ಜೂನಿಯರ್ ಎನ್‌ಟಿಆರ್ ಅವರ ಈ ದಾಖಲೆ ಎಲ್ಲರ ಹುಬ್ಬೇರಿಸುತ್ತದೆ!

Jr. NTR Remuneration : ಬಾಲಿವುಡ್‌ನ ಅತ್ಯಂತ ದುಬಾರಿ ತಾರೆಗಳೆಂದರೆ ಮೂವರು ಖಾನ್‌ಗಳು ಬಿಟ್ಟರೆ ಅಕ್ಷಯ್ ಕುಮಾರ್ ಮತ್ತು ಹೃತಿಕ್ ರೋಷನ್. ಆದರೆ ದಕ್ಷಿಣದಿಂದ ಬಾಲಿವುಡ್‌ಗೆ ಹಾರಿದ ಜೂನಿಯರ್ ಎನ್‌ಟಿಆರ್‌ ಸಂಭಾವನೆ ಎಲ್ಲರ ಹುಬ್ಬೇರಿಸುವಂತಿದೆ.    

Written by - Chetana Devarmani | Last Updated : Sep 8, 2023, 04:34 PM IST
  • ಜೂನಿಯರ್ ಎನ್‌ಟಿಆರ್ ಬಾಲಿವುಡ್‌ ಎಂಟ್ರಿ
  • ದಕ್ಷಿಣದಿಂದ ಬಾಲಿವುಡ್‌ಗೆ ಹಾರಿದ ಜೂ.ಎನ್‌ಟಿಆರ್‌
  • ಎಲ್ಲರ ಹುಬ್ಬೇರಿಸುವಂತಿದೆ ಸಂಭಾವನೆ
ಜೂನಿಯರ್ ಎನ್‌ಟಿಆರ್ ಅವರ ಈ ದಾಖಲೆ ಎಲ್ಲರ ಹುಬ್ಬೇರಿಸುತ್ತದೆ!  title=
ಜೂನಿಯರ್ ಎನ್‌ಟಿಆರ್

Jr. NTR Remuneration For War 2 : ಆರ್‌ಆರ್‌ಆರ್‌ನ ಬ್ಲಾಕ್‌ಬಸ್ಟರ್ ಯಶಸ್ಸಿನೊಂದಿಗೆ ಪ್ಯಾನ್-ಇಂಡಿಯಾ ಸ್ಟಾರ್ ಆಗಿರುವ ಜೂನಿಯರ್ ಎನ್‌ಟಿಆರ್ ಈಗ ತಮ್ಮ ಬಾಲಿವುಡ್ ಚೊಚ್ಚಲ ಸಿನಿಮಾಗೆ ತಯಾರಿ ನಡೆಸುತ್ತಿದ್ದಾರೆ. ವಾರ್ 2 ನಲ್ಲಿ ಹೃತಿಕ್ ರೋಷನ್ ಜೊತೆ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಸುದ್ದಿ. ಜೂನಿಯರ್ ಎನ್‌ಟಿಆರ್ ದಕ್ಷಿಣದ ಉದ್ಯಮದ ಅತ್ಯಂತ ದುಬಾರಿ ತಾರೆಗಳಲ್ಲಿ ಒಬ್ಬರು. ಆದರೆ ಅವರು ಬಾಲಿವುಡ್‌ನಲ್ಲಿ ವಿಶಿಷ್ಟ ದಾಖಲೆಯನ್ನು ಮಾಡಲಿದ್ದಾರೆ. ಅವರ ಮೊದಲ ಹಿಂದಿ ಚಿತ್ರಕ್ಕೆ ಅವರು ಪಡೆಯುತ್ತಿರುವ ಶುಲ್ಕ ಇಂದು ಬಾಲಿವುಡ್‌ನಲ್ಲಿ ವರ್ಷಗಟ್ಟಲೆ ದುಡಿದ ಸ್ಟಾರ್‌ಗಳಿಗೂ ಸಿಕ್ಕಿಲ್ಲ. ಜೂನಿಯರ್ ಎನ್‌ಟಿಆರ್ ತಮ್ಮ ಬಾಲಿವುಡ್ ಚೊಚ್ಚಲ ಪ್ರವೇಶಕ್ಕೆ ಎಷ್ಟು ಶುಲ್ಕ ವಿಧಿಸುತ್ತಿದ್ದಾರೆ ಎಂದು ತಿಳಿದರೆ ನೀವು ಆಶ್ಚರ್ಯ ಪಡುತ್ತೀರಿ. ಈ ಚಿತ್ರವನ್ನು ಯಶ್ ರಾಜ್ ಫಿಲಂಸ್ ನಿರ್ಮಿಸುತ್ತಿದೆ.

ಜೂನಿಯರ್ ಎನ್‌ಟಿಆರ್ ಅವರ ಈ ವಾರ್ 2 ಚಿತ್ರಕ್ಕೆ ಸುಮಾರು ಐವತ್ತು ಕೋಟಿ ರೂಪಾಯಿಗಳ ಸಂಭಾವನೆ ಬರಲಿದೆ ಎಂಬುದು ಮುಂಬೈನ ಫಿಲ್ಮ್ ಸರ್ಕಲ್‌ನಲ್ಲಿ ಕೇಳಿಬರುತ್ತಿರುವ ಸುದ್ದಿ. ಯಶ್ ರಾಜ್ ಫಿಲ್ಮ್ಸ್ ಜೂನಿಯರ್ ಎನ್‌ಟಿಆರ್ ಅವರ ಶುಲ್ಕದ ಷರತ್ತಿಗೆ ತನ್ನ ಅನುಮೋದನೆಯನ್ನು ನೀಡಿದೆ. ವಾರ್ 2 ರಲ್ಲಿ ಜೂನಿಯರ್ ಎನ್‌ಟಿಆರ್ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ: ಮಾಸ್‌ ಅವರತಾರದಲ್ಲಿ ಚಾಕೋಲೆಟ್‌ ಹಿರೋ...'ಅಗ್ನಿಸಾಕ್ಷಿ' ವಿಜಯ್ ಸೂರ್ಯ ಈಗ ʼವೀರಪುತ್ರʼ

ವಾರ್ 2 ನಲ್ಲಿ ಜೂನಿಯರ್ ಎನ್‌ಟಿಆರ್ ಪಾತ್ರ ತುಂಬಾ ನಿಗೂಢವಾಗಿರುತ್ತದೆ ಎಂದು ಹೇಳಲಾಗುತ್ತಿದೆ. ಚಿತ್ರದ ನಿರ್ದೇಶಕ ಅಯಾನ್ ಮುಖರ್ಜಿ ಇತ್ತೀಚೆಗೆ ಜೂನಿಯರ್ ಎನ್‌ಟಿಆರ್ ಅವರನ್ನು ಭೇಟಿ ಮಾಡಿ ಚಿತ್ರದ ಬಗ್ಗೆ ಮತ್ತು ಅವರ ಪಾತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ವರದಿಗಳಿವೆ. ಅಯಾನ್ ಮುಖರ್ಜಿ ಅವರನ್ನು ಹೈದರಾಬಾದ್‌ನಲ್ಲಿ ಭೇಟಿಯಾದರು. ಈ ನಡುವೆ ಬಾಲಿವುಡ್‌ನ ಕೆಲವು ನಿರ್ಮಾಪಕರು ಕೂಡ ತಮ್ಮ ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್ ಅವರನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂಬ ಸುದ್ದಿ ಇದೆ. 

ಇತ್ತೀಚೆಗಷ್ಟೇ ಗದರ್ 2 ಚಿತ್ರದ ನಿರ್ದೇಶಕ ಅನಿಲ್ ಶರ್ಮಾ ಒಂದು ಕುತೂಹಲಕಾರಿ ವಿಷಯ ಹೇಳಿದ್ದಾರೆ. ತಾರಾ ಸಿಂಗ್ ಪಾತ್ರದಲ್ಲಿ ಸನ್ನಿ ಡಿಯೋಲ್ ಬದಲಿಗೆ ಬಾಲಿವುಡ್ ತಾರೆ ಯಾರಾದರೂ ಇರಬಹುದೇ ಎಂದು ಅವರನ್ನು ಕೇಳಲಾಯಿತು. ಈ ಬಗ್ಗೆ ಅನಿಲ್ ಶರ್ಮಾ ಅವರು ಬಾಲಿವುಡ್‌ನಲ್ಲಿ ಅಂತಹ ವ್ಯಕ್ತಿ ಇಲ್ಲ ಎಂದು ಹೇಳಿದ್ದಾರೆ. ಆದರೆ ದಕ್ಷಿಣದಲ್ಲಿ ಈ ಪಾತ್ರಕ್ಕೆ ಜೂನಿಯರ್ ಎನ್ ಟಿಆರ್ ಖಂಡಿತಾ ಹೊಂದುತ್ತಾರೆ ಎಂದಿದ್ದಾರೆ.

ಇದನ್ನೂ ಓದಿ: ನಟಿ ಮಹಾಲಕ್ಷ್ಮಿ ಪತಿ ರವೀಂದರ್ ಚಂದ್ರಶೇಖರನ್ ಬಂಧನ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

Trending News