿಕ ಅಭಿಪ್ರಾಯ” ಎಂದು ಟ್ವೀಟ್ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ತೀರ್ಪುಗಾರರ ಮಂಡಳಿಯ ಅಧಿಕೃತ ಪ್ರಸ್ತುತಿಯಲ್ಲಿ ನಿರ್ದೇಶಕರು ಮತ್ತು ಅಧಿಕೃತ ಪತ್ರಿಕಾಗೋಷ್ಠಿಯಲ್ಲಿ ನಾವು 4 ತೀರ್ಪುಗಾರರು ಸಂವಾದ ನಡೆಸಿದ್ದೇವೆ. ನಮ್ಮ ಇಷ್ಟಗಳು ಅಥವಾ ಇಷ್ಟಪಡದಿರುವಿಕೆಗಳ ಬಗ್ಗೆ ನಾವು ಏನನ್ನೂ ಪ್ರಸ್ತಾಪಿಸಲಿಲ್ಲ. ಇವೆಲ್ಲವೂ ನಮ್ಮ ಅಧಿಕೃತ ಸಾಮೂಹಿಕ ಅಭಿಪ್ರಾಯವಾಗಿದೆ”
"ಜ್ಯೂರರ್ ಆಗಿ ನಾವು ಚಲನಚಿತ್ರದ ತಾಂತ್ರಿಕ, ಸೌಂದರ್ಯದ ಗುಣಮಟ್ಟ ಮತ್ತು ಸಾಮಾಜಿಕ-ಸಾಂಸ್ಕೃತಿಕ ಪ್ರಸ್ತುತತೆಯನ್ನು ನಿರ್ಣಯಿಸಲು ನಿಯೋಜಿಸಿದ್ದೇವೆ. ನಾವು ಯಾವುದೇ ಚಲನಚಿತ್ರದ ಬಗ್ಗೆ ಯಾವುದೇ ರೀತಿಯ ರಾಜಕೀಯ ಕಾಮೆಂಟ್‌ಗಳನ್ನು ಮಾಡಲು ಇಷ್ಟಪಡುವುದಿಲ್ಲ” ಎಂದರು.
ನಾದವ್ ಲ್ಯಾಪಿಡ್, ಜೇವಿಯರ್ ಅಂಗುಲೊ ಬಾರ್ಟುರೆನ್ (ಫ್ರಾನ್ಸ್‌ನ ಸಾಕ್ಷ್ಯಚಿತ್ರ ನಿರ್ಮಾಪಕ), ಸುದೀಪ್ತೋ ಸೇನ್ (ಭಾರತದ ಬರಹಗಾರ ಮತ್ತು ನಿರ್ದೇಶಕ), ಪಾಸ್ಕೇಲ್ ಚವಾನ್ಸ್ (ಫ್ರಾನ್ಸ್ ಚಲನಚಿತ್ರ ಸಂಕಲನಕಾರ) ಮತ್ತು ಜಿಂಕೊ ಗೊಟೊ (ಯುಎಸ್ ಅನಿಮೇಷನ್ ಚಲನಚಿತ್ರ ನಿರ್ಮಾಪಕ) ಈ ವರ್ಷದ ಐಎಫ್‌ಎಫ್‌ಐನ ತೀರ್ಪುಗಾರರ ಸದಸ್ಯರಾಗಿದ್ದರು.
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಕಾಶ್ಮೀರ ಫೈಲ್ಸ್ ಸಿನಿಮಾ ಕಾಶ್ಮೀರ ದಂಗೆಯ ಸಮಯದಲ್ಲಿ ಕಾಶ್ಮೀರಿ ಪಂಡಿತರ ಹತ್ಯೆಗಳ ಸುತ್ತ ಸುತ್ತುತ್ತದೆ. 90 ರ ದಶಕದಲ್ಲಿ ನಡೆಯುವ ಈ ಚಿತ್ರದಲ್ಲಿ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ದರ್ಶನ್ ಕುಮಾರ್ ಮತ್ತು ಪಲ್ಲವಿ ಜೋಶ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಚಿತ್ರವು 2022 ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರಗಳಲ್ಲಿ ಒಂದಾಗಿದೆ.
ಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಟ್ವೀಟ್ ಮಾಡಿದ್ದು, “ಸತ್ಯವು ಅತ್ಯಂತ ಅಪಾಯಕಾರಿ ವಿಷಯ. ಇದು ಜನರನ್ನು ಸುಳ್ಳು ಮಾಡಬಹುದು” ಎಂದು ಬರೆದುಕೊಂಡಿದ್ದಾರೆ.
GM.
Truth is the most dangerous thing. It can make people lie. #CreativeConsciousness
— Vivek Ranjan Agnihotri (@vivekagnihotri) November 29, 2022
ಅನುಪಮ್ ಖೇರ್ ಹೇಳಿದ್ದೇನು?
ಲ್ಯಾಪಿಡ್ ಅವರ ಟೀಕೆಗಳನ್ನು ಉಲ್ಲೇಖಿಸಿ ಅನುಪಮ್ ಖೇರ್, "ಸುಳ್ಳಿನ ಎತ್ತರ ಎಷ್ಟೇ ಇರಲಿ. ಸತ್ಯಕ್ಕೆ ಹೋಲಿಸಿದರೆ ಅದು ಯಾವಾಗಲೂ ಚಿಕ್ಕದಾಗಿರುತ್ತದೆ" ಎಂದು ತಾರ್ಕಿಕವಾಗಿ ಟ್ವೀಟ್ ಮಾಡಿದ್ದಾರೆ. ಅವರು ತಮ್ಮ ಟ್ವೀಟ್‌ನೊಂದಿಗೆ ಸಿನಿಮಾದ ಚಿತ್ರಗಳನ್ನು ಲಗತ್ತಿಸಿದ್ದಾರೆ.
झूट का क़द कितना भी ऊँचा क्यों ना हो..
सत्य के मुक़ाबले में हमेशा छोटा ही होता है.. pic.twitter.com/OfOiFgkKtD— Anupam Kher (@AnupamPKher) November 28, 2022
ನಟ ದರ್ಶನ್ ಕುಮಾರ್ ಅಸಮಾಧಾನ:
“ಪ್ರತಿಯೊಬ್ಬರೂ ತಾವು ನೋಡುವ ಮತ್ತು ಗ್ರಹಿಸುವ ಯಾವುದರು ವಿಷಯದ ಬಗ್ಗೆ ತಮ್ಮದೇ ಆದ ವೈಯಕ್ತಿಕ ಅಭಿಪ್ರಾಯಗಳನ್ನು ಹೊಂದಿರುತ್ತಾರೆ. ಆದರೆ ಕಾಶ್ಮೀರ ಫೈಲ್ಸ್ ಭಯೋತ್ಪಾದನೆಯ ಕ್ರೂರ ಕೃತ್ಯಗಳ ವಿರುದ್ಧ ನ್ಯಾಯಕ್ಕಾಗಿ ಹೋರಾಡುತ್ತಿರುವ ಕಾಶ್ಮೀರಿ ಪಂಡಿತ ಸಮುದಾಯದ ನಿಜವಾದ ಅವಸ್ಥೆಯನ್ನು ಚಿತ್ರಿಸುವ ಚಲನಚಿತ್ರವಾಗಿದೆ ಎಂಬ ಸತ್ಯವನ್ನು ಯಾರೂ ಅಲ್ಲಗಳೆಯುವಂತಿಲ್ಲ. ಆದ್ದರಿಂದ ಈ ಚಿತ್ರವು ಅಸಭ್ಯತೆಯ ಮೇಲೆ ಅಲ್ಲ, ವಾಸ್ತವದ ಮೇಲೆ ನಿಂತಿದೆ" ಎಂದು ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ನಟ ದರ್ಶನ್ ಕುಮಾರ್ ಹೇಳಿದರು.
ಇದನ್ನೂ ಓದಿ: Siddaramiah Biopic: ತೆರೆ ಮೇಲೆ ಸಿದ್ದರಾಮಯ್ಯ ಬಯೋಪಿಕ್: ಸಿದ್ದು ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ತಮಿಳಿನ ಈ ನಟ!
ಇನ್ನೊಂದೆಡೆ ರಾಮ್ ಗೋಪಾಲ್ ವರ್ಮ ಅವರು ಸಹ ಈ ಹೇಳಿಕೆ ಬಗ್ಗೆ ಅಸಮಾಧಾನ ಹೊರ ಹಾಕಿದ್ದು, "ಅವರು ವಿದೇಶಿಯಾಗಿರುವಾಗ ಚಿತ್ರದ ವಿಷಯದ ಬಗ್ಗೆ ಕಠಿಣ ಹೇಳಿಕೆ ನೀಡಿರುವುದು ನನಗೆ ಆಘಾತಕಾರಿಯಾಗಿ ಕಂಡಿದೆ. ಅವರಿಗೆ ಹಿನ್ನೆಲೆಯ ಬಗ್ಗೆ ಯಾವುದೇ ಜ್ಞಾನವಿಲ್ಲ” ಎಂದು ಕಟುವಾಗಿ ನುಡಿದಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.