close

News WrapGet Handpicked Stories from our editors directly to your mailbox

'ಸಾಹೋ'ಗೆ ಪ್ರಭಾಸ್ 100 ಕೋಟಿ ರೂ. ಸಂಭಾವನೆ ಪಡೆದಿದ್ದಾರಾ? ಇದಕ್ಕೆ 'ಬಾಹುಬಲಿ' ನಟನ ಸ್ಪಷ್ಟನೆ ಏನು!

'ಸಾಹೋ' ಚಿತ್ರ ಆಗಸ್ಟ್ 30, 2019 ರಂದು ತೆರೆಗೆ ಬರಲಿದೆ. ಇದು ಪ್ರಭಾಸ್ ಮತ್ತು ಶ್ರದ್ಧಾ ಕಪೂರ್ ಅವರ ಹೊಸ ಆನ್-ಸ್ಕ್ರೀನ್ ಜೋಡಿಯನ್ನು 70 ಎಂಎಂ ಪರದೆ ಮೇಲೆ ತರುತ್ತಿದೆ.

Updated: Aug 16, 2019 , 11:37 AM IST
'ಸಾಹೋ'ಗೆ ಪ್ರಭಾಸ್ 100 ಕೋಟಿ ರೂ. ಸಂಭಾವನೆ ಪಡೆದಿದ್ದಾರಾ? ಇದಕ್ಕೆ 'ಬಾಹುಬಲಿ' ನಟನ ಸ್ಪಷ್ಟನೆ ಏನು!
File Image

ನವದೆಹಲಿ: 'ಸಾಹೋ' ಚಿತ್ರದ ಬಗೆಗಿನ ಕೆಲ ಊಹಾಪೋಹಗಳಿಗೆ ಇದೀಗ ಸ್ಪಷ್ಟನೆ ದೊರೆತಿದೆ. ಭಾರತೀಯ ಚಿತ್ರರಂಗದ 'ಬಾಹುಬಲಿ' - ಪ್ರಭಾಸ್ ನಾಯಕನಾಗಿ ನಟಿಸಿರುವ ಈ ಚಿತ್ರ ಬಜೆಟ್ ವಿಷಯಕ್ಕೆ ಆಗಾಗ್ಗೆ ಹೆಚ್ಚು ಚರ್ಚೆಯಲ್ಲಿದೆ. ಈ ಚಿತ್ರವನ್ನು ಸುಮಾರು 250 ರಿಂದ 300 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದು ವರದಿಯಾಗಿದೆ.

ಈ ದಿನಗಳಲ್ಲಿ ಮತ್ತೊಂದು ವದಂತಿ ಕೇಳಿಬರುತ್ತಿದ್ದು, ಪ್ರಭಾಸ್ 'ಸಾಹೋ'ಗೆ 100 ಕೋಟಿ ರೂ. ಸಂಭಾವನೆ ತೆಗೆದುಕೊಂಡಿದ್ದರು ಎಂಬುದು. ಈ ಬಗ್ಗೆ ಖುದ್ದು ಪ್ರಭಾಸ್ ಪ್ರತಿಕ್ರಿಯಿಸಿದ್ದು, ಇವು ಆಧಾರರಹಿತ ವದಂತಿಗಳು ಎಂದು ಸ್ಪಷ್ಟಪಡಿಸಿದ್ದಾರೆ.

ಮುಂಬೈ ಮಿರರ್‌ಗೆ ನೀಡಿದ ಸಂದರ್ಶನದಲ್ಲಿ, ಈ ಚಿತ್ರಕ್ಕಾಗಿ ಪ್ರಭಾಸ್ ಅವರು 100 ಕೋಟಿ ರೂ. ಸಂಭಾವನೆ ತೆಗೆದುಕೊಂಡಿರುವುದು ಸತ್ಯವೇ ಎಂದು ಪ್ರಶ್ನಿಸಿದಾಗ, “ಬಾಹುಬಲಿ ಬಾರ್ ಅನ್ನು ಹೆಚ್ಚು ಎತ್ತರಕ್ಕೆ ಇಟ್ಟಿದೆ, ಆದರೆ ಸಾಹೋ 250 ಕೋಟಿ ರೂ. ಚಿತ್ರ, ಆದ್ದರಿಂದ ಅಷ್ಟು ಸಂಭಾವನೆ ಸಾಧ್ಯವಿಲ್ಲ ಎಂದು ನನಗೆ ತಿಳಿದಿದೆ. ನನ್ನ ಸಾಮಾನ್ಯ ಸಂಭಾವನೆಯ ಶೇಕಡಾ 20 ರಷ್ಟು ಕಡಿತಗೊಳಿಸಿದ್ದೇನೆ. ನಂತರ, ಚಲನಚಿತ್ರವು ಹಿಟ್ ಆಗಲಿದೆ ಎಂದು ಭಾವಿಸಿ, ನನ್ನ ಸ್ನೇಹಿತರು ಪಾವತಿಸಲು ಸಿದ್ಧರಾಗಿದ್ದರೂ ಅವರು ಏನು ಗಳಿಸುತ್ತಾರೆ ಎಂದು ಯೋಚಿಸದೆ ಅವರು ತುಂಬಾ ಹಣವನ್ನು ಹಾಕುತ್ತಿದ್ದಾರೆಂದು ತಿಳಿದು ಅವರ ಹಣವನ್ನು ತೆಗೆದುಕೊಳ್ಳಲು ನನಗೆ ಸಾಧ್ಯವಿಲ್ಲ ಎಂದರು”

ಹೌದು... ನಟ, ವಾಸ್ತವವಾಗಿ, ತಮ್ಮ ಸಾಮಾನ್ಯ ವೇತನಕ್ಕಿಂತ ಸುಮಾರು 20% ವೇತನ ಕಡಿತಗೊಳಿಸಿದ್ದಾರೆ.

'ಸಾಹೋ' ಚಿತ್ರವನ್ನು ಸುಜೀತ್ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ವಿ ವಂಶಿ ಕೃಷ್ಣ ರೆಡ್ಡಿ, ಪ್ರಮೋದ್ ಉಪ್ಪಲಪತಿ ಮತ್ತು ಭೂಷಣ್ ಕುಮಾರ್ ನಿರ್ಮಿಸಿದ್ದಾರೆ. ಈ ಚಿತ್ರವನ್ನು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಣ ಮಾಡಲಾಯಿತು.

ದೊಡ್ಡ ಬಜೆಟ್ ಆಕ್ಷನ್ ನಟರಾದ ಜಾಕಿ ಶ್ರಾಫ್, ನೀಲ್ ನಿತಿನ್ ಮುಖೇಶ್, ವೆನ್ನೆಲಾ ಕಿಶೋರ್, ಮುರುಳಿ ಶರ್ಮಾ, ಅರುಣ್ ವಿಜಯ್, ಪ್ರಕಾಶ್ ಬೆಲವಾಡಿ, ಎವೆಲಿನ್ ಶರ್ಮಾ ಮತ್ತು ಚಂಕಿ ಪಾಂಡೆ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದು ಆಗಸ್ಟ್ 30, 2019 ರಂದು ತೆರೆಗೆ ಬರಲಿದೆ. ಇದು ಪ್ರಭಾಸ್ ಮತ್ತು ಶ್ರದ್ಧಾ ಕಪೂರ್ ಅವರ ಹೊಸ ಆನ್-ಸ್ಕ್ರೀನ್ ಜೋಡಿಯನ್ನು 70 ಎಂಎಂ ಪರದೆ ಮೇಲೆ ತರುತ್ತಿದೆ.