Rishab shettyʼs Kantara 2 : ಸೆಪ್ಟೆಂಬರ್ 30 2022 ರಂದು ಬಿಡುಗಡೆಯಾಗಿ ಭಾರತದಾದ್ಯಂತ ಚಿತ್ರಮಂದಿರಗಳಲ್ಲಿ ಆರ್ಭಟಿಸಿ ಇತಿಹಾಸ ಸೃಷ್ಟಿಸಿದ ಕಾಡುಬೆಟ್ಟು ಶಿವಣ್ಣನ ʼಕಾಂತಾರʼ ಕಥೆಯ ಮುಂದುವರೆದ ಭಾಗದ ಬರವಣಿಗೆಯನ್ನು ಬರೆಯಲು ನಟ, ನಿರ್ದೇಶಕ ರಿಷಬ್ ಶೆಟ್ಟಿ ಮುಂದಾಗಿದ್ದಾರೆ. ಕಾಂತಾರ 2 ಸಿನಿಮಾದ ಕುರಿತು ಬಿಗ್ ಅಪ್‌ಡೆಟ್ ನೀಡಿರುವ ಶೆಟ್ರು, ಯುಗಾದಿ ಹಬ್ಬದ ಶುಭ ಕೋರುವ ಜೊತೆ ಕಾಂತಾರ 2 ಸಿನಿಮಾದ ʼಬರವಣಿಗೆಯ ಹಾದಿʼಯ ಮಾಹಿತಿ ನೀಡಿದ್ದಾರೆ.
ʼಕಾಂತಾರʼ ಮೊದಲ ಭಾಗ ಬಿಡುಗಡೆಯಾಗಿ ದಿ ಡಿವೈನ್ ಬ್ಲಾಕ್ಬಸ್ಟರ್ ಆಗಿತ್ತು. ರಿಷಬ್ ನಿರ್ದೇಶನ ಮತ್ತು ನಟನೆಯನ್ನು ದೇಶದ ಸಿನಿರಸಿಕರು ಮೆಚ್ಚಿಕೊಂಡಿದ್ದರು. ಇಷ್ಟು ದಿನ ಕಾಂತಾರ 2 ಸಿನಿಮಾ ಯಾವಾಗ ಬರುತ್ತೆ ಅಂತ ಕುತೂಹಲದಿಂದ ಕಾಯುತ್ತಿದ್ದ ಪ್ರೇಕ್ಷಕರಿಗೆ ಇದೀಗ ಖುಷಿ ವಿಚಾರವೊಂದಿದೆ. ಕಾಂತಾರ 2 ಸಿನಿಮಾದ ಕಥೆ ಬರೆಯಲು ರಿಷಬ್ ಶೆಟ್ಟಿ ಆಂಡ್ ಟೀಂ ಇಂದಿನಿಂದ ಶುರುಮಾಡಿದೆ.
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಷಯಗಳು.
Happy Ugadi !ಬರವಣಿಗೆಯ ಆದಿ…Kantara writing begins ! pic.twitter.com/6nfIfCeEiu
— Rishab Shetty (@shetty_rishab) March 22, 2023
ಇದನ್ನೂ ಓದಿ: International Forest Day: ʼಅರಣ್ಯ ಉಳಿಸಿ.. ಪ್ರಾಣಿ ರಕ್ಷಿಸಿʼ ಎಂದು ಕರೆಕೊಟ್ಟ ಡಿ ಬಾಸ್
ಹೌದು.. ಕಾಂತಾರ- 2 ಚಿತ್ರತಂಡ ಯುಗಾದಿ ಹಬ್ಬದ ದಿನವೇ ಸ್ಕ್ರಿಪ್ಟ್ ವರ್ಕ್ ಶುರುಮಾಡಿದೆ. ಚಿತ್ರದ ಪ್ರೀಕ್ವೆಲ್ ಪ್ರೀ ಪ್ರೊಡಕ್ಷನ್ ವರ್ಕ್ ಅಧಿಕೃತವಾಗಿ ಶುರುವಾಗಿದೆ. ಮೊದಲ ಭಾಗಕ್ಕಿಂತ ಬಹಳ ಅದ್ಧೂರಿಯಾಗಿ, ರೋಚಕವಾಗಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ. ಅಲ್ಲದೆ, ಈ ಕುರಿತು ಹೊಂಬಾಳೆ ಸಂಸ್ಥೆ ಟ್ಟೀಟ್ ಮೂಲಕ ಅಧಿಕೃತವಾಗಿ ಮಾಹಿತಿ ನೀಡಿದ್ದು, ʼಯುಗಾದಿ ಮತ್ತು ಹೊಸ ವರ್ಷದ ಈ ಶುಭ ಸಂದರ್ಭದಲ್ಲಿ, ಕಾಂತಾರದ ಎರಡನೇ ಭಾಗದ ಬರಹ ಪ್ರಾರಂಭವಾಗಿದೆ ಎಂದು ತಿಳಿಸಲು ನಾವು ಸಂತೋಷಪಡುತ್ತೇವೆ. ಪ್ರಕೃತಿಯೊಂದಿಗಿನ ನಮ್ಮ ಸಂಬಂಧವನ್ನು ಪ್ರದರ್ಶಿಸುವ ಮತ್ತೊಂದು ಆಕರ್ಷಕ ಕಥೆಯನ್ನು ನಿಮಗೆ ತರಲು ನಾವು ಕಾಯಲು ಸಾಧ್ಯವಿಲ್ಲ. ಹೆಚ್ಚಿನ ಮಾಹಿತಿಗಾಗಿ ಕಾಯುತ್ತಿರಿ ಅಂತ ಫೋಸ್ಟ್ ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.
ಶನಿಲ್ ಗುರು, ಅನಿರುದ್ಧ್ ಮಹೇಶ್, ಶ್ಯಾಮ್ ಪ್ರಸಾದ್ ಹಾಗೂ ಪ್ರಕಾಶ್ ತುಮ್ಮಿನಾಡು ಈ ಬಾರಿ ಕೂಡ ರಿಷಬ್ ಶೆಟ್ಟಿ ಬರವಣಿಗೆಗೆ ಸಾಥ್ ನೀಡಿದ್ದಾರೆ. ಕಾಡುಬೆಟ್ಟು ಶಿವಣ್ಣ ಮತ್ತು ತಂದೆಯ ಕಥೆಯನ್ನು ಬರೆಯಲು ಚಿತ್ರತಂಡ ಶುರು ಮಾಡಿದೆ. ಕೋಲ ನಡೆಯುವಾಗಲೇ ಶಿವ ಮತ್ತು ಆತನ ತಂದೆ ಮಾಯವಾದ ಹಿನ್ನೆಲೆಯನ್ನು ಕಾಂತಾರ 2 ದಲ್ಲಿಯಾದರೂ ರಿಷಬ್ ಅವರು ಹೇಳ್ತಾರಾ ಅಂತ ಕಾಯ್ದು ನೋಡಬೇಕಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.