ಎನ್ಡಿಎ ಕೂಟದ ಲೆಕ್ಕಾಚಾರ ರಾಜ್ಯದಲ್ಲಿ ಉಲ್ಟಾ ಆಗಿದೆ.ಗೆದ್ದು ಬೀಗುವ ನಿರೀಕ್ಷೆ ಯಲ್ಲಿ ಇದ್ದವರಿಗೆ ಆಘಾತವಾಗಿದೆ. ಈಗ ಸೋಲಿಗೆ ಕಾರಣ ಹುಡುಕು ಸಂದರ್ಭ ಎದುರಾಗಿದೆ.ಪ್ರಸ್ತುತ ಉಪಚುನಾವಣೆ ಕದನದಲ್ಲಿ ಮಹಾಭಾರತದ ಆ ಕಥೆ ನೆನಪಾಗುತ್ತಿದೆ.. ಹೆಸರಿಗೆ ಅಷ್ಟೇ ಉಪ ಕದನ.. ಆದ್ರೆ ಥೇಟ್ ಮಹಾಭಾರತದ ಮಾದರಿಯಲ್ಲಿ ಈ ಬಾರಿಯ ಚನ್ನಪಟ್ಟಣ ಉಪ ಚುನಾವಣೆ ನಡೆದಿದೆ.. ಮತ್ತೆ ಅದೇ ಅಭಿಮನ್ಯು ಅಗಿ ನಿಖಿಲ್ ಚಕ್ರವ್ಯೂಹ ಬೇದಿಸದೆ ಸೋಲಿಗೆ ಶರಣಾಗಿದ್ದಾರೆ.. ಘಟಾನುಘಟಿ ನಾಯಕರ ತಂತ್ರಗಾರಿಕೆಯ ಎದುರೇ ಸೈನಿಕ ಅಭಿಮನ್ಯುವಿಗೆ ಸೋಲಿನ ರುಚಿ ತೋರಿಸಿ ವಿಜಯಿಭವರಾಗಿದ್ದಾರೆ.
ರಾಜಕೀಯ ಭೀಷ್ಮನಂತೆ ತಾತನ ತಂತ್ರಗಾರಿಕೆ,ಪಾರ್ಥನಂತೆ ಅಪ್ಪನ ಕಾರ್ಯವೈಕರಿ.ಘಟಾನುಘಟಿ ರಾಜಕೀಯ ಧುರೀಣರ ಮಾರ್ಗದರ್ಶನದಲ್ಲಿ ಈ ಬಾರೀ ನಿಖಿಲ್ ಕುಮಾರಸ್ವಾಮಿ ಸೋಲಿನ ವನವಾಸದಿಂದ ಹೊರ ಬರ್ತಾರೆ ಅಂತ ವಿಶ್ಲೇಷಣೆ ಮಾಡಲಾಗಿತ್ತು.ಆದ್ರೆ ಫಲಿತಾಂಶ ಎಲ್ಲವೂ ಉಲ್ಟಾ ಆಗಿದೆ.ತಾತ ಭೀಷ್ಮನ ಅನುಭವದ ಮುಂದೆಯೇ ಸೈನಿಕ ದಳಪತಿಗಳ ಕೋಟೆ ಬೇದಿಸಿ ಪಟ್ಟಾಭಿಷೇಕ ಮಾಡಿಸಿಕೊಂಡಿದ್ದಾನೆ.
ಇದನ್ನೂ ಓದಿ-ನಾಗ ಚೈತನ್ಯ- ಶೋಭಿತಾ ಮದುವೆ ಕುರಿತು ಸಮಂತಾ ಮೊದಲ ಪ್ರತಿಕ್ರಯೆ..! ಇನ್ಸ್ಟಾಗ್ರಾಮ್ ಪೋಸ್ಟ್ ವೈರಲ್
ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋಲಿಗೆ ಪ್ರಮುಖ ಕಾರಣಗಳೇನು?
-ಡಿಕೆ ಬ್ರದರ್ಸ್ ತಂತ್ರಗಾರಿಕೆಯ ಮುಂದೆ ದಳಪತಿಗಳ ಪ್ಲಾನ್ ಪ್ಲಾಪ್..!
-ಗೊಂಬೆನಾಡಿನಲ್ಲಿ ಸಿ ಪಿ ಯೋಗೇಶ್ವರ್ ಪ್ರಭಾವ, ಇಮೇಜ್.
-ನಿಖಿಲ್ ಗೆ ಕೈ ಹಿಡಿಯದ ಯಾವುದೇ ಅನುಕಂಪ ಅಲೆ
-ಕೊನೆಯ ಕ್ಷಣದಲ್ಲಿ ಟಿಕೆಟ್ ಘೋಷಣೆಯ ಬಗ್ಗೆ ಗೊಂದಲ
-ಡಿಕೆಶಿ ಪದೇ ಪದೇ ಚನ್ನಪಟ್ಟಣಕ್ಕೆ ಎಂಟ್ರಿ, ಕ್ಷೇತ್ರಕ್ಕೆ 500 ಕೋಟಿ ಅನುದಾನ
-ಡಿಕೆಶಿ ಬ್ರದರ್ಸ್ ಚುನಾವಣಾ ತಂತ್ರಗಾರಿಕೆ.
-ಕ್ಷೇತ್ರದಲ್ಲಿ ಹೆಚ್ಡಿಕೆ ಅಭಿವೃದ್ಧಿ ಮಾಡಿಲ್ಲ ಅನ್ನೋ ಆರೋಪ
-ಅಭಿವೃದ್ಧಿ ಬಗ್ಗೆ ಎಚ್ಡಿಕೆಗೆ ಕೇಳಿದ್ರೆ ತಾತ್ಸರದ ಉತ್ತರ
ಇದನ್ನೂ ಓದಿ-ನಾಗ ಚೈತನ್ಯ- ಶೋಭಿತಾ ಮದುವೆ ಕುರಿತು ಸಮಂತಾ ಮೊದಲ ಪ್ರತಿಕ್ರಯೆ..! ಇನ್ಸ್ಟಾಗ್ರಾಮ್ ಪೋಸ್ಟ್ ವೈರಲ್
ಹೀಗೆ ಅನೇಕ ಕಾರಣಗಳಿಂದ ಹ್ಯಾಟ್ರಿಕ್ ಸೋಲಿನ ಮೂಲಕ ದಳಪತಿಗಳ ಕುಡಿ ಶರಣಾಗಿ ಬಿಟ್ಟಿದೆ.ಪಕ್ಷಾಂತರಿ ಎಂದು ಬಿರುದು ತೆಗೆದ್ಕೊಂಡಿರೋ ಸಿಪಿವೈ ಈ ಬಾರೀ ಸೋಲು ಖಚಿತ ಎಂದು ಸಾಕಷ್ಟು ರಾಜಕೀಯ ಚರ್ಚೆಯಾಗಿತ್ತು.. ಅದರಲ್ಲೂ ದೊಡ್ಡಗೌಡರ ರಾಜಕೀಯ ಅನುಭವದ ಮುಂದೆ ಸಿಪಿವೈ ಮಂಡಿಯೂರತ್ತಾರೆ ಎಂದೇ ಚರ್ಚೆಯಗುತಿತ್ತು.. ಆದ್ರೆ ದೊಡ್ಡಗೌಡರ ಗಾಳವನ್ನೆ ಪ್ರತಿ ಗಾಳವಾಗಿ ಮಾಡಿಕೊಂಡ ಸಿಪಿವೈ ಕೂ ಮೂಲಕ ವಿಜಯಲಕ್ಷ್ಮಿಯನ್ನ ತಮ್ಮ ತೆಕ್ಕೆಗೆ ಹಾಕಿಕೊಂಡ್ರು.. ಹಾಗಾದರೆ ಸಿಪಿವೈ ಗೆಲುವಿಗೆ ಕಾರಣಗೇಳೇನು..?
ಯೋಗೇಶ್ವರ್ ಗೆಲುವಿಗೆ ಕಾರಣಗಳು
-ಸ್ವತ: ಯೋಗೇಶ್ವರ್ ಪ್ರಭಾವ ಮತ್ತು ವರ್ಚಸ್ಸು
-ಯೋಗೇಶ್ವರ್ ಅಭಿವೃದ್ಧಿ ಕೆಲಸಗಳು, ನೀರಾವರಿ ಕೆಲಸಗಳು.
-ಯೋಗೇಶ್ವರ್ ಗೆ ಕೈ ಹಿಡಿದ ಅನುಕಂಪ ಅಲೆ
-ಕ್ಷೇತ್ರದಲ್ಲಿ ಹೆಚ್ಡಿಕೆ ನಂತರದ ಒಕ್ಕಲಿಗ ನಾಯಕ ಅನ್ನೋದು ಬಿಂಬಿತ
-ತಮ್ಮದೇ ಆದ ವೋಟ್ ಬ್ಯಾಂಕ್ ಹೊಂದಿರುವ ಯೋಗೇಶ್ವರ್ ಕೈ ತಪ್ಪದ ಯೋಗೇಶ್ವರ್ ವೋಟ್ ಬ್ಯಾಂಕ್
-ಜಮೀರ್ ಅಹಮದ್ ಹೇಳಿಕೆಯಿಂದ ಮುಸ್ಲಿಂ ಸಮುದಾಯದ ಮತಗಳು ಸಾಲಿಡ್ ಆಗಿ ಯೋಗೇಶ್ವರ್ ಪಾಲು
-ಚನ್ನಪಟ್ಟಣದಲ್ಲಿ ನಿರೀಕ್ಷಿತ ಪರಿಣಾಮ ಬೀರದ ಜಮೀರ್ ಅವರ ಹೆಚ್ಡಿಡಿ ಖಾಂದಾನ್ ಖರೀದಿ ಹೇಳಿಕೆ
-ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಕೈ ಹಿಡಿದ ತ್ರಿಬಲ್ ಲೀಡರ್..
-ಸಿಪಿವೈ+ಡಿಕೆಶಿ+ಡಿಕೆಸು ರಣತಂತ್ರ ಕೊನೇವರೆಗೂ ಸಿಪಿವೈ ಜತೆಗೆ ಇದ್ದು ಕಾದಾಡಿದ ಡಿಕೆ ಬ್ರದರ್ಸ್..
-ಚನ್ನಪಟ್ಟಣ ಗೆಲುವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಶ್ರಮ ಹಾಕಿದ್ದ ಡಿಕೆ ಬ್ರದರ್ಸ್.
-ಪದೇ ಪದೇ ಚನ್ನಪಟ್ಟಣಕ್ಕೆ ಡಿಕೆಶಿ ಭೇಟಿ, 500 ಕೋಟಿ ಮೊತ್ತದ ಕಾರ್ಯಕ್ರಮಗಳ ಘೋಷಣೆ, ಉದ್ಯೋಗ ಮೇಳದ ಎಫೆಕ್ಟ್.
-ಕಾಂಗ್ರೆಸ್ ಗೆ ಫಲ ಕೊಟ್ಟ ಒಕ್ಕಲಿಗ ವೋಟ್ ಬ್ಯಾಂಕ್ ಪಾಲಿಟಿಕ್ಸ್..
-ಚನ್ನಪಟ್ಟಣ ಗೆದ್ದರೆ ಡಿಕೆಶಿಗೆ ಸಿಎಂ ಪಟ್ಟ ಒಲಿಯುವ ಸಂದೇಶ ರವಾನೆ
-ಕುರುಬ, ತಿಗಳ, ಅರಸು ಸೇರಿ ಹಿಂದ ಮತಬ್ಯಾಂಕ್ ಕಾಂಗ್ರೆಸ್ ಪಾಲು
-ಕಾಂಗ್ರೆಸ್ ನ ಗ್ಯಾರಂಟಿಗಳಿಗೆ ಮತ್ತೆ ಮನ್ನಣೆ ಎಂಬ ವಿಶ್ಲೇಷಣೆ.
-ಮಹಿಳಾ ಮತದಾರರಿಗೆ ಮತ್ತೆ ಕಾಂಗ್ರೆಸ್ ಫೇವರೇಟ್. ಇದು ಗ್ಯಾರಂಟಿ ಎಫೆಕ್ಟ್.
-ಬಿಜೆಪಿಯ ಕೆಲ ಸ್ಥಳೀಯ ಮುಖಂಡರ ಅಸಹಕಾರ ಕಾಂಗ್ರೆಸ್ ಗೆ ಪ್ಲಸ್, ಜೆಡಿಎಸ್ ಗೆ ಒಳ ಏಟು..
-ಜೆಡಿಎಸ್ ಜತೆ ಮೈತ್ರಿ ಒಪ್ಪದ ಸ್ಥಳೀಯ ಬಿಜೆಪಿ ಮುಖಂಡರು..
-ಕ್ಷೇತ್ರದಲ್ಲಿ ಹೆಚ್ಡಿಕೆ ಅಭಿವೃದ್ಧಿ ಮಾಡಿಲ್ಲ ಎಂಬ ಆರೋಪ ಕಾಂಗ್ರೆಸ್‌ಗೆ ಪ್ಲಸ್.
ಇದನ್ನೂ ಓದಿ-ನಾಗ ಚೈತನ್ಯ- ಶೋಭಿತಾ ಮದುವೆ ಕುರಿತು ಸಮಂತಾ ಮೊದಲ ಪ್ರತಿಕ್ರಯೆ..! ಇನ್ಸ್ಟಾಗ್ರಾಮ್ ಪೋಸ್ಟ್ ವೈರಲ್
-ಉಪಚುನಾವಣೆಗಳಲ್ಲಿ ಸಹಜವಾಗಿ ಅಧಿಕಾದಲ್ಲಿರುವ ಪಕ್ಷದತ್ತ ಮತದಾರರ ಒಲವು ಹೋಗುವ ಮನಸ್ಥಿತಿ.
ಹೀಗೆ ನೂರಾರು ಕಾರಣಗಳು ಸಿಪಿವೈ ಗೆಲುವಿಗೆ ಕಾರಣವಾಗಿವೆ.ಆದ್ರೆ ಚಕ್ರವ್ಯೂಹ ಬೇದಿಸದೆ ಸಿಕ್ಕಿಕೊಂಡು ನಾಯಕ ನಿಖಿಲ್ ಮತ್ತೆ ಅಭಿಮನ್ಯು ಆಗಿದ್ದು ದುರಂತ. ಸಿ.ಪಿ.ಯೋಗೇಶ್ವರ್ ಹಾಗೂ ನಿಖಿಲ್ ಇಬ್ಬರು ತಮ್ಮ ಫಲಿತಾಂಶದ ಬಗ್ಗೆ ಮಾತಾಡಿದ್ದರು. ಈ ನಡುವೆ ಗೆಲುವಿನ ಆಸೆ ಹುಟ್ಟಿಸಿದ್ದ ಶಿಗ್ಗಾಂವಿ ಕ್ಷೇತ್ರ ನಿರಾಸೆ ಮೂಡಿಸಿದೆ. ಬೊಮ್ಮಾಯಿ ಪ್ರಭಾವದಲ್ಲಿ ಗೆದ್ದೇ ಗೆಲ್ಲುವ ಉತ್ಸಾಹಕ್ಕೆ ಬ್ರೇಕ್ ಬಿದ್ದಿದೆ. ಯಾಕೆ ಹೀಗಾಯಿತು ಎಂದು ಬೊಮ್ಮಾಯಿ ಅವರೇ ಹುಬ್ಬಳ್ಳಿಯಲ್ಲಿ ಮಾತಾಡಿದ್ದಾರೆ. ಜೊತೆಗೆ ಸಂಡೂರ್ ಕ್ಷೇತ್ರದ ಬಗ್ಗೆ ಜನಾರ್ದನ ರೆಡ್ಡಿ ವಿವರಿಸಿದ್ದಾರೆ. ಎನ್ಡಿಎ ಈಗ ಸೋಲಿನ ಪರಾಮರ್ಶೆಗೆ ಮುಂದಾಗಿದೆ. ಮುಂದೇನು ಎಂದು ಸಭೆ ನಡೆಸಿ ತೀರ್ಮಾನಿಸಲಿದೆ.
- ಜನಾರ್ದನ ಹೆಬ್ಬಾರ್, ಜೀ ಕನ್ನಡ ನ್ಯೂಸ್ ಬೆಂಗಳೂರು