Ram Charan : ರಾಮ್‌ಚರಣ್‌ ಜೊತೆ ಕನ್ನಡಿಗ ಡೈರೆಕ್ಟರ್‌ ಸಿನಿಮಾ..! ಯಾರು ಆ ನಿರ್ದೇಶಕ..?

ಮೆಗಾ ಪವರ್‌ಸ್ಟಾರ್‌ ರಾಮ್ ಚರಣ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಕಾಯ್ದಿದೆ. ಕನ್ನಡದ ನಿರ್ದೇಶಕ ನರ್ತನ್ ಜೊತೆ ಚರಣ್‌ ಸಿನಿಮಾ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಈಗಾಗಲೇ ರಾಮ್ ಚರಣ್ ತಂದೆಯಾಗಲಿದ್ದಾರೆ ಎನ್ನುವ ಖುಷಿಯಲ್ಲಿರುವ ಅಭಿಮಾನಿಗಳಗೆ ಕನ್ನಡದ ಡೈರೆಕ್ಟರ್‌ ಜೊತೆ ಹೊಸ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಖುಷಿಯನ್ನು ಡಬಲ್‌ ಮಾಡಿದೆ.

Written by - Krishna N K | Last Updated : Dec 14, 2022, 06:14 PM IST
  • ಮೆಗಾ ಪವರ್‌ಸ್ಟಾರ್‌ ರಾಮ್ ಚರಣ್ ಅಭಿಮಾನಿಗಳಿಗೆ ಸಿಹಿ ಸುದ್ದಿ
  • ಕನ್ನಡದ ನಿರ್ದೇಶಕ ನರ್ತನ್ ಜೊತೆ ಸಿನಿಮಾ ಮಾಡಲಿದ್ದಾರೆ ಚರಣ್‌
  • ನರ್ತನ್‌ಗೆ ಸ್ಕ್ರಿಪ್ಟ್ ಪೂರ್ಣಗೊಳಿಸುವಂತೆ ಹೇಳಿದ್ದಾರಂತೆ ರಾಮ್ ಚರಣ್
Ram Charan : ರಾಮ್‌ಚರಣ್‌ ಜೊತೆ ಕನ್ನಡಿಗ ಡೈರೆಕ್ಟರ್‌ ಸಿನಿಮಾ..! ಯಾರು ಆ ನಿರ್ದೇಶಕ..? title=

Ram Charan UV Banner : ಮೆಗಾ ಪವರ್‌ಸ್ಟಾರ್‌ ರಾಮ್ ಚರಣ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಕಾಯ್ದಿದೆ. ಕನ್ನಡದ ನಿರ್ದೇಶಕ ನರ್ತನ್ ಜೊತೆ ಚರಣ್‌ ಸಿನಿಮಾ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಈಗಾಗಲೇ ರಾಮ್ ಚರಣ್ ತಂದೆಯಾಗಲಿದ್ದಾರೆ ಎನ್ನುವ ಖುಷಿಯಲ್ಲಿರುವ ಅಭಿಮಾನಿಗಳಗೆ ಕನ್ನಡದ ಡೈರೆಕ್ಟರ್‌ ಜೊತೆ ಹೊಸ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಖುಷಿಯನ್ನು ಡಬಲ್‌ ಮಾಡಿದೆ.

ಸದ್ಯ ರಾಮ್ ಚರಣ್ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಶಂಕರ್ ಚಿತ್ರಕ್ಕೆ ಸಂಬಂಧಿಸಿದ ಹಾಡಿನ ಚಿತ್ರೀಕರಣಕ್ಕಾಗಿ ರಾಮ್ ಚರಣ್ ಇತ್ತೀಚೆಗೆ ನ್ಯೂಜಿಲೆಂಡ್‌ಗೆ ತೆರಳಿದ್ದರು. ಗೌತಮ್ ತಿನ್ನಾನೂರಿಯೊಂದಿಗಿನ ಚಿತ್ರವನ್ನು ರದ್ದುಗೊಳಿಸಿದರು ಮತ್ತು ಬುಚ್ಚಿ ಬಾಬು ಅವರೊಂದಿಗೆ ಸಿನಿಮಾ ಮಾಡುವುದಾಗಿ ತಿಳಿಸಿದ್ದರು. ಆದರೆ ಈ ವೇಳೆ ಕನ್ನಡದ ನಿರ್ದೇಶಕ ನರ್ತನ್‌ ಅವರ ಜೊತೆ ಸಿನಿಮಾ ಮಾಡಲಿದ್ದಾರೆ ಎಂಬ ಮಾತ ಕೇಳಿಬಂದಿದೆ.

ಇದನ್ನೂ ಓದಿ: Viral video : ಚಲಿಸುವ ಟ್ರೈನ್ ಬಾಗಿಲಲ್ಲಿ ಕುಳಿತ ಬಾಲಿವುಡ್ ನಟ...! ಮುಂದೆ ಆಗಿದ್ದೇನು?

ಆದರೆ ಬುಚ್ಚಿಬಾಬು ಸಿನಿಮಾ ಅನೌನ್ಸ್ ಆದಾಗ ಕನ್ನಡದ ನಿರ್ದೇಶಕರ ಜೊತೆ ಸಿನಿಮಾ ಇಲ್ಲ ಅಂತ ಎಲ್ಲರೂ ಅಂದುಕೊಂಡಿದ್ದರು. ಆದರೆ ಇತ್ತೀಚಿನ ಮಾಹಿತಿಯ ಪ್ರಕಾರ ರಾಮ್ ಚರಣ್ ಕನ್ನಡದ ನಿರ್ದೇಶಕರೊಬ್ಬರ ಜೊತೆ ಸಿನಿಮಾ ಮಾಡಲಿದ್ದು, ಅದನ್ನು ಯುವಿ ಕ್ರಿಯೇಷನ್ಸ್ ನಿರ್ಮಾಣ ಮಾಡಲಿದೆ ಎಂಬ ಮಾತು ಕೇಳಿ ಬರುತ್ತಿದೆ.  ಆಕ್ಷನ್ ಓರಿಯೆಂಟೆಡ್ ಸಿನಿಮಾ ಆದಷ್ಟು ಶೀಘ್ರವೇ ಸೆಟ್ಟೆರಲಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಸ್ಕ್ರಿಪ್ಟ್ ಅನ್ನು ಸಂಪೂರ್ಣವಾಗಿ ಸಿದ್ಧಪಡಿಸುವಂತೆ ರಾಮ್ ಚರಣ್ ಹೇಳಿದ್ದಾರಂತೆ.

ಇದೇ ವೇಳೆ ಸುಕುಮಾರ್ ಮತ್ತು ಪ್ರಶಾಂತ್ ನೀಲ್ ಜೊತೆ ರಾಮ್ ಚರಣ್ ಕೂಡ ಕೆಲಸ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಈಗಾಗಲೇ ರಾಜಮೌಳಿ, ರಾಮ್ ಚರಣ್ ಮತ್ತು ಸುಕುಮಾರ್ ಸಿನಿಮಾದ ಇಂಟ್ರೊ ಸೀನ್ ಬಗ್ಗೆ ಹೇಳಿ ಭಾರೀ ಹೈಪ್ ಕ್ರಿಯೇಟ್ ಮಾಡಿದ್ದರು. ಇದೀಗ ಆ ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂದು ಅಭಿಮಾನಿಗಳು ಬಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಆದ್ರೆ ಸುಕುಮಾರ್‌ ಇನ್ನು ಅಪ್‌ಡೇಟ್ಸ್‌ ನೀಡಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News