Jailer Collections: ಜೈಲರ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಬಾಕ್ಸ್ ಆಫೀಸ್ ನಲ್ಲಿ ತಲೈವಾ ಹವಾ!

Rajinikanth Jailer Day 1 Collections: ಜೈಲರ್ ಸಿನಿಮಾ ಮೊದಲ ದಿನ ಬಾಕ್ಸ್ ಆಫೀಸ್ ನಲ್ಲಿ ಹಣದ ಸುರಿಮಳೆಗೈದಿದೆ. ವಿಶ್ವಾದ್ಯಂತ ರೂ.95.78 ಕೋಟಿ ಕಲೆಕ್ಷನ್ ಮಾಡಿದೆ. ಜೈಲರ್ ಭರ್ಜರಿ ಕಲೆಕ್ಷನ್ ನತ್ತ ಮುನ್ನುಗ್ಗುತ್ತಿರುವಂತೆಯೇ ತಲೈವಾ ಈಸ್ ಬ್ಯಾಕ್ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.  

Written by - Chetana Devarmani | Last Updated : Aug 11, 2023, 06:14 PM IST
  • ರಜನಿಕಾಂತ್‌ ಅಭಿನಯದ ಜೈಲರ್‌ ಸಿನಿಮಾ
  • ಜೈಲರ್ ಸಿನಿಮಾ ಮೊದಲ ದಿನದ ಕಲೆಕ್ಷನ್
  • ತಲೈವಾ ಈಸ್ ಬ್ಯಾಕ್ ಎಂದ ಅಭಿಮಾನಿಗಳು
Jailer Collections: ಜೈಲರ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಬಾಕ್ಸ್ ಆಫೀಸ್ ನಲ್ಲಿ ತಲೈವಾ ಹವಾ!  title=

Jailer Day 1 Collections: ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಜೈಲರ್' ಸಿನಿಮಾ ಬಾಕ್ಸ್ ಆಫೀಸ್ ಅಲ್ಲಾಡಿಸಿದೆ. ತಲೈವಾ ಚಿತ್ರಕ್ಕೆ ಪಾಸಿಟಿವ್ ಟಾಕ್ ಬಂದರೆ ಚಿತ್ರಮಂದಿರಗಳು ಗಿಜಿಗುಡುತ್ತವೆ. ಜೈಲರ್ ಸಿನಿಮಾ ಹಿಟ್ ಟಾಕ್ ಆಗಿದೆ. ಮೊದಲ ದಿನ ವಿಶ್ವಾದ್ಯಂತ ರೂ.95.78 ಕೋಟಿ ಕಲೆಕ್ಷನ್ ಮಾಡಿದೆ ಎಂದು ಚಿತ್ರ ಮೂಲಗಳು ತಿಳಿಸಿವೆ. ತಮಿಳುನಾಡಿನಲ್ಲಿ 29.46 ಕೋಟಿ, ತೆಲುಗು ರಾಜ್ಯಗಳಲ್ಲಿ 12.04 ಕೋಟಿ, ಕರ್ನಾಟಕದಲ್ಲಿ 11.92 ಕೋಟಿ, ರೂ. 32.75 ಕೋಟಿ ಸಂಗ್ರಹವಾಗಿದೆ. ಸತತ ರಜಾ ದಿನಗಳಿಂದ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ.

ಇದನ್ನೂ ಓದಿ: ಟ್ರೇಲರ್ ನಲ್ಲೇ ಗಮನ ಸೆಳೆದ "ಕ್ಷೇತ್ರಪತಿ", ಆಗಸ್ಟ್ 18 ರಂದು ತೆರೆಗೆ 

ತೆಲುಗು ರಾಜ್ಯಗಳಲ್ಲಿ ಜೈಲರ್ ಚಿತ್ರದ ಕಲೆಕ್ಷನ್ ಹೆಚ್ಚಾಗುವ ಸಾಧ್ಯತೆ ಇದೆ. ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಭೋಲಾ ಶಂಕರ್ ಸಿನಿಮಾ ಇಂದು ಬಿಡುಗಡೆಯಾಗಿದ್ದು ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದರೊಂದಿಗೆ ಹೆಚ್ಚಿನ ಪ್ರೇಕ್ಷಕರು ಜೈಲರ್ ಚಿತ್ರವನ್ನು ವೀಕ್ಷಿಸುವ ಸಾಧ್ಯತೆ ಇದೆ. ಸತತ ರಜೆ ಹಿನ್ನೆಲೆಯಲ್ಲಿ ಪ್ರೇಕ್ಷಕರು ಥಿಯೇಟರ್‌ಗಳಲ್ಲಿ ಸಾಲುಗಟ್ಟಿ ನಿಲ್ಲುವ ಸಾಧ್ಯತೆ ಇದೆ. ತಲೈವಾ ಬಾಕ್ಸ್ ಆಫೀಸ್‌ನಲ್ಲಿ ಕಲೆಕ್ಷನ್ ಮಾಡಿ ಬಹಳ ದಿನಗಳೇ ಕಳೆದಿವೆ, ಆದರೆ ಜೈಲರ್ ಎಲ್ಲಾ ದಾಖಲೆಗಳನ್ನು ಮುರಿಯಲಿದೆ ಎಂದು ವ್ಯಾಪಾರ ಮೂಲಗಳು ಭವಿಷ್ಯ ನುಡಿದಿವೆ. ತಮಿಳಿನ ಜೊತೆಗೆ ತೆಲುಗಿನಲ್ಲೂ ಕಲೆಕ್ಷನ್ ಬರುತ್ತಿರುವುದನ್ನು ನೋಡಿದರೆ ಸೂಪರ್ ಸ್ಟಾರ್ ಸ್ಟಾಮಿನಾ ಅರ್ಥವಾಗುತ್ತದೆ.

ದೇಶದಾದ್ಯಂತ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಹ್ಯಾಟ್ರಿಕ್ ಹೀರೋ ಡಾ ಶಿವರಾಜ್‌ಕುಮಾರ್ ನಟನೆಯ ಜೈಲರ್ ಸಿನಿಮಾ ಸಿಕ್ಕಾಪಟ್ಟೆ ಕ್ರೇಜ್‌ ಕ್ರಿಯೇಟ್‌ ಮಾಡಿದೆ. ರಜನಿ ಅಭಿಮಾನಿಗಳು ಸಿನಿಮಾ ನೋಡಿ ಕಣ್ತುಂಬಿಕೊಂಡಿದ್ದಾರೆ. ಡೈರೆಕ್ಟರ್ ನೆಲ್ಸನ್ ದಿಲೀಪ್‌ಕುಮಾರ್ ಕೆಲಸ ನೋಡಿ ವೀಕ್ಷಕರು ಫಿದಾ ಆಗಿದ್ದಾರೆ.

ಇದನ್ನೂ ಓದಿ: ಈ ಚಿತ್ರಕ್ಕಾಗಿ ಶ್ರೀದೇವಿ ರಜನಿಕಾಂತ್‌ಗಿಂತ ಹೆಚ್ಚು ಸಂಭಾವಣೆ ಪಡೆದಿದ್ದರಂತೆ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News