ಮಾರ್ಚ್ 7 ರಂದು ತೆರೆ ಕಾಣಲಿದೆ ಟ್ರೇಲರ್ ನಲ್ಲೇ ಮೋಡಿ ಮಾಡಿರುವ "ಜೋಗ್ 101"

ನನ್ನ ಚಿತ್ರಗಳಲ್ಲಿ ಒಂದೆರೆಡು ಹಿಟ್ ಹಾಡುಗಳು ಇರುತ್ತಿದ್ದವು. ಆದರೆ ಇತ್ತೀಚಿನ ನನ್ನ ಸಿನಿಮಾಗಳಲ್ಲಿ ಅಂತಹ ಹಿಟ್ ಹಾಡುಗಳು ಯಾವುದು ಇರಲಿಲ್ಲ. "ಜೋಗ್ 101" ಚಿತ್ರದ ಹಾಡುಗಳು ಆ ಕೊರತೆಯನ್ನು ದೂರ ಮಾಡಿದೆ ಎಂದಿದ್ದಾರೆ ಚಿತ್ರದ ನಾಯಕ ಎಂದು ವಿಜಯ್ ರಾಘವೇಂದ್ರ. 

Written by - Ranjitha R K | Last Updated : Mar 4, 2024, 10:33 AM IST
  • "ಜೋಗ್ 101" ಸಸ್ಪೆನ್ಸ್ ಥ್ರಿಲ್ಲರ್ ಹಾಗೂ ಆಕ್ಷನ್ ಥ್ರಿಲ್ಲರ್ ಚಿತ್ರ.
  • ಅವಿನಾಶ್ ಆರ್ ಬಾಸೂತ್ಕರ್ ಸಂಗೀತ ನೀಡಿರುವ ಎರಡು ಹಾಡುಗಳು ಈಗಾಗಲೇ ಬಿಡುಗಡೆ
  • ಮಾರ್ಚ್ 7 ರಂದು ಬಿಡುಗಡೆ ತೆರೆ ಕಾಣಲಿದೆ ಚಿತ್ರ
ಮಾರ್ಚ್ 7 ರಂದು ತೆರೆ ಕಾಣಲಿದೆ ಟ್ರೇಲರ್ ನಲ್ಲೇ ಮೋಡಿ ಮಾಡಿರುವ "ಜೋಗ್ 101"   title=

ಬೆಂಗಳೂರು : ವಿಜಯ್ ರಾಘವೇಂದ್ರ ಅಭಿನಯದ, ವಿಜಯ್ ಕನ್ನಡಿಗ ನಿರ್ದೇಶನದ "ಜೋಗ್ 101" ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಜನಮನ್ನಣೆ ಪಡೆಯುತ್ತಿದೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರ ಮಾರ್ಚ್ 7ರಂದು ತೆರೆಗೆ ಬರಲಿದೆ.

"ಜೋಗ್ 101" ಸಸ್ಪೆನ್ಸ್ ಥ್ರಿಲ್ಲರ್ ಹಾಗೂ ಆಕ್ಷನ್ ಥ್ರಿಲ್ಲರ್ ಚಿತ್ರ. ಈ ಚಿತ್ರದಲ್ಲಿ ಲವ್, ಕಾಮಿಡಿ ಸೇರಿದಂತೆ ಎಲ್ಲಾ ಅಂಶಗಳು ಇದೆ. ಅವಿನಾಶ್ ಆರ್ ಬಾಸೂತ್ಕರ್ ಸಂಗೀತ ನೀಡಿರುವ ಎರಡು ಹಾಡುಗಳು ಈಗಾಗಲೇ ಬಿಡುಗಡೆಯಾಗಿದೆ. ಈ ಹಾಡುಗಳು ಜನ ಮೆಚ್ಚುಗೆ ಕೂಡಾ ಗಳಿಸಿದೆ. ನನ್ನ ಚಿತ್ರಗಳಲ್ಲಿ ಒಂದೆರೆಡು ಹಿಟ್ ಹಾಡುಗಳು ಇರುತ್ತಿದ್ದವು. ಆದರೆ ಇತ್ತೀಚಿನ ನನ್ನ ಸಿನಿಮಾಗಳಲ್ಲಿ ಅಂತಹ ಹಿಟ್ ಹಾಡುಗಳು ಯಾವುದು ಇರಲಿಲ್ಲ. "ಜೋಗ್ 101" ಚಿತ್ರದ ಹಾಡುಗಳು ಆ ಕೊರತೆಯನ್ನು ದೂರ ಮಾಡಿದೆ ಎಂದಿದ್ದಾರೆ ಚಿತ್ರದ ನಾಯಕ ಎಂದು ವಿಜಯ್ ರಾಘವೇಂದ್ರ. 

ಇದನ್ನೂ ಓದಿ : Rajanikanth: ಬಡಜನರಿಗಾಗಿ ಆಸ್ಪತ್ರೆ ನಿರ್ಮಾಣ ಮಾಡಲು 12 ಎಕರೆ ಭೂಮಿ ಖರೀದಿಸಿದ ತಲೈವಾ!

ಈ ಚಿತ್ರದ ಕಥೆ ಬರೆದು ನಿರ್ಮಾಪಕರ ಹತ್ತಿರ ಹೋದಾಗ ಕಥೆ ಮೆಚ್ಚಿಕೊಂಡು ಚಿತ್ರ ನಿರ್ಮಾಣಕ್ಕೆ ಮುಂದಾದರು. ಈ ಚಿತ್ರದ ಕಥೆಗೆ ವಿಜಯ್ ರಾಘವೇಂದ್ರ ಅವರೆ ಸೂಕ್ತ ಎಂದು ಅಂದುಕೊಂಡಿದ್ದೆವು. ವಿಜಯ್ ರಾಘವೇಂದ್ರ ಅವರು ಕಥೆ ಕೇಳಿ ನಟಿಸಲು ಒಪ್ಪಿಕೊಂಡರು. ಚಿತ್ರ ಇದೇ 7 ನೇ ತಾರೀಖು ಬಿಡುಗಡೆಯಾಗುತ್ತಿದೆ ಎಂದು ನಿರ್ದೇಶಕ ವಿಜಯ್ ಕನ್ನಡಿಗ ತಿಳಿಸಿದರು.

ಇದು ನನ್ನ ನಿರ್ಮಾಣದ ಮೊದಲ ಚಿತ್ರ. ಚಿತ್ರತಂಡದ ಸಹಕಾರದಿಂದ "ಜೋಗ್ 101"  ಚೆನ್ನಾಗಿ ಮೂಡಿಬಂದಿದೆ. ಮಾರ್ಚ್‌ 7 ರಂದು ತೆರೆಗೆ ಬರುತ್ತಿರುವ ನಮ್ಮ ಚಿತ್ರವನ್ನು ಎಲ್ಲರೂ ನೋಡಿ ಯಶಸ್ವಿ ಮಾಡಿ ಎಂದರು ನಿರ್ಮಾಪಕ ರಾಘು.

ಇದನ್ನೂ ಓದಿ : Rashmika Mandanna : ಜಪಾನ್ ನಲ್ಲಿ ನ್ಯಾಷನಲ್ ಕ್ರಶ್ : ಫೋಟೋಸ್ ಇಲ್ಲಿವೆ

ಮೋಹನ್ ರಂಗಕಹಳೆ ಸಂಕಲನ ಹಾಗೂ ಥ್ರಿಲ್ಲರ್ ಮಂಜು ಅವರ ಸಾಹಸ  ಈ ಚಿತ್ರಕ್ಕಿದೆ. ವಿಜಯ ರಾಘವೇಂದ್ರ ಅವರಿಗೆ ನಾಯಕಿಯಾಗಿ ತೇಜಸ್ವಿನಿ ಶೇಖರ್ ನಟಿಸಿದ್ದಾರೆ. ಗೋವಿಂದೇ ಗೌಡ, ಕಡಿಪುಡಿ ಚಂದ್ರು, ರಾಜೇಶ್ ನಟರಂಗ, ತಿಲಕ್, ನಿರಂಜನ್ ದೇಶಪಾಂಡೆ, ಶಶಿಧರ್, ಪ್ರಸನ್ನ, ಸುಂದರಶ್ರೀ, ಹರ್ಷಿತಾ ಗೌಡ "ಜೋಗ್ 101" ಚಿತ್ರದ ತಾರಾಬಳಗದಲ್ಲಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News