ನನಗೆ ಡೋಂಗಿ million followers ಸಂಖ್ಯೆ ಬೇಕಿಲ್ಲ! ಬೇಕಿರುವುದು ಪ್ರೀತಿಯ ಆತ್ಮಗಳು: ಜಗ್ಗೇಶ್

ನನಗೆ ನನಗೆ ಡೋಂಗಿ  million followers ಸಂಖ್ಯೆ ಬೇಕಿಲ್ಲಾ! ಬೇಕಿರುವುದು ಪ್ರೀತಿಯ ಆತ್ಮಗಳು ಎಂದು ಜಗ್ಗೇಶ್ ನುಡಿದಿದ್ದಾರೆ.

Last Updated : Feb 20, 2019, 10:40 AM IST
ನನಗೆ ಡೋಂಗಿ million followers ಸಂಖ್ಯೆ ಬೇಕಿಲ್ಲ! ಬೇಕಿರುವುದು ಪ್ರೀತಿಯ ಆತ್ಮಗಳು: ಜಗ್ಗೇಶ್ title=

ಬೆಂಗಳೂರು: ಟ್ವಿಟ್ಟರ್ ಖಾತೆಯ ನಕಲಿ ಫಾಲೋವರ್'ಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನವರಸನಾಯಕ ಜಗ್ಗೇಶ್, ನನಗೆ ನನಗೆ ಡೋಂಗಿ  million followers ಸಂಖ್ಯೆ ಬೇಕಿಲ್ಲಾ! ಬೇಕಿರುವುದು ಪ್ರೀತಿಯ ಆತ್ಮಗಳು ಎಂದು ನುಡಿದಿದ್ದಾರೆ.

ಇತ್ತೀಚೆಗೆ ತಮ್ಮ ಟ್ವಿಟ್ಟರ್ ಖಾತೆಯನ್ನು ಫಾಲೋ ಮಾಡುತ್ತಿರುವ ಕೆಲವರು ಜಗ್ಗೇಶ್ ಅವರ ಪ್ರತಿಯೊಂದು ಪೋಸ್ಟ್ ಬಗ್ಗೆಯೂ ಕುಹುಕದ ಮಾತುಗಳು ಮತ್ತು ವ್ಯರ್ಥ ಚರ್ಚೆ ಮಾಡುತ್ತಿರುವ ಬಗ್ಗೆ ಅಸಮಾಧಾನಗೊಂಡಿರುವ ಜಗ್ಗೇಶ್ ಈ ಬಗ್ಗೆ ಸರಣಿ ಟ್ವೀಟ್ ಮಾಡಿದ್ದಾರೆ. 

ನಾನು 2014ರಿಂದ ಸಾಮಾಜಿಕ ಜಾಲತಾಣ ಬಳಸುತ್ತಿರುವೆ. ಇಲ್ಲಿ ನನ್ನ ಉದ್ದೇಶ ಕೇವಲ ಪ್ರೀತಿಯ ಅನ್ವೇಷಣೆ. ರಾಯರ ದಯೆಯಿಂದ 4.8k ಫಾಲೋವರ್'ಗಳು ದೊರೆತಿದ್ದಾರೆ. ಆದರೆ ಇವರ ಮಧ್ಯೆ ಯಾರೋ ನಕಲಿ ಫಾಲೋವರ್'ಗಳು ಸೇರಿ ಪ್ರತಿ ಟ್ವೀಟ್'ಗೆ ಅಪಹಾಸ್ಯ ಮಾಡುತ್ತಾ, ಕಾಲಹರಣಕ್ಕಾಗಿ ಬಳಸುತ್ತಿದ್ದಾರೆ. ಹಾಗಾಗಿ ಈ ಟೈಮ್ ಪಾಸ್ಗಳಿಂದ ದೂರ ಉಳಿಯಲು mute!block ಬಳಸುವುದಾಗಿ ಜಗ್ಗೇಶ್ ಮನನೊಂದು ಹೇಳಿದ್ದಾರೆ. 

ಮುಂದುವರೆದು, ನನಗೆ ಭಾವನೆಗಳಿಗೆ ಬೆಲೆ ಕೊಡುವವರು ಮುಖ್ಯ. ಭಾವನೆಗೆ ಬೇಕಿರುವುದು ಪ್ರೀತಿಯ ಆತ್ಮಗಳು. ಅವು ನೂರಿದ್ದರೂ ಸಾಕು, ಕೋಟಿಯ ಅಗತ್ಯವಿಲ್ಲ. ದುಡ್ಡು ಕೊಟ್ಟರೆ ಏನಾದರೂ ಸಿಗಬಹುದು. ಆದರೆ ಪ್ರೀತಿ ಸಿಗುವುದಿಲ್ಲ. ಹಾಗಾಗಿ ನನಗೆ ಬೇಕಿರುವುದು ಪ್ರೀತಿ ಮಾತ್ರ. ಒಂದು ವೇಳೆ ನನ್ನ ಫಾಲೋವರ್'ಗಳಿಗೆ ಪ್ರೀತಿ ಬಿಟ್ಟು ಬೇರೆ ಏನಾದರೂ ಬೇಕಿದ್ದರೆ ನನ್ನ ಹಿಂಬಾಲಿಸುವುದು ವ್ಯರ್ಥ, ವ್ಯರ್ಥ ಚರ್ಚೆಗೆ ಬೇರೆ ಜಾಗ ಹುಡುಕಿ ಎಂದು ಜಗ್ಗೇಶ್ ಹೇಳಿದ್ದಾರೆ. 
 

Trending News