ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಜೂನಿಯರ್ ಮೆಹಮೂದ್ ವಿಧಿವಶ!

Junior Mehmood: ಹಿಂದಿ ಚಿತ್ರರಂಗದ ಪೋಷಕ ನಟ ಜೂನಿಯರ್ ಮೆಹಮೂದ್, ಹಲವು ದಿನಗಳಿಂದ 4ನೇ ಹಂತದ ಕ್ಯಾನ್ಸರ್‌ ವಿರುದ್ಧ ಮೆಹಮೂದ್ ಹೋರಾಡುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಕಳೆದ ರಾತ್ರಿ ಮುಂಬೈನಲ್ಲಿ ಕೊನೆಯುಸಿರೆಳೆದರು.

Written by - Zee Kannada News Desk | Last Updated : Dec 8, 2023, 11:01 AM IST
  • ಹಿರಿಯ ನಟ ಜೂನಿಯರ್ ಮೆಹಮೂದ್‌ಗೆ ಕ್ಯಾನ್ಸರ್ ಇದೆ ಎಂದು ಕಳೆದ ತಿಂಗಳ ನವೆಂಬರ್‌ನಲ್ಲಿ ಪತ್ತೆಯಾಗಿದೆ.
  • ಹಲವು ದಿನಗಳಿಂದ 4ನೇ ಹಂತದ ಕ್ಯಾನ್ಸರ್‌ ವಿರುದ್ಧ ಮೆಹಮೂದ್ ಹೋರಾಡುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಕಳೆದ ರಾತ್ರಿ ಮುಂಬೈನಲ್ಲಿ ನಿಧನರಾಗಿದ್ದಾರೆ.
  • ಜೂನಿಯರ್ ಮೆಹಮೂದ್ ಬಾಲ ಕಲಾವಿದರಾಗಿ ಸಿನಿಮಾಗಳಿಗೆ ಪಾದಾರ್ಪಣೆ ಮಾಡಿದವರು ಮತ್ತು ನಂತರ ಮರಾಠಿ ಚಲನಚಿತ್ರಗಳನ್ನು ನಿರ್ದೇಶಿಸಿದರು.
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಜೂನಿಯರ್ ಮೆಹಮೂದ್ ವಿಧಿವಶ! title=

Junior Mehmood Passes Away: ಚಿತ್ರರಂಗದಲ್ಲಿ ಸರಣಿ ಸಾವಿನ ಸರಮಾಲೆ ಮುಂದುವರೆದಿದ್ದು, ಇದೀಗ ಬಾಲಿವುಡ್ ಪೋಷಕ ನಟ ಜೂನಿಯರ್ ಮೆಹಮೂದ್ ಮಾರಕ ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ. ಹಿರಿಯ ನಟ ಜೂನಿಯರ್ ಮೆಹಮೂದ್‌ಗೆ ಕ್ಯಾನ್ಸರ್ ಇದೆ ಎಂದು ಕಳೆದ ತಿಂಗಳ ನವೆಂಬರ್‌ನಲ್ಲಿ ಪತ್ತೆಯಾಗಿದ್ದು, ಕಳೆದ 15 ವರ್ಷಗಳಿಂದ ನಟನ ಜೊತೆಗಿರುವ  ಆಪ್ತ ಸ್ನೇಹಿತ ಸಲಾಮ್ ಕಾಜಿ, ಜೂನಿಯರ್ ಮೆಹಮೂದ್ ತನ್ನ ಕುಟುಂಬದೊಂದಿಗೆ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು . 

ಜೂನಿಯರ್ ಮೆಹಮೂದ್ ಆಪ್ತ ಸ್ನೇಹಿತ ಸಲಾಮ್ ಕಾಜಿ, "ಕ್ಯಾನ್ಸರ್ ಇದೆ ಎಂಬುದು ಕೇವಲ ಒಂದು ತಿಂಗಳ ಹಿಂದೆ ತಿಳಿದು ಬಂತು. ಅವರು ಕ್ಯಾನ್ಸರ್ ನಾಲ್ಕನೇ ಹಂತದಲ್ಲಿದ್ದಾರೆ. ಕ್ಯಾನ್ಸರ್ ಅವರ ಶ್ವಾಸಕೋಶಗಳು ಮತ್ತು ದೇಹದ ಇತರ ಭಾಗಗಳ ಮೇಲೆ ಪರಿಣಾಮ ಬೀರಿದೆ. ಕೇವಲ 40 ದಿನಗಳು ಮಾತ್ರ ಉಳಿಯುತ್ತಾರೆ ಎಂದು ವೈದ್ಯರು ನಮಗೆ ಹೇಳಿದ್ದಾರೆ. ಆದರೆ ನಾವೆಲ್ಲರೂ ಅವರಿಗಾಗಿ ಪ್ರಾರ್ಥಿಸುತ್ತಿದ್ದೇವೆ" ಎಂದಿದ್ದಾರೆ. ಅದೇ ಸಂದರ್ಭದಲ್ಲಿ ಜೀತೇಂದ್ರ, ಸಚಿನ್ ಪಿಲ್ಗಾಂವ್ಕರ್, ಜಾನಿ ಲೀವರ್ ಸೇರಿದಂತೆ ಚಿತ್ರರಂಗದ ಗಣ್ಯರು ಇತ್ತೀಚೆಗೆ ಜೂನಿಯರ್ ಮೆಹಮೂದ್ ಆರೋಗ್ಯ ವಿಚಾರಿಸಿದ್ದರು. 

ಇದನ್ನೂ ಓದಿ: ಕ್ಯಾನ್ಸರ್‌ನಿಂದ ಬಳಲುತ್ತಿರುವ ಜೂನಿಯರ್ ಮೆಹಮೂದ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿರುವ ಜಾನಿ ಲಿವರ್ ವೀಡಿಯೊ ವೈರಲ್!

ಹಲವು ದಿನಗಳಿಂದ 4ನೇ ಹಂತದ ಕ್ಯಾನ್ಸರ್‌ ವಿರುದ್ಧ ಮೆಹಮೂದ್ ಹೋರಾಡುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಕಳೆದ ರಾತ್ರಿ ಮುಂಬೈನಲ್ಲಿ ನಿಧನರಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿದ್ದು, 5 ದಶಕಗಳಿಂದ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದ ಮೆಹಮೂದ್ 250ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. ಕಳೆದ ರಾತ್ರಿ ಮೆಹಮೂದ್ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ತಮ್ಮ ಸ್ವಗೃಹದಲ್ಲೇ ಕೊನೆಯುಸಿರೆಳೆದಿದ್ದಾರೆ. ಮೆಹಮೂದ್ ಕಿರಿಯ ಪುತ್ರ ಹಸ್ನೈನ್ ಮಾತನಾಡಿ "ನಮ್ಮ ತಂದೆ ಹೊಟ್ಟೆಯ ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿದ್ದರು. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಕೊನೆಯುಸಿರೆಳೆದರು. ಕಳೆದ 17 ದಿನಗಳಿಂದ ಅವರ ಆರೋಗ್ಯ ಸ್ಥಿತಿ ಬಹಳ ಗಂಭೀರವಾಗಿತ್ತು. ಒಂದು ತಿಂಗಳಲ್ಲಿ 35-40 ಕೆಜಿ ತೂಕ ಕಳೆದುಕೊಂಡಿದ್ದರು" ಮಾಹಿತಿ ನೀಡಿದ್ದಾರೆ.

ಜೂನಿಯರ್ ಮೆಹಮೂದ್ ಬಾಲ ಕಲಾವಿದರಾಗಿ ಸಿನಿಮಾಗಳಿಗೆ ಪಾದಾರ್ಪಣೆ ಮಾಡಿದವರು ಮತ್ತು ನಂತರ ಮರಾಠಿ ಚಲನಚಿತ್ರಗಳನ್ನು ನಿರ್ದೇಶಿಸಿದರು. ಈ ನಟ ಬ್ರಹ್ಮಚಾರಿ (1968), ಮೇರಾ ನಾಮ್ ಜೋಕರ್ (1970), ಪರ್ವರೀಶ್ (1977), ಮತ್ತು ದೋ ಔರ್ ದೋ ಪಾಂಚ್ (1980) ನಂತಹ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು, ಲೆಜೆಂಡರಿ ಕಾಮಿಡಿಯನ್ ಜಾನಿ ಲಿವರ್ ವೆಲ್‌ಕಮ್ ಫ್ರಾಂಚೈಸ್‌ನ ತ್ರಿಕ್ವೆಲ್ ವೆಲ್‌ಕಮ್ ಟು ದಿ ಜಂಗಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.'ಕಟಿ ಪತಂಗ್', 'ಪರ್ವರಿಶ್' ಮತ್ತು 'ದೋ ಔರ್ ದೋ ಪಾಂಚ್' ಸೇರಿದಂತೆ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು. ಬಾಲನಟನಾಗಿ ಬಾಲಿವುಡ್ ಪ್ರವೇಶಿಸಿದ ಮೆಹಮೂದ್ ಹಲವು ಹಿಟ್ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News